ಕನಸು ಕಥೆಯಾದಾಗ-5
#ಕನಸು_ಕಥೆಯಾದಾಗ... ಕನಸು-05 ಸಿಕ್ರಪ್ಪ ಗುಡ್ಡದಿಂದ ಬಡಗಣಕ್ಕೆ ಆರು ಹಗಲು ಆರು ರಾತ್ರಿ ನಡೆದು ಹೋದರೆ ಯಾವುದೋ ಕಾಲದಲ್ಲಿ ರಾಕ್ಷಸ ಮನುಷ್ಯರು(ಹೆಚ್ಚು ಬಲ ಇದ್ದ ಆದಿ ಮಾನವರು)ಮಾಡಿದ ಅವಶೇಷಗಳಿವೆ.ದೊಡ್ಡ ದೊಡ್ಡ ಕಲ್ಲುಗಳ ಒಳಗಡೆಯೇ ಮನೆ ಮಾಡಿದ್ದಾರೆ ಎಂದು ಆಗಾಗ್ಗೆ ಹೇಳುತ್ತಿದ್ದರು. ಛಲದಿಂದ ಒಮ್ಮೇ ಆದರೂ ನಾವು ಅಲ್ಲಿಗೆ ಹೋಗಿಬರಬೇಕೆಂಬುದು ಆರುಷಿಯ ತಂದೆಯ ಇಚ್ಛೆಯಾಗಿತ್ತು. ಅವರು ಕೆಲವೊಮ್ಮೆ ಮಾತನಾಡುತ್ತಿದ್ದು ಕಲ್ಪನಾತ್ಮಕ ವಾಗಿರುತ್ತಿತ್ತು.ಯಾವುದೋ ಕಥೆಗಳಲ್ಲಿ ಕನಸಿನಲ್ಲಿ ಕಾಣುವ ಚಿತ್ರಣಗಳನ್ನು ವಾಸ್ತವ ಬದುಕಿನಲ್ಲಿ ಇವೆ ಎಂದು ಹೇಳುತ್ತಿದ್ದರು. ಅದು ನಮ್ಮ ಕಲ್ಪನೆಗೆ ಆಗ ನಿಲುಕದೇ 'ಸತ್ಯಕ್ಕೆ ದೂರವಾದ ಸಂಗತಿ' ಎಂದು ತಲೆಕೆಡಿಸಿಕೊಳ್ಳದೇ ಸುಮ್ಮನಾಗಿ ಬಿಡುತ್ತಿದ್ದೆವು.90 ರ ದಶಕದಲ್ಲಿ ನಮ್ಮ ಹೊಲದಲ್ಲಿ ಬೋರು ತೆಗೆಸಲು ಪಾಯಿಂಟ್ ಮಾಡಲು geologist ಕರೆಸಿ ಜಲ ಮೂಲ ಶೋಧಿಸಿದರೆ 'ನಿಮ್ಮ ಹೊಲದಲ್ಲಿ ನೀರೇ ಇಲ್ಲ' ಎಂದು ಹೇಳಿದ್ದರು.ಒಂದೆರಡು ವರ್ಷಗಳ ನಂತರ ಅವರ ಕನಸಿನಲ್ಲೇ ಪಾಯಿಂಟ್ ಒಂದನ್ನು ಗುರುತಿಸಿ ಬೋರು ತೆಗೆಸಿದಾಗ ಎರಡೂವರೆ ಇಂಚು ನೀರು ಸಿಕ್ಕಿತ್ತು.! ಆಗ ನಮಗೂ ಅವರ ಮಾತುಗಳಿಗೆ/ ಕನಸಿಗೆ ಬೆಲೆ ಇದೆ ಎಂದು ಅರ್ಥ ಆದದ್ದು. ಆರುಷಿ ಈಗ ಬೆಳೆದು ದೊಡ್ಡವನಾಗಿದ್ದಾನೆ. ಎಲ್ಲಾ ಸಂಗತಿಗಳನ್ನು ತಾರ್ಕ...