ಪೋಸ್ಟ್‌ಗಳು

ಮೇ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇನ್ನೂ ಯಾಕೆ ಬದಲಾವಣೆಗಳು ಆಗಿಲ್ಲ???

ಇಮೇಜ್
ಇನ್ನೂ ಯಾಕೆ  ಬದಲಾವಣೆ ಆಗಿಲ್ಲ???   ನಿದರ್ಶನ-೧ ನನ್ನ ಕರ್ತವ್ಯದ ಸ್ಥಳ ಗುಡ್ಡಗಾಡು ಪ್ರದೇಶ. ಸೆಪ್ಟಂಬರ್ ನಿಂದ  ಡಿಸೆಂಬರ್ ಒಳಗೆ  ಯಾವ ಮಡಿಕೇರಿಗೆ ಕಡಿಮೆ ಇರದಂತ ಹಸಿರನಾಡು. ಅದೇ  ಮಳೆಗಾಲದಲ್ಲಿ ಹಚ್ಚಹಸುರಿನಿಂದ ನಳನಳಿಸುತ್ತಾ ಕಂಗೊಳಿಸುತ್ತಿದ್ದ ಬೆಟ್ಟಗುಡ್ಡಗಳ ಹುಲ್ಲುಗಾವಲು ಬೇಸಿಗೆಯ ಬಿಸಿಲಿಗೆ ಕಮರಿ ಹೋಗುತ್ತಿತ್ತು. ಈ ಬೆಟ್ಟಗುಡ್ಡಗಳ ವಿಶೇಷ ಏನೆಂದರೇ ವಿರಳಗಿಡ ಮರಗಳು ಇರುವ ಬಂಡೆಗಲ್ಲಗಳೇ ಹೆಚ್ಚಿರುವ ಗುಡ್ಡಗಳು ಅಥವಾ  ಯಾವುದೇ ರೀತಿಯ  ಮರಗಿಡಗಳಿಲ್ಲದ  ಬೋಳು ಬೋಳಾದ ಗುಡ್ಡಗಳು. ಬೇಸಿಗೆಯಲ್ಲಿ  ಗುಡ್ಡದಲ್ಲಿ ಒಣಗಿದ ಹುಲ್ಲಿಗೆ ಪ್ರತಿ ವರ್ಷವೂ  ಉದ್ದೇಶಪೂರ್ವಕವಾಗಿ ಬೆಂಕಿಹಾಕುವುದು ಇವರಿಗೆ ಶತ ಶತಮಾನದಿಂದ ಬಂದ ಅಭ್ಯಾಸ.!! ಪ್ರತೀ ವರ್ಷವೂ ಅದಕ್ಕಾಗಿಯೇ ಕೆಲವರು ಮೀಸಲಿದ್ದು ಹಗಲೋ ರಾತ್ರಿಯೋ ಅರಣ್ಯ ಕಾವಲುಗಾರರ ಕಣ್ಣು ತಪ್ಪಿಸಿ ಗುಡ್ಡಗಳಿಗೆ ಬೆಂಕಿ ಇಡುತ್ತಿದ್ದರು. ಎರಡ್ಮೂರು ದಿನಗಳು ಉರಿದು ಉರಿದು ಸಾವಿರಾರು ಹೆಕ್ಟರ್ ಭೂ ಪ್ರದೇವನ್ನು ಈ ಬೆಂಕಿಯ ಕೆನ್ನಾಲಿಗೆ ಬೂದಿ ಮಾಡುತ್ತಿತ್ತು. ಇದನ್ನು ಪ್ರತಿ ವರ್ಷವೂ ಗಮನಿಸಿದ್ದ ನಾನು ಒಂದು ದಿನ  ನನಗೆ ಪರಿಚಯದ ಅರಣ್ಯ ಕಾವಲುಗಾರರಿಂದ ಪಾರೆಸ್ಟ್ ರೇಂಜರ್ ಅವರ ಮೊಬೈಲ್ ನಂಬರ್ ಪಡೆದು ಈ ಬೆಂಕಿಯ ವಿಷಯವಾಗಿ  ಬೀದಿನಾಟಕಗಳು,ಮಾಹಿತಿಸಭೆಗಳು ನಡೆಸುವಂತೆ ಮಾತಾಡಿದೆ.ನನ್ನೊಂದಿಗೆ ಬಹಳ ಗೌರವ...

ಸವಿ ಜೇನುpart-15

ಇಮೇಜ್
#ಸವಿಜೇನು_Part_15 _ಭೂಮಿಯ ಮೇಲೆ ಜೇನುಹುಳುಗಳ ಪ್ರಾಮುಖ್ಯತೆ.._   ಬಾಲ್ಯದಿಂದಲೂ ನನ್ನದು ಭಾಗಶಃ ಜೇನು ಕೀಳುವುದೇ ಕೆಲಸ ಆಗಿತ್ತು.ಜೇನುಗಳನ್ನು ಕೀಳುವುದು ವಾಣಿಜ್ಯ ಉದ್ದೇಶದಿಂದ ಅಲ್ಲದೇ ಇದ್ದರೂ ಅದೊಂದು ಆಹಾರದ ಅಭ್ಯಾಸವಾಗಿ  ಹವ್ಯಾಸವಾಗಿತ್ತು. ನನ್ನ ಐದು -ಆರನೇ  ವಯಸ್ಸಿನಿಂದಲೇ ಆರಂಭವಾದ ಈ ಅಭ್ಯಾಸ ಹವ್ಯಾಸವಾಗಿ ಇಪ್ಪತ್ತು ಇಪ್ಪತ್ತೆರಡು ವರ್ಷಗಳವರೆಗೆ ಪ್ರಧಾನವಾಗಿಯೇ ಮುಂದುವರೆದಿತ್ತು.ಈಗಲೂ ಕಸುಬು  ಮರೆತಿಲ್ಲವಾದರೂ ಅಭ್ಯಾಸ ಮಾಡುತ್ತಿಲ್ಲವಷ್ಟೇ... ನನ್ನ ಸುಧೀರ್ಘ ಜೇನು ಬದುಕಿನಲ್ಲಿ ಇಲ್ಲಿಯವರೆಗೆ ನಾನು ಕನಿಷ್ಟ ಅಂದಾಜು ಸುಮಾರು ಹತ್ತುಸಾವಿರ ಜೇನು ಬಿಡಿಸಿರಬಹುದು.! ಆ ಅನುಭವದ ಹಿನ್ನೆಲೆಯಲ್ಲಿ ಈ ಅಖಂಡ ಭೂ ಪ್ರದೇಶದ ಮೇಲೆ ಜೇನುಹುಳಗಳು ಭೂಮಿಯ ಮೇಲೆ ಇರದಿದ್ದರೆ ಏನಾಗುತ್ತಿತ್ತು?ಜೇನುಹುಳಗಳಿಗೂ ಮತ್ತು ಈ ಭೂಮಿಯ ಜೀವರಾಶಿಗಳ ಆಹಾರದ ಮೇಲಿನ ಸಂಬಂಧ ಹೇಗಿದೆ  ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ.. ನಮ್ಮ ಮನೆಯಲ್ಲಿ ಎಂದೆಂದಿಗೂ ಜೇನುತುಪ್ಪ ಇಲ್ಲದ ದಿನಗಳು ಇರಲಿಲ್ಲ. ಮನೆಯಲ್ಲಿದ್ದ ರೇಡಿಯೋದಲ್ಲಿ ಯಾವಾಗಲೂ ಒಮ್ಮೆ  "ಹಾಲೂ ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ ..." ಎಂಬ ರಾಜುಕುಮಾರ್ ಹಾಡನ್ನು ಆಗಾಗ ಕೇಳುತಿದ್ದೆ. ಆ ಹಾಡಿನಲ್ಲಿ ಹೇಳಿದ ಹಾಗೆ ಹಾಲಿನ ಜೊತೆಗೆ ಜೇನುತುಪ್ಪ ಹಾಕಿಕೊಂಡು ಕುಡಿಯುತ್ತಿದ್ದೆ. 150-200 ml ನ  ಹಾಲಿನ ಲೋಟಕ್ಕೆ 20 ml ನಷ್ಟು ಜೇನುತು...

ಸವಿಜೇನು_part-14

ಇಮೇಜ್
*ಸವಿಜೇನು -part-14*    ✍️ _ನಾಗೇಂದ್ರ ಬಂಜಗೆರೆ._ _ಜೇನಿನಬಗ್ಗೆ ಇರುವ Myths and misconceptions.._ *ನಿಸರ್ಗದ ಅಚ್ಚರಿಯ  ವಿದ್ಯಮಾನಗಳು ನಿರಂತರವಾಗಿ ಸಾಗುತ್ತಿರುತ್ತಾವೆ.ಅದು ಪ್ರಕೃತಿಯ ಎಲ್ಲಾ ಆಯಾಮಗಳಲ್ಲೂ... ಜೀವಿಗಳಲ್ಲಿ ಆಯಾ ಜೀವಿಗಳ ಗುಂಪಿಗೆ ಅವು ತಲತಲಾಂತರದಿಂದ ಬಂದ ಆಹಾರ,ಸಂತಾನೋತ್ಪತ್ತಿ, ಬದುಕಿನ ವಿಧಾನಗಳು ಬೇರೆ ಬೇರೆ ಆಗಿದ್ದರೂ ಬೇರೊಂದು ಗುಂಪಿನ ಜೀವಿಗಳಿಗೆ ಮಾತ್ರ ಇತರರ ಜೀವಿಗಳ ಬದುಕು  ಅಚ್ಚರಿ ಎಂಬಂತೆ ಕಾಣುವುದು.ಎಷ್ಟೋ ಬಾರಿ ಅದೆಷ್ಟೋ ಜೀವಿಗಳ ಬಗ್ಗೆ ಎಲ್ಲಾ ಚಟುವಟಿಕೆಗಳ ಬಗ್ಗೆ ಸಂಪೂರ್ಣವಾಗಿ ಈ ಆಧುನಿಕ ಯುಗದಲ್ಲೂ ಅರಿಯಲಾಗಲಿಲ್ಲ... ಕೆಲವು ಜೀವಿಗಳ  ಜೊತೆಗೆ ಈ ಮನುಷ್ಯನ ಅನುಬಂಧ ಅನುಭವ ಸೇರಿ ಕಥೆ ಪುರಾಣಗಳೇ ಹುಟ್ಟಿಕೊಂಡವು. ಪ್ರತಿ ಜೀವಿಯ ಮೇಲೆಯೂ ಕಲ್ಪನೆಯ ಕತೆ ಕಟ್ಟಿದ ಮನುಕುಲ ಕೆಲವೊಮ್ಮೆ ಕಟ್ಟುಕತೆಗಳೇ ಆ ಜೀವಿಗಳ ಪಾಲಿಗೆ ವರವೂ ಶಾಪವೂ ಆದದ್ದು ಉಂಟು...ಉದಾಹರಣೆಗೆ ನರಿ. ತನ್ನ ಆಹಾರ ಹುಡುಕುವಾಗ ಒಂದಷ್ಟು ಉಪಾಯಗಳನ್ನು ಕಂಡುಕೊಂಡಿದ್ದರಿಂದ ಇಡೀ ನರಿಕುಲವನ್ನೇ  ಶಾಶ್ವತವಾಗಿ ಮಹಾಮೋಸದ  ಪ್ರಾಣಿ ಎಂದು ಬಿಂಬಿಸಲಾಯಿತು.ಹೀಗೆ ಬೆಕ್ಕು ಗೂಬೆ ಕತ್ತೆಗಳ ಸೇರಿ ಹಲವಾರು  ಪ್ರಾಣಿ ಪಕ್ಷಿಗಳು ಮನುಷ್ಯರೂ ಇಂತಹ ಕಳಂಕದಿಂದ ಹೊರಾತಾಗಿಲ್ಲ. ಇದರಂತೆ ಜೇನುಹುಳುಗಳು ಇಂತಹ  ತಪ್ಪು ತಿಳುವಳಿಕೆಯ ಮಾಹಿತಿಗಳು ಈ ಕೆಳಕಂಡಂತೆ ಇವೆ.* 👉 *_ಜೇನುತುಪ್ಪದಿಂದ...

ಸವಿಜೇನು-Part-13

ಇಮೇಜ್
ಸವಿಜೇನು-Part-13 ✍️ ನಾಗೇಂದ್ರ ಬಂಜಗೆರೆ. _ತುಟಿಗೆ ಜೇನು ಕಚ್ಚಿದೆ ಎಂದು ಆಸ್ಪತ್ರೆಗೆ ಹೋದರೆ  ***ಮಾತ್ರೆ ತಂಗಡಿರಾ ಅಂತ ಕೇಳಬೇಕೆ???_ ಅದು 2020 ಮಾರ್ಚ್ ಹದಿನೈದು- ಹದಿನಾರು....What's app,Facebook ಇತರೆ ಸಾಮಾಜಿಕ  ಜಾಲತಾಣಗಳಲ್ಲಿ ಕೊರೊನಾ ವೈರಸ್ ಬಂದದ್ದರಿಂದ ಚೀನಾದ ಹಲವು ನಗರಗಳು ಮತ್ತು  ಬೇರೆ ಯಾವು ಯಾವುದೋ ದೇಶಗಳಲ್ಲಿ  ನಿತ್ಯ ವ್ಯವಹಾರದಲ್ಲಿದ್ದ ಜನರು ಏಕಾಏಕಿ ಯಾವ ಸ್ಥಿತಿಯಲ್ಲಿರುವರೋ ಅದೇ ಸ್ಥಿತಿಯಲ್ಲಿರುವ ಜನರು ಗಂಡು ಹೆಣ್ಣು ಅಬಾಲ ವೃಧ್ದರವರೆಗೆ ರಸ್ತೆ ಮನೆ ಮಾರುಕಟ್ಟೆ  ಹಾಗೆ ಎಲ್ಲೆಂದರಲ್ಲೆ ಕುಸಿದ್ದು ಬಿದ್ದು ಹುಳುಗಳಂತೆ  ಒದ್ದಾಡಿ ಒದ್ದಾಡಿ ಅಕಾಲಿಕ ಸಾವಿಗೀಡಾಗುತ್ತಿರುವ ಭಯಾನಕ ವೀಡಿಯೋಗಳು..! ನೋಡಿದರೆ ಎದೆ ಝಲ್ಲೆಂದು ಇಡೀ ಮನುಕುಲವೇ ಕೆಲವೇ ಘಂಟೆ, ದಿನಗಳಲ್ಲಿ ಸಾಂಕ್ರಾಮಿಕ ರೋಗದಿಂದ ನಾಶವಾಗುವುದಾ??? ಪ್ರಪಂಚವೇ ಬೆಚ್ಚಿಬಿದ್ದು ತಲ್ಲಣಗೊಂಡ ದಿನಗಳು.ಗಾಸಿಪ್ ಗಾಳಿಸುದ್ದಿಗಳು ಇನ್ನೂ ವ್ಯಾಪಕವಾಗಿ ಹರಡಿ  ಬದುಕಿದ್ದವರಿಗೆ ಕೊರೋನಾದ ನಡುಕ ಶುರುವಾಗಿ ಲೋ ಬೀಪಿ- ಹೈ ಬೀಪಿ ಆಗಿ ಪ್ರತಿಯೊಬ್ಬರ ಪರಿಚಯದ ಒಂದಿಬ್ಬರು ಹಠಾತ್ತನೇ ಇದ್ದಕ್ಕಿಂದ್ದಂತೆ ಸಾವೀಗೀಡಾದದು ಇನ್ನೂ ಭಯ ಜನರಲ್ಲಿ ಹೆಚ್ಚಾಯಿತು. ಎಲ್ಲರೂ ಒಂದು ರೀತಿಯ ಸಾವಿನ ಭಯದಿಂದ ತತ್ತರಿಸಿದ ದಿನಗಳು..ಬಹುಶಃ ಈ ವೀಡಿಯೋಗಳು ಮತ್ತು ಸ್ಪಷ್ಟತೆಯಿಲ್ಲದ ಕೊರೋನಾ  ರೋಗದ ಲಕ್ಷಣಗಳು ...

ಸವಿಜೇನು-Part-12

ಇಮೇಜ್
#ಸವಿಜೇನು_part_12 _ಜೇನಿನ ಬದುಕು ಮತ್ತು ಬದಲಾವಣೆ_ ✍️ ನಾಗೇಂದ್ರ ಬಂಜಗೆರೆ. #ಜೇನುಹುಳುಗಳ ಪಾಲಿಗೆ ಚೈತ್ರ ಮಾಸ ಸುವರ್ಣಕಾಲ ಎಂದು ಹೇಳಬಹುದು. ಪ್ರಕೃತಿಯಲ್ಲಿರುವ ಬಹುತೇಕ ಸಸ್ಯಸಂಕುಲವು ಹೂ ಬಿಡುವ ಕಾಲ. ವನಸುಮಗಳರಳಿ  ನಿಸರ್ಗದ ಸಂತಾನ ಚಕ್ರ ಆರಂಭವೇ ಈ ಹೊಸ ಚಿಗುರು ಮೊಗ್ಗು ಹೂವುಗಳಿಂದ.ಹೀಗೆ ಕೋಟ್ಯಾಂತರ ಗಿಡಮರಗಳು ಹೂ ಬಿಟ್ಟಾಗ ಸಸ್ಯಗಳಲ್ಲಿ ಸಂತಾನೋತ್ಪತ್ತಿಯ ಬಹುಮುಖ್ಯವಾದ ಭಾಗವಾದ 'ಪರಾಗಸ್ಪರ್ಶ'ಎಂಬ ಕೆಲಸವನ್ನು ಮಾಡುವುದು ಮಾತ್ರ ಈ ಜೇನುಹುಳುಗಳು.ಗಾಳಿ ಮತ್ತು ಇತರ ಕೀಟಗಳು ಪರಾಗಸ್ಪರ್ಶ ಕಾರ್ಯವನ್ನು ಮಾಡುವವಾದರೂ ಅದರ ಶೇಕಡಾವಾರು ಪ್ರಮಾಣ ಕಡಿಮೆ.ಪರಾಗಸ್ಪರ್ಶ ಕೆಲಸವನ್ನು ಗರಿಷ್ಠ ಪ್ರಮಾಣದಲ್ಲಿ ಮಾಡುವುವೆಂದರೇ ಅದು ಪ್ರಕೃತಿಯಲ್ಲಿರುವ  ಈ ವಿಸ್ಮಯ ಕೀಟ ನಾನಾ ನಮೂನೆಯ ಜೇನುಹುಳುಗಳು ಮಾತ್ರ. ಕೋಲು ಜೇನು,ಕಿರುಜೇನುಗಳಲ್ಲಿ ಸಾಮಾನ್ಯವಾಗಿ ಡಿಸೆಂಬರ್ ಜನವರಿ ತಿಂಗಳಿನಿಂದ ಜೇನುಹುಳುಗಳ ಸಂತಾನೋತ್ಪತ್ತಿ ಕಾರ್ಯ ಆರಂಭವಾಗುತ್ತದೆ.ಆದರೆ ಚೈತ್ರ ಮಾಸದಲ್ಲಿ ಎಥೆಚ್ಚವಾದ ಹೂಗಳಿಂದ ಜೇನು ಮತ್ತು ಮಕರಂದವನ್ನು ಸಂಗ್ರಹಿಸುತ್ತವೆ.ಇವುಗಳ ಸಂತಾನಕ್ಕೂ ಇದೇ ಕಾಲವೇ ಈ ಜೇನುಗಳಿಗೆ ಬೆಸ್ಟ್ ಸೀಜನ್ ಕೂಡ..ಆಷಾಢ ಶ್ರಾವಣ ಮಾಸಗಳಲ್ಲಿ ನಿಸರ್ಗದಲ್ಲಿ ಹೂವು ಕಡಿಮೆಯಾಗಿ ಜೇನುಗಳಲ್ಲಿ ಸಂತಾನೋತ್ಪತ್ತಿ ಕಡಿಮೆ ಇರುತ್ತದೆ. 👉 _ಜೇನುಹುಳುಗಳಿಗೆ ಯಾವ ಹೂವುಗಳು ಇಷ್ಟ??_ ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾದರೂ ನನ್ನ ...

ಸವಿಜೇನು-Part-11

ಇಮೇಜ್
#ಸವಿಜೇನು_Part_11 ರಾಜಾಪುರ ಎನ್ನುವುದೊಂದು ಊರು.ಭಾರತದೇಶದಲ್ಲೇ ಅತ್ಯುತ್ತಮ ಮ್ಯಾಗನಟೈಟ್ ಕಬ್ಬಿಣದ ಅದಿರು ಇರುವ ಕಲ್ಲು ಬಂಡೆಗಳಿರುವ  ಬೆಟ್ಟಗುಡ್ಡಗಾಡುಗಳಲ್ಲಿ  ಕರಡಿ ಚಿರತೆಗಳು ಇರುವ  ಪ್ರದೇಶ.  ನಾನು ಅಲ್ಲಿ ನನ್ನ ಸರ್ಕಾರಿ ಸೇವೆ ಮಾಡುತ್ತಿದ್ದಾಗ 2011 ರಲ್ಲಿ ಜನಗಣತಿ ಮಾಡಲು ಜನವಸತಿಗೆ ತೆರಳಿದ್ದೆ.ಸುಮಾರು 10-11ಗಂಟೆಯ ಸಮಯ. ಏಪ್ರಿಲ್ ತಿಂಗಳಾಗಿದ್ದರಿಂದ ಬಳ್ಳಾರಿ ಬಿಸಿಲ ಪ್ರತಾಪ ಕೇಳಬೇಕೆ???  ಸೂರ್ಯನ ಶಿಕಾರಿ ನೆತ್ತಿಗೇರಿ ಒಂದೇ ಸಮನೆ ಸುಡುತ್ತಿದ್ದುದರಿಂದ ಕಿರಿ ಕಿರಿಯಾಗಿ ತಂಪು ಹೊತ್ತಿನಲ್ಲಿ ಗಣತಿ ಮಾಡಿದರಾಯಿತು ಎಂದು ಮನೆಗೆ ಹಿಂತಿರುಗಲೆಂದು Census ಕಾಗದ ಪತ್ರ ಹಿಡಿದು ತೆರಳುತ್ತಿದ್ದೆ.ಹೋಗುತ್ತಿದ್ದಾಗ ಸುಮಾರು ನಲವತ್ತು ಐವತ್ತು ವರ್ಷದ  ಜಮೀನ್ದಾರರ ಹಳೆಯ ಕಲ್ಲಿನ ಮನೆಯೊಂದನ್ನು  ಅದೇ ಊರಿನ ಕೂಲಿ ಆಳುಗಳು ಕೆಡವುತ್ತಿದ್ದರು.ಮನೆ ಕೆಡವುವಾಗ ಅದೊಂದು ತರಹದ ವಾಸನೆ. ಸುಮಾರು ದೂರದವರೆಗೆ ಆ ಮುಗ್ಗಲು ವಾಸನೆ ಹರಡಿತ್ತು..  ಆ ಕೆಡವುತ್ತಿದ್ದ ಮನೆಯನ್ನು ಮಾಳಿಗೆ ಮನೆಯಾಗಿತ್ತು. ಆಕಾಲದಲ್ಲಿ ಈಚಲ /ತಾಳೆಯ ಮರಗಳನ್ನು ಅರ್ಧಕ್ಕೆ ಸೀಳಿ ಅವುಗಳನ್ನು ಹೊಂದಿಸಿ ಮೇಲೆ ಬೇರೆ ಬೇರೆ ಮಣ್ಣನ್ನು ಮಿಶ್ರಣ ಮಾಡಿ ವಿಶೇಷ ಹದ ಮಾಡಿ ಕಲೆಸಿ  ಹಾಕಿದ 'ಮಿದ್ದಿಮಣ್ಣು' ಹಾಕಿರುತ್ತಿದ್ದರು.ಇದನ್ನು ಜಂತಿ ಮನೆ,ಮಾಳಿಗೆ ಮನೆ, ಮಿದ್ದಿ ಮನೆ ಎಂದು ಕರೆಯಲಾಗುತ್ತದೆ.ಅದ...