ಪೋಸ್ಟ್‌ಗಳು

ಅಕ್ಟೋಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹರಿದ ನೋಟು ಹುರಿದ ಕಡಲೆ..

ಇಮೇಜ್
*ಹರಿದ ನೋಟು-ಹುರಿದ ಕಡಲೆ..* *ನನಗೆ ಸುಮಾರು ಹನ್ನೆರಡು ವರ್ಷ ಇರಬಹುದು ನಮಗೆ ಹಟ್ಟಿ ಜಾತ್ರೆ(ನಾಯಕನಹಟ್ಟಿ ಜಾತ್ರೆ) ತುಂಬಾ ಜನಪ್ರಿಯ ಮತ್ತು ಅದಕ್ಕೆ ಕಡ್ಡಾಯವಾಗಿ ಹಾಜರಾಗುತಿದ್ದ ಜಾತ್ರೆಯೂ ಹೌದು..* *ಜಾತ್ರೆಗೆ ತಿಂಗಳಗಳು  ಬಾಕಿ ಇರುವಾಗಲೇ  ಬಿಡಿಗಾಸು ಒಟ್ಟುಗೂಡಿಸಿ ಇಟ್ಟುಕೊಳ್ಳುತ್ತಿದ್ದೆ. ಅದೇನು ದೊಡ್ಡ ಮೊತ್ತ ಆಗುತ್ತಿರಲಿಲ್ಲ ಬಿಡಿ ಜಾಸ್ತಿ ಅಂದರೆ ಹತ್ತು-ಹದಿನೈದು ರೂಪಾಯಿ ಆಗುತ್ತಿತ್ತು...*  *ಅಂತೂ ಜಾತ್ರೆಯ ದಿನ ಸಮೀಪಿಸಿತು.*  *ಹುಣ್ಣಿಮೆಯ ರಾತ್ರಿ ಎತ್ತಿನಬಂಡಿ ಹೂಡಿಕೊಂಡು ಕುಟುಂಬ ಸಮೇತ ಹೋಗುತಿದ್ದ  ಕಾಲವದು.* *ನಾನೂ ಒಬ್ಬರ ಗಾಡಿಯಲ್ಲಿ ರಾತ್ರಿಯಿಡೀ ಪಯಣ.. ಹಟ್ಟಿ ಜಾತ್ರೆಯಲ್ಲಿ ಸ್ಥಳ ಹಿಡಿದು ಗಾಡಿಯನ್ನು ನಿಲ್ಲಿಸಿದ ಮೇಲೆ ಜಾತ್ರೆಯ ಕೇಂದ್ರ ಸ್ಥಳದಿಂದ ಅಷ್ಟ ದಿಕ್ಕುಗಳಲ್ಲಿ ಓಡಾಡಿ ಬಂಧುಗಳು, ಸ್ನೇಹಿತರನ್ನು ಕಂಡು ಮಾತನಾಡಿಸುತ್ತಿದ್ದ ಕಾಲ. ವರ್ಷವಿಡೀ ಪರಸ್ಪರ ಬೇಟಿಯಾಗದೇ ಇದ್ದರೂ ಜಾತ್ರೆಯಲ್ಲಿ ಪರಸ್ಪರ ಬೇಟಿಯಾಗಲು ಸಿಕ್ಕೆ ಸಿಗುತ್ತಿದ್ದರು. ಒಂದು ವೇಳೆ ಜಾತ್ರೆಯಲ್ಲಿ ಸಿಗಲಿಲ್ಲ ಅಂದರೆ ಒಂದು ರೀತಿಯಲ್ಲಿ ಅವರಿಗೇನೋ ತೊಂದರೆಯಾಗಿದೆ ಅಂತಾನೇ  ಅರ್ಥ. ಹಾಗೆ ಪಾದಗಟ್ಟೆ ಸಮೀಪವೇ ಬಸ್ಸ್ಟಾಂಡ್ ಅಲ್ಲಿ ಒಬ್ಬ ಕೊಬ್ಬರಿ ಮಿಠಾಯಿ ಮಾರುವಾತ... ಆಹಾ! ಎಷ್ಟು ಚೆಂದವೋ ಆ ಕೊಬ್ಬರಿ ಮಿಠಾಯಿ..!*  *ಕೊಬ್ಬರಿ ಮಿಠಾಯಿಗೂ ನನಗೂ   ಅದಕ್ಕೂ ಹಿಂದಿನ ನಾಲ್ಕೈದು ವರ್ಷ...