ಪೋಸ್ಟ್‌ಗಳು

ಮಾರ್ಚ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

'ಕಿಟ್ಟ' ಎಂಬ ಕೆಲಸವ ನಂಬಿ ಕೆಟ್ಟವರು...

ಇಮೇಜ್
'ಕಿಟ್ಟ' ಎಂಬ ಕೆಲಸವ ನಂಬಿ ಕೆಟ್ಟವರು.. 2015 ನೇ ಸಾಲಿನಲ್ಲಿ  ನನ್ನ ಮೊದಲಿದ್ದ ರಾಜಾಪುರ ಶಾಲೆಯಿಂದ ಪಕ್ಕದ ದೊಡ್ಡ ಅಂತಾಪುರದ ಶಾಲೆಗೆ ವರ್ಗಾವಣೆಯನ್ನು ಪಡೆದುಕೊಂಡೆ. ನಮ್ಮದು ಜಿಂದಾಲ್,ಕುಡಿತಿನಿ ಥರ್ಮಲ್ ಪವರ್ ಸ್ಟೇಷನ್ ನಂತಹ  ಬೃಹತ್ ಕೈಗಾರಿಕೆಗಳ ಜೊತೆಗೆ ನೂರಾರು  ಸಣ್ಣಪುಟ್ಟ ಕೈಗಾರಿಕೆಗಳ  ನೆರಹೊರೆಯ ಹಳ್ಳಿಗಳಾದ್ದರಿಂದ  ಇಲ್ಲಿನ ಬಹುತೇಕರು ಕೈಗಾರಿಕೆ ಆಧಾರಿತ ಉದ್ಯೋಗ ನಂಬಿ ಬದುಕುತ್ತಿರುವವರು. ನಮ್ಮ ಶಾಲಾ ಮಕ್ಕಳ ಕೆಲ ಪೋಷಕರನ್ನು ಶಾಲೆಗೆ ಮಕ್ಕಳ ಪ್ರಗತಿಯಬಗ್ಗೆ ಚರ್ಚಿಸಲೊ/ಸರ್ಕಾರದ ಯೋಜನೆಗಳನ್ನು ತಲುಪಿಸಲು ಪೋಷಕರನ್ನು ಕರೆಸಿದರೆ  ಯಾವಾಗಲೂ ಮಕ್ಕಳದು ಒಂದೇ ಮಾತು ಅದೆಂದರೆ "ಮನೆಯಲ್ಲಿ ಅಪ್ಪ -ಅಮ್ಮ ಯಾರೂ ಇಲ್ಲ ಕಿಟ್ಟದ ಕೆಲಸಕ್ಕೆ ಹೋಗಿದ್ದಾರೆ".ಎಂಬುದು.. ಆಗ ಕೆಲವು ದಿನಗಳವರೆಗೆ ಎಲ್ಲೋ ಕೆಲಸಕ್ಕೆ ಹೋಗಿರುತ್ತಾರೆ ಹೊಟ್ಟೆ ಪಾಡು ನಾಳೆಯೋ ನಾಡಿದ್ದೋ ಬರುತ್ತಾರೆ ಎಂಬ ಆಶಾ ಭಾವನೆ ಇತ್ತಾದರೂ ಕೆಲವು ಪೋಷಕರು ಮಕ್ಕಳ ಬಹುಮುಖ್ಯವಾದ ಎಂದದ್ದೇ ಕೆಲಸ ಇದ್ದರೂ ಆ ತಂದೆ ತಾಯಿಗಳು ಶಾಲೆಗೆ ಶಿಕ್ಷಕರನ್ನು ಕಾಣಲು ಬರಲೇ ಇಲ್ಲ.. ಕೊನೆಗೆ ಮಕ್ಕಳು ಆಗಾಗ್ಗ ಗೈರು ಹಾಜರಿಯಾದಾಗ ಇತರೆ ಮಕ್ಕಳ ಜೊತೆ ಕರೆದುಕೊಂಡು ಮನೆಗೆ ಹೋದರೆ ಅಲ್ಲಿಯೂ ಅವರೂ ಸಿಗಲೇ ಇಲ್ಲ.. ಕೆಲವು ಹಿರಿಯ  ಹಳೇ ವಿದ್ಯಾರ್ಥಿಗಳನ್ನೋ ಅಥವಾ ಬೇರೆಯವರನ್ನು ಕೇಳಿದರೆ "ಸಾರ್ ಅವರು ಕಿಟ್ಟಕ್ಕೆ ಹೋಗಿದ್ದಾರೆ ಯಾವಾ...

ಕನಸು ಕಥೆಯಾದಾಗ..part-5

ಇಮೇಜ್
ಸ್ವರ್ಗಸ್ಥರಾದ ಮುತ್ತಾತ ಮುತ್ತಜ್ಜಿ ಆ ಜಾಡಿಯ ಮುಚ್ಚಳ ತೆಗೆದಿರುವವರೆಗೆ ಇರುತ್ತಾರೆ. ಆಮೇಲೆ ಅದೃಶ್ಯರಾಗುತ್ತಾರೆ..! 'ಕನಸು ಕಥೆಯಾದಾಗ'..        ಭಾಗ-5 ಮಗಳು ತನೇಹಾ ಮತ್ತು ಲಭನ್ಯ ಮುತ್ತಾತ ಸುಬ್ಬಯ್ಯ ಮತ್ತು ಮುತ್ತಜ್ಜಿ ಗಂಗಮ್ಮ ಅವರ ಜೊತೆಗೆ ಮನೆಯ ಹೊರಗಡೆ ಗಾರ್ಡನ್ ಸುತ್ತಾಮುತ್ತಾ ಆಡುತ್ತಿದ್ದಾರೆ... ಆರುಷಿ ಮತ್ತು ಆರೋಹಿಗೆ ಇದು ಸಂತಸದ ಸಂಗತಿಯಾದರೂ ಏನೋ ಆತಂಕ.ಎಲ್ಲಿ ಏನಾಗಿ ಬಿಡುವುದೊ ಎಂಬ ಕಳವಳ.ಅಯ್ಯೊ ಅಜ್ಜಿ ತಾತ ರ ಬಳಿ ಆಡಿದರೆ ಏನಾಗುತ್ತೆ ಒಳ್ಳೆಯದೇ ಅಲ್ಲಾ ಅಂತೀರಾ?? ಆದ್ರೆ ಅದ್ಯಾಕೆ ಕಳವಳ ಆತಂಕ  ಇಲ್ಲಿದೆ ನೋಡಿ.. ಸುಬ್ಬಯ್ಯ ಮತ್ತು ಗಂಗಮ್ಮ ಆರೋಹಿಯ ಅಜ್ಜ ಮತ್ತು ತಾತ.. ಹೊಟ್ಟೆಯ ಪಾಡಿಗೆ ಕೆಲಸ ಹುಡುಕಿಕೊಂಡು  ಆಂದ್ರ ದಿಂದ ಕರ್ನಾಟಕಕ್ಕೆ ಬಂದವರು. ತುಂಗಭದ್ರಾ ಡ್ಯಾಂ ಕಟ್ಟುವಾಗ ನಾಲ್ಕೈದು ತಿಂಗಳುಗಳ ಕಾಲ ಕೆಲಸ ಮಾಡಿದ್ದರಂತೆ. ಅದೂ ಯಾಕೋ ಸರಿ ಹೋಗಲಿಲ್ಲ ಎಂದು ಭದ್ರಾ ಡ್ಯಾಂ( ಲಕ್ಕವಳ್ಳಿ ಡ್ಯಾಂ)  ನಿರ್ಮಾಣ ಮಾಡುವಾಗ ಆ ಕಾಲದಲ್ಲಿ ಡ್ರೈವರ್ ಆಗಿ ಕೆಲಸಕ್ಕೆ ಸೇರಿಕೊಂಡವರು. ಅಲ್ಲೇ ಶಾಶ್ವತವಾಗಿ ವಾಸಕಂಡುಕೊಂಡರು. ಎಲ್ಲಾ ಕೆಲಸದಲ್ಲಿ ಶಿಸ್ತು ಅಂದ್ರೆ ಶಿಸ್ತು.. ಹೀಗೆ ಲಕ್ಕವಳ್ಳಿಯಿಂದ ಯೋಜನಾ ನಿರಾಶ್ರಿತರಾಗಿ ಆಶ್ರಯ ಪಡೆದಿದ್ದು ನರಸಿಂಹರಾಜಾಪುರದ ಸಿಂಸೆ ಎಂಬಲ್ಲಿ.. ಹಸು ಕುರಿ ಮೇಕೆಗಳ ಸಾಕಿ ಜೀವನ ನಡೆಸುತ್ತಿದ್ದವರು.ಅನ್ಯೋನ್ಯ ವಾಗಿದ್ದ ಇವರು ೨೦೧೩ ರಲ್ಲಿ ಐದು ...

POLICE ಡಿಪಾರ್ಟ್ಮೆಂಟ್ ನವರಿಗೆ ಗನ್ ಕೊಡ್ತಾರೆ.. EDUCATION ಡಿಪಾರ್ಟ್ಮೆಂಟ್ ನವರಿಗೂ ಗನ್ ಕೊಡ್ತರಾ??

ಇಮೇಜ್
#POLICE_ಡಿಪಾರ್ಟ್ಮೆಂಟ್_ನವರಿಗೆ_ಗನ್ಕೊಡ್ತಾರೆ_EDUCATION_ಡಿಪಾರ್ಟ್ಮೆಂಟ್ #ನವರಿಗೂ_ಗನ್_ಕೊಡ್ತಾರಾ_??  ಕನಸಿನ ಕಥಾ ಸರಣಿ...           Part-4 ಆರುಷಿಯು ಟೀ ಷರ್ಟ್ ಮತ್ತು cotton ಜೀನ್ಸ್ ಪ್ಯಾಂಟ್,power ಶೂ ಹಾಕಿಕೊಂಡು ಎಡಗೈಯಲ್ಲಿ ಒಂದು document ಪೈಲ್ ಮತ್ತು ಪಿಸ್ತುಲ್,ಬಲಗೈಯಲ್ಲಿ  ಕಾರ್ ಕೀ ಹಿಡಿದು ಹನ್ನೊಂದು ಗಂಟೆಯೊಳಗೆ ನಾನು ಅಲ್ಲಿಗೆ ಹೋಗಬೇಕು ಎಂದು ಅವಸರವಸರವಾಗಿ  ಕಾರಬಳಿ ಬರುತ್ತಿದ್ದಾನೆ.ಕ್ಲಿಕ್ ಕ್ಲಿಕ್ ಎಂಬ ಬೀಪ್ sound ನೊಂದಿಗೆ ಕಾರ್ ನ ಸೆಂಟ್ರಲ್ ಲಾಕ್ open ಮಾಡಿ ಎಡಗೈಯಲ್ಲಿ ಇದ್ದ file ಮತ್ತು ಪಿಸ್ತುಲ್ ಅನ್ನು ಖಾಲಿ ಇದ್ದ front passenger ಸೀಟ್ ಮೇಲೆ ಎಸೆದ.. ಆರುಷಿ  ಕಾರನ್ನು  ಯಾವಾಗಲೂ ಅತೀ ವೇಗವಾಗಿ ಚಲಾಯಿಸುವುದಿಲ್ಲ. ಏನೋ highway ಆಗಿದ್ರೆ 100-120 km/h ಗರಿಷ್ಠ.. ಆದ್ರೆ ಅಂದು ಕಾರ್ ಸ್ಟಾರ್ಟ್ ಮಾಡಿದಾಗಿನಿಂದಲೂ  ಎಕ್ಸ್ಕ್ಯೂಲೇಟರ್ ತುಳಿಯುತ್ತಿದ್ದ ಪರಿ ಅವಸರವನ್ನು ಸೂಚಿಸುತ್ತಿತ್ತು..ಗರಿಷ್ಠ 140+ km/h speed reach ಆಗಿತ್ತು.. ಕಾರುವೇಗವಾಗಿ ಚಲಾಯಿಸುತ್ತಿದ್ದಾಗ ಅವನ ದೃಷ್ಟಿ ರಸ್ತೆಯಲ್ಲಿನ ಅವನ ಟ್ರ್ಯಾಕ್ ಬಿಟ್ಟು ಏನನ್ನು ನೋಡುವುದಿಲ್ಲ..ಹಾಗೆ ಏಕಚಿತ್ತತೆಯಿಂದ ಹೋಗುತ್ತಿರುವಾಗ ಯಾವುದೋ unknown ನಂಬರ್ ನಿಂದ ಮೊಬೈಲ್ ರಿಂಗಾಯಿತು.ಆಮೇಲೆ ನೋಡೋಣ ಬಿಡು ಟೈಂ ಆಯಿತು ಪಸ್ಟ್ ಹನ್ನೊಂದು ಗಂಟೆಯೊಳಗೆ ಅಲ್...