ಪೋಸ್ಟ್‌ಗಳು

ಸೆಪ್ಟೆಂಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕೋರೋನಾ ನಂತರ ನಮ್ ಮಕ್ಕಳಿಗೆ ಏನಾಗಿದೆ???

*ಆತ್ಮೀಯರೇ...ಎಲ್ಲಾ ಶಿಕ್ಷಕರು ಮತ್ತು ಪೋಷಕರು ಓದಲೇ ಬೇಕಾದ ಲೇಖನ ತಪ್ಪದೇ ಬಿಡುವು ಮಾಡಿಕೊಂಡು ಓದಿ..* *ಅದ್ಯಾಕೋ  ಶಾಲಾ ಮಕ್ಕಳು ಮೊದಲಿನ ತರ ಇಲ್ಲ...* *ಕೋವಿಡ್ ಬಂದ ಮೇಲೆ ಇಡೀ ಪ್ರಪಂಚದ ಎಲ್ಲಾ  ವ್ಯವಸ್ಥೆಗಳು ಪಾತಾಳಕ್ಕೆ ಕುಸಿದಿದ್ದು ನಮಗೆಲ್ಲಾ ಚೆನ್ನಾಗಿಯೇ ಗೊತ್ತಿದೆ. ಅದರಲ್ಲೂ ಶಾಲೆಯ ಮಕ್ಕಳ ತಲೆಯಲ್ಲಿ ಕಲಿತದ್ದೆಲ್ಲಾ ಅಳಿಸಿ ಹೋಗಿ ಹೊಸದೇನಾದರೂ ಕಲಿಸೋಣ ಎಂದರೆ ಅದೂ ಕೂಡ ಕೆಲವರ  ತಲೆಗೆ  ಹತ್ತುತ್ತಿಲ್ಲ.!ಆಶ್ಚರ್ಯವಾದರೂ ಇದು ಸತ್ಯ.ಕರೋನ ನಂತರದಲ್ಲಿ  ನಾನೊಬ್ಬ ಶಿಕ್ಷಕನಾಗಿ  ಈ ಮಾತನ್ನು ಹೇಳುತ್ತಿದ್ದೇನೆಂದರೇ ಅದು ಈ ಕೆಳಗಿನ ಘಟನೆಗಳಿಂದ..* *ಘಟನೆ -೧* *ನಮ್ಮ ಶಾಲೆಯ ಇಬ್ಬರು ಹುಡುಗರು  ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಟಾಪ್ ಮೆರಿಟ್ ಲ್ಲಿ ಆಯ್ಕೆ ಆಗಿದ್ದರು.ಆ ಹುಡುಗರು  ಬಹುತೇಕ ಸ್ವತಂತ್ರವಾಗಿ ಬದುಕಲು ಶಕ್ತವಾದವರು.   ಈ ಏರಿಯಾದ ಮಕ್ಕಳಿಗೆ ಶಾಲಾ ಸೌಕರ್ಯಗಳು ಸರಿಯಾಗಿಲ್ಲದುದರಿಂದ ಇವರು ಈ ಹಾಸ್ಟೆಲ್ ಗೆ ಸೇರಿದ್ದು ಇವರ ವಿದ್ಯಾಭ್ಯಾಸ ಒಂದು ಹಂತ ಮುಟ್ಟಿತು ಎಂದು ನಿಟ್ಟುಸಿರು ಬಿಡುವ ವೇಳೆಗೆ ಬಂದು ತಲುಪಿದ ಸುದ್ದಿ ಎಂದರೆ ಆ ಹುಡುಗರು ಹಾಸ್ಟೆಲ್ನಿಂದ ವಾಪಾಸು ಊರಿಗೆ ಬಂದು ಸಿಕ್ಕವರಿಗೆಲ್ಲಾ ಆ ಶಾಲೆ ಬೇಡ ಅಲ್ಲಿ ಮೊಬೈಲ್ ಇಲ್ಲ ಏನು ಇಲ್ಲ.. ಬರೀ ಶಾಲೆ ಓದು ಬರೆ ..ಓದು ಬರೆ.... ನಾವು ಹೋಗಲ್ಲ ಇಲ್ಲೇ ಆದರೆ ಶಾಲೆಗೆ ಹೋಗುವೆವು ಎಂದು.ಈ ವಿಷಯ ನಮ್...