ಕನಸುಗಳು ಕಥೆಯಾದಾಗ...ಕನಸು-7

*ಕನಸು ಕಥೆಯಾದಾಗ...*

           ಕನಸು -7


*ಸಕ್ರಪ್ಪ ಗುಡ್ಡದ ಮೇಲೆ ಮೋಡದ ಒಳಗೆ ಆ ಸೌಂದರ್ಯದ ಸೊಬಗಿಗೆ ಮೈ ಮರೆತು ಒಬ್ಬನೇ ಇದ್ದರೂ ಜೋರಾಗಿ ಕೂಗುತಿದ್ದ.... ಇತ್ತೀಚೆಗೆ  ಮದುವೆಗಳಲ್ಲಿ liquid nitrogen ಹಾಕಿ ಹತ್ತಿಯಂತ ಕೃತಕ. ಹೊಗೆಯ scenes ಮಾಡುವವರಲ್ಲ??ಹಾಗೆ ನನ್ನ ಕಣ್ಣಿಗೆ ಕಾಣುವ ದಿಗಂತವೆಲ್ಲಾ ಹಾಗೇ ಕಾಣಿತ್ತಿದೆ. ಕಾಲಿಡಲು ಭಯ ಆಗುತ್ತಿದೆ.. ಯಾವುದೋ ದುಂಡಾದ ವಸ್ತುವಿನ ಕೊನೆಯ ತುದಿಯ ಮೇಲೆ ನಿಂತಂತೆ ಆಗುತ್ತಿದೆ. ಹಾಗೆ ಹಿಂದೆ ಮುಂದೆ ಸರಿದಾಡುತ್ತಾ ಇರುವಾಗ ಆರುಷಿಗೆ ಏನೋ ಮೀನ ಖಂಡದ ಭಾಗದಿಂದ ತಣ್ಣಗೆ ಇಳಿಯುತ್ತಿರುವಂತೆ ಅನಿಸಿತು. ಏನೋ ಗಿಡ ಮರದ ಎಲೆ ಬಳ್ಳಿಗಳು ಇರಬೇಕು ಎನಿಸಿತು. ಹ್ಞೂಂ ಹು.... ಅದು ಹಾಗೇ ಇಳಿಯುತ್ತಲೇ ಇದೆ.  ಕೈ ಸವರಿಕೊಂಡು ನೋಡಿದರೆ ಕೈಗೆ ಏನೋ ಅಂಟಿಕೊಂಡಾಯ್ತು.... ಕೈ ಮೇಲೆ ಎತ್ತಿ ನೋಡಿದರೆ ರಕ್ತ...!ಕಿರುಬೆರಳು ತೂರುವಷ್ಟು ಒಂದು ರಂದ್ರ ಆಗಿದೆ. ಬಹುಶಃ  ಯಾವುದೋ ಚೂಪಾದ ಲೋಹದ ವಸ್ತುವೊಂದು ಚುಚ್ಚಿದೆ ಎನಿಸಿತು. ಆರುಷಿ ಇದ್ದ ಆ ಸಕ್ರಪ್ಪ ಗುಡ್ಡ  ಶಿಲಾಯುಗದ್ದು.. ಈಜಿಪ್ಟ್ ಪಿರಮಿಡ್ ರಚನಾವಧಿಯಲ್ಲಿ ಕಟ್ಟಿರಬಹುದಾದ ಚೌಕಾಕಾರದ ಶಿಲೆಗಳ ಒಳಗೆ  ಪಟ್ಟಿಗೆಯಂತಹ ಮನೆಗಳು ಹತ್ತಿಬರುವಾಗ ನೋಡಿದ್ದ ಆರುಷಿಗೆ ಇಲ್ಲಿ  ಕಬ್ಬಿಣದ ವಸ್ತುಗಳು ಇರಲಿಕ್ಕಿಲ್ಲ... ಆದರೆ ಬೇರೆ ಏನೋ ಚುಚ್ಚಿರಬಹುದು. ಒಮ್ಮೆಗೆ  ಜಿಗಣೆಯಂತಹ ಜಂತುಗಳೇನಾದರೂ ರಕ್ತ ಹೀರಿದ ಮೇಲೆ ರಕ್ತ ಕಾರುತ್ತಿರಬಹುದೇ ಎಂಬ ದಿಗಿಲಾಯಿತು.   ಏಳೆಂಟುದಿನ ಹಗಲು ರಾತ್ರಿ ಸುದೀರ್ಘವಾಗಿ ನಡೆದು ತಲುಪಿದ ಸ್ಥಳ.. ಈ ಗಾಯದ ನೋವು  ಜಾಸ್ತಿ ಆದರೆ ಹಿಂತಿರುಗುವುದು ಹೇಗೆಂದು ಯೋಚಿಸುತ್ತಿರುವಾಗ ಹವಾಮಾನ ಸ್ವಲ್ಪಮಟ್ಟಿಗೆ ತಿಳಿಯಾಯಿತು. ಮೋಡಗಳ ಸಾಂದ್ರತೆ  ಕಡಿಮೆಯಾದಂತೆ ಕಾಣಿಸಿತು.ದೂರದಲ್ಲಿ ಏನೋ ಕುಕ್ಕರ್ ವಿಷಲ್ ಹೊರಡಿಸುವ ಶಬ್ಧದಂತೆ  ಶಬ್ಧಮಾಡುತ್ತಾ  ಕುಕ್ಕರ್ ನಂತಹ ದೊಡ್ಡ container ಒಂದು ಹತ್ತಿರ ಬರುತ್ತಿದೆ..ಆರುಷಿ ಯಾವುದೋ ಹೆಲಿಕಾಪ್ಟರ್ ಇರಬಹುದು ಎಂದೆನಿಸಿತು.  ಆರುಷಿ ನಿಂತಿದ್ದ ಒಂದಷ್ಟು ದೂರದಲ್ಲಿ  ವಿಷಲ್ ಒತ್ತಡ ಕಡಿಮೆಯಾಗುತ್ತಾ ಬಂತು ನಿಂತಿತು.ನೋಡಿದರೆ ಥೇಟ್ ಕುಕ್ಕರ್ನ ರಚನೆಯೇ..!ಇಬ್ಬರು ಕುಳಿತುಕೊಳ್ಳಬಹುದಾದಂತಹ ವಾಹನ ಅದು. ನಮ್ಮ ಭೂ ಲೋಕದ ವಾಹನಗಳು ಒಂದೊಂದು ತೆರನಾಗಿ ಇದ್ದರೆ  ಈ  ವಾಹನಮಾತ್ರ ಕುಕ್ಕರ್ ನಂತೆ ವಿಶೇಷವಾಗಿ ಕಾಣುತ್ತಿತ್ತು.  ಅದರಿಂದ ವಿಮಾನದ ಮಟ್ಟಿಲಂತೆ  ಬಾಗಿಲು ತೆರೆದು  ಒಂದು ರೋಬೋಟ್ ನಂತಹ ಒಂದು ಜೀವಿಯೋ, ಯಂತ್ರವೋ ಇಳಿದು ಆರುಷಿಯೆಡೆಗೆ ಬರುತ್ತಿತ್ತು. ಇತ್ತ ರಕ್ತ ಸೋರದಂತೆ ಅಂಗೈಯಲ್ಲಿ ಒತ್ತಿ ಹಿಡಿದ್ದಿದ್ದ   ಆರುಷಿಗೆ ಭಯ ಶುರುವಾಯಿತು. ಅದೊಂದು ನಿಗೂಢವಾದ ಸ್ಥಳವಾದ್ದರಿಂದ ಮಾನವ ಜನವಸತಿ ಇಲ್ಲದ ನಿರ್ಜನ ಪ್ರದೇಶ.. ಯಾವುದೋ ಕಾಲದಲ್ಲಿ ರಾಕ್ಷಸ ಮಾನವರಿದ್ದರೆಂದು ನಂಬಿದ್ದ ಸ್ಥಳ.. ಬಂದುದು ಏಲಿಯನ್ಸ್ ಏನಾದರೂ ಇರಬಹುದೇನೋ ಅಂದರೆ ಈ ವರೆಗೂ ಎಲ್ಲಾ ಚಿತ್ರಗಳಲ್ಲಿ ತೋರಿಸಿದ ಏಲಿಯನ್ಸ್ ನಂತೆ ಅದು ಕಾಣಲಿಲ್ಲ. ನನ್ನ ಬಳಿ ಬಂದ ಆ ವಿಚಿತ್ರ ಜೀವಿ ನನ್ನ  ಮೀನಖಂಡದಲ್ಲಿ ಆದ ಗಾಯಕ್ಕೆ ಅದರ ಅಂಗೈ ಇಂದ ಕಿತ್ತ  ಮಾಂಸದ ತುಂಡನ್ನು ಆರುಷಿಯ ಗಾಯಕ್ಕೆ ಅಂಟಿಸಿತು. ಏನಾಶ್ಚರ್ಯ??? ಕೆಲವೇ ಸೆಕೆಂಡ್ ಗಳಲ್ಲಿ  ಮಾಯ ಆಯಿತು.  ಆರುಷಿ ಅಲ್ಲಿಂದ ಹಿಂತಿರುಗುವುದು ಕಷ್ಟ ಎಂದು ಹೆದರಿದ್ದ ಸರಿಯಾದ ಸಮಯಕ್ಕೆ ಬಂದು ಸಹಾಯ ಮಾಡಿದ ಜೀವಿಗೆ ಕೈ ಚಾಚಿ lot of thanks ಎಂದೇಳಿದ.. ಅದು ಕೈ ಚಾಚಿ ಜ್ಞ... ಜ್ಞ... ಎಂದು ಅನುನಾಸಿಕ ಉಚ್ಚಾರಣೆ ಬಂತು. ಯಂತ್ರ ಅಲ್ಲ ಎಂದು ಖಚಿತವಾಯಿತು. ಆರುಷಿಗೆ ಅರ್ಥ ಆಗಿದ್ದು ಅದರಂತೆ ಆದರೆ ಅದು.. ಬೇರೆಯೇ ಉಚ್ಚರಣೆ... ಆರುಷಿಯ ಮುಖವನ್ನು ನೋಡುತ್ತಾ ತನ್ನ ಅವಶ್ಯಕತೆ ಬಿದ್ದರೆ  ಗಾಯದ ಆಗಿದ್ದ ಸ್ಥಳದಲ್ಲಿ ಒತ್ತಿ ಹಿಡಿಯಬೇಕೆಂದು ಆಂಗಿಕ ಮತ್ತು ಶಾಬ್ದಿಕ ವಾಗಿ ಹೇಳಿತು.ಕಂಚಿನಂತೆ ಬದಲಾಗಿದ್ದ ಗಾಯದ ಜಾಗವನ್ನು ತೋರಿಸುತ್ತಾ  ಹೇಳುತ್ತಿತ್ತು. ಆರುಷಿ ಇದುವರೆಗೆ ಕೇಳದ ಭಾಷೆಯಂತೂ ಹೌದು.ಈ ತಂತ್ರಜ್ಞಾನದ ಮತ್ತು ವೈರಸ್ ಯುಗದಲ್ಲಿ  ಅಪರಿಚಿತ ಜೀವಿ ತನ್ನ ದೇಹಕ್ಕೆ ಅಂಟಿಸಿದ್ದು ಯಾಕೋ ಕಿರಿಕಿರಿ ಅನಿಸಿತು. ಅದರಿಂದ ಬೇರೆ ಎನಾದರೂ ತೊಂದರೆ ಆಗಬಹುದೇ ಎಂಬ ಆತಂಕ ಕಾಡುವಿಕೆ ಶುರುವಾಯಿತು. ಅದರೊಂದಿಗೆ ಪೋಟೊಗಳನ್ನು ತೆಗೆದುಕೊಳ್ಳಬೇಕೆಂದು ಅನಿಸಿತಾದರೂ  ಪೋಟೋ ಬೇಕು ಎನ್ನುವ ಹೊತ್ತಿಗೆ ಆ ಜೀವಿ ಕುಕ್ಕರ್ ವಾಹನ ಏರಿ ಹಾರಲು ಗಾಳಿಯ ತೀವ್ರತೆ ಜಾಸ್ತಿಯಾಗುತ್ತಿತ್ತು.ಆದರೂ ವಿಶೇಷ ಸ್ಥಳ ಮತ್ತು ಜೀವಿಯ ಪರಿಚಯ ಅಯಿತು ಎಂಬ ಸಂತಸ ಇತ್ತು.ಇದಾದ ಕೆಲವೇ ದಿನಗಳಲ್ಲಿ ಇಲಾಖೆಯಿಂದ ವಿವಿಧ ರೀತಿಯ experts ಗಳು ತ್ವರಿತವಾಗಿ ಹೊರಡಲು ತಿಳಿಸಿದರು.

ಎಲ್ಲಿಗೆ ಅಂತ ಗೊತ್ತಿಲ್ಲ.. ಆದರೆ ಅದು ತುಂಬಾ ಅಪಾಯಕಾರಿಯಾದ ಕೆಲಸ ಎಂತಲೂ ಮೇಲಾಧಿಕಾರಿಗಳಿಗೆ ಏನಾದರೂ ಸಬೂಬು ಹೇಳಿ ತಪ್ಪಿಸಿಕೊಳ್ಳಬಹುದೆಂದು  ಆರುಷಿಯ ಹತ್ತಿರದ ಹಿತೈಷಿಗಳು ಹೇಳಿದರು. ಆದರೂ ಅದ್ಯಾವುದನ್ನೂ ಮಾಡದೇ ನೋಡುವ ಎಂದು ಹೋಗಿದ್ದ.

ಹಸಿರ ಕಾಡಿನ ಮದ್ಯ ಹಾದು ಬಂದ ಸಮೂಹ ತೆರಳಿದ್ದು ಭೂ ಕುಸಿತದ ಸಾವಿರಾರು ಎಕರೆಯ ಸ್ಥಳ... ಕೆಸರು ಮಯ...!   ಕೆಸರಲ್ಲಿ ಸತ್ತ ಮೀನುಗಳಂತೆ ಕಂಡ ಮನುಷ್ಯರ ಮೃತದೇಹಗಳು..ಗಿಡ ಮರಗಳ ಅವಶೇಷಗಳು...ಆರುಷಿ ಹೋಗಿದ್ದು  ಭೂ ಕುಸಿತದ ಪ್ರವಾಹಕ್ಕೆ ಕೊಚ್ಚಿಹೋದವರ ರಕ್ಷಣೆಗೆ ಮತ್ತು  ಕೆಸರೊಳಗೆ ಮುಚ್ಚಿಹೋದ ಮೃತದೇಹಗಳ ತೆಗೆಯಲು...ಅಲ್ಲಿಗೆ  ಬಂದವರೆಲ್ಲಾ ವಿಪತ್ತಿನಲ್ಲಿ  ತರ್ತು ಪರಿಹಾರ ಒದಗಿಸುವ NDRF ನವರು.ಇನ್ನುಳಿದವರು ಸೈನಿಕರು... ಆದರೆ ಆರುಷಿಯನ್ನು ಅವರಒಔಷದಏಕೆ ಕರೆಸಿದರೋ ಆರುಷಿಗಂತೂ ತಿಳಿಯದು. ಸೇಪ್ಟಿ ಹಗ್ಗ ಹಿಡಿದುಕೊಂಡು ಪ್ರವಾಹದ ಕೆಸರಲ್ಲಿ ಹೋಗುತ್ತಿರುವಾಗ ಸಕ್ರಪ್ಪ ಗುಡ್ಡದಲ್ಲಿ ಕುಕ್ಕರ್  flight ಇಂದ ಬಂದಿಳಿದು ಔಷದಿ ಕೊಟ್ಟ ಗಾಯ ಈಗ  ಎರಡಿಂಚು ಅಗಲಕ್ಕೆ ಕಂಚಿನ ಬಿಲ್ಲೆಯಂತೆ ಆಗಿತ್ತು. ಆಕಸ್ಮಿಕವಾಗಿ ಹಗ್ಗ ಹಿಡಿದುಕೊಂಡು slide ಆಗುತ್ತಿದ್ದ ವೇಳೆಗೆ ಕೈಗಳು long press ಆಗಿ vibration ಶುರು ಆಯಿತು. ಮೈಯೆಲ್ಲಾ ಒಂದು ಕ್ಷಣ ಬೆವರಿದಂತಾಯಿತು. ನೋಡು ನೋಡುತ್ತಲೇ ಅದೇ ಕುಕ್ಕರ್ ಕಾಪ್ಟರ್ ಶ್.... ಎಂಬ ಶಬ್ದದೊಂದಿಗೆ ಅವರಿರುವತ್ತಾ ಬರುತ್ತಿದೆ. ಅಲ್ಲಿದ್ದ ಆರ್ಮಿ betalian ಮುಖ್ಯಸ್ಥರು ಆರ್ಮಿ ಕಾಪ್ಟರ್ ಅಷ್ಟೇ ನಾವು ಕೇಳಿದ್ದು. ಈ ತರ ಕಾಪ್ಟರ್ ನಾವು ಕೇಳಿಲ್ಲ..ಎಂದು ತಮ್ಮಲ್ಲೇ ಸಂಭಾಷಣೆಯನ್ನು ಮಾಡಿಕೊಳ್ಳುತ್ತಿದ್ದರು.ಯಾರಿಗೂ control room ಗೆ ಕಾಲ್ ಮಾಡಿ ಕನ್ಪರ್ಮ್ ಮಾಡಿಕೊಳ್ಳಲು ತಿಳಿಸಿದರು. No.... Its not helicopter sir... But its trying to landing.....

No.... No.... ಎಂದು ಒಬ್ಬ ಸೈನಿಕ ಎರಡೂ ಕೈಗಳನ್ನು ತಿರುವುತ್ತಿದ್ದ.ಇನ್ನೊಬ್ಬ ಯಾರೋ ದೂರದಲ್ಲಿದ್ದ ಸೈನಿಕ ನೋರ್ವ red flag ನ್ನು ಕೈಯಲ್ಲಿ ಹಿಡಿದು ಬೀಸುತ್ತಿದ್ದ. ಆದರೂ ಅದ್ಯಾವುದನ್ನು ಲೆಕ್ಕಿಸದೇ ಆರುಷಿ ಇರುವ ಸಮೀಪದಲ್ಲಿ ನೆಲಕ್ಕೆ ಅದು land ಆಗದೇ ಒಂದೆರಡು ಅಡಿ ಅಂತರದಲ್ಲಿ ನಿಂತು ಬಾಗಿಲು ತೆಗೆದು ಅಂದು ಆರುಷಿಯ ಗಾಯಕ್ಕೆ ಔಷದ ನೀಡಿದ ಜೀವಿ ಇಂದು ಮತ್ತೆ ಬರುತ್ತಿದೆ.rescue ಕೆಲಸವನ್ನು ಮಾಡುತ್ತಿದ್ದ ಅಲ್ಲಿದ್ದವರೆಲ್ಲಾ ಒಮ್ಮೆ ದಂಗಾಗಿ ಅದನ್ನೇ ನೋಡುತ್ತಿದ್ದರು. ಶೂಟ್ ಮಾಡೋಣ ಎಂದರೆ ಅವರತ್ರ ಯಾರಲ್ಲೂ ಗನ್ ಇಲ್ಲ... ಎಷ್ಟು ಜನ who are you ಎಂದರೂ ,ತಡೆದರೂ ಅದು ಯಾರಿಗೂ ಮಾತು ಕೇಳುತ್ತಿಲ್ಲ. ಯಾರೋ ಒಬ್ಬ soldier ಕೈಯಲ್ಲಿ knife  ಹಿಡಿದ. ತಕ್ಷಣಕ್ಕೆ ಆರುಷಿ ಕೂಗುತ್ತಾ... ಬೇಡ  ಅದು ನನ್ನೊಂದಿಗೆ ಮಾತಾಡಲು ಬರುತ್ತಿದೆ ಯಾರೂ ಏನು ಮಾಡಬೇಡಿ ಎಂದು ಕೂಗಿದ... ಆರುಷಿ ಹತ್ತಿರ ಬಂದು ಮೀನಖಂಡದ ಬಳಿ ಇದ್ದ ಕಂಚಿನ ಬಿಲ್ಲೆ ಯನ್ನು ನೋಡುತ್ತಾ ಅವನೊಂದಿಗೆ ಏನನ್ನೋ ಮಾತಾಡಿದ.ಅದು  ಏನು ಮಾತಾಡಿದರೂ   ಎಷ್ಟು ಮಾತಾಡಿದರೂ ಯಾರಿಗೂ ಅರ್ಥ ಆಗುತ್ತಿಲ್ಲ. Military ಮತ್ತು NDRF ಎಲ್ಲರೂ ಅವರನ್ನು ಕಳಿಸು... Operations ಕಷ್ಟ ಆಗತ್ತೆ.. ಎಂದು ಹೇಳುತ್ತಿದ್ದರು... ಪ್ರವಾಹದಲ್ಲಿ ಸತ್ತು ಹೋದ ಶವಗಳ ಬಳಿ ಒಮ್ಮೆ ಹೋಗಿ ಬಂತು. ದೂರದಲ್ಲಿ ತಮ್ಮವರನ್ನು ಕಳೆದುಕೊಂಡು ಅಳುತ್ತಿದ್ದ ಜನರ ಬಳಿಯೂ ಹೋಯಿತು. ಅವರೆಲ್ಲರೂ ಆ ಜೀವಿಯನ್ನು ಅಗೋಚರ ಶಕ್ತಿ ಎಂಬಂತೆ ಕಂಡರು. ಅವರು ಅದರಿಂದ ದೂರ ಸರಿಯುತ್ತಿದ್ದರು. ಅಲ್ಲಿಂದ ಆರುಷಿ ಮತ್ತು NDRF ಅವರು ಹುಡುಕುತ್ತಿದ್ದ ಕಡೆಗೆ ತಿರುಗಿ ಏನೋ ವಾಸನೆ ಹಿಡಿದಂತೆ ಒಂದು ಬಂಡೆಯ ಸಮೀಪ ನಿಂತ ಆರುಷಿಯನ್ನು ಕರೆಯಿತು. ಹೋದರೆ ಅವನಿಗೆ ಜ್ಞ... ಜ್ಞ... ಎಂದು  ಅದೇನೋ ಹೇಳುತ್ತಿದೆ. ಅರ್ಥ ಆಗುತ್ತಿಲ್ಲ. ನಮ್ಮ ವರ್ಣಮಾಲೆಗೆ ಅನುನಾಸಿಕ ಸೇರಿಸಿ ಹೇಳಿದಂತೆ ಕೇಳುತ್ತಿದೆ. ಅರ್ಥವಾಗದೇ ನಿಂತಿದ್ದ ಆರುಷಿಗೆ ಆ ಜೀವಿಯೇ ತನ್ನ ರೆಕ್ಕೆಯಂತ ಕೈಯಿಂದ ಮಣ್ಣನ್ನು ತೋರಿಸಿತು.  ಅಲ್ಲಿನ rescue  in charge ಬಳಿ ಹೋಗಿ "ಸರ್... ಅದು ನಮಗೆ ಖಂಡಿತವಾಗಿ ಸಹಾಯ ಮಾಡುತ್ತದೆ. Please trust me ಸರ್.." ಎಂದು ವಿನಂತಿಸಿಕೊಂಡ. ಒಂದು ನಿಮಿಷ ಯೋಚಿಸಿ JCB ಯಂತ್ರದ operator ಗೆ ಬಂದು ಇಲ್ಲಿ search ಮಾಡುವಂತೆ order ಮಾಡಿದರು. 

ಮಣ್ಣು ಕೆಸರಿನೊಳಗೆ ಊತು ಹೋಗಿದ್ದ ಮೃತದೇಹವನ್ನು ಒಂದೆರಡು ನಿಮಿಷಗಳಲ್ಲಿ ಹುಡುಕಲು ಸಾಧ್ಯವಾಯಿತು. ಎಲ್ಲರೂ ಆ ಕುಕ್ಕರ್ ಜೀವಿಯ ಕೆಲಸಕ್ಕೆ ಚಪ್ಪಾಳೆ ತಟ್ಟಿದರು. ಆ ಜೀವಿ ಬರೀ ವಾಸನೆಯನ್ನು ಗ್ರಹಿಸಿಯೇ ಕಾರ್ಯಚರಣೆಯನ್ನು ಮುಂದುವರೆಸಿತು. ನೀರೋಳಗೆ, ಕೆಸರೊಳಗೆ ಅವಿತಿದ್ದವುಗಳನ್ನು ಬಹಳ ಸುಲಭವಾಗಿ ಗುರುತಿಸುವಂತಾಯಿತು. ಹತ್ತಾರು ಅಡಿ ಮಣ್ಣಿನ ಆಳದಲ್ಲಿ ಮನುಷ್ಯನು ಕಾರ್ಯಚರಣೆಯನ್ನು ಮಾಡಲು ಸವಾಲಾಗಿದ್ದ ಕೆಲಸವನ್ನು ಈ ಜೀವಿ ಕೇವಲ ವಾಸನೆಯನ್ನು  ಗುರುತಿಸಿಯೇ  ಮಾಡಿಬಿಟ್ಟಿತ್ತು...ರಾಡರ್ ಮಾಡದ ಕೆಲಸವನ್ನು ಇದು ಮಾಡುತ್ತಿದೆ.ಅದು ಸಾಧ್ಯವಾಗಿದ್ದು ಆರುಷಿಯ ದೆಸೆಯಿಂದ. ಆಗ ಆರುಷಿಗೆ ಅರ್ಥವಾಯಿತು. NDRF ,ಸೈನಿಕರಿದ್ದ ತಂಡದಲ್ಲಿ ನನ್ನನ್ನು ಯಾಕೆ ಇಲ್ಲಿಗೆ ಕರೆಸಿದರೆಂದು... ಆದರೆ ಇದ್ಯಾವುದನ್ನು ಆರುಷಿ ಪ್ರಪಂಚಕ್ಕೆ ತಿಳಿಸಿಲ್ಲ..ವಿಚಿತ್ರ ಎಂದರೇ ಆ ಕಂಚಿನ ಬಿಲ್ಲೆಯನ್ನು ಒತ್ತಿದರೆ ಈ ಕುಕ್ಕರ್ ಜೀವಿ ಅವನಿಗೆ ಸಹಾಯ ಮಾಡಲು ಬರುತ್ತದೆ ಎಂದು ಸ್ವತಃ ಆರುಷಿಗೂ ತಿಳಿದಿರಲಿಲ್ಲ. ಏಳೆಂಟು ದಿನಗಳ ಕಾಲ್ನಡಿಗೆಯಲ್ಲಿ ಸಕ್ರಪ್ಪ ಗುಡ್ಡಕ್ಕೆ ಹೋಗಿ ಬಂದದ್ದು ಕಾರಣದಿಂದ. ಇಂತಹ ಒಂದು ಜೀವಿಯ ಸಂಪರ್ಕ ಆಯಿತು .ಅದಕ್ಕೂ ಮಿಗಿಲಾಗಿ ಭೂ ಕುಸಿತ , ಪ್ರವಾಹದಂತಹ ಸಂದರ್ಭದಲ್ಲಿ ಇದರ ನೆರವು ಸ್ಮರಣೀಯ. ಆದರೆ ಇದೆಲ್ಲಾ  ಕೇಂದ್ರ ಸರ್ಕಾರದವರಿಗೆ ಹೇಗೆ ತಲುಪಿತು??? ಹೇಗೋ ಹೋಗಲಿ ಬಿಡಿ... ಒಟ್ಟಾರೆ ಒಬ್ಬರಿಂದ ಈ ಜಗಕ್ಕೆ ನೆರವಾದರೆ ಆಯಿತು. ನಾನು ಈ ಕೆಲಸಕ್ಕೆ ಬಂದಿದ್ದುಕ್ಕೂ ಸಾರ್ಥಕ ಆಯಿತೆಂದು ಭಾವಿಸಿದ.ಸರ್ಕಾರಕ್ಕೆ ಈ ಕಾರ್ಯಾಚರಣೆ ಗೆ ಸಹಾಯಕವಾದ ಕುಕ್ಕರ್ ಜೀವಿ, ಅದು ಭೂಮಿಗೆ ಕರೆಸಿದ ಆರುಷಿಯ  ಸೇವೆ ಅನನ್ಯವಾದುದು. ಭೂಕಂಪ,ಭೂ ಕುಸಿತ,ಪ್ರವಾಹದಂತಹ ತುರ್ತುಪರಿಸ್ಥಿತಿಯಲ್ಲಿ ಇವರನ್ನು ಅಗತ್ಯವಾಗಿ ಬಳಸಿಕೊಳ್ಳಬಹುದೆಂದೂ,ಸರ್ಕಾರ ಇವರ ಸೇವೆಯನ್ನು ಗುರುತಿಸಿ ದೇಶದಲ್ಲಿ ಕೊಡಮಾಡುವ ಉನ್ನತ ಪ್ರಶಸ್ತಿಯನ್ನು ಕೊಡಬಹುದೆಂಬ  ವಿಸೃತ ವರದಿಯನ್ನು ನೀಡಿದ್ದರು. ಹಾಗೇ ಮತ್ತೊಂದು ಗಂಭೀರವಾದ ವಿಷಯವನ್ನೂ ಪ್ರಸ್ತಾಪ ಮಾಡಿದ್ದರು. ಅದೆಂದರೇ ಅನ್ಯಗ್ರಹಗಳ ಜೀವಿಗಳನ್ನು ಸಂಶೋಧಿಸಲು ಪ್ರಪಂಚದ ಎಲ್ಲಾ ದೇಶಗಳು ಸಾವಿರಾರು ಕೋಟಿ ಖರ್ಚು ಮಾಡುತ್ತಿರುವಾಗ ಅನ್ಯಗ್ರಹ ಜೀವಿಗಳನ್ನು ಸಂಪರ್ಕಿಸಿಯೂ ಸರ್ಕಾರಕ್ಕೆ  ತಿಳಿಸದೇ ಇದ್ದುದ್ದಕ್ಕೆ ಆರುಷಿಯನ್ನು ತನಿಖೆಗೆ ಒಳಪಡಿಸಿ ಅಗತ್ಯಬಿದ್ದರೆ ಶಿಕ್ಷೆಯನ್ನು ವಿಧಿಸಬಹುದೆಂದು ಶಿಫಾರಸ್ಸು ಮಾಡಿತ್ತು...!

ನಾಗೇಂದ್ರ ಬಂಜಗೆರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..