ಹಣ.. ಹಣ.. ಹಣ..
*ಹಣ.. ಹಣ.. ಹಣ..*
*ಹಣವೇ ನಿನ್ನಯ ಗುಣವೇನು ಬಣ್ಣಿಪೆನೋ ಹಣವಿಲ್ಲದವನೊಬ್ಬ ಹೆಣವೇ ಸರಿ...*
*ಎಲ್ಲೆಂದರಲ್ಲೆ ಕಂತೆ ಕಂತೆ ಹಣ ಹಣ..*
*ತಿಜೋರಿ ತುಂಬಾ ಜಗಮಗಿಸುವ ಝಣ ಝಣ ಕಾಂಚಾಣ ಕಾರು ಬಂಗ್ಲೆ ಎಲ್ಲಾ...!!*
*ಅನ್ನಕ್ಕಾಗಿ ದುಡಿಯ ಬೇಕಾದವನು ಅರಗಿಸಿಕೊಳ್ಳಲಾಗದಷ್ಟು ನಗ-ನಾಣ್ಯ ಈ ಬಾಳಿಗೆ ಬೇಕೆ? ಅದು ಜನರ ಬೆವರಿಳಿಸಿದ ಹಣ..*
*ಆಗೊಮ್ಮೆ-ಈಗೊಮ್ಮೆ ಭ್ರಷ್ಟರು ಬ್ರೇಕಿಂಗ್ ನ್ಯೂಸ್ ಗಳಲ್ಲಿ ಕಾಣುವವರಾದರೂ ಕಾಣಿಸಿಕೊಳ್ಳದ 'ಭ್ರಷ್ಟ' ರಕ್ತಬೀಜಾಸುರರ ಸಂತತಿ ಪಸರಿಪುದು ಇಳೆಯುದ್ದಗಲಕ್ಕೂ..!*
*ಅತ್ತ ಸಮುದ್ರದೊಳಗಿರುವ ತಿಮಿಂಗಿಲಗಳು ಊಟ ನಿದ್ರೆಗೆಟ್ಟಿಹವಂತೆ!!*
*ಕಾರಣ*
*ಭೂಮಿಯ ಮೇಲೆ ತಿಮಿಂಗಿಲಗಳನ್ನೇ ನುಂಗುವ 'ತಿಮಿಂಗಿಲ'ಗಳಿರುವ ಸುದ್ದಿಯ ಕೇಳಿ..!!*
*ಒಂದೊಮ್ಮೆ ಭಯೋತ್ಪಾದಕರನ್ನು ಕ್ಷಮಿಸಬಹುದೇನೋ ಆದರೆ ಈ ಧನದಾಹಿಗಳ ಕ್ಷಮೆ ಸಲ್ಲದು..*
✍️ *ನಾಗೇಂದ್ರ ಬಂಜಗೆರೆ.*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ