ಪೋಸ್ಟ್‌ಗಳು

ಅಕ್ಟೋಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಿಗುರೀತೇ ಒಲವಿನ ಹೂ ಬಳ್ಳಿ???

ಇಮೇಜ್
ಚಿಗುರೀತೇ ಒಲವಿನ ಹೂ ಬಳ್ಳಿ..?? ನಾ ಆ ಹಾದಿಯಲಿ ಓಡಾಡುವಾಗ    ಅದು ಸುಂದರ ಬಳ್ಳಿ.. ಮೊಗ್ಗಿಲ್ಲ ಹೂ ಇಲ್ಲ.. ಬಳ್ಳಿಯ ಸೊಬಗೇ ನೋಡಲು ಚಂದ.. ಅದು ಮಳೆ ಆದ ಮುಂಜಾನೆ ಲತೆಯ ಮುತ್ತಿನ ರಾಶಿಯಲಿ ಮೊಗ್ಗೊಂದು ತೆಲೆಯೆತ್ತಿತ್ತು ಮುದ್ದಿನ ನಗೆ ತೋರಿ..   ಹಸಿರಿಗೆ ಕಳೆಯಾಗಿ ಸೊಂಪಾಗಿ ಮೊಗ್ಗಾಗಿ ಮರುದಿನ ಅರಳಿದ ಹೂ ನಗುತ್ತಾ ಕೇಳಿದಂತಿತ್ತು ಹೇಗಿದ್ದೀನಂತಾ? ಬ್ಯೂಟಿಪುಲ್ ಎನುತಾ ಚಿವುಟಲು ಕೈ ಹಾಕಿದ ಎನಗನಿಸಿದ್ದು ನೋಡಲಂದದ ಸುಮವ ಕಿತ್ತು ಮಾಡುವುದೆಂತೆಂದು  ನೋಡಲಿರಲೆಂದು ಹಾಗೆ ಇರಲುಬಿಟ್ಟೆ..ಹೂ  ನನ ನೋಡಿ ನಾ ಹೂ ನೋಡಿ ನಗುತ್ತಿದ್ದೆವು..ನೆನೆದು ನೆನೆದು ನಗುತಲೇ ಇದ್ದೆವು.. ನಗುತಿರಲಿಟ್ಟ ಸುಮವ ನಗುವ ಉಳಿದಿಹದೇ ಎಂದು ಅನುದಿನ ಕಾಣುವ ತವಕದಿ  ಅರಳಿದ ಕುಸುಮವ ನೋಡುತಾ ನಲಿಯುತಾ ಹಾಡುತಾ ಯಾರೂ ಕದಿಯದೇ ಕಾಯುತಾ, ನಗುತಾ ಕಳೆದೆ  ದಶಕವ.. ದಿನೇ ದಿನೇ ಹೂ  ನೂರಾಗಿ ಇಂದ್ರಚಾಪನ  ಸರ್ವ ಸುಮಗಳು  ಒಂದೇ ಲತೆಯಲಿ ಕಂಡ   ಆ ಅಚ್ಚರಿ ಏನೆಂದು ಬಣ್ಣಿಸಲಿ?? ಆ ಸುಮಗಳ  ನೋಡುವುದೆಂದರೆ ಮಹಾದಾನಂದ ! ಹಬ್ಬ..! ರಸದೌತಣ..!!! ಜೇನು ದುಂಬಿಗಳಿಗೆ ಮಧುವಾಗಿ ಮಕರಂದವಾಗಿ ಜೇನಾಗಿಹ ಸುಮಗಳ ಅಂದು ಚಿವುಟಿದ್ದರೆ ಇವೆಲ್ಲಿ ಹೋಗಬೇಕಿತ್ತು?? ಹೂ ದುಂಬಿಗಳ ನಗೆ ಕಂಡು ನೆನದಾಗಲೆಲ್ಲೆನಗೆ ಖುಷಿಯೋ ಖುಷಿ.. ಅರಳಿದ ಸುಮವ ಮೊದಲು ನಾ ಕಾಣಬೇಕೆಂದು ಹೋದಾಗ ನನಗಿಂತ ಮೊದ...

ಜೀವನ ಪಯಣ

ಇಮೇಜ್
ಜೀವನ ಪಯಣ ಪಯಣದ ಹಾದಿ ಸರಳರೇಖೆಯಲ್ಲ ... ತಗ್ಗು ದಿನ್ನೆ ಕಲ್ಲು ಮುಳ್ಳುಗಳೊಡಗೂಡಿದ ಅನಿರೀಕ್ಷಿತ ನಾನ ತಿರುವುಗಳ ಪಯಣ...  ದಣಿದು ಬಾಯಾರಿದಾಗ ಗಂಟಲು ತಣಿಸಲು ಜೀವಜಲದ ಸೆಲೆಯಂತೆ ಮನಸ್ಸಿಗಂಟಿರುವವರು ಜೊತೆಯಿರಬೇಕು.. ಬಾಳ ಪಯಣದ ಹಾದಿ ಸವೆಸಲು  ಗಂಟಲು ಬತ್ತಿದರೂ,ಧಣಿವಾದರೂ ,ನೋವಿದ್ದರೂ ನಲಿಯುತ ಹೆಜ್ಜೆಯಿಡಲು... ಪಯಣ ಪ್ರಯಾಸದಂತಿರಬಾರದು.. ಆಯಾಸವಾದಗ ಧಣಿವರಿಯಲು ಸ್ನೇಹ ಸಂಬಂಧಗಳು ಇರಬೆಕು  ಜೀವಂತ   ಗುರಿಮುಟ್ಟು ಮುಟ್ಟದಿರು ನಿಲ್ಲದಿರಲಿ ಪಣ ತೊಟ್ಟ ಪಯಣ .. ಪಯಣಿಸು  ನಿನ್ನ ಹಾದಿ ಎಷ್ಟು ಸವೆಸಿದೆನೆಂದು ಹಿಂತಿರುಗಿ ನೋಡದೆ... ನಾವಂದುಕೊಂಡ ಸ್ಥಳವನ್ನು ತಡವಾಗಿಯಾದರೂ ತಲುಪಬಹುದು ಆದರೆ ಒಬ್ಬರ ಹೃನ್ಮನವನ್ನು ತಲುಪುವುದು ಸುದೀರ್ಘ ಪಯಣ. . ಎಷ್ಟು ಪಯಣಿಸಿದರೂ ಕೊನೆಯವರೆಗೂ ತಲುಪಲಾಗುವುದೇ ಇಲ್ಲ...