ಸವಿಜೇನು part-9
*ಸವಿಜೇನು-Part-9* ✍️ _ನಾಗೇಂದ್ರ ಬಂಜಗೆರೆ_ *ಆನೆ ಹುಲಿಗಳಿರುವ ಮದುಮಲೈ ಟೈಗರ್ ಪಾರೆಸ್ಟ್ ನಲ್ಲಿ ಜೇನು..* *ದಿನಾಂಕ:14-04-2018 ರಂದು ಶಾಲೆಯಲ್ಲಿ ಮಹಾನ್ ಚೇತನ ಅಂಬೇಡ್ಕರ್ ಜಯಂತಿಯನ್ನು ಮುಗಿಸಿಕೊಂಡು ಮಧ್ಯಾಹ್ನದ ಊಟ ಮಾಡಿ ನನ್ನ ಕರ್ತವ್ಯದ ಸ್ಥಳದಿಂದ ಸಂಜೆ ಮೂರು ಗಂಟೆ ಸುಮಾರಿಗೆ ಊಟಿಗೆ ಹೋಗಲು ನಮ್ಮ ಪಯಣದಹಾದಿ ಶುರುವಾಗಿತ್ತು. ನಾನು,ಕುಮುದಾ ಮಗಳು ತನೇಹಾ, ಶಿಷ್ಯ ಸಿದ್ದೇಶ ಹಾಗೂ ದೇವರಾಜ ಮತ್ತು ಸಣ್ಣ ರುದ್ರ ಎಂಬ ಅತಿಥಿ ಶಿಕ್ಷಕರು ನಮ್ಮ ಜೊತೆಯಲ್ಲಿ ಇದ್ದರು. ಬೇಸಿಗೆಯಾದ್ದರಿಂದ ನಾಲ್ಕೂ ಕಿಟಕಿಗಳು ಓಪನ್ ಇರುತ್ತಿದ್ದವು. ರೋಡ್ ಪ್ರೀ ಇದ್ದರೆ ನನ್ನ ಗಾಡಿಯ ವೇಗ ಕನಿಷ್ಠ 110-120 km/h ಇರುತ್ತದೆ. ಅದರಂತೆ ಬಳ್ಳಾರಿಯಿಂದ ನಂಜನಗೂಡಿಗೆ ಹೋಗಿ ಅಲ್ಲಿ ರಾತ್ರಿ ಅಲ್ಲಿಯೇ ಉಳಿದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಅಲ್ಲಿಂದ ಊಟಿಗೆ ಹೊರಡುವುದು ನಮ್ಮ ಪ್ಲಾನ್ ಆಗಿತ್ತು. ಅದೆಷ್ಟು ಬಾರಿ ಮೈಸೂರಿಗೆ ನಾವು ಜಾಲಿರೈಡ್ ಹೊಗಿದ್ದೇವೋ ಗೊತ್ತಿಲ್ಲ. ಪ್ರತಿ ಬಾರಿಯೂ ವಿಶೇಷ ವಿಭಿನ್ನ...ಮೈಸೂರೇ ಹಾಗೇ...ಅಂದು ಯೋಜನೆಯಂತೆ ಶ್ರೀರಂಗ ಪಟ್ಟಣ ದ ಬಳಿ ಯಾವುದೂ ಒಂದು ಹೋಟೆಲ್ ಲ್ಲಿ ವೆಜ್ ಊಟವನ್ನು ಪಾರ್ಸಲ್ ಕಟ್ಟಿಸಿಕೊಂಡು ಮಗಳಿಗೆ ಕಾರಿನಲ್ಲೇ ಊಟ ಮಾಡಿಸುತ್ತಾ ಹೆದ್ದಾರಿಯ ದಾಟಿ ಮೈಸೂರು ನಗರಕ್ಕೆ ಬಂದೆವು. ನಾವು ಹೋಗುವ ಕೆಲವೇ ಹೊತ್ತಿನಲ್...