ಪೋಸ್ಟ್‌ಗಳು

ಜುಲೈ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಕಲೇಶಪುರ ಪಯಣ..

ಇಮೇಜ್
ಸಕಲೇಶಪುರ ಪಯಣ.. ನಕ್ಷತ್ರ ಆಕಾರದ ಮಂಜ್ರಾಬಾದ್ ಕೋಟೆ ಬಹಳ ದಿನಗಳಿಂದ ಕಣ್ಣುಕುಕ್ಕಿಸಿತ್ತು.ಎರಡ್ಮೂರು ವರ್ಷಗಳು ಹೋಗಬೇಕು ಹೋಗಬೇಕು ಎಂದೆನಿಸಿದರೂ  ಅದ್ಯಾಕೋ ಸಮಯ ಮತ್ತು ಹಣದ ಕಾಂಬೀನೇಷನ್  ಆಗದೇ ಹೋಗಲು ಸಾಧ್ಯ ಆಗಿರಲಿಲ್ಲ. ದಿನಾಂಕ: 13-10-2018 ರಂದು ಇದಕ್ಕೆ ಮುಹೂರ್ತ ಪಿಕ್ಸ್ ಮಾಡಿದೆವು. ಅಂದು ಮಧ್ಯಾಹ್ನ ಮೂರಗಂಟೆಗೆ ತರೀಕೆರೆಯಿಂದ ನಾನು ಕುಮುದಾ,ಮಗಳು ತನೇಹಾ ಮತ್ತು  ಶಿವು ಕುಮುದಾಳ ತವರು ನರಸಿಂಹರಾಜಾಪುರಕ್ಕೆ ಹೊರಟೆವು. ನಾಲ್ಕುವರೆ- ಐದಕ್ಕೆ ನರಸಿಂಹ ರಾಜಾಪುರ ತಲುಪಿ ಅಲ್ಲಿಯ ಮನೆಯಲ್ಲಿ ಕೇವಲ ಅರ್ಧ ಗಂಟೆ ಇದ್ದು ಆಮೇಲೆ ಬಾಳೆ ಹೊನ್ನೂರು ತಲುಪಿದೆವು.ಬಾಳೆಹೊನ್ನೂರಿನಲ್ಲಿದ್ದ   ನಮ್ಮ ಬಂಧು ಪೂರ್ಣೇಶ್ ಮನೆಗೆ ಹೋದೆವು. ಅವರು ನಾವು ಬರುವೆವು ಎಂದು ಚೌ ಚೌ ಬಾತ್ ಅನ್ನು ಮಾಡಿದ್ದರು.ಅದಕ್ಕೂ ಮುಂಚೆ ಒಂದೆರಡು ಬಾರಿ ಸ್ವೀಟ್ ಮತ್ತು ಕಾಪಿ ಟೀ ಯನ್ನು ಕುಡಿದ್ದರಿಂದ ಸ್ವಲ್ಪವೇ ಕೊಡಿ ಎಂದರೂ ತಿನ್ನಿ ಮಾರ್ರೆ ಎಂದು ಬಹಳಷ್ಟು ಹಾಕಿದ್ದರು. ನನ್ನ ಪಾಲಿನ ಎಲ್ಲಾ ಕೇಸರಿ ಬಾತ್ ನ್ನು ಪಕ್ಕದಲ್ಲಿ ಕುಳಿತಿದ್ದ ಅಳಿಯ ಶಿವುಗೆ ಹಾಕಿದೆ.ಅವನೋ ಅಳುವ ಮುಖ ಮಾಡಿಕೊಂಡು ಗೆಸ್ಟ್ ಮನೆಗೆ ಬಂದೀವೀ ವೇಸ್ಟ್ ಮಾಡಬೇಡ ಎಂದೇಳಿದ್ದಕ್ಕೆ ಒಲ್ಲದ ಮನಸ್ಸಿನಿಂದ ಅಷ್ಟನ್ನೂ ತಿಂದು ಮಂಪರು ಬಂದ ಹಾಗೆ  ಮಾಡುತ್ತಿದ್ದ. ಅಂದು ಬಹುಶಃ ಒಂದು ತುತ್ತು ಹೆಚ್ಚಿಗೆ ಹಾಕಿದ್ದರೂ ಅಲ್ಲೇ ಕಕ್ಕಿಬಿಡುತ್ತಿದ್ದೆ ಮಾಮ ಎಂದೇಳಿ ಹೊರ...

ಕಳ್ಳ ಅಡುಗೆಭಟ್ಟನಾದ ಕಥೆ..

ಇಮೇಜ್
ಕಳ್ಳ  ಅಡುಗೆ ಭಟ್ಟನಾದ ಕಥೆ.. ಮುದ್ದಿನ ಮಗಳು ತನೇಹಾಳ ಜನನವಾಗಿತ್ತು. ಬಳ್ಳಾರಿಯ ಬಿಸಿಲು ಮತ್ತು   ದೂಳಿಗೆ ಬೇಸತ್ತು ಟೂ ವೀಲರ್ ಬದಲು ಯಾವೂದಾದರೂ ಸೆಕೆಂಡ್ ಹ್ಯಾಂಡ್ ಕಾರ್ ಕೊಳ್ಳುವ ನಿರ್ಧಾರ ಮಾಡಿದ್ದೆ. ಗೆಳೆಯ ಜೇಮ್ಸ್ ಗೆ ಕರೆಮಾಡಿ  ವಿಚಾರಿಸಿದೆ. ಜೇಮ್ಸ್ ನ ಮತ್ತೊಬ್ಬ ಗೆಳೆಯ ಹಿರಿಯೂರಿನಲ್ಲಿ  ಕಾರ್ ಗ್ಯಾರೇಜ್ ಮಾಲಿಕ ಶ್ರೀಧರ್ ಅವರನ್ನು ಸಂಪರ್ಕಿಸಿದಾಗ ಬರ್ರಿ  ಬ್ರದರ್ ನೋಡೋಣ ಎಂದು ಹೇಳಿದ್ದರು.   2014 ನೇ ಇಸವಿಯ ಮಾರ್ಚಿ ತಿಂಗಳಲ್ಲಿ  ಒಂದಷ್ಡು ದುಡ್ಡು ಹಿಡಿದುಕೊಂಡು  ಹಿರಿಯೂರಿನ ಜೇಮ್ಸ್ ಮನೆಗೆ  ಬಂದೆ. ಹಳೆಯ ಸ್ನೇಹಿತ ಜೇಮ್ಸ್  ನಾನು ಮನೆಗೆ ಹೋದ ಸಂಭ್ರಮಕ್ಕೆ ವೆರೈಟಿ ವೆರೈಟಿ  ತಿಂಡಿ ತಿನಿಸು ಮಾಡಿಸಿದ್ದ. ಇಬ್ಬರೂ ತಿಂಡಿಯನ್ನೇ ಊಟದಂತೆ ಹೊಟ್ಟೆತುಂಬಾ ಮಾಡಿ ಶ್ರೀಧರ್  ಗ್ಯಾರೇಜ್ ಬಳಿ ಬಂದೆವು. ನಮ್ಮ ಬಜೆಟ್ ಇಷ್ಟು ಎಂದು ಹೇಳಿದ್ದಕ್ಕೇ  ಅವರು ಯಾರು ಯಾರಿಗೋ ಕಾಲ್ ಮಾಡಿ  ಈ  ಬಜೆಟ್ ಗೆ ಒಂದು ಕಾರು ಬೇಕು ಎಂದೇಳಿದರು. ಅದಕ್ಕೆ ಅಮರಾಪುರದಲ್ಲಿ  ಒಂದು ಕಾರ್ ಇದೆ,ಆದರೆ ಯಾವುದೋ ಪಾರ್ಟಿ ನೋಡಿಹೋಗಿದ್ದಾರೆ ಸಂಜೆಗೆ ಪೈನಲ್ ಮಾತು ತಿಳಿಸುವೆವು ಎಂದು ಹೇಳಿದ್ದರಿಂದ  ಸಂಜೆ ನೋಡುವ ಬಿಡಿ  ಜೇಮ್ಸ್  ಎಂದು ಹೇಳಿದೆ. ಜೇಮ್ಸ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಪಾದ್ರಿಯೂ ಆಗಿದ್ದುದ್ದುದ...

ಅನ್ನ ಮತ್ತು ಶ್ರಮದ ಬೆಲೆ..

ಇಮೇಜ್
ಅನ್ನ ಮತ್ತು ಶ್ರಮದ ಬೆಲೆ.. ಅದು ಆಷಾಡ ಮಾಸ ಅಂತ ಗೊತ್ತಿರಲಿಲ್ಲ. ನಾವು ಶಾಲೆಗೆ ನಡೆದುಹೋಗುವಾಗ ಅಲ್ಲೊಂದು ಮರಳಿನ ಹೊಲ ಇತ್ತು.ಆ ಹೊಲದಲ್ಲಿ ಬರೀ ಗಾಲಲ್ಲಿ ನಡೆದು ಹೋಗುವಾಗ ಗಾಳಿಯ ಪೋರ್ಸಿಗೆ ಆ ಮರಳಿನ ಕಣಗಳು ಪಳ ಪಳನೆ ಮೊಣಕಾಲಿನವರೆಗೂ ಹೊಡೆಯುತ್ತಿದ್ದವು. ಅಪ್ಪಿ ತಪ್ಪಿ ಮಳೆಯ ಗಾಳಿ ಏನಾದರೂ ಎದ್ದರೆ ಆ ಹೊಲದಲ್ಲಿ ನಡೆದುಕೊಂಡು ಹೋಗುವುದೇ ದುಸ್ತರವಾಗಿತ್ತು.ಅಷ್ಟು ಮರಳೆದ್ದು ಪಟ ಪಟನೆ ಹೊಡೆಯುವ ರಭಸ ಆ ಪರಿ ಇತ್ತು. ಕಣ್ಣು ಬಿಡಲು ಆಗುತ್ತಿರಲಿಲ್ಲ.ಶಾಲೆಯಲ್ಲಿ ಬಿಸಿಯೂಟ ಇರಲಿಲ್ಲ. ಮನೆಯಿಂದ ತಗೊಂಡು ಹೋದ ತಣ್ಣನೆಯ ಊಟ ನನಗೂ ನನ್ನ ತಮ್ಮನಿಗೂ ಎತ್ತಲೂ ಸಾಲುತ್ತಿರಲಿಲ್ಲ. ಆ  ಗಾಳಿಕಾಲದಲ್ಲಿ ಕೆಲಸ ಮಾಡಿ ಅಲ್ಲ ಗಾಳಿಗೆ ಆಹಾರ ಕರಗಿ ಆಹಾರಕ್ಕಾಗಿ ಹಾತೋರಿಯುತ್ತಿರುತ್ತಾರಂತೆ. ಅದಕ್ಕೂ ಮುಂಚೆಯಾದರೆ ಮನೆಯಲ್ಲಿ ಕಡಲೆಕಾಯಿ ಇರುತ್ತಿತ್ತು. ಈ ಕಾಲದಲ್ಲಿ ಬಿತ್ತನೆ ಮಾಡಿದುದ್ದರಿಂದ ಇದ್ದರೆ ಸೀರಲು ಬೀಜ ಎಂದು ಕರೆಯಲ್ಪಡುವ ಶೇಂಗಾ ಬೀಜ ಇರುತ್ತಿದ್ದವಾದರೂ ಒಂದೋ ಎರಡೋ ವಾರಕ್ಕೆ  ಖಾಲಿಯಾಗಿ ಬಿಡುತ್ತಿದ್ದವು. ಆ ಗಾಳಿಯ ಹೊಡೆತಕ್ಕೆ ತರಗೆಲೆಗಳು ಗಾಳಿಯ ಹಿಂದೆ ನಡೆದು ಹೋದಂತೆ ನಾವೂ ನಡೆದು ಬರುತ್ತಿದ್ದೆವು.  ಆಗ ಮನೆಯಲ್ಲಿ ಇದ್ದ ನವಣೆ ಅಕ್ಕಿಯೇ ಸ್ಮ್ಯಾಕ್ ಆಗಿತ್ತು.  ಹಾಸ್ಟೆಲ್ ಗೆ ಹೋದ ಮೇಲೆ ನೂರೈವತ್ತು ವಿದ್ಯಾರ್ಥಿಗಳು ನೂರೈವತ್ತು ತೆರನಾಗಿ ವೆರೈಟಿಯಾಗಿಯೇ ಇದ್ದರು. ಒಬ್ಬ ಬರೀ ಅನ್ನವೇ ಬೇಕು ಎಂದು ಬಯಸಿದರೆ ಇನ...