ಕಾನನ ಸ್ನಾನ...
ಕಾನನ ಸ್ನಾನ.. ಜಪಾನ್ ದೇಶದ ಹೆಸರು ಕೇಳದವರು ಯಾರಿದ್ದಾರೆ??? ಅಂದಾಜು 12 ಕೋಟಿ ಜನಸಂಖ್ಯೆ ಇರುವ ಈ ದೇಶ ಎರಡನೇ ಪ್ರಪಂಚ ಯುದ್ಧದ ನಂತರ ಫಿನಿಕ್ಸ್ ನಂತೆ ಎದ್ದು ಜಾಗತಿಕವಾಗಿ ವಿಶಿಷ್ಟವಾದ ಅಭಿವೃದ್ಧಿ ಆಲೋಚನೆಗಳಿಂದ ತನ್ನ ಅಸ್ತಿತ್ವವನ್ನು ಮಾದರಿಯಾಗಿ ಉಳಿಸಿಕೊಂಡಿದೆ. ಭಾರತೀಯರ ಜೀವಿತಾವಧಿ ಸರಾಸರಿ 65 ರಿಂದ 70 ವರ್ಷವಾದರೆ ಜಪಾನಿಯರ ಜೀವಿತಾವಧಿ ಸರಾಸರಿ 79 ರಿಂದ 90 ವರ್ಷ.! ಅಣು ಬಾಂಬನಿಂದ ನಲುಗಿದ ನಾಡಿನಲ್ಲಿ ಹುಟ್ಟುವ ಜನ ಅದೆಷ್ಟು ವರ್ಷ ಬದುಕಿಯಾರು?? ಜಗತ್ತಿನದ್ಯಂತ ಮಾತಾಡಿದ ಇಂತಹ ಉಡಾಫೆ ಜನಗಳಿಗೆ ಮಾದರಿಯಾಗಿಯೇ ಇದೆ. ಅವರ ಜೀವನಶೈಲಿ, ವೈಜ್ಞಾನಿಕ ಮತ್ತು ಪ್ರಗತಿಪರ ಆಲೋಚನೆ, ಪ್ರಕೃತಿಯೊಂದಿಗಿನ ಸಾಮರಸ್ಯತೆ ಜಪಾನೀಯರನ್ನು ಮತ್ತು ಅವರ ಬದುಕಿನ ಆಯುಷ್ಯವನ್ನು ಭಾರತೀಯರಿಗಿಂತಲೂ, ಇನ್ನಿತರ ದೇಶಗಳಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಸುಧಾರಿಸಿದೆ. ಅಂತದ್ದೊಂದು ಆಚರಣೆಗಳಲ್ಲಿ ಜಪಾನಿಯರು ನಂಬಿರುವಂತಹ ಒಂದು ಪ್ರಕೃತಿ ಚಿಕಿತ್ಸೆ ಎಂದರೆ ಅದು ಅರಣ್ಯ ಸ್ನಾನ. ಅರಣ್ಯ ಸ್ನಾನ ಎಂದರೇ ಪಂಚೇಂದ್ರಿಯಗಳ ಮೂಲಕ ಅರಣ್ಯದ ಆಗುಹೋಗುಗಳನ್ನು ನೈಜವಾಗಿ ಅನುಭವಿಸುವುದು. ಅಂದರೆ ಹಸಿರು ಸಮೃದ್ಧಿಯ ಅಸ್ವಾದನೆ, ಶುದ್ಧ ಆಮ್ಲಜನಕ ಸೇವನೆ, ಪಕ್ಷಿಗಳ ಕಲರವ ಆಲಿಸುವಿಕೆ ಇತ್ಯಾದಿ. ನನಗೇನು 90 -100 ವರ್ಷ ಬದುಕುವ ಆಸೆ ಇಲ್ಲವಾದರೂ ಹೆಚ್ಚು ನಡೆಯದೆ ಜಡವಾಗಿರುವ ದೇಹಕ್ಕೆ ಒಂದಷ್ಟು ಕೆಲಸ ಕೊಡಲ...