ಮಾರ್ಜಕ ತಿಂದ ಮಿಕ...
ಮಾರ್ಜಕ ತಿಂದ ಮಿಕ.. ಓಮಿಕ್ರಾನ್ ಮತ್ತು ಕೋವಿದಮ್ಮಳ ಮೂರನೆಯ ಅಲೆಯ ವೀಕೆಂಡ್ ಕರ್ಪ್ಯೂನಲ್ಲಿ ಮನೆಯಲ್ಲಿ ಬಂಧಿಯಾದ ನಾವು ವೀಕೆಂಡ್ ಲ್ಲಿ ಮಾಡಲೇಬೇಕಾದ ಕೆಲ ಕೆಲಸ ಕಾರ್ಯಗಳನ್ನು ಕೆಲವು ತಾಸು ಮುಂದೂಡಿದ್ದೆವು. ಮಧ್ಯಾಹ್ನ ಯಾವಾಗಲೋ ಬಟ್ಟೆಗಳೆಲ್ಲವನ್ನೂ ಸೋಪಿನ ಪುಡಿ ಹಾಕಿ ವಾಷಿಂಗ್ ಮಷೀನ್ ನಲ್ಲಿ ನೆನೆಸಿಟ್ಟ ಬಟ್ಟೆಯನ್ನು ಹಿಂಡಿ ಬರುತ್ತೇನೆ ಮಗು ನೋಡ್ಕಳಿ ಎಂದು ಕುಮುದಾ ಮೇಲ್ಗಡೆಯಿಂದನೇ ಕೂಗಿ ಹೇಳಿದಳು. ಅದಕ್ಕೆ ಓ ಯೆಸ್ ಎಂದ ನಾನು ಮಗಳನ್ನು ಹಾಗೆ ಜೆಸ್ಸಿಯನ್ನು(ನಾಯಿ) ತೋರಿಸಿ ಆಟ ಆಡಿಸುತ್ತಾ ಇದ್ದೆ. ಕೋಣದತ್ರ ಕರು ಎಷ್ಟು ಹೊತ್ತು ಇದ್ದಾತು?? ಎಂಟತ್ತು ನಿಮಿಷಗಳಲ್ಲಿ ರಾಗ ಶುರುವಾಯಿತು.ಹಾಗೆ ಮಗು ಸಮೇತ ಮೇಲೆ ಹೋದ ನಾನು "ಹೇ ಬಾರೆ ಈ ಪಾಪುನ ನೀನೆ ಹಿಡ್ಕೊ ನಾನೇ ಆ ಬಟ್ಟೆ ಎತ್ತಿ ಹಾಕುವೆ "ಎಂದೇಳಿ ಕೆಲಸ ಶುರು ಮಾಡಿಕೊಂಡೆ. ಬಟ್ಟೆ ಜಾಲಿಸಿ ಎತ್ತಿಹಾಕುವಾಗ ತನೇಹಾಳ ಯಾವುದೋ ಬಟ್ಟೆಯ ಜೇಬಿನಿಂದ ಎರಡ್ಮೂರು ಬಾದಾಮಿ,ಪಿಸ್ತ ನೀರಿನಲ್ಲಿ ತೇಲಿದವು. ಮೊದಲೇ ಚಳಿಗಾಲ , ನೀರೂ ಕೂಡ ತಣ್ಣಗಿದ್ದು ಏನಾದರೂ ಕಡಿದಾಡಲು ಸಿಕ್ಕರೆ ಬಿಡಕ್ಕಾಗತ್ತಾ?? ಚೆನ್ನಾಗಿಯೇ ನೆನೆದಿದ್ದ ಬಾದಾಮಿ ಪಿಸ್ತಾ ಎರಡನ್ನೂ ನೀರಲ್ಲಿ ತೊಳೆದು ಒಟ್ಟಿಗೆ ಬಾಯೋಳು ಹಾಕಿ ಕ್ಷಣಾರ್ಧದಲ್ಲಿ ತಿಂದು ಮುಗಿಸಿದೆ.ನುಂಗಿದ ಮೇಲೆ ಬಾಯೋಳು ಏನೋ ಒಂಥರಾ ಪ್ಲೇವರ್!! ಅದ್ಹೇಗಿತ್ತಂದರೇ ಈ ನೆನೆಸಿದ ಉದ್ದಿನ ಬೇಳೆಯನ್ನು ಹಸಿ ಇರುವ...