ಕನಸುಗಳು ಕಥೆಯಾದಾಗ...part-6
ಕನಸು ಕಥೆಯಾದಾಗ... Part-6 ಆರುಷಿಗೆ ಮಲ್ಟಿ ಬ್ರಾಂಡ್ ಕಾರ್ಸ್ ಕ್ರೇಜ್ .. ಯಾವಾಗಲೂ ಮಾರುಕಟ್ಟೆಗೆ ಬರುವ ಎಲ್ಲಾ ಕಾರುಗಳ ಬಗ್ಗೆ ತಿಳಿಯುವ ಕುತೂಹಲ ಅಗತ್ಯವಾಗಿ ಎಲ್ಲಾ suv ಕಾರುಗಳ ಪುಲ್ ಡಿಟೇಲ್ಸ್ ಇದ್ದೇ ಇರುತಿತ್ತು. ಅದರಂತೆ ಅತೀ ಮೆಚ್ಚುಗೆ ಯಾದ ಮಹೀಂದ್ರ thar sports ರೆಡ್ ಕಾರನ್ನು ಇತ್ತೀಚೆಗೆ ಕೊಂಡುಕೊಂಡಿದ್ದ.. ಬೇಸಿಗೆಯಾದರೂ ಮೋಡ ಮುಸುಕಿದ ವಾತಾವರಣ..ಆದರೆ ಮಳೆಗಾಲದಲ್ಲಿ ಮೋಡ ಮುಸುಕಿದಾಗ ಆವರಿಸುವ ಗಾಢ ನೆರಳಿನಂತೆ ಇರದೆ ಸೂರ್ಯನಿಲ್ಲದೇ ಹೋದರೂ ಬೆಳಕು ಪ್ರಕಾಶಮಾನವಾಗಿಯೇ ಇತ್ತು. ನಗರದಲ್ಲೊಂದು ಸುತ್ತು ಹೋಗಿ ಬರೋಣ ಎಂದು ಗಾಡಿ ತೆಗೆದ. ರಸ್ತೆಯಲ್ಲಿ ಹೊಸ ಗಾಡಿ ಹೋಗುತ್ತಿರುವಾಗ ಜನರೆಲ್ಲಾ ಆರುಷಿಯ ಕಾರನ್ನು ನೋಡುತ್ತಿದ್ದರು.ಇದು ಅವನ ಕಾರ್ ರೈಡಿಂಗ್ ಗೆ ಮತ್ತಷ್ಟು ಉನ್ಮಾದ ನೀಡುತ್ತಿತ್ತು.ಹಾಗೆ ಹತ್ತು ಹದಿನೈದು ನಿಮಿಷಗಳ ಕಾಲ ಸಿಟಿಯಲ್ಲಿ ಸುತ್ತು ಹಾಕುತ್ತಾ ಅದೊಂದು ಪ್ಲೈ ಓವರ್ ಹಾದು ಹೋಗಬೇಕಿತ್ತು. ಆ ಪ್ಲೈ ಓವರ್ ಮೇಲೆ ಯಾರೋ ಎಂಟತ್ತು ದೊಡ್ಡ ದೊಡ್ಡ ಕಾರುಗಳನ್ನು ಸಾಲಾಗಿ ನಿಲ್ಲಿಸಿಕೊಂಡು ಏನೋ ವೀಕ್ಷಣೆ ಮಾಡುತ್ತಿರುವಂತೆ ಇತ್ತು. ಆರುಷಿ ಆ ಗುಂಪಿನ ಕಡೆಗೆ ಜಾಸ್ತಿ ಗಮನಕೊಡದೇ 100-120 km/h speed ಲ್ಲಿ ಬಸ್ ಎಂಬಂತೆ ಅವರನ್ನು ಕ್ರಾಸ್ ಮಾಡಿಕೊಂಡು ಹೋದ. ಪ್ಲೈ ಓವರ್ ಇಳಿದ ಮೇಲೆ ಆರುಷಿಯ ಕಾರಿನ ವೇಗ ಕಡಿಮೆಯ...