ಪೋಸ್ಟ್‌ಗಳು

ಜೂನ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಒಳ್ಳೆಣ್ಣೆ ವಿಷವಾದಾಗ...

ಇಮೇಜ್
ಒಳ್ಳೆಣ್ಣೆ ವಿಷವಾದಾಗ..... ಹಲಸು- ಮಾವಿನ ಹಣ್ಣಿನ ಸೀಜನ್ ನಲ್ಲಿ  ನಮ್ಮ ಮನೆಯಲ್ಲಿ ಎರಡೂ ಹಣ್ಣಿನ ಕಲರವ ಜೋರಾಗಿಯೇ ಇರುತ್ತದೆ...ಅಚ್ಚಮಲೆನಾಡಿನ ನರಸಿಂಹರಾಜಾಪುರದಲ್ಲಿ ಮತ್ತು ಅರೆ ಮಲೆನಾಡಿನ ತರೀಕೆರೆಯಲ್ಲಿ ಕುಮುದಾಳ ತಾತ ನೆಟ್ಟು ಬೆಳೆಸಿರುವ ಮಾವಿನ ಮರದಿಂದ ತಿನ್ನುವವರೆಲ್ಲಾ ತಿಂದು ಬಿಟ್ಟು ಅಳಿದುಳಿದ ಹತ್ತಿಪ್ಪತ್ತು ಕೆಜಿಯಷ್ಟಾದರೂ ಮಾವಿನ ಕಾಯಿಗಳು ಸಿಕ್ಕೇ ಸಿಗುತ್ತಾವೆ.ಮನೆಯಲೆಲ್ಲಾ ಮಾವಿನ ಘಮ ಘಮಿಸುವ ಸುವಾಸನೆಯಿದ್ದರೆ, ಅದರ ಜೊತೆಗೆ ಬರುವ ಇನ್ನೊಂದು ಹಣ್ಣು ಹಲಸು.. ಹಲಸಿನ ಹಣ್ಣು  ನನಗೆ ಕರಡಿಯಂತೆ  ಇಷ್ಟ ದಿನವೊಂದಕ್ಕೆ  ಮೀಡಿಯಂ ಗಾತ್ರದ ಒಂದು ಹಣ್ಣನ್ನು ಸಲೀಸಾಗಿ ತಿಂದು ಮುಗಿಸುವೆ.ಮನೆಯಲ್ಲಿ  ಕೆಲವು ದಿನಗಳ ವರೆಗೆ ಯಾವುದು ತಿನ್ನಲಿ ಯಾವುದು ಬಿಡಲಿ ಎನ್ನುವಂತಿರುತ್ತದೆ..ಆದರೆ ಅಪ್ಪಿ ತಪ್ಪಿಯೂ ಎರಡನ್ನೂ ಒಟ್ಟಿಗೆ ಸೇವಿಸಿದರೆ ಹೊಟ್ಟೆಕೆಡುವ ಸಾಧ್ಯತೆ ಹೆಚ್ಚಿರುವುದರಿಂದ ಒಂದು ದಿನ ಹಲಸಿನ ದಿನ ಮತ್ತೊಂದು ದಿನ ಮಾವಿನ ದಿನ ಆಚರಣೆಯಂತೆ ಸೇವಿಸಬೇಕು. ಮೊನ್ನೆ ಹಲಸಿನ ಕಡುಬು  ಮಾಡಲೆಂದು ಕುಮುದಾ ಸಿದ್ದತೆ ಮಾಡಿದ್ದಳು.. ಹಲಸಿನ ಕಡುಬು ಮಾಡಲು ತೇಗದ ಮರದ ಎಲೆಗಳು ಅವಶ್ಯವಿದ್ದುದರಿಂದ ಮಾಮೂಲಿಯಾಗಿ ಪ್ರತಿ ಬಾರಿಯೂ ತರುತ್ತಿದ್ದ ತೇಗದ ಮರದಿಂದಲೇ ಎಲೆಗಳನ್ನು ಕಿತ್ತು ತಂದೆ. 25% ನಷ್ಟು ನೆನೆಸಿಟ್ಟ ಅಕ್ಕಿ ಮತ್ತು 75% ಹಲಸಿನ ಹಣ್ಣುಗಳನ್ನು  ಮತ್ತು ಅಗತ್ಯವಾದರೆ...

ಕೊಡೈಕೆನಾಲ್ ಮತ್ತು ಪಳನಿ.. (ಪ್ರವಾಸ ಕಥನಾ)

ಇಮೇಜ್
ಮೈಸೂರ್ to ಕೊಡೈಕೆನಾಲ್...       (ಪ್ರವಾಸ ಕಥೆ)   ಕುಮುದಾ  ನನಗೆ ಕರೆಮಾಡಿ ನಮ್ಮ  ರಾಜ್ಯ ಸಂಪನ್ಮೂಲ ತಂಡದವರು  ಪಳನಿ ಕೊಡೈಕೆನಾಲ್ ಎರಡುದಿನ ವೀಕೆಂಡ್ ಟ್ರಿಪ್ ಮಾಡೋಣ ಅಂತೀದಾರೆ.. ಹೋಗಾಣವಾ ಎಂದಳು.. ಆದರೆ ನೀವು ತನೇಹಾಳನ್ನು ಕರೆದುಕೊಂಡು ಪ್ರೈಡೇ ಸಂಜೆಯೊಷ್ಟತ್ತಿಗೆ ನೀವು ಮೈಸೂರಿಗೆ ಬರಬೇಕು ಎಂದಳು.ಆಗ ನಾವು ತಿಂಗಳಿಗೆ ಕನಿಷ್ಠ ಎರಡು ಸಾವಿರ ಕಿಲೋ ಮೀಟರ್ ಗಳಷ್ಟು ಟೂರ್ ಮಾಡುತ್ತಿದ್ದ ಕಾಲ... ಕೊಡೈಕೆನಾಲ್ ಬಹಳ ಕೇಳಿದ್ದೆ.. ಹೋಗಾಣ ಬರುತ್ತೀನಿ ತಗೋ ಎಂದು ಒಪ್ಪಿಗೆ ಸೂಚಿಸಿದೆ. ಕುಮುದಾ  ರಾಜ್ಯಮಟ್ಟದ ಸಂಪನ್ಮೂಲ ಶಿಕ್ಷಕರ ತಂಡದೊಂದಿಗೆ ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರಿನ ಸುತ್ತೂರು ಮಠದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಶಿಕ್ಷಕರಿಗೆ ತರಬೇತಿಯ ನೀಡುತ್ತಿದ್ದರು. ನಾನು ಮಗಳೊಂದಿಗೆ ಮಧ್ಯಾಹ್ನ ಹನ್ನೆರಡು ಹದಿನೈದಕ್ಕೆ ಮೈಸೂರಿಗೆ ಪಯಣ ಆರಂಭವಾಯಿತು. ತಾತ್ಕಾಲಿಕ ಮ್ಯಾರಿಡ್ ಬ್ಯಾಚುಲರ್ ವಿಥ್ ಚೈಲ್ಡ್ ಆಗಿದ್ದ ನಾನು ಮನೆಯಲ್ಲಿ ಬೆಳಿಗ್ಗೆ ಏನೋ ತಿಂಡಿಯನ್ನು ಮಾಡಿದ್ದೆ. ಮಧ್ಯಾಹ್ನ ಒಂದು ಒಂದು ಹದಿನೈದಕ್ಕೆ ರಾಜ್ಯ ಹೆದ್ದಾರಿ ೧೫೦ ಎ ರಸ್ತೆಗೆ ಹೊಂದಿಕೊಂಡ ರಾಂಪುರ ಎಂಬ ಊರಿನಲ್ಲಿ ಮದ್ಯಾಹ್ನದ ಊಟ ಮುಗಿಸಿಕೊಂಡು  ಪುನಃ ಹೆದ್ದಾರಿಯಲ್ಲಿ ನಮ್ಮ ಪಯಣ ಶುರುವಾಯಿತು.. ಬಳ್ಳಾರಿ ಯಿಂದ ಹಿರಿಯೂರಿನ ವರೆಗೆ ವೇಗವಾಗಿ ಸಾಗುವ ರಸ್ತೆ.. ಹಿರಿಯೂರಿನ ನಂತರ   ರಸ್ತೆ ಸ್ವಲ್ಪ ...