ಕನಸು ಕಥೆಯಾದಾಗ... kanasu-11
ಕನಸು -11
*ಅಂದು ಆದಿತ್ಯವಾರ... ಅರುಷಿಯ ಸಹೋದ್ಯೋಗಿಯೊಬ್ಬರ ಮನೆಯ ಗೃಹಪ್ರವೇಶವೂ ಅಂದು ಇತ್ತು..ಆರುಷಿ ಅಹನಾಳಿಗೆ 11 ಗಂಟೆಗೆ ಸಿದ್ದವಾಗಲು ತಿಳಿಸಿ ಆರುಷಿಯೂ ಮಗಳು ಲಭನ್ಯಳಿಗೆ ಸ್ನಾನ ಮಾಡಿಸಲು ಕರೆಯುತ್ತಿದ್ದರು. ಲಭನ್ಯಳ ಕೈಯಲ್ಲಿದ್ದ ಮೊಬೈಲ್ ಗೆ ಯಾರೋ ಕಾಲ್ ಮಾಡಿದ್ದರಿಂದ ಓಡಿಬಂದು ಮೊಬೈಲ್ ನನಗೆ ಕೊಟ್ಟಳು.... ನನಗೆ ಗೊತ್ತಿರುವವರೇ... ಒಂದು ಕಾರ್ಯಕ್ರಮ ಇದೆ... ಅದುಬಿಟ್ರೆ ಮನೆಯಲ್ಲಿ ಇರುವೆ ಬನ್ನಿ ಎಂದ...ಆದರೆ ಅವರು ಎಷ್ಟು ಗಂಟೆಗೆ ಬರುವರೆಂದಾಗಲಿ; ಇತ್ತ ಆರುಷಿಯೂ ಎಷ್ಟು ಗಂಟೆಗೆ ಬರಬೇಕೆಂದಾಗಲಿ ಹೇಳಲಿಲ್ಲ. ಆರುಷಿಯ ಕುಟುಂಬ ಸಿದ್ದರಾಗಿ ಗೃಹಪ್ರವೇಶಕ್ಕೆ ತೆರಳಿದರು.*
*ಸೂರ್ಯನ ಪ್ರಕಾಶಕ್ಕೆ ಹೊಸಮನೆಯ ಗೃಹಪ್ರವೇಶಕ್ಕೆ ಹಾಕಿದ್ದ ಡೆಕೋರೇಷನ್ ಲೈಟ್ಗಳು ಕಾಂತಿಯಿಲ್ಲದ ಸಣ್ಣ ಸಣ್ಣ ಬೆಳಕಿನ ಕಿಡಿಗಳಂತೆ ಕಾಣುತಿದ್ದವು. ಈ ಡೆಕೋರೇಷನ್ ಲೈಟ್ಗಳಿಗೆ ಹಗಲುಹೊತ್ತಿನಲ್ಲಿ ಬಾಡಿಗೆ ಕೊಡುವುದು ವೇಸ್ಟ್...ಹೊರಗಡೆ ಸೂರ್ಯ ಇದ್ದಾಗ ಸಣ್ಣ ಪುಟ್ಟ ಲೈಟ್ಗಳು ಆಟೋ turn off ಆಗಬೇಕು...ಗಾಳಿ ಬೀಸುತ್ತಿರುವಾಗ ಬೆಂಕಿ ಕಡ್ಡಿಯಿಂದ ಬೆಂಕಿ ಹೊತ್ತಿಸಲು ಆಗುವುದಿಲ್ಲವಲ್ಲ...?ಅಂತಾದೊಂದು ನಿಯಮ ಈ ಲೈಟ್ ಗಳ ವಿಚಾರದಲ್ಲೂ ಒಂದು ಭೌತಶಾಸ್ತ್ರವು ಭವಿಷ್ಯದಲ್ಲಾದರೂ ಬರಬೇಕೆಂಬುದು ನನ್ನ ವೈಯಕ್ತಿಕ ಅನಿಸಿಕೆಯನ್ನು ಅಹನಾಳಿಗೆ ತಿಳಿಸುತ್ತಾ ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಈ ಟಿವಿ ಮೊಬೈಲ್ ಕರೆನ್ಸಿ ವ್ಯಾಲಿಡಿಟಿಗಳಂತಹವುಗಳು ಬಳಸದಿದ್ದರೂ ಖಾಲಿಯಾಗುವ ರೀತಿಯಲ್ಲಿ 'ಟೆಕ್ನಾಲಜಿ'ತಮಗೆ ಬೇಕಾದ ರೀತಿಯಲ್ಲಿ ಇಟ್ಕೊಂಡಿರೋವ್ರು ಈ ಜಗತ್ತಿಗೆ ಬೇಡವಾದರೂ ಅವರು ಮಾತ್ರ ಅವುಗಳು ಅವರಂತೆಯೇ ಇರಬೇಕು.ಇತ್ತೀಚಿಗೆ ಇಂತವುಗಳ ಸಾಲಿಗೆ ವಾಟರ್ purifier ಗಳೂ ಸೇರಿವೆ... ಅವು ಹೀಗೇ.. 1000-2000 ಲೀಟರ್ ನೀರು ಆ ಫಿಲ್ಟರ್ ಇಂದ ಹಾದು ಬಂದರೇ ಅದು ತನ್ನತಾನೇ ಆಫ್...!ಆಮೇಲೆ ಹೊಸದನ್ನು ಕೊಂಡು ಹಾಕಬೇಕು. ಇದರಿಂದ ಕಂಪನಿಗೆ ಆರ್ಥಿಕ ಬಲ ಹೆಚ್ಚುತ್ತಾ ಹೋಗುತ್ತದೆ ವಿನಃ ಗ್ರಾಹಕರಿಗೆ ಇವೆಲ್ಲಾ ದೊಡ್ಡ ಬ್ಲೇಡ್ ಅಷ್ಟೇ...ಮುಂದಿನ ದಿನಗಳಲ್ಲಿ ಬಟ್ಟೆ ಬರೆಗಳಿಗೆ, ಮನೆಯಲ್ಲಿ ಬಳಸುವಪಾತ್ರೆ ಪಗಡಿ ಗಳಿಗೆ ಈ ತರದ ಸೆಲ್ಫ್ de-compose ನಿಯಮ ಬರುವುದು. ಇಲ್ಲ ಈಗ ರಸ್ತೆಗಳ ನಿರ್ಮಾಣಕ್ಕೆ ನಮ್ಮದೇ ತೆರಿಗೆಯ ಹಣ ಹಾಕಿ ನಿರ್ಮಾಣಮಾಡಿ ಪುನಃ 'ಟೋಲ್ ' ಹೆಸರಿನಲ್ಲಿ ಬಳಕೆಯ ಶುಲ್ಕ ಕಟ್ಟಿದಂತೆ ದುಡ್ಡು ಕೊಟ್ಟು ವಸ್ತುಗಳನ್ನು ಕೊಂಡುಕೊಂಡು ಆ ವಸ್ತುಗಳಿಗೆ ಪುನಃ 'ಬಳಕೆಯ ಶುಲ್ಕ' ಕಟ್ಟಲು ರೆಡಿಯಾಗಬೇಕಾಗಿದೆ..! ಎಂದು ಮಾತಾಡುತ್ತಾ ಎದುರಿಗೆ ಬಂದ ಪರಿಚಿತರನ್ನು ಮಾತನಾಡಿಸುತ್ತಿದೆವು.ಹೀಗಿದ್ದಾಗ ಮಾರ್ನಿಂಗ್ ಮನೆಗೆ ಬರುವರೆಂದು ಕಾಲ್ ಮಾಡಿದವರು ಕಾಲ್ ಮಾಡಿದರು...*
*ಸಾರ್ ನಾವು 'ಸುಧಾ ಕ್ರಾಸ್' ಹತ್ರ ಇದ್ದಿವಿ... ಮನೆಗೆ ಎಲ್ಲಿ ಬರ್ಬೇಕಂತ ಲೊಕೇಶನ್ ಕಳಿಹಿಸಿ ಎಂದು ಕೇಳಿದರು. ನಾನು ಸದ್ಯ ಮನೆಯಲ್ಲಿ ಇಲ್ಲ... ಅಲ್ಲೇ ಇರ್ರಿ ಹತ್ತು ನಿಮಿಷ ಬರುವೆ ಎಂದು ಇತ್ತ ಅಹನಾಳಿಗೆ ಅವ್ರು ಬಂದಿದ್ದಾರಂತೆ ನಾನು ಬೇಗ ಹೋಗಿ ಬರುವೆ ಎಂದ... ಯಾರ್ರೀರೀ ಅವರೂ...??ಹುಂ...ಹೋಗಿ ಬನ್ನಿ ಎಂದು ಒಪ್ಪಿಗೆ ಸೂಚಿಸಿದಳು. ಗಾಡಿ ಹತ್ತಿದ ಆರುಷಿ...ಹದಿನೈದು -ಇಪ್ಪತ್ತು ನಿಮಿಷದಲ್ಲಿ ಅವರು ಇರುವ ಸ್ಥಳಕ್ಕೆ ಆಗಮಿಸಿದ..ಕಾಯುತ್ತಿದ್ದ ಅವರನ್ನು ಎದುರುಗೊಂಡು ಬನ್ನಿ ಎನ್ನುತ್ತಾ ಮುಂದೆ ಗಾಡಿ ಹಿಂದೆ ಅವರ ವಾಹನದಲ್ಲಿ ಹಿಂಬಾಲಿಸಿದರು. ಮನೆಯ ಮುಂದೆ ಬಂದು ಇಳಿದಾಗ ಎಲ್ಲರಿಗೂ shake ಹ್ಯಾಂಡ್ ಮಾಡುತ್ತಾ ಬನ್ನಿ ಬನ್ನಿ ಎಂದು ಮಾತಾಡಿಸಿದ... ಇಳಿದ ಅವರು ಫಸ್ಟ್ ಟೈಮ್ ನಿಮ್ಮ ಮನೆಗೆ ಬರುತ್ತಿರುವುದು.ಯಾವ ಮನೆ? 'ನೇಹಾನ್ಯ enclave' ಅಥವಾ ಇದಾ ಎಂದು ಎದುರಿಗಿದ್ದ ಮನೆಯನ್ನು ತೋರಿಸಿದರು... ಇದು ಸಾರ್ ಎನ್ನುತ್ತಾ ಗೇಟ್ ಓಪನ್ ಆಗಲು ಬಟನ್ ಒತ್ತಿದ.. ಅವರೆಲ್ಲಾ ಮೇಲಿಂದ ಕೆಳಗೆ ನೋಡುತ್ತಾ ಒಬ್ಬರು ಅಬ್ಬಬ್ಬಾ ಎಂದರೇ ಇನ್ನೊಬ್ಬರು "ಮಾವಿನ ಮರ ಕಾಯಿಬಿಟ್ಟಿದೆ... " ಎನ್ನುತ್ತಾ ಮನೆಯ ಒಳಗಿದ್ದ ನಾಯಿಯನ್ನು ನೋಡಿ ಹೌಹಾರಿದರು ... ಕೊನೆಗೂ ಒಳ ಬಂದ ಅವರೆಲ್ಲರಿಗೂ ಕೂರಲು ಹೇಳಿ ಬಿಸಿಲು ಇದ್ದದ್ದರಿಂದ ಫ್ರಿಡ್ಜ್ ಲ್ಲಿ ಇಟ್ಟಿದ್ದ ವಾಟರ್ ಬಾಟಲ್ ತೆಗೆದು ಅವರ ಮುಂದೆ ಇಟ್ಟರು.. ನೀರು ಕುಡಿಯುತ್ತಾ ಪರಸ್ಪರ ಯೋಗಕ್ಷೇಮ ವಿಚಾರಿಸುತ್ತಾ ಮನೆಯ 3 seater ಸೋಫಾದಲ್ಲಿ ಆರುಷಿ ಮತ್ತು ಅವರು ಕೂತರು. ಇನ್ನೂ ಇಬ್ಬರು ಸಿಂಗಲ್ ಸಿಂಗಲ್ seat ಸೋಫಾದ ಮೇಲೆ ಕುಳಿತರು. ನಮ್ಮ ಎದುರುಮನೆಯ ಬಾಗಿಲು ಓಪನ್ ಆಗಿಯೇ ಇತ್ತು... ಆ ಮನೆಯ ಯಜಮಾನ ಒಮ್ಮೆ ನಮ್ಮ ಮನೆಗೆ ಬಂದವರು ಪರಿಚಯ ಇರಬಹುದೇನೋ ಎನ್ನುವಂತೆ ಒಮ್ಮೆ ನೋಡಿದರು. ಯಾಕೋ ಯಾರೊಂದಿಗೂ ಮಾತನಾಡದೆ ಆರುಷಿಗೆ ಒಂದು ಸ್ಮೈಲ್ ನೀಡಿ ಒಳ ಹೋಗಿ ಅವರ ಮನೆಯ ಮುಖ್ಯ ದ್ವಾರದ ನೇರವಾಗಿ ಕೂತರು.*
*ಆರುಷಿಯ ಮನೆಯಲ್ಲಿ ಕೂತವರು ಎದುರುಮನೆಯಲ್ಲಿ ಕೂತ ವ್ಯಕ್ತಿ ಸರಿಯಾಗಿ ಎದುರು ಬದುರು ಕೂತಹಾಗೆ ಇತ್ತು. ಇದಾದ ಕೆಲವೇ ನಿಮಿಷಗಳಲ್ಲಿ ಇದ್ದಕಿದ್ದ ಹಾಗೆ 'phat' ಫಟ್ ' ಎಂಬ ಶಬ್ದ... ಸಿಂಗಲ್ seat ಅಲ್ಲಿ ಕೂತಿದ್ದವರು ಎದ್ದ ಹಾಗೆ ಅನಿಸಿತು. ಅರುಷಿ ಎದ್ದೇಳಬೇಕು ಎನ್ನುವಷ್ಟೋತ್ತಿಗೆ ಆರುಷಿಯ ಜೊತೆಗಿದ್ದ ವ್ಯಕ್ತಿ ಅಪಾಯ ಸಂದರ್ಭದಲ್ಲಿ ಚಿಕ್ಕ ಮಕ್ಕಳನ್ನು ತಬ್ಬಿಕೊಳ್ಳುವ ಹಾಗೆ ಅರುಷಿಯನ್ನು ಬಿಗಿಯಾಗಿ ಹಿಡಿದುಕೊಂಡ... ಸಂಪೂರ್ಣವಾಗಿ ಬೆನ್ನ ಮೇಲೆ ಕೂತ ಹಾಗೆ ಭಾರವಾಗಿ ಎದ್ದೇಳಲಾಗಲಿಲ್ಲ. 4 -5 ಸೆಕೆಂಡ್ ಅಸ್ಟೊತ್ತಿಗೆ 3 ಸುತ್ತು ಗುಂಡು ಹಾರಿಸಿದರು. ಆ ಶಬ್ದ ಮುಗಿದ ತಕ್ಷಣ ಮನೆಯಲ್ಲಿದ್ದ ಮೂರು ಜನ ಓಡಿದೆವು. ಬಲ ಭುಜ ಭಾಗಕ್ಕೆ ಒಂದು ಗುಂಡು ತಾಗಿತ್ತು. ಶರ್ಟ್ ತೂತು ಆಗಿ ರಕ್ತ ಸೋರುತಿತ್ತು. ಅಷ್ಟೋತ್ತಿಗೆ ಅವರ ಹೆಂಡತಿಯೂ ಅಯ್ಯೋ ಎಂದು ಕೂಗಿಕೊಂಡು ಅವರಕಡೆ ಧಾವಿಸಿದರು. ಎಲ್ಲರಲ್ಲೂ ಆತಂಕ... ಒಂಥರಾ ಎದೆಯಲ್ಲಿ ಢವ ಢವ... ಪ್ರಾಣಪಾಯದಿ ಬಚಾವಾಗಿದ್ದಾರೆ ಎಂಬ ಸಮಾಧಾನ ಬಿಟ್ಟರೇ ಈ ಗುಂಡು ಹಾರಿದ್ದಾದರೂ ಎಲ್ಲಿಂದ??? ಕೆಲವೇ ನಿಮಿಷಗಳ ಹಿಂದೆ ಅರುಷಿಯ ಜೊತೆಗೆ ಬಂದವರಿಂದ, ಆರುಷಿಗೆ ಗೊತ್ತಿರುವವರಿಂದಲೇ ಫೈರಿಂಗ್ ಆಯಿತಾ....?? ಆದರೆ ಫೈರಿಂಗ್ ಮಾಡುವಾಗ ಅವನ್ಯಾರೋ ಆರುಷಿಯನ್ನು ಹೆದರಿಕೊಂಡ ಹಾಗೆ ಮೇಲೆ ಬಿದ್ದದ್ದು ಯಾಕೆ?? ಅರುಷಿಗೆ ಕಾಣದ ಹಾಗೆ ಮಾಡಿದ್ದು ಆರುಷಿಗೆ ಅನುಮಾನ ಉಂಟು ಮಾಡಿಸಿತು. ಆದರೆ ಯಾರ ಕೈಲಿಯೂ ಫಿಸ್ತೋಲ್ ಆಗಲಿ, ಗನ್ ಆಗಲಿ ಕಾಣಲಿಲ್ಲ.ಹೊಡೆಯುವಾಗ ಕಾಣಬೇಕಿತ್ತು. ಕಾಣಲಿಲ್ಲ ಆದರೆ ಹೊಡೆದಾದ ಮೇಲೆಯೂ ಅವರರಿಂದ ಸಣ್ಣ ಅನುಮಾನ ಬರಲಿಲ್ಲ.ಫೈರಿಂಗ್ ಆದ ಮೇಲೆ ಅವರೇ ಅವರ ರಕ್ಷಣೆಗೆ ಧಾವಿಸುತ್ತಾರೆ ಎಂದರೇ ಅವರನ್ನು ಹೇಗೆ ಅನುಮಾನಿಸುವುದು???ಮೊದಲು 'ಪಟ್' ಎಂಬ ಶಬ್ಧ ಬಂದಾಗಲೇ ಹೊರಬರಬೇಕಿತ್ತು... ಯಾರು ಗುಂಡು ಹೊಡೆದರು ಯಾವ ಕಡೆಯಿಂದ ಗುಂಡು ಹೊಡೆದರು ಎಂದಾದ್ರೂ ನೋಡಬಹುದಿತ್ತು...ಅವರಿಗೆ ಬಿದ್ದ Shots ನೋಡಿದರೆ ನನ್ನ ಅನಿಸಿಕೆ ಪ್ರಕಾರ ಗುಂಡು ಹಾರಿಸಿದ್ದು ಬಹಳ ಹತ್ತಿರದಿಂದಲೇ... ಒಂದು ನಮ್ಮ ಮನೆಯಿಂದ ಹಾರಿಸಿರಬೇಕು ಅಥವಾ ರಸ್ತೆಯಲ್ಲಿ ನಿಂತು ಸೋಫಾದ ಮೇಲೆ ಕೂತಿದ್ದ ಅವನಮೇಲೆ ಏಕಾ ಏಕಿ ಗುಂಡು ಹಾರಿಸಿರಬೇಕು....ಕಂಟಿನ್ಯೂ ಮೂರು ಸುತ್ತು ಗುಂಡು ಹಾರಿದರೂ ಎದೆಯ ಭಾಗಕ್ಕಾಗಲೀ, ತಲೆಗಾಗಲಿ ಗುಂಡು ತಾಗಿರಲಿಲ್ಲ. ಆದರೆ ಅವರೇ ತಪ್ಪಿಸಿಕೊಂಡರೋ ಅಥವಾ ಗುರಿಯೇ ತಪ್ಪಿತೋ... ಗೊತ್ತಿಲ್ಲ. ಒಂದು ಗುಂಡು ಎಡಗೈ ಭುಜಕ್ಕೆ ತಾಗಿತ್ತು.. ಫೈರಿಂಗ್ ಮುಗಿದ ಮರು ಕ್ಷಣವೇ ಅವರೆಲ್ಲರೂ ಎದ್ದು ಹೋಗಿ ಸುತ್ತಲೂ ನೋಡಿದರೂ ಗುಂಡು ಯಾವ ಕಡೆಯಿಂದ ಬಂದವು... Or ಯಾವಕಡೆಯಿಂದ ಬಂದಿರಬಹುದು??ಯಾವ ಕಾರಣಕ್ಕೆ ಬಂದಿರಬಹುದು ಎಂದು ಅನುಮಾನಿಸಲು ಯಾವ ಅನುಮಾನಕ್ಕೆ ಆಸ್ಪದ ಇಲ್ಲದ ಚಿತ್ರಣ...! ಮನೆ ಗ್ರೌಂಡ್ floor...ಮನೆಯ ಮುಂದೆ highway ಆಗಲಿ ... ಜನಸಂದಣಿಯ ಮಾರುಕಟ್ಟೆಯಂಥಹ ಸ್ಥಳ ಅಲ್ಲವೇ ಅಲ್ಲ... ಅದೊಂದು ಪಕ್ಕಾ ಜನವಸತಿ.. ವಿರಳ ಜನರ ಚಲನ-ವಲನ ಇತ್ತು ಎಂಬುದು ಬಿಟ್ಟರೇ ಆ ಸ್ಥಳದಲ್ಲಿ ಆ ತೆರನಾದ ಕೃತ್ಯ ಕಲ್ಪಿಸಿಕೊಳ್ಳಲೂ ಅಸಾಧ್ಯ... ಫೈರಿಂಗ್ ಆದ ಮೇಲೂ ಆ ಸ್ಥಳದಲ್ಲಿ ಕಲ್ಪಿಸಿಕೊಳ್ಳಲು ಅಸಾಧ್ಯ ಎಂದು ಹೇಳುವುದು ತಪ್ಪಾಗಬಹುದು... ಆದರೆ ಫೈರಿಂಗ್ ಆದ victim ಆದರೂ 'ವಾಂಟೆಡ್' ಆಗಿರಬೇಕಲ್ಲ...?? ಅದೂ ಇಲ್ಲ.. ಆದೋ ಪುಣ್ಯಕೋಟಿ! ಫೈರಿಂಗ್ ಅದಮೇಲೂ ಕಂಪ್ಲೇಂಟ್ ಕೊಡಿ ಎಂದು ಆರುಷಿ ಮತ್ತು ಇದ್ದಬದ್ದವರೆಲ್ಲ ಎಷ್ಟು ಬಡಿದುಕೊಂಡರೂ complaint ಕೊಡದ ಪುಣ್ಯಕೋಟಿ..! 15-20 ನಿಮಿಷ ಆದಮೇಲೆ ಆರುಷಿಯ ಮನೆಗೆ ಬಂದಿದ್ದವರು ಹೊರಡಲು ಸಿದ್ದರಾದರು. ಗುಂಡು ತಾಗಿದ ವ್ಯಕ್ತಿಯ ಬಂಧು ಬಳಗ ಬಂದು ನೋಡಿಕೊಂಡು ಹೋಗಲು ಶುರು ಮಾಡಿದರು.. ಅವರನ್ನು ನೋಡ ಬಂದವ್ರೆಲ್ಲಾ 'ಹೀಗೇ ಗುಂಡು ಹಾರಿಸಿರುವುದು'ಎಂದು ಸನ್ನಿವೇಶ ಮರುಸೃಷ್ಟಿ ಮಾಡಿದಂತೆ ಮಾಡಿ ಹೋಗುತ್ತಿದ್ದರು.ಆದರೆ ಆ ಹಲ್ಲೆಗೊಳ್ಳಗಾದವರು ಆರುಷಿಯ ಮೇಲೆ ಮತ್ತು ಮನೆಗೆ ಬಂದವರ ಮೇಲೆ ಅನುಮಾನದ ಒಂದು ನೋಟ ಅವರಲ್ಲಿ ಇತ್ತು..ಅವರಲ್ಲಿ ಒಬ್ಬ ಸೀನಿಯರ್ ಪರ್ಸನ್ ಒಬ್ಬರು ಹತ್ತಿರ ಬಂದು ಆರುಷಿಯನ್ನು ದಿಟ್ಟಿಸಿ ನೋಡುತ್ತಾ 'ನಿಮ್ಮನ್ನು ನೋಡುತ್ತಿದ್ದರೆ ಇವರ ಮೇಲೆ ಫೈರಿಂಗ್ ಮಾಡಿದವರು ನಿಮಗೆ ಗೊತ್ತಿದೆ ಅನಿಸುತ್ತದೆ. ನೀವು ಕಥೆಗಾರರು ಇದರ ಬಗ್ಗೆ ಯೋಚನೆ ಮಾಡಿದರೆ ಆರೋಪಿ ಯಾರು ಅಂತ ನೀವು ಪತ್ತೆ ಹಚ್ಚಬಹುದು ನೋಡಿ ಟೈಮ್ ತಗೋಳಿ; ಆದ್ರೆ ಸತ್ಯ ಅಥವಾ ಸತ್ಯಕ್ಕೆ ಹತ್ತಿರವಾದದ್ದು ಹೇಳಿ ದಯಮಾಡಿ ' ಎಂದು ವಿನಂತಿಸಿದರು. ಆರುಷಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ನಾನು ಹೇಳುವುದಕ್ಕಿಂತ ನೀವು ಪೊಲೀಸ್ complaint ಕೊಡುವುದೇ ಸೂಕ್ತ... ಈ ಘಟನೆ ನಮ್ಮ ಮನೆಯ ಮುಂದೆ ನನ್ನ ಕಣ್ಣೆದುರಿಗೆ ನಡಿದಿರುವುದು ನನಗೂ ಭಯ ಉಂಟುಮಾಡಿದೆ. ನೀವು ಯಾವುದಕ್ಕೂ ಪೊಲೀಸ್ ಮೊರೆ ಹೋಗುವುದೇ ಸೂಕ್ತ ಎಂದು ಅರುಷಿ ಹೇಳಿದ. ಆದರೆ ಆ ಸೀನಿಯರ್ ಮನುಷ್ಯ ನೀವು ಒಮ್ಮೆ ನಿಮ್ಮ ಅಭಿಪ್ರಾಯ ತಿಳಿಸಿ ಆಮೇಲೆಯೇ ಪೊಲೀಸ್ ಅವರಿಗೆ ತಿಳಿಸೋಣ ಎಂದು ಹೇಳುತ್ತಿದ್ದಾರೆ.ಅರುಷಿಗೆ ಅಡಕತ್ತರಿಯಲ್ಲಿ ಸಿಲುಕಿದ ಅನುಭವ ಆಗುತ್ತಿದೆ. ಆದರೂ 'ನೋಡೋಣ ಆಮೇಲೆ ಹೇಳುತ್ತೀನಿ' ಎಂದಷ್ಟೇ ಹೇಳಿ ಕಳಿಸಿದ. ಇತ್ತ ಆಹಾನಾಳು ನಿಮಗೆ ಕಾಲ್ ಮಾಡಿ ಮನೆಗೆ ಬಂದವರ ಮೇಲೆಯೇ ನನಗೆ ಸಸ್ಪೆಕ್ಟ್ ಇದೆ ಎನ್ನುತ್ತಿದ್ದಾಳೆ. ಈಗಲಾದರೂ ಹೇಳಿ ನಿನ್ನೆ ನಿಮ್ಮನ್ನು ಕಾಣಲು ಮನೆಗೆ ಬಂದವರು ಯಾರು??? ಆರುಷಿಗೂ ಅವರು ಯಾರು? ಅವರ ಹೆಸರೇನು? ಅವರು ಬಂದ ಕಾರಣ ಗೊತ್ತಿಲ್ಲ...!ಅವರ ನಂಬರ್ ಸೇವ್ ಆಗಿಲ್ಲ... ನಿನ್ನೆ ಕಾಲ್ ಮಾಡಿದ ನಂಬರ್ ಗೆ ಡೈಯಲ್ ಮಾಡಿದರೆ ರಿಂಗ್ ಆಗುತ್ತಿಲ್ಲ.ಅದರಿಂದ ಯಾವ ಶಬ್ದವೂ ಬರುತ್ತಿಲ್ಲ. ಅನಾವಶ್ಯಕವಾಗಿ ಕೊಲೆ ಪ್ರಯತ್ನದ ಆರೋಪ ನನ್ನ ಮೇಲೆ ತಿರುಗುವಂತೆ ಆಯಿತಲ್ಲ ಎಂದು ಆರುಷಿಗೆ ಅನಿಸಿತು... ಆ ಸೀನಿಯರ್ ಪರ್ಸನ್ ಗೆ ಏನು ಹೇಳಬೇಕೋ ಗೊತ್ತಾಗದೆ ಚಡಪಡಿಸುತ್ತಾ ಪೊಲೀಸ್ ಕಂಪ್ಲೇಂಟ್ ಮಾಡಿದರೂ ಮೊದಲು ಅಗತ್ಯವಾಗಿ enquiry ಮಾಡಬೇಕಾಗಿರುವುದು ಅರುಷಿಯನ್ನೇ... ಇದೇನೋ ಯಡವಟ್ಟು ಆಯಿತು... ಎದುರು ಮನೆಯವರಿಗೆ ತೊಳಿಗೆ ಗುಂಡು ತಾಗಿದೆ. ಒಂದು ವೇಳೆ ಎದೆಗೋ ತಲೆಗೋ ತಾಗಿದ್ದರೇ...??? ಪೇಚಾಟ ಜಾಸ್ತಿ ಆಗಿ ತಲೆ ಕೆಟ್ಟು ಹೋಗಿ ದಿಗಿಲುಗೊಂಡು ನೋಡುತ್ತಿದ್ದಾನೆ...*
ಮುಂದುವರೆಯುವುದು...
✍️ ನಾಗೇಂದ್ರ ಬಂಜಗೆರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ