ಸವಿಜೇನು-2
ಸವಿಜೇನು .. (Part-2) ಅದು ಬೇಸಿಗೆಯ ದಿನಗಳು. ಮುಂಗಾರು ಪೂರ್ವ ಅಕಾಲಿಕವಾಗಿ ಮಳೆಯಾಗಿತ್ತು. ಮಳೆಯಾದ ಕಾರಣ ದನ-ಕುರಿಗಳಿಗೆ ಸಾಧಾರಣ ಹುಲ್ಲು ಬೆಳೆದಿತ್ತು. ಮಳೆ ಬಿದ್ದಮೇಲೆ ಜೀವಿಗಳು,ಕೀಟಗಳು,ಸರೀಸೃಪ ನವಿಲಿನಂತಹ ಪಕ್ಷಗಳ ಸಂತಾನ ಚಕ್ರ ಶುರು.. ಅದರಂತೆ ಮಿಡತೆಗಳ ಮೊಟ್ಟೆಯೊಡೆದು ಶಿಶು ಮಿಡತೆಗಳು,ಮಧ್ಯ ವಯಸ್ಕ ಮಿಡತೆಗಳು ಯಾರಾದರೂ ನಡೆದಾಡಿದರೆ/ಪ್ರಾಣಿಗಳು ಓಡಾಡಿದರೆ ನೂರಾರು ಸಂಖ್ಯೆಯಲ್ಲಿ ನಾನಾ ರಂಗಿನ ಮಿಡತೆಗಳು ಪುರ್ರನೇ ಹಾರಿ ಪಕ್ಕಕ್ಕೆ ಕುಳಿತುಕೊಳ್ಳುತ್ತಿದ್ದವು.ಮುಂಗಾರು ಹಸಿರನ್ನು ಈ ಮಿಡತೆಗಳೇ ತಿಂದು ಖಾಲಿ ಮಾಡುವವು. ಅದು ಜಮೀನಿನಲ್ಲಿ ಭೂಮಿಯ ಉಳುಮೆ ಮಾಡಲು ಉಲುಸಾದ ಕಾಲ.ಅಪ್ಪ ಎತ್ತುಗಳ ಕಟ್ಟಿ ನೇಗಿಲು ಹೊಡೆಯುತ್ತಿದ್ದರು. ಅಮ್ಮ ಹಳೆಯಕೂಳೆಗಳು,ಮುಳ್ಳುಗಳ ಆರಿಸುತ್ತಿದ್ದರು. ನಾನೂ ಮಡಿಕೆಯ ಸಾಲಿನಲ್ಲಿ ಮಣ್ಣಿನ ವಾಸನೆಯ ಅಹ್ಲಾದದೊಂದಿಗೆ ಸ್ವಲ್ಪ ಹೊತ್ತು ಕೂಳೆಗಳು ಆರಿಸಿದ್ದೆ. ಆಗ ನಮಗೆ ನಿರಂತರ ಕೆಲಸ ಮಾಡದೇ ಮಧ್ಯದಲ್ಲಿ ಆಕಡೆ-ಈಕಡೆ ರೆಸ್ಟ್ ನೆಪದಲ್ಲಿ ಸುತ್ತಾಡಿ ಬರುವುದು ಸಾಮಾನ್ಯವಾಗಿತ್ತು.ಹಾಗೆ ಸುತ್ತಾಡಿ ಬರಲು ಅಂದು ಅಲ್ಲೇ ಸಮೀಪದಲ್ಲಿದ್ದ ದಾಸಪ್ಪನ ಬೇಲಿಗೆ ಹೋದೆ.ನಾವು ಕೆಲಸ ಮಾಡುವಲ್ಲಿಗೆ ಹತ್ತಿರವಿದ್ದ ಆ ಬೇಲಿಯಲ್ಲಿ ಅಲ್ಲೊಂದು ಇಲ್ಲೊಂದು ಬೇವಿನಮರಗಳು,ಹುಣಸೇಮರಗಳು ಇದ್ದವು. ನಾನು ಬೇಲಿಗೆ ಹೋಗಿದ್ದು ಜೇನು ಹುಡುಕಲು!ಹಾಗೆ ಬೇಲಿಯಲ...