ಕನಸುಗಳು ಕಥೆಯಾದಾಗ...part-6

ಕನಸು ಕಥೆಯಾದಾಗ...
        Part-6

ಆರುಷಿಗೆ ಮಲ್ಟಿ ಬ್ರಾಂಡ್ ಕಾರ್ಸ್ ಕ್ರೇಜ್ .. ಯಾವಾಗಲೂ ಮಾರುಕಟ್ಟೆಗೆ ಬರುವ ಎಲ್ಲಾ ಕಾರುಗಳ ಬಗ್ಗೆ ತಿಳಿಯುವ ಕುತೂಹಲ ಅಗತ್ಯವಾಗಿ ಎಲ್ಲಾ suv ಕಾರುಗಳ  ಪುಲ್ ಡಿಟೇಲ್ಸ್ ಇದ್ದೇ ಇರುತಿತ್ತು. ಅದರಂತೆ ಅತೀ  ಮೆಚ್ಚುಗೆ ಯಾದ ಮಹೀಂದ್ರ thar  sports ರೆಡ್ ಕಾರನ್ನು ಇತ್ತೀಚೆಗೆ ಕೊಂಡುಕೊಂಡಿದ್ದ..

ಬೇಸಿಗೆಯಾದರೂ ಮೋಡ ಮುಸುಕಿದ ವಾತಾವರಣ‌..ಆದರೆ  ಮಳೆಗಾಲದಲ್ಲಿ ಮೋಡ ಮುಸುಕಿದಾಗ ಆವರಿಸುವ ಗಾಢ ನೆರಳಿನಂತೆ ಇರದೆ ಸೂರ್ಯನಿಲ್ಲದೇ ಹೋದರೂ ಬೆಳಕು ಪ್ರಕಾಶಮಾನವಾಗಿಯೇ ಇತ್ತು. ನಗರದಲ್ಲೊಂದು ಸುತ್ತು ಹೋಗಿ ಬರೋಣ ಎಂದು ಗಾಡಿ ತೆಗೆದ. ರಸ್ತೆಯಲ್ಲಿ ಹೊಸ ಗಾಡಿ ಹೋಗುತ್ತಿರುವಾಗ ಜನರೆಲ್ಲಾ ಆರುಷಿಯ ಕಾರನ್ನು ನೋಡುತ್ತಿದ್ದರು.ಇದು  ಅವನ ಕಾರ್ ರೈಡಿಂಗ್ ಗೆ ಮತ್ತಷ್ಟು ಉನ್ಮಾದ ನೀಡುತ್ತಿತ್ತು.ಹಾಗೆ ಹತ್ತು ಹದಿನೈದು ನಿಮಿಷಗಳ ಕಾಲ ಸಿಟಿಯಲ್ಲಿ ಸುತ್ತು ಹಾಕುತ್ತಾ ಅದೊಂದು ಪ್ಲೈ ಓವರ್  ಹಾದು ಹೋಗಬೇಕಿತ್ತು. ಆ ಪ್ಲೈ ಓವರ್ ಮೇಲೆ ಯಾರೋ ಎಂಟತ್ತು ದೊಡ್ಡ ದೊಡ್ಡ ಕಾರುಗಳನ್ನು ಸಾಲಾಗಿ ನಿಲ್ಲಿಸಿಕೊಂಡು  ಏನೋ ವೀಕ್ಷಣೆ ಮಾಡುತ್ತಿರುವಂತೆ ಇತ್ತು. ಆರುಷಿ ಆ ಗುಂಪಿನ ಕಡೆಗೆ ಜಾಸ್ತಿ ಗಮನಕೊಡದೇ 100-120 km/h speed ಲ್ಲಿ ಬಸ್ ಎಂಬಂತೆ  ಅವರನ್ನು  ಕ್ರಾಸ್ ಮಾಡಿಕೊಂಡು ಹೋದ. ಪ್ಲೈ ಓವರ್ ಇಳಿದ ಮೇಲೆ ಆರುಷಿಯ ಕಾರಿನ ವೇಗ ಕಡಿಮೆಯಾಗುತ್ತಲಿತ್ತು.ಅಲ್ಲೊಂದು ಮೀಡಿಯಂ ಗಾತ್ರದ road Humps ಹತ್ತಿ ಇಳಿಯುವ ವೇಳೆಗೆ ಬಲಗಡೆಗೆ ಎರಡು black Scorpio ಕಾರುಗಳು ವೇಗವಾಗಿ ಬಂದು ಆರುಷಿಯ ಮುಖ ನೋಡುತ್ತಾ  "ಏಯ್.. ಗಾಡಿ ಸೈಡಿಗೆ ಹಾಕು..."ಎಂದು ಆರುಷಿಯ ಕಾರಿನ ಮುಂದೆ left right ಎರಡು ಟ್ರ್ಯಾಕ್ ಲ್ಲೂ ಎರಡು ಬ್ಲಾಕ್  ಸ್ಕಾರ್ಪಿಯೋ ಗಳಿಂದ ರೋಡನ್ನು ಬ್ಲಾಕ್ ಮಾಡಿ ಒಂದೊಂದು ಗಾಡಿಯಿಂದ ಮೂರ್ನಾಲ್ಕು ಜನ ದಾಂಡಿಗರು ಕೆಳಗಿಳಿದು  ಬಂದರು.  ಅವರ ಎರಡೂ ಕಾರಿನ Back glass ಮೇಲೆ yellow ರೇಡಿಯಂ ನಿಂದ 'REDDY' ಅಂತ ಬರೆದಿದೆ. ಆ ಕಾರುಗಳಿಂದ  ಇಳಿದವರೂ ದಪ್ಪ ದಪ್ಪ ಮೀಸೆಯ ತೆಲುಗು ಮಿಶ್ರಿತ ಕನ್ನಡ rough local ಲಾಂಗ್ವೇಜ್ ಬಳಸುತ್ತಾ ಆರುಷಿಯ ರೈಟ್ ಸೈಡ್ ಡೋರಿಗೆ  ಕೈಯಿಂದ ಬಡಿಯುತ್ತಾ "ಇಳಿ ಇಳಿ.. ಅಣ್ಣ ನಿನ್ ಗಾಡಿ ನೋಡಬೇಕಂತೆ ಇಳಿ.."ಎಂದೇಳಿದರು.

ಅನ್ನಕು ಕನೆಕ್ಟ್ ಚೆಯ್ಯಿ..
ಎಂದು ತೆಲುಗಿನಲ್ಲಿ
ಸಫಾರಿಯಂತಹ ಡ್ರೆಸ್ ಹಾಕಿದ್ದ ಒಬ್ಬ ಇನ್ನೊಬ್ಬನಿಗೆ ಹೇಳಿದ ಅದೊಂದು ದೊಡ್ಡಮೊಬೈಲ್ ಹಿಡಿದು ವಾಕಿಟಾಕಿ ತರಹ ಕನೆಕ್ಟ್ ಮಾಡಿದರು.

"ಹ್ಹಾ ಅನ್ನ ಆ ಬಂಡಿನಿ ಇಕ್ಕಡ ಆಪೇಸಮು.. ಇಕ್ಕಡಕೀ ವಚ್ಚೈಯನ್ನ..."(ಹ್ಹಾ ಅಣ್ಣ ಆ ಗಾಡಿ ನ ಇಲ್ಲಿ ನಿಲ್ಲಿಸಿದ್ದೀವಿ ಇಲ್ಲಿ ಬಂದುಬಿಡಿ)

ಆರುಷಿಗೆ ಸ್ವಲ್ಪಮಟ್ಟಿಗೆ ಭಯ ಆಯಿತು. ನಾನೇನು ತಪ್ಪು ಮಾಡಿದೆ ಎಂದು ಅನಿಸಿತು.  ನಾನು ಗಾಡಿ ಚೇಂಜ್ ಮಾಡಿದರೂ ಇವರು ಹಳೆಯದನ್ನು ಮರೆತಿಲ್ಲ. ಆ ರೆಡ್ಡಿಯವರು ಬಂದರೆ ಅಂದು ನಾನು ನಿಮ್ಮನ್ನು ನೋಡಬೇಕು ಅಂತ ನಿಮ್ಮ ಬೆಂಗಾವಲಿನ ವಾಹನಗಳನ್ನು overtake ಮಾಡಿ ನಿಮ್ಮ ಗಾಡಿ ಸಮಾನ ಬಂದದ್ದು ಎಂದೇಳಿ ಸಾರಿ ಕೇಳುವ ಅಂತ ಅಂದುಕೊಳ್ಳುತ್ತಾ ಇದ್ದ...ಹಿಸ್ಟರಿ ಏನೆಂದರೇ ಇದಕ್ಕೂ ಮುನ್ನ ಎರಡುವರ್ಷಗಳ ಹಿಂದೆ ಒಮ್ಮೆ ಆರುಷಿ ಕುಟುಂಬದೊಂದಿಗೆ ಬಳ್ಳಾರಿಗೆ ಹಿಂದಿರುಗಿತ್ತಿದ್ದಾಗ ಅಂದು ಇದೇ ರೆಡ್ಡಿಯವರು ತಮ್ಮ audi luxury ವಾಹನದಲ್ಲಿ ಎರಡ್ಮೂರು ಬೆಂಗಾವಲು ವಾಹನಗಳೊಂದಿಗೆ ಸಬ್ ರೋಡಿಂದ  ಆರುಷಿಯ ಕಾರಿನ ಮುಂದೆಯೇ ಹೈವೆಗೆ ಸೇರಿಕೊಂಡರು.

ಆರುಷಿಯು ಆರೋಹಿಗೆ ರೆಡ್ಡಿ ಯವರ ಕಾರುಗಳು ಇವು ಎಂದೇಳಿದ.
ಇದಾರ ರೆಡ್ಡಿಯವರು??
ಹ್ಞೂ ಪ್ರಂಟ್ ಸೆಂಕೆಂಡ್ vehicle li ಇದ್ದಾರೆ.ಆರೋಹಿಯು ನೋಡೋಣವಾ ಎಂದಿದ್ದಕ್ಕೆ ಹ್ಞೂಂ ಎನ್ನುತ್ತಾ ಎಕ್ಸ್ ಕ್ಯೂ ಲೇಟರ್ ತುಳಿದಾಗ ತಲುಪಿದ್ದು ರೆಡ್ಡಿಯವರ ಕಾರಿನ ಸರಿ ಸಮಾನವಾಗಿ!ತಕ್ಷಣವೇ ಎಚ್ಚೆತ್ತ ಬೆಂಗಾವಲು ಸ್ಕಾರ್ಪಿಯೋ ಕಾರಿನವರು  ಕಾರನ್ನು ಹಿಗ್ಗಾ ಮುಗ್ಗಾ ನನ್ನ ಕಾರಿನ ಮುಂದೆ  ತಿರುವಿ ತಂದರು. ಏಯ್ ಏನ್ ಅಷ್ಟು ಅರ್ಜೆಂಟ್.. ಎಂದು ಕೂಗುತ್ತಿದ್ದರು. ಅಲರ್ಟ್ ಆದ ಆರುಷಿ ಗಾಡಿ control ಮಾಡಿ  side ಗೆ ಹಾಕಿದ.ಈಗ ಏನೋ ವಾಗ್ವಾದ ಆಗತ್ತೆ ಅಂತ ಭಾವಿಸಿ ಆರುಷಿಯೂ ಸಿದ್ದವಾದ.. ನೋಡು ನೋಡುತ್ತಿರುವಾಗಲೇ ರೆಡ್ಡಿಯವರ ಕಾರು ವೇಗವಾಗಿ ಮುಂದೋಗಿದ್ದರಿಂದ ಬೆಂಗಾವಲಿನವರೂ ಹಿಂಬಾಲಿಸಿ ಹೋದರು. ಅಂದಿನ ಸೇಡು ಇವತ್ತು ನೆನಪಿಟ್ಕೊಂಡು ಈಗ ಅಟ್ಯಾಕ್ ಮಾಡಿದ್ದಾರೆ ಎಂದು ಯೋಚನೆ ಮಾಡುತ್ತಿರುವಾಗ  discovery ಕಾರಿನಲ್ಲಿ ರೆಡ್ಡಿಯವರು ಬಂದು ಇಳಿದರು.ಇಳಿಯುತ್ತಲೇ ಕಾರನ್ನು ನೋಡುತ್ತಲಿದ್ದರಿಂದ ಹಳೇ ಸೇಡು ಏನಿಲ್ಲ ಕಾರ್ ನೋಡೋಕೆ ಬಂದಿರಬಹುದು ಎಂದು ಅಂದುಕೊಳ್ಳುತ್ತಿರುವಾಗ  ರೆಡ್ಡಿಯವರೇ ಡೋರನ್ನು ತೆಗೆದು ನೀವ್ ಆ ಕಡೆ ಸೀಟ್ ಗೆ ಹೋಗಿ.. ಏಯ್ ಯೌವ್ವರೂ ನಾ ಎನುಕ ರಾವದ್ದಂಡಿ..  ಎಕ್ಸಕಾರ್ಟ್ ಎವ್ವರೂ ಒದ್ದು... ಎಂದು ಆರ್ಡರ್ ಮಾಡಿ ಸ್ಟೀರಿಂಗ್ ಹಿಡಿದು ಕುಳಿತರು..

ಆರುಷಿಗೆ ರೆಡ್ಡಿಯವರೇ ನನ್ನ ಕಾರು ಮೆಚ್ಚಿ ಸ್ಟೀರಿಂಗ್ ಹಿಡಿದು ಕುಳಿತಿದ್ದಾರೆಂದು ಖುಷಿ ಆದರೆ ರೆಡ್ಡಿಯವರ ಕೂದಲು ಹಾಗೆಯೇ ಇದೆ ಮುಖ ಮಾತ್ರ ಯಾಕೋ ಕ್ಲಿಯರ್ ಅನ್ನಿಸಲಿಲ್ಲ. ಮುಖದ ಮೇಲೆ ಬಂಗು ಆದ ಹಾಗೆ ಇದೆ ಎಂಬಂತೆ ಆರುಷಿಗೆ ಅನಿಸಿತಾದರೂ ಆರುಷಿಗೆ ಎಲ್ಲಾ ರೀತಿಯ ಜನರನ್ನು ಮನಶಾಸ್ತ್ರದ ಹಿನ್ನೆಲೆಯಲ್ಲಿ ನೋಡುವುದು ಅಭ್ಯಾಸ. ಆರುಷಿಗೆ ಎದುರಾಗುವ ಎಲ್ಲರನ್ನು ಅವರ ಹಾವಭಾವ ಆತ್ಮವಿಶ್ವಾಸದ ಮಟ್ಟವನ್ನು ಲಭ್ಯವಿರುವಷ್ಟು ಹೊತ್ತು ಅವರನ್ನು ಆ ಹಿನ್ನೆಲೆಯಲ್ಲಿ ನೋಡುವುದು ಆರುಷಿಗೆ ವಿಶೇಷವಾದ ಆಸಕ್ತಿ.ಹಾಗೆಯೇ ಅವರ ಮುಖವನ್ನು ನೋಡುತ್ತಾ ಮನದಲ್ಲೇ ಏನೇನೋ ಲೆಕ್ಕಾಚಾರ ಹಾಕುತ್ತಿರಲು ಗಾಡಿ ಚೆನ್ನಾಗಿದೆ ಕಣ್ಣ್ರಿ.. ಏನ್ ಮಾಡ್ತಿದ್ದೀರಾ??ಸರ್ ನಾನು ಎಜುಕೇಶನ್ ಡಿಪಾರ್ಟ್ಮೆಂಟ್. ಹ್ಞ ಹ್ಞಾ..ಪರವಾಗಿಲ್ಲ ಕಣ್ರಿ ಮಾಸ್ಟ್ರೆ ಒಳ್ಳೆಯ ಗಾಡಿ ತಗೊಂಡಿರಾ ಎಂದು ಹೇಳಿದರು. Thank you sir.. ಎಂದೇಳಿದ.. ಯಾರೂ ಹಿಂದೆ ಬರಬೇಡಿ ಅಂತ ಹೇಳಿದ್ರೂ ಒಂದಿಬ್ಬರು ರೆಡ್ಡಿ ಬೆಂಗಾವಲು ಸಿಬ್ಬಂದಿ ಯಾವುದೋ ಬೈಕ್ ಹಿಡಿದು ದೂರದಲ್ಲಿ ನೋಡುತ್ತಿದ್ದರು.

ಇಷ್ಟೇಲ್ಲಾ ಡ್ರೀಮ್ ಸ್ಟೋರಿ ನೆನಪಾಗಿದ್ದು ಬೆಳಿಗ್ಗೆ ಅವಸರವಸರವಾಗಿ ಶಾಲೆಗೆ ಹೋಗುವಾಗ ಎಂಟತ್ತು VIP ಕಾರುಗಳು ಒಂದರಿಂದೆ ಒಂದು ಆರುಷಿ ಹೋಗಲು ಬಿಡದೇ ಹೋದಾಗ ನೆನಪಿಗೆ ಬಂದು ಹೇಳಿದ್ದು. ಅದಕ್ಕೆ ಆರೋಹಿ ಯಾವಾಗ  ಹೊಸ ಕಾರು ತಗೊತ್ತೀವೋ ಅಥವಾ ಹಿಂಗೆ ಕನಸು ಕಾಣಬೇಕೋ ನೋಡಣ ಎಂದೇಳಿದಳು..ಒಂದೊಳ್ಳೆ ಕಾರು ತಗೋಳೋಣ ಎಂದು ಶಾಲೆಗೆ ಬಂದು ನಿತ್ಯಕಾಯಕದಲ್ಲಿ ತೊಡಗಿಕೊಂಡರು.

✍️ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..