ಅವರಿಗೆ ಅವಳೊಂದಿಗೆ ಕ್ರಷ್.. ನಾವಿಬ್ಬರೂ ಅವಳಿಗಾಗಿ ಟಾಸ್..
ಅವರಿಗೆ ಕ್ರಷ್ ! ನಾವೂ ಅವಳಿಗೇ ಟಾಸ್!! ಅದು ಗಣಿಗಾರಿಕೆಯ ಸುವರ್ಣಕಾಲ.ಅಂದು ರಾಜಾಪುರದಲ್ಲಿ ಇದ್ದವರೆಲ್ಲಾ ರಾಜರೇ.ಯಾಕೆ ನಾನು ಈ ಮಾತನೇಳುವೆ ಅಂದ್ರೆ ಕೆರೆಯ ತುಂಬಾ ನೀರಿದ್ದರೂ ಅಂಡು ತೊಳೆಯಲು ಮಿನರಲ್ ವಾಟರ್ ಬಳಸುತ್ತಿದ್ದ ಕಾಲ. ಅಂದಿನ ದಿನಗಳಲ್ಲಿ ಅತ್ಯಂತ ಬಡತನ ರೇಖೆಗಿಂತ ಕೆಳಗಿನವೆರೆಂದರೇ ಅದು ಅಲ್ಲಿದ್ದ ಸರ್ಕಾರಿ ನೌಕರರು.! ಆರೇಳು ವರ್ಷದ ಆಡೋ ಹುಡುಗರ ಕೈಯಲ್ಲಿ ಐದುನೂರು ಸಾವಿರ ಮುಖಬೆಲೆಯ ನೋಟುಗಳು. ಅಂತಹ ಕಾಲದಲ್ಲಿ ನನ್ನ ವೃತ್ತಿ ಆರಂಭದ ದಿನಗಳು ಅಲ್ಲೇ ವಾಸವಾಗಿದ್ದೆವು.ನಮ್ಮ ಶಾಲೆಯೂ ಸಿ ಎ ಇ ಓ ಕೇಂದ್ರವೂ ಆಗಿದ್ದರಿಂದ ಹೊಸದಾಗಿ ನೇಮಕಾತಿಯಾದ ಶಿಕ್ಷಕ/ಕಿ ಯರು ಬಂದು ಡ್ಯೂಟಿಗೆ ಜಾಯಿನ್ ಆಗಿ ಹೋಗುತ್ತಿದ್ದರು. ಒಂದು ದಿನ ಮೂರ್ನಾಲ್ಕು ಜನ ಶಿಕ್ಷಕಿಯರು ಡ್ಯೂಟಿಗೆ ಜಾಯಿನ್ ಆಗಲು ಬಂದರು. ಅಂದು ಸಿ ಎ ಇ ಓ ಅನ್ಯಕಾರ್ಯದ ನಿಮ್ಮಿತ್ತ ಗೈರಾಗಿದ್ದ ಪ್ರಯುಕ್ತ ಪದೇ ಪದೇ ಬರಲು ಸೌಕರ್ಯ ಇಲ್ಲದ ಕಾರಣ ಹಿರಿಯ ಶಿಕ್ಷಕರೊಬ್ಬರಿಗೆ ಎಲ್ಲರ ನಂಬರ್ ಕೊಟ್ಟು ಬಂದಾಗ ತಿಳಿಸಲು ಹೇಳಿಹೋಗಿದ್ದರು. ರಾಜಾಪುರ ಗ್ರಾಮ ಒಂದರಲ್ಲೇ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಶಿಕ್ಷಕರು ವಾಸವಾಗಿದ್ದ ಕಾಲ.ಎಲ್ಲರೂ ಅನ್ಯೊನ್ಯವಾಗಿ ಇದ್ದೆವು.ಆ ಊರು ಬೆಟ್ಟದ ಸುತ್ತಲೂ ಇರುವ ತಗ್ಗುಪ್ರದೇಶದಲ್ಲಿ ಇದ್ದಿದ್ದರಿಂದ ಯಾವ ಜನರೇಶನ್ ನ ನೆಟ್ವರ್ಕ್ ಸಿಗುತ್ತಿರಲಿಲ್ಲ. ಯಾರೊಂದಿಗಾದರೂ ಮೊಬೈಲ್ ನಲ್...