ಕನಸು ಕಥೆಯಾದಾಗ... kanasu-11
*ಕನಸು ಕಥೆಯದಾಗ...* ಕನಸು -11 *ಅಂದು ಆದಿತ್ಯವಾರ... ಅರುಷಿಯ ಸಹೋದ್ಯೋಗಿಯೊಬ್ಬರ ಮನೆಯ ಗೃಹಪ್ರವೇಶವೂ ಅಂದು ಇತ್ತು..ಆರುಷಿ ಅಹನಾಳಿಗೆ 11 ಗಂಟೆಗೆ ಸಿದ್ದವಾಗಲು ತಿಳಿಸಿ ಆರುಷಿಯೂ ಮಗಳು ಲಭನ್ಯಳಿಗೆ ಸ್ನಾನ ಮಾಡಿಸಲು ಕರೆಯುತ್ತಿದ್ದರು. ಲಭನ್ಯಳ ಕೈಯಲ್ಲಿದ್ದ ಮೊಬೈಲ್ ಗೆ ಯಾರೋ ಕಾಲ್ ಮಾಡಿದ್ದರಿಂದ ಓಡಿಬಂದು ಮೊಬೈಲ್ ನನಗೆ ಕೊಟ್ಟಳು.... ನನಗೆ ಗೊತ್ತಿರುವವರೇ... ಒಂದು ಕಾರ್ಯಕ್ರಮ ಇದೆ... ಅದುಬಿಟ್ರೆ ಮನೆಯಲ್ಲಿ ಇರುವೆ ಬನ್ನಿ ಎಂದ...ಆದರೆ ಅವರು ಎಷ್ಟು ಗಂಟೆಗೆ ಬರುವರೆಂದಾಗಲಿ; ಇತ್ತ ಆರುಷಿಯೂ ಎಷ್ಟು ಗಂಟೆಗೆ ಬರಬೇಕೆಂದಾಗಲಿ ಹೇಳಲಿಲ್ಲ. ಆರುಷಿಯ ಕುಟುಂಬ ಸಿದ್ದರಾಗಿ ಗೃಹಪ್ರವೇಶಕ್ಕೆ ತೆರಳಿದರು.* *ಸೂರ್ಯನ ಪ್ರಕಾಶಕ್ಕೆ ಹೊಸಮನೆಯ ಗೃಹಪ್ರವೇಶಕ್ಕೆ ಹಾಕಿದ್ದ ಡೆಕೋರೇಷನ್ ಲೈಟ್ಗಳು ಕಾಂತಿಯಿಲ್ಲದ ಸಣ್ಣ ಸಣ್ಣ ಬೆಳಕಿನ ಕಿಡಿಗಳಂತೆ ಕಾಣುತಿದ್ದವು. ಈ ಡೆಕೋರೇಷನ್ ಲೈಟ್ಗಳಿಗೆ ಹಗಲುಹೊತ್ತಿನಲ್ಲಿ ಬಾಡಿಗೆ ಕೊಡುವುದು ವೇಸ್ಟ್...ಹೊರಗಡೆ ಸೂರ್ಯ ಇದ್ದಾಗ ಸಣ್ಣ ಪುಟ್ಟ ಲೈಟ್ಗಳು ಆಟೋ turn off ಆಗಬೇಕು...ಗಾಳಿ ಬೀಸುತ್ತಿರುವಾಗ ಬೆಂಕಿ ಕಡ್ಡಿಯಿಂದ ಬೆಂಕಿ ಹೊತ್ತಿಸಲು ಆಗುವುದಿಲ್ಲವಲ್ಲ...?ಅಂತಾದೊಂದು ನಿಯಮ ಈ ಲೈಟ್ ಗಳ ವಿಚಾರದಲ್ಲೂ ಒಂದು ಭೌತಶಾಸ್ತ್ರವು ಭವಿಷ್ಯದಲ್ಲಾದರೂ ಬರಬೇಕೆಂಬುದು ನನ್ನ ವೈಯಕ್ತಿಕ ಅನಿಸಿಕೆಯನ್ನು ಅಹನಾಳಿಗೆ ತಿಳಿಸುತ್ತಾ ಇಂದಿನ ಕಾರ್ಪೊರ...