ಹಿಡಿಂಬವನ ಮತ್ತು ನಗ್ಲಿ ಮುಳ್ಳುಗಳು...
*ಹಿಡಿಂಬವನ ಮತ್ತು ಮೇಲ್ದುರ್ಗ...* part -2 (ಹಿಂದಿನ ಸಂಚಿಕೆಯಿಂದ.... ಮೂವತ್ತು ನಲವತ್ತು ಅಡಿಯ ಬಂಡೆಸಂದುಗಳ ಪ್ರಪಾತದಲ್ಲಿ ಕಂಡ ಮೂಳೆಗಳ ರಾಶಿಗೆ ಹೌಹಾರಿದ್ದೆವು... ) *ಅಂದು ದುರ್ಗದ ಎಣ್ಣೆಕೊಳದ ಸಮಾಂತರವಾಗಿ ಬುರುಜುಗಳ ದಾಟಿ ಒಳ ಹೋದರೆ ಅಲ್ಲೊಂದು ಘಂಟೆ ಮರ ಇತ್ತು.. ಘಂಟೆ ಮರ ಎಂದರೆ ಎತ್ತಿನಗಾಡಿಯ ಚಕ್ರದ ಕುಂಬಿ ತಯಾರಿಸಲು ಬಳಸಲ್ಪಡುವ ಏಕೈಕ ಮರ ಎಂದರೆ ಈ ಘಂಟೆ ಮರವೇ.. ಅದು ಪೆಬ್ರವರಿ ತಿಂಗಳಾಗಿದ್ದರಿಂದ ಎಲೆಗಳೆಲ್ಲಾ ಉದುರಿ ಅಂಗೈಯಗಲ ಮತ್ತು ಅಂಗೈಯಷ್ಟು ಉದ್ದದ ಅಷ್ಟೇನು ಭಾರವೇ ಇಲ್ಲದ ಕಾಯಿಗಳು ಮಾತ್ರ ಮರದಲ್ಲಿ ನೇತಾಡುತಿದ್ದವು.. ಆಗೊಮ್ಮೆ ಈಗೊಮ್ಮೆ ಏಳುತಿದ್ದ ಸುಂಟರಗಾಳಿಗೆ ಆ ಮರದ ಎಲ್ಲಾ ಕಾಯಿಗಳು ಗಳ ಗಳನೇ ಅಲ್ಲಾಡಿ ಗಂಟೆಯ ರೀತಿಯ ಶಬ್ಧಹೊರಡಿಸುತಿದ್ದವು...ಅದರ ಸುತ್ತ ಮುತ್ತಾ ದೊಡ್ಡ ಬಂಡೆಗಳ ಅಡಿಯಲ್ಲಿ ವಿಶಾಲವಾಗಿ ಹತ್ತಾರು ಜನ ಮಹಡಿಯ ಕೆಳಗೆ ಕೂರುವಂತೆ ಕೂರಬಹುದಾದ ಸ್ಥಳಾವಕಾಶ ಇತ್ತು.. ತಿಮ್ಮಣ್ಣನ ಮಾಮೂಲಿ ಸ್ಥಳದಲ್ಲಿ ಕೂತ..ಬಾರಪ್ಪ ಇಲ್ಲೆ ಕೂತ್ಕೋ ಎಂದು ಪ್ರತಿ ಬಾರಿಯೂ ಹೇಳುತಿದ್ದ ತಿಮ್ಮಣ್ಣನಿಗೆ ನಾನು ಹೇಳುತಿದ್ದುದು ಒಂದೇ ಉತ್ತರ... ಹನ್ಸ್ ವಾಸನೆ ನನಗೆ ಆಗುವುದಿಲ್ಲಣ್ಣ... ನೀವು ಅರಾಮಾಗಿ ಕೂತ್ಕಳಿ ಎಂದು ನಾನು ಸ್ವಲ್ಪ ದೂರದಲ್ಲಿ ದೊಡ್ಡ ಎತ್ತರದ ಬಂಡೆಯ ನೆರಳು ವಿಶಾಲವಾದ ಮತ್ತೊಂದು ಬಂಡೆಯಮೇಲೆ ಹಾಸಿ ಬಿದ್ದಿತ್ತು.ಮುಂದೆ ನೋಡಿದರೆ ಕೋಟೆಯ ಪ್ರವೇಶದ್ವಾರ ಮ...