ಹಣ.. ಹಣ.. ಹಣ..
*ಹಣ.. ಹಣ.. ಹಣ..* *ಹಣವೇ ನಿನ್ನಯ ಗುಣವೇನು ಬಣ್ಣಿಪೆನೋ ಹಣವಿಲ್ಲದವನೊಬ್ಬ ಹೆಣವೇ ಸರಿ...* *ಎಲ್ಲೆಂದರಲ್ಲೆ ಕಂತೆ ಕಂತೆ ಹಣ ಹಣ..* *ತಿಜೋರಿ ತುಂಬಾ ಜಗಮಗಿಸುವ ಝಣ ಝಣ ಕಾಂಚಾಣ ಕಾರು ಬಂಗ್ಲೆ ಎಲ್ಲಾ...!!* *ಅನ್ನಕ್ಕಾಗಿ ದುಡಿಯ ಬೇಕಾದವನು ಅರಗಿಸಿಕೊಳ್ಳಲಾಗದಷ್ಟು ನಗ-ನಾಣ್ಯ ಈ ಬಾಳಿಗೆ ಬೇಕೆ? ಅದು ಜನರ ಬೆವರಿಳಿಸಿದ ಹಣ..* *ಆಗೊಮ್ಮೆ-ಈಗೊಮ್ಮೆ ಭ್ರಷ್ಟರು ಬ್ರೇಕಿಂಗ್ ನ್ಯೂಸ್ ಗಳಲ್ಲಿ ಕಾಣುವವರಾದರೂ ಕಾಣಿಸಿಕೊಳ್ಳದ 'ಭ್ರಷ್ಟ' ರಕ್ತಬೀಜಾಸುರರ ಸಂತತಿ ಪಸರಿಪುದು ಇಳೆಯುದ್ದಗಲಕ್ಕೂ..!* *ಅತ್ತ ಸಮುದ್ರದೊಳಗಿರುವ ತಿಮಿಂಗಿಲಗಳು ಊಟ ನಿದ್ರೆಗೆಟ್ಟಿಹವಂತೆ!!* *ಕಾರಣ* *ಭೂಮಿಯ ಮೇಲೆ ತಿಮಿಂಗಿಲಗಳನ್ನೇ ನುಂಗುವ 'ತಿಮಿಂಗಿಲ'ಗಳಿರುವ ಸುದ್ದಿಯ ಕೇಳಿ..!!* *ಒಂದೊಮ್ಮೆ ಭಯೋತ್ಪಾದಕರನ್ನು ಕ್ಷಮಿಸಬಹುದೇನೋ ಆದರೆ ಈ ಧನದಾಹಿಗಳ ಕ್ಷಮೆ ಸಲ್ಲದು..* ✍️ *ನಾಗೇಂದ್ರ ಬಂಜಗೆರೆ.*