ಕನಸುಗಳು ಕಥೆಯಾದಾಗ ಕನಸು-8
#ಕನಸುಗಳು_ಕಥೆಯಾದಾಗ... ಕನಸು-8 ಅದು ತಿಂಗಳ ಕೊನೆಯ ದಿನಗಳು.. ಆರುಷಿಯ ಕುಟುಂಬದ ತಿಂಗಳ ಖರ್ಚು ಕಳೆದು ಉಳಿದದ್ದು ಕೇವಲ ಹತ್ತು ಸಾವಿರ ಮಾತ್ರ. ಅದು ರಿಸರ್ವ್ ಮೊತ್ತ.ಅದು ಏನಾದರೂ ಎಮರ್ಜೆನ್ಸಿಗೊ, ಅನಿವಾರ್ಯ ಸಂದರ್ಭಗಳಿಗೋ ಬಳಕೆಯಾಗುವಂಥದ್ದು . ಇತ್ತೀಚಿನ ದಿನಗಳಲ್ಲಿ ಕೈಯಲ್ಲಿ ಕಾಸು ಕಡಿಮೆ. ಎಲ್ಲಾ ಅಂಗಡಿಗಳಲ್ಲಿ ಯುಪಿಐ ಪೇಮೆಂಟ್ ಇರೋದ್ರಿಂದ ಕೈಯಲ್ಲಿ ಕ್ಯಾಶ್ ಹಿಡ್ಕೊಂಡು ಓಡಾಡುವ ಸಂಖ್ಯೆ ವಿರಳವೇ .ಜೇಬಲ್ಲಿ ಇದ್ದದ್ದು 150-200 ರೂಪಾಯಿ. ಏನಾದರೂ ಬೇಕಾದರೆ ಅಕೌಂಟಲ್ಲಿ ಇದ್ದ ಹಣ ಪೇ ಮಾಡಿ ವಸ್ತುಗಳು ತರಬಹುದೆಂದು ನಾಲ್ಕೈದು ದಿನದಲ್ಲಿ ಸ್ಯಾಲರಿ ಆಗಬಹುದೇನೋ ಎಂಬ ನಿರೀಕ್ಷೆಯಿಂದಿದ್ದ.ಅಂದು ಸಂಡೇ...ಮಳೆಗಾಲ ಆದ್ದರಿಂದ ಎಲ್ಲಿಯಾದರೂ ಹೋಗಿ ಅಣಬೆ ಹುಡುಕಿ ತರವ ಎಂದು ಬಯಸಿದ. ಆರುಷಿಗೆ ಅಣಬೆಗಿಂತ ಕಾಡಿನಲ್ಲಿ ಏಕಾಂಗಿಯಾಗಿ ತಿರುಗುವುದೆಂದರೇ ಬಲು ಇಷ್ಟ. ಕಾಡಿನಲ್ಲಿ ಸಿಗುವ ಹಣ್ಣು,, ತಿನ್ನುವ ವಸ್ತುಗಳೆಲ್ಲಾ Bonus. ಆಗಾಗ ಏನಾದರೂ ನೆಪ ಇಟ್ಟುಕೊಂಡು ಅಡವಿ,ಬೆಟ್ಟ ಹೀಗೆ ತಿರುತ್ತಿರುತ್ತಾನೆ. ಅಂದು ಅಂದುಕೊಂಡಂತೆ ಅಣಬೆ ಹುಡುಕಲು 'ಬಾಂಡ್ರಾವಿ' ರಕ್ಷಿತಾರಣ್ಯಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಒಂದಷ್ಟು ದೂರದಲ್ಲಿ ಯಾರೋ ಒಂದಿಬ್ಬರ ಮಧ್ಯದಲ್ಲಿ ನಿಂತಿದ್ದ ನಾಯಿಯೊಂದು ಕಾಣಿಸಿತು. ಆರುಷಿಗೆ ಯಾವುದಾದರೂ ನಾಯಿಗಳು ಕಂಡರೆ ಅದು...