ಕನಸು ಕಥೆಯಾದಾಗ-5

#ಕನಸು_ಕಥೆಯಾದಾಗ...

        ಕನಸು-05


 ಸಿಕ್ರಪ್ಪ ಗುಡ್ಡದಿಂದ ಬಡಗಣಕ್ಕೆ ಆರು ಹಗಲು ಆರು ರಾತ್ರಿ ನಡೆದು ಹೋದರೆ ಯಾವುದೋ ಕಾಲದಲ್ಲಿ ರಾಕ್ಷಸ ಮನುಷ್ಯರು(ಹೆಚ್ಚು ಬಲ ಇದ್ದ ಆದಿ ಮಾನವರು)ಮಾಡಿದ ಅವಶೇಷಗಳಿವೆ.ದೊಡ್ಡ ದೊಡ್ಡ ಕಲ್ಲುಗಳ ಒಳಗಡೆಯೇ ಮನೆ ಮಾಡಿದ್ದಾರೆ ಎಂದು ಆಗಾಗ್ಗೆ ಹೇಳುತ್ತಿದ್ದರು.  ಛಲದಿಂದ ಒಮ್ಮೇ ಆದರೂ  ನಾವು ಅಲ್ಲಿಗೆ ಹೋಗಿಬರಬೇಕೆಂಬುದು ಆರುಷಿಯ ತಂದೆಯ  ಇಚ್ಛೆಯಾಗಿತ್ತು.  ಅವರು ಕೆಲವೊಮ್ಮೆ   ಮಾತನಾಡುತ್ತಿದ್ದು ಕಲ್ಪನಾತ್ಮಕ ವಾಗಿರುತ್ತಿತ್ತು.ಯಾವುದೋ ಕಥೆಗಳಲ್ಲಿ ಕನಸಿನಲ್ಲಿ ಕಾಣುವ ಚಿತ್ರಣಗಳನ್ನು ವಾಸ್ತವ ಬದುಕಿನಲ್ಲಿ ಇವೆ ಎಂದು ಹೇಳುತ್ತಿದ್ದರು. ಅದು ನಮ್ಮ ಕಲ್ಪನೆಗೆ ಆಗ ನಿಲುಕದೇ 'ಸತ್ಯಕ್ಕೆ ದೂರವಾದ ಸಂಗತಿ' ಎಂದು ತಲೆಕೆಡಿಸಿಕೊಳ್ಳದೇ ಸುಮ್ಮನಾಗಿ ಬಿಡುತ್ತಿದ್ದೆವು.90 ರ ದಶಕದಲ್ಲಿ ನಮ್ಮ ಹೊಲದಲ್ಲಿ ಬೋರು ತೆಗೆಸಲು ಪಾಯಿಂಟ್ ಮಾಡಲು  geologist ಕರೆಸಿ ಜಲ ಮೂಲ ಶೋಧಿಸಿದರೆ 'ನಿಮ್ಮ ಹೊಲದಲ್ಲಿ ನೀರೇ ಇಲ್ಲ' ಎಂದು ಹೇಳಿದ್ದರು.ಒಂದೆರಡು ವರ್ಷಗಳ ನಂತರ ಅವರ ಕನಸಿನಲ್ಲೇ ಪಾಯಿಂಟ್ ಒಂದನ್ನು ಗುರುತಿಸಿ ಬೋರು ತೆಗೆಸಿದಾಗ ಎರಡೂವರೆ ಇಂಚು ನೀರು ಸಿಕ್ಕಿತ್ತು.! ಆಗ ನಮಗೂ ಅವರ ಮಾತುಗಳಿಗೆ/ ಕನಸಿಗೆ ಬೆಲೆ ಇದೆ ಎಂದು ಅರ್ಥ ಆದದ್ದು.

 ಆರುಷಿ  ಈಗ ಬೆಳೆದು ದೊಡ್ಡವನಾಗಿದ್ದಾನೆ. ಎಲ್ಲಾ ಸಂಗತಿಗಳನ್ನು ತಾರ್ಕಿಕವಾಗಿ ಆಲೋಚಿಸುವ ಶಕ್ತಿ ಅವನಿಗಿದೆ. ಆ ನಿಟ್ಟಿನಲ್ಲಿ ಹತ್ತಾರು ಶಿಕ್ಷಕ ತರಬೇತಿ,ಚರ್ಚೆ,ವಿಚಾರ ಸಂಕೀರಣ,ಪುಸ್ತಕ ಅದ್ಯಯನ,ಅವನದೇ ಸ್ವತಃ ಬರಹಗಳ ಮೂಲಕ ಒಂದಷ್ಟು ಪ್ರೌಢಿಮೆಯನ್ನು ಬೆಳೆಸಿಕೊಂಡಿದ್ದಾನೆ. ಅಂದು ಹೆಗಲಿಗೆ ಕ್ಯಾಮೆರಾ ಬ್ಯಾಗ್ ನೇತು ಹಾಕಿಕೊಂಡು ಕೈಲೊಂದು  safety stic ಹಿಡಿದುಕೊಂಡು ನಾನೊಂದು ನಿಗೂಢವಾದ ಸ್ಥಳಕ್ಲೆ ಹೋಗುತ್ತಿದ್ದೇನೆ. ಬರಲು ಏಳೆಂಟು ದಿನ  ಆಗಬಹುದು  ಎಂದು ಅಹನಾಳಿಗೆ ಹೇಳಿದ್ದಷ್ಟೆ... ಯಾವ ಸ್ಥಳ ಎಂದರೂ ನಿರ್ದಿಷ್ಟವಾಗಿ ಇಂತಹದ್ದೇ ಸ್ಥಳ ಎಂದು ಹೇಳಲಾಗುತ್ತಿರಲಿಲ್ಲ. ಏಕೆಂದರೆ ಅದರ ನಿಖರತೆ ಸ್ವತಃ ಖಾತ್ರಿ ಇರಲಿಲ್ಲ.. ಏಕಾಂಗಿಯಾಗಿ 'ಅಲ್ಲಿಗೆ'ನಡೆಯುತ್ತಾ ಬರುತ್ತಿದ್ದಾನೆ. ಎಲ್ಲಿಗೆ ಅಂತ ಹೇಳೋಣ ಅಂದರೆ ಅದರ ನಾಮಾಂಕಿತವೂ ಅವನಿಗೆ ಗೊತ್ತಿಲ್ಲ. ಆರುದಿನ ಕಾಲ್ನಡಿಗೆಯಲ್ಲಿ ಹಗಲು ರಾತ್ರಿ ನಡೆದು ಹೋದರೆ ಸಿಗುತ್ತದೆಯಂತೆ.. ಅವರು ಅವರು ನಡೆಯಲು ಆರು ಹಗಲು ರಾತ್ರಿ .. ನಾನು ನಡೆಯಲು ಎಷ್ಟು ದಿನಗಳೋ...??? ಅಂತ ಅವನಿಗನ್ನಿಸುತ್ತಿತ್ತು. ನಡೆಯಲು ಶುರುಮಾಡಿದ್ದಾನೆ. ನಡೆದುಬರುವಾಗ ಸುತ್ತಲೂ ಅವನಿಗೆ ಯಾವುದೋ ಕಾಲದ ಭೂ ಪ್ರದೇಶದಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ನಡೆದು ಬರುವ ಸುತ್ತಲೂ ಆಧುನಿಕ ವಾಸ ಮನೆಗಳಾಗಲಿ, ಕೈಗಾರಿಕೆಗಳಾಗಲಿ ಡಾಬರ್ ರಸ್ತೆಗಳಾಗಲೀ ಎಲ್ಲೂ ಕಾಣಿಸುತ್ತಿಲ್ಲ..‌.ಸಾವಿರಾರು ಹೆಕ್ಟರ್ ಕೃಷಿಯೋಗ್ಯ ಭೂಮಿ ಇದ್ದರೂ ಇದುವರೆಗೆ ಅದರಲ್ಲಿ ಕೃಷಿ ಮಾಡಿದ ಕುರುಹುಗಳು ಕಾಣಿಸುತ್ತಿಲ್ಲ... ಸಾಧಾರಣ ಅಡವಿಯಂತಹ ಪ್ರದೇಶದಲ್ಲಿ  ನಡೆದು ಬರುತ್ತಿದ್ದಾನೆ. ಒಬ್ಬನೇ ಇದ್ದುದರಿಂದ ಮನುಷ್ಯರ ಒಡನಾಟ ಕಾಣದ ಭೂ ಪ್ರದೇಶ ಆದುದರಿಂದ ಆರುಷಿಗೂ ಕಾಡುಪ್ರಾಣಿಗಳಿಂದ ಸಂಭವಿಸಬಹುದಾದ ಅಪಾಯದ ಬಗ್ಗೆ ಭಯ ಇದ್ದೇ ಇತ್ತು. ಆದರೂ ಕೈಯಲ್ಲಿರುವ ಶಸ್ತ್ರ ಸಜ್ಜಿತ multi weapon ಕೋಲಿನ ಧೈರ್ಯದಿಂದ ಮುಂದೊಗುತ್ತಿದ್ದಾನೆ.

 ಐದಾರು ದಿನಗಳಿಂದ ನಡೆದು ನಡೆದು ಸುಸ್ತಾಗಿದೆ. ಬಹುಶಃ   ಅವನ ಪಯಣದ  ಗಮ್ಯ ಇಂದಾದರೂ ತಲುಪುವುದೋ ಇಲ್ಲವೋ... ತಿಳಿಯುತ್ತಿಲ್ಲ.ವಿಶಾಲ ದಿಗಂತದ ಅಷ್ಟದಿಕ್ಕುಗಳಲ್ಲಿ ನೋಡಿದರೂ  ಹಚ್ಚ ಹಸುರಿನ ಬನ. ಈಗ ನೋಡುವ ನರಪೇತಲ ಮರಗಿಡಗಳಲ್ಲ.. Gigantic ಬೃಹತ್ ಮರಗಳು.ಆರುಷಿ ಎಂದೂ ಅಂತಹ ಮರಗಳನ್ನು ನೋಡಿರಲಿಲ್ಲ ಕೇಳಿಯೂ  ಇರಲಿಲ್ಲ.ಅದರ ಒಂದು ಹೆಸರೂ ಆರುಷಿಗೆ ಗೊತ್ತಿಲ್ಲ.ಅಸಂಖ್ಯಾತ ಯಾವ್ಯಾವೋ ಆರುಷಿ ಕೇಳಿರದ ಪಕ್ಷಿಗಳ ಕೂಗಾಟ ಕೇಳಿಸುತ್ತಿದೆ. ಆಸ್ಟ್ರಿಚ್  ಗಿಂತಲೂ ದೊಡ್ಡ ದೊಡ್ಡ ಪಕ್ಷಿಗಳು  ಓಡಾಡುತ್ತಿವೆ.. ಹಾರಾಡುತ್ತಿವೆ.ಒಂದರ್ಥದಲ್ಲಿ ಜಟಾಯು ಪಕ್ಷಿಗಳಂತ ನೂರಾರು ಜಾತಿಯ  ಬೃಹತ್ ಪಕ್ಷಿಗಳು ಕಾಣುತ್ತಿವೆ.  ಬೈಜಾಂಟೈನ್ ಯುಗದಲ್ಲಿ ಬೃಹತ್ ಪ್ರಾಣಿಗಳು ವಾಸವಾಗಿದ್ದವಂತೆ. ಮನುಷ್ಯನೂ ಕೂಡ ಬೃಹತ್ ಮಾನವ ಆಗಿದ್ದ. ಹುಲಿಯಂತೆ ಬೆಕ್ಕು ಮೈಕ್ರೋ ಆದಂತೆ ಈಗಿನ ಹುಲಿಯೇ ಮೈಕ್ರೋ...! ಇರುವ ಎಲ್ಲಾ ಪ್ರಾಣಿ ಪಕ್ಷಿಗಳು micro ಆದಂತವುಗಳು. ಕಣ್ಣಿಗೆ ಕಂಡ ಎಲ್ಲಾ ಪ್ರಾಣಿ ಪಕ್ಷಿಗಳ ಪೋಟೋಗಳು ಭಿನ್ನವಿಭಿನ್ನವಾಗಿ ಕ್ಯಾಮೆರಾ ದಲ್ಲಿ ಸೆರೆಯಾಗುತ್ತಿದ್ದಾವೆ. ಸದ್ಯಕ್ಕೆ ಈ ತರ  ಪಕ್ಷಿಗಳನ್ನು,ಮರಗಿಡಗಳನ್ನು ನೋಡುತ್ತಿರುವ ಮೊದಲ ವ್ಯಕ್ತಿಯೇ ಆರುಷಿಯಾಗಿದ್ದಾನೆಂದು ಅವನಿಗೆ ಎಲ್ಲಿಲ್ಲದ  ಸಂಭ್ರಮ ಸಡಗರ. ಆ ಬೃಹತ್ ಮರಗಳಲ್ಲಿ ಮಾರು ಅಗಲ ಎಲೆಗಳ ಬೃಹತ್ ಬಳ್ಳಿ...  ಆ ಬಳ್ಳಿಯಲ್ಲಿ ಐದಾರು ಅಡಿ ಉದ್ದದ ಏಳು- ಎಂಟು ಕೆಜಿಯ  ಹೀರೇಕಾಯಿ... ಅವುಗಳನ್ನು  ಬೃಹತ್ ಕರಿ ಕೋತಿಗಳು(ಮುಶ್ಯಾ) ಅವುಗಳನ್ನು  ನಾವು ಸೌತೆಕಾಯಿ ಹಿಡಿದು ತಿನ್ನುವಂತೆ ಹಸಿಹಸಿಯಾಗಿ ಕರಮ್ ಕರುಮ್  ಎಂದು ತಿನ್ನುತ್ತಿವೆ...ದನಗಳ ಹೆಜ್ಜೆಯಂತೆ ಯಾವ್ಯಾವೋ ಓಡಾಡಿರುವ   ಬೃಹತ್ ಹೆಜ್ಜೆ ಗುರುತುಗಳು. ಈಗಿನ ಆನೆಗಳೇ ಮೈಕ್ರೋ ಆನೆಗಳಾದರೆ  ಮೂಲ ಆನೆಗಳ ಗಾತ್ರ,ಎತ್ತರ ಎಷ್ಟಿರಬಹುದು??  ಆನೆಗಳು ಕಾಡೆಮ್ಮೆ ಕಾಡುಕೋಣಗಳನ್ನು ಹುಡುಕುತ್ತಿದ್ದ ಆದರೆ ಕಾಣಲಿಲ್ಲ...ಇನ್ನೊಂದಷ್ಟು ಹುಡುಕಿದ್ದರೆ ಕಣ್ಣಿಗೆ ಬೀಳುತ್ತಿದ್ದವೇನೋ...ಆದರೆ ಆರುಷಿಯ ಅಚ್ಚರಿಯ ಮಿತಿಗೆ ಈಗಾಗಲೇ ಗರಿಷ್ಟ ಆದುದರಿಂದ  ಅವುಗಳನ್ನು ಹುಡುಕಲು ಹೋಗಲಿಲ್ಲ. ಈ ಎಲ್ಲಾ    ಸುದ್ದಿ ಸಮಾಚಾರವನ್ನೇನಾದರೂ ಈಗಿನ 5 G ಯುಗಕ್ಕೆ ಶೇರ್ ಆದರೆ ಇದೊಂದು ವಿಶ್ವದಾಖಲೆಯಾಗುವ ವಿಶ್ವಾಸ..!ಅಂಥಂತಹ ಪೋಟೋ- ವೀಡಿಯೋಗಳು ಆರುಷಿಯ ಕ್ಯಾಮೆರಾದಲ್ಲಿ ಸೆರೆಯಾಗಿವೆ.ಬಹಳ ದಿನಕ್ಕೆ ಒಂದು ಜಾಗತಿಕಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಪ್ರಯತ್ನ ಆಗುತ್ತಿದೆ. ಅದೆಲ್ಲಿಯೋ ಆರುಷಿಯ ಅಪ್ಪ ಹೇಳಿದಂತೆ ರಾಕ್ಷಸ ಮನುಷ್ಯರು ಕಟ್ಟಿದ ಅವಶೇಷಗಳು ಇವೆ ಎಂದು ಹೇಳುತ್ತಿದ್ದರಲ್ಲ?? ಅದೊಂದು ಪತ್ತೆ ಆದರೆ  ಸಾಕು ಎಂದು ಮುಂದೆ ಸಾಗುತ್ತಿರುವಾಗ ಮೂರ್ನಾಲ್ಕು ಕಿಲೋಮೀಟರ್ ದೂರದಲ್ಲಿ ಸಾಧಾರಣ ಬೆಟ್ಟವೊಂದು ಎದುರು ಕಾಣಿಸಿತು.

 ಅದರ ಮದ್ಯ ಭಾಗ ಎತ್ತರ ವಾದ ಮೊಟ್ಟೆಯಾಕಾರವಾದ ಒಂದು ಏಕ ಶಿಲೆ ಕಾಣುತ್ತಿದೆ.ಅದೊಂದು  ಬುಡ್ಡೆಕಲ್ಲು  ಅಥವ ಶಿವಲಿಂಗದ ರೀತಿಯಲ್ಲಿ ಕಾಣುತ್ತಿದೆ.... ಅದರ ವ್ಯಾಸ ವಿಸ್ತೀರ್ಣ  ಎಷ್ಟು ದೊಡ್ಡದು ಎಂದರೇ ನೂರಾರು ಮೀಟರ್ ಸುತ್ತಳತೆಯ ಸುಮಾರು ಇನ್ನೂರು ಮೀಟರ್ ಎತ್ತರದ ಕಲ್ಲಿನಂತೆ!..ಎಲ್ಲಿ ನೋಡಿದರೂ ಎಷ್ಟು ನೋಡಿದರೂ ನಾಗರಿಕ ಜನವಸತಿ ಇಲ್ಲದ  ಸುಂದರವಾದ ಬೆಟ್ಟ...ಬೆಟ್ಟ ಅಂದರೆ ಒಂಟೆಯ ಡುಬ್ಬದಂತೆ ಅಥವಾ ಎತ್ತಿನ ಬುಜದಂತ ಸ್ವಾಭಾವಿಕ  ಬೆಟ್ಟ ಅಲ್ಲ... ಈಜಿಪ್ಟ್ ಪಿರಮಿಡ್ ಸಮನಾಂತರ ಕಾಲದಲ್ಲಿ ಮಾನವ ನಿರ್ಮಿತದಂತಿದೆ.ಅದು ಯಾವ ಶಿಲಾಯುಗದ ಕಾಲದಲ್ಲೋ ಈಗಿನ ಮನೆಗಳ ಗಾತ್ರದ ಕಲ್ಲುಗಳು ಅಲ್ಲೊಂದು ಇಲ್ಲೊಂದು  ನೂರಾರು ಅಲ್ಲಲ್ಲಿ ಬಿದ್ದಿವೆ. ಈ ಚೌಕಾಕಾರದ ಕಲ್ಲುಗಳಲ್ಲೇ ಕಲ್ಲಿನ ಒಳಭಾಗದಲ್ಲಿ ಕೊರೆದು ಒಳಗಡೆಯೇ ಮನೆಯಂತೆ ಮಾಡಿದ್ದಾರೆ.ಕಲ್ಲು ಕತ್ತರಿಸಿ ಸಾವಿರಾರು ವರ್ಷಗಳೇ ಕಳೆದಿರಬಹುದು.  ಗಾಳಿ ಮಳೆ ಬಿಸಿಲಿನ ನೈಸರ್ಗಿಕ ವಿದ್ಯಮಾನಗಳಿಂದಾಗಿ ಆ ಬೃಹತ್ ಕಲ್ಲಗಳೇ  ಸವೆದುಹೋಗಿವೆ. ಈಗ ರಸ್ತೆ ಬದಿಗಳಲ್ಲಿ ಕಾಣುವ ಲೋಹದ containers ತರದಂತೆಯೇ ಇವೆ ಆದರೆ those are made in stones...!  ಆ ಸ್ಥಳದ ವಿದ್ಯಮಾನಗಳು ಆಶ್ಚರ್ಯಕರವಾಗಿ ಕಂಡಿತು. ಅಪ್ಪ ಹೇಳುತ್ತಿದ್ದ ರಾಕ್ಷಸ ಮನುಷ್ಯರು ಮಾಡಿದ ನಿರ್ಮಾಣಗಳು ಇವೇ ಇರಬೇಕು ಎನಿಸಿತು.ಹತ್ತಾರು ಫೋಟೋಗಳನ್ನು ತೆಗೆದು  ಈ ರಾಕ್ಷಸ ಮನುಷ್ಯರ ತಾಣಕ್ಕಿಂತ ಆರುಷಿಯನ್ನು ಹೆಚ್ಚು ಸೆಳೆದದ್ದು ಆ ಬೆಟ್ಟದ ಹಿಂದೆ ದಿಗಂತವೇ ಇಲ್ಲವೇನೋ ಎಂಬಂತೆ ಕಾಣುತ್ತಿದ್ದುದು. ದಿಗಂತದ ತುದಿಗೆ ಯಾವ ಬೆಟ್ಟಗುಡ್ಡ ಅರಣ್ಯವೂ ಕಾಣುತ್ತಿಲ್ಲ.. ಬೆಟ್ಟ ಪ್ರದೇಶ ಆದುದರಿಂದ ಮೋಡಗಳು ಇರಬಹುದೆಂದು ಊಹಿಸಿ ಹಂತ ಹಂತವಾಗಿ ಹತ್ತಾರು ಪೋಟೋಗಳನ್ನು ಕ್ಲಿಕ್ಕಿಸುತ್ತಾ ಮುಂದೆ ಸಾಗಿದ..ಕ್ಯಾಮೇರಾದ 600mm frame ನಲ್ಲೂ ಪೋಟೋಗಳು ವಿಭಿನ್ನವಾಗಿ capture ಆಗುತ್ತಿದೆ.ಆ ಬೆಟ್ಟಗುಡ್ಡ zoom ಮಾಡಿದರೂ zoom out ಮಾಡಿದರೂ ಚಿತ್ರಣ  ಮಾತ್ರ ಒಂದೇ!  ಯಾವ ಸೆಟ್ಟಿಂಗ್ ಮಾಡಿದರೂ ಸರಿಯಾಗುತ್ತಿಲ್ಲ.. ಹಾಗಂತ ಕ್ಯಾಮೆರಾ operations ತಪ್ಪು ಮಾಡುತ್ತಿಲ್ಲ. ಅಲ್ಲಿನ location position ಆ ತರ ಇದೆ. ಸರಿ  ಏನೋ ನೋಡೋಣ ಮೇಲೆತ್ತಲು ಶುರು ಮಾಡಿದ... ಬೆಟ್ಟ  ಹತ್ತುತ್ತಾ ಹತ್ತುತ್ತಾ  ಅದೊಂದು ಬೇರೆಯದೇ ಲೋಕ   ತೆರೆದಂತೆ ಭಾಸವಾಗುತ್ತಿದೆ. ವಿಫರೀತ ಗಾಳಿ..ಹತ್ತಿಯ ರಾಶಿಯಂತೆ  ಮೋಡಗಳು ತೇಲಿಬರುತ್ತಿವೆ. ನಿಂತುಕೊಂಡಿರುವ ಸ್ಥಳ ಮತ್ತು ಅವನ ಹಿಂದಿನದು ಮಾತ್ರ ಮಣ್ಣು ಭೂ ಪ್ರದೇಶ... ಮುಂದಿನದು ಭೂಮಿಯೇ ಇಲ್ಲವೇನೋ ಅನ್ನಿಸುತ್ತಿದೆ. ಒಂದು ರೀತಿಯಲ್ಲಿ ವ್ಯೂಮದಲ್ಲಿರುವ ಭಾಸ...  ಸುಯ್ ಎನ್ನುವಂತಹ ಶಬ್ಧ ಬಿಟ್ಟರೆ ಏನು ಕೇಳುತ್ತಿಲ್ಲ.ಮುಂದೆ ಹೋಗೋಣ ಎಂದರೇ ಭೂಮಿ ಕೊನೆಯಾಗಿದೆಯೇನೋ ಎಂಬಂತೆ Ded end ಅನಿಸುತ್ತಿದೆ.ಎಲ್ಲೂ ಕಾಣದ ಆ ಸುಂದರ ಚಿತ್ರಣ ಸ್ವರ್ಗವನ್ನು ಅನುಕರಿಸುವಂತಿತ್ತು. ಒಬ್ಬ Cameraman ಗೆ ಅದೊಂದು ಹಬ್ಬ... ತೆಗೆದ ಪೋಟೋಗಳ ಸಂಖ್ಯೆಗೆ ಮಿತಿ ಇರಲಿಲ್ಲ..  ಇದ್ದಕ್ಕಿದ್ದ ಹಾಗೆ ಬೀಸುತ್ತಿದ್ದ ಗಾಳಿ ಕಡಿಮೆ ಆಯಿತು. ಮುಖ ಎತ್ತಿ ನೋಡಿದರೆ  ಮೋಡಗಳು ಕಾಣಲಿಲ್ಲ. ಆದರೆ ಮೋಡದ ಜಾಗದಲ್ಲಿ ನೀಲಿ ಆಕಾಶದಲ್ಲಿ ಸಮುದ್ರ, ಸಮುದ್ರದ ಅಲೆಗಳು,ಹಡಗು ಕಾಣುತ್ತಿದೆ.!ಒಂದು ಕ್ಷಣ ಭ್ರಮೆ ಎನಿಸಿತು. ಕುತೂಹಲವಾಗಿ ನೋಡುತ್ತಾ ನಿಂತನು... ಸಮುದ್ರದಲ್ಲಿನ ಪ್ರತಿಬಿಂಬ ಎನಿಸಿತು. ಕೆಳಭಾಗದಲ್ಲಿ ಶೂನ್ಯ ಪ್ರಪಾತದಂತೆ ಗೋಚರವಾಯಿತು... ಆದರೆ ಮೇಲೆ ನೋಡಿದರೆ ಮಾತ್ರ ಸಮುದ್ರ ಮತ್ತು  ಹಡಗಿನ ಚಿತ್ರಣ... ನೋಡು ನೋಡುತ್ತಿರುವಾಗ  ಏನಾಶ್ಚರ್ಯ??ಹಡಗುಗಳು ಚಲಿಸುತ್ತಿವೆ. ಬೈನಾಕ್ಯೂಲರ್ ಇಲ್ಲದಿದ್ದುದರಿಂದ ಕ್ಯಾಮೆರಾ 600 mm Len's ಅನ್ನು ಕ್ಯಾಮೆರಾಕ್ಕೆ ಅಳವಡಿಸಿ zoom ಮಾಡಿದ. ಮೇಲೆ ಕಾಣುತ್ತಿದ್ದ ಸಮುದ್ರವನ್ನು ನೋಡಿದ.  ಬಹಳ ಸ್ಪಷ್ಟವಾದ ಚಿತ್ರಣ ಕ್ಯಾಮೆರಾದಲ್ಲಿ ಕಾಣಿಸಿತು. ಯಾವುದೋ ದೇಶದ flag ಗಳು ಹಡಗಿನಮೇಲೆ ಹಾರುತ್ತಿರುವುದು ಕಾಣಿಸುತ್ತಿವೆ. ಯಥಾ ಪ್ರಕಾರ ಹತ್ತಾರು ಪೋಟೋಗಳು ವೀಡಿಯೋಗಳನ್ನು ರೆಕಾರ್ಡ್ ಮಾಡಿದ... ದಿಗಂತದ ಅಂಚಿನಲ್ಲಿ ಕಂಡಿದ್ದರೆ ಆರುಷಿಗೆ ಆಶ್ಚರ್ಯ ಆಗುತ್ತಿರಲಿಲ್ಲ ಆದರೆ  ಆ ಚಿತ್ರಣ ಕಂಡಿದ್ದು ಆಕಾಶದಲ್ಲಿ ಸೂರ್ಯ ನಕ್ಷತ್ರಗಳು ಕಂಡ ಹಾಗೆ ಮೇಲ್ಮುಖದಲ್ಲಿ ಕಂಡಿದ್ದು ಆಶ್ಚರ್ಯಕರವಾಗಿ ಕಾಣಿಸಿತು. ಅನ್ಯಗ್ರಹಗಳಿಗೆ ನಾವೇನಾದರೂ ಹೋದರೆ ಪುನಃ ಭೂಮಿಗೆ ಹಿಂದಿರುಗಲು ಮೇಲ್ಮುಖವಾಗಿಯೇ ನಮ್ಮ ಪಯಣ ಆರಂಭಿಸಬೇಕಾಗುತ್ತದೆಯಂತೆ! ಅದರಂತೆಯೇ ಭೂ ಮೇಲ್ಮೈನ ಯಾವುದೋ ಒಂದು ಸಮುದ್ರವನ್ನು/ಅಥವಾ ಭೂ ಭಾಗವನ್ನು ಪೂರ್ವದಿಂದ ಪಶ್ಚಿಮದ ಕೆಲವು ಭೂ ಭಾಗವನ್ನು,  ಉತ್ತರದಿಂದ ದಕ್ಷಿಣದ  ಇನ್ನೊಂದು ಭೂ ತುದಿಯನ್ನು ಖಂಡಾಂತರವಾಗಿ ವೀಕ್ಷಿಸಬಹುದು. ಭೂಮಿ ದುಂಡಾಗಿರುವುದರಿಂದ  ಅದು ಸಾಧ್ಯವಿಲ್ಲ ಎಂದು ವಾದಿಸುವ ಜಗತ್ತಿಗೆ ಈಗ ಆರುಷಿ ಆರೇಳು ದಿನ  ನಡೆದು ಸಾಗಿದ ನಿಗೂಢ ಭೂ ಪ್ರದೇಶದಿಂದ ಸಾದ್ಯ ಎಂಬುದನ್ನು  ದಾಖಲೆಗಳ ಸಹಿತ ಇಡೀ ಜಗತ್ತಿಗೆ ತಿಳಿಸಬೇಕು  excitement ಲ್ಲಿ ಧಾವಂತದಿಂದ  ಹಿಂದಿರುಗುತ್ತಿದ್ದಾನೆ...

( ಕನಸು ಕಥೆಯಾದಾಗ...
_ಮುಂದುವರೆಯುವುದು...._)

✍️ *_ನಾಗೇಂದ್ರ ಬಂಜಗೆರೆ_*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..