ಜೀವನ ಪಯಣ

ಜೀವನ ಪಯಣ


ಪಯಣದ ಹಾದಿ ಸರಳರೇಖೆಯಲ್ಲ ... ತಗ್ಗು ದಿನ್ನೆ ಕಲ್ಲು ಮುಳ್ಳುಗಳೊಡಗೂಡಿದ ಅನಿರೀಕ್ಷಿತ ನಾನ ತಿರುವುಗಳ ಪಯಣ...

 ದಣಿದು ಬಾಯಾರಿದಾಗ ಗಂಟಲು ತಣಿಸಲು ಜೀವಜಲದ ಸೆಲೆಯಂತೆ ಮನಸ್ಸಿಗಂಟಿರುವವರು ಜೊತೆಯಿರಬೇಕು.. ಬಾಳ ಪಯಣದ ಹಾದಿ ಸವೆಸಲು  ಗಂಟಲು ಬತ್ತಿದರೂ,ಧಣಿವಾದರೂ ,ನೋವಿದ್ದರೂ ನಲಿಯುತ ಹೆಜ್ಜೆಯಿಡಲು...

ಪಯಣ ಪ್ರಯಾಸದಂತಿರಬಾರದು.. ಆಯಾಸವಾದಗ ಧಣಿವರಿಯಲು ಸ್ನೇಹ ಸಂಬಂಧಗಳು ಇರಬೆಕು  ಜೀವಂತ  

ಗುರಿಮುಟ್ಟು ಮುಟ್ಟದಿರು ನಿಲ್ಲದಿರಲಿ ಪಣ ತೊಟ್ಟ ಪಯಣ .. ಪಯಣಿಸು  ನಿನ್ನ ಹಾದಿ ಎಷ್ಟು ಸವೆಸಿದೆನೆಂದು ಹಿಂತಿರುಗಿ ನೋಡದೆ...

ನಾವಂದುಕೊಂಡ ಸ್ಥಳವನ್ನು ತಡವಾಗಿಯಾದರೂ ತಲುಪಬಹುದು ಆದರೆ ಒಬ್ಬರ ಹೃನ್ಮನವನ್ನು ತಲುಪುವುದು ಸುದೀರ್ಘ ಪಯಣ. . ಎಷ್ಟು ಪಯಣಿಸಿದರೂ ಕೊನೆಯವರೆಗೂ ತಲುಪಲಾಗುವುದೇ ಇಲ್ಲ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..