ಪೋಸ್ಟ್‌ಗಳು

ಸೆಪ್ಟೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಾಸ್ಟೆಲ್ to ಧರ್ಮಸ್ಥಳ...

ಇಮೇಜ್
ಹಾಸ್ಟೆಲ್ ಟು ಧರ್ಮಸ್ಥಳ..  ಸುಮಾರು ಮುವತ್ತೈದು ನಲವತ್ತು ವರ್ಷದ ಆಸುಪಾಸಿನವರು.ತಮ್ಮ ತಲೆಯನ್ನು ಬೋಳು ಮಾಡಿಸಿ,ಕೈಗೆ ಮತ್ತು ಕೊರಳಿಗೆ ವಿವಿಧ ಬಣ್ಣದ ದಾರಗಳನ್ನು ಕಟ್ಟಿದ್ದಾರೆ. ಲುಂಗಿ ಮತ್ತು ಬಿಳಿಯ ಬನಿಯನ್,ಅದರ ಮೇಲೊಂದು ಕೆಂಪನೆಯ ಟವೆಲ್..ಆ ಸ್ಥಳದ ಪಯಣದ ಬಗ್ಗೆ ಸಿಕ್ಕಸಿಕ್ಕವರಲ್ಲಿ ಚಂದ್ರಲೋಕಕ್ಕೇ ಹೋಗಿ ಬಂದ ಸಾಧನೆಗೂ ಮಿಗಿಲಂತೆ ಹೇಳುತ್ತಿದ್ದರು. ಅವರು ಹೇಳುತ್ತಿದ್ದ ಸಾರಾಂಶ ಏನೆಂದರೇ  "ಆ  ದೇವರ ಊರಿಗೆ ರಸ್ತೆಯನ್ನು ಮಾಡಲು ಸಾಕ್ಷತ್ ಹಾವೊಂದು ಹರಿದುಹೋಗಿ,ಅದು ಹೇಗೆ ಹೋಗಿತ್ತೋ ಹಾಗೇ ರಸ್ತೇ ಮಾಡಿದ್ದಾರಂತೆ ಅದಕ್ಕೇ ಆ ಊರಿಗೆ ಹೋಗುವ ರಸ್ತೆ ಸೊಟ್ಟಂಬಟ್ಟ  ತಿರುವುಗಳಿಂದ ಕೂಡಿದೆಯಂತೆ, ಸುತ್ತಲೂ ದಟ್ಟವಾದ ಅರಣ್ಯದಿಂದ ಕೂಡಿದೆ. ಆ ರಸ್ತೆಯಲ್ಲಿ  ಎತ್ತಿನಗಾಡಿ ಹೋಗವುದೇ ಇಲ್ಲ. ಅಲ್ಲಿಗೆ ಹೋಗಿ ತಲುಪುವುದೇ ಒಂದು ಸಾಹಸವಂತೆ" ಆ ರಸ್ತೆಯಲ್ಲಿ ಪಯಣ ಶುರು ಮಾಡುವಾಗ ಉಂಡು ಪಯಣಿಸಿದರೆ ತಲೆತಿರುಗಿ, ಉಂಡಿದ್ದೆಲ್ಲವಾ ಕಕ್ಕಿ, ಸುಸ್ತಾಗಿ ಮಲಗುವುದು ಕಾಯಂ.. ಹಾಗೆ ಪಯಣಿಸುವ ವಾಹನವು ಸ್ವಲ್ಪವೂ ಹೆಚ್ಚು ಕಮ್ಮಿ ಆಗಿ ಕೆಳಗೆ ಉರುಳಿದರೆ  ಜನರ ಮೂಳೆಗಳು ಪುಡಿ ಪುಡಿ..!ಒಂದೂ ಮೂಳೆನೂ ಸಿಗಲ್ಲ."  - ಹೀಗೆಂದು ನನ್ನ ಹನ್ನೊಂದು ಹನ್ನೆರಡು ವಯಸ್ಸಿನ ಬಾಲ್ಯದ ದಿನಗಳಲ್ಲಿ  ಧರ್ಮಸ್ಥಳಕ್ಕೆ ಹೋಗಿ ಬಂದಿದ್ದ  ಮಾರಪ್ಪ  ಎಂಬ ಹಿರಿಯ ವ್ಯಕ್ತಿ ನನಗೆ ಹೇಳಿದ್ದು.ನನಗಷ್ಟೇ...

ಆತ್ಮಹತ್ಯೆಯ ಮನಸ್ಸುಗಳೊಂದಿಗೆ...STOP SUICIDE..

ಇಮೇಜ್
ಆತ್ಮಹತ್ಯೆ ಮನಸ್ಸುಗಳೊಂದಿಗೆ.. ಇಪ್ಪತ್ತೆಂಟು ಮೂವತ್ತು ವರ್ಷಗಳ ಹಿಂದಿನ ನೆನಪು.ನನಗೆ ಆರೇಳು ವರ್ಷಗಳಿರಬಹುದು. ನಾನು  ಅಪ್ಪ ಹೊಲದಲ್ಲಿ ಓಡಾಡುತ್ತಿದ್ದೆವು.ಅಪ್ಪ ಅಲ್ಲಲ್ಲಿ ಎತ್ತರವಾಗಿ ಬೆಳೆದ ಕಳೆಸಸ್ಯ ಕಿತ್ತಾಕುತ್ತಿದ್ದರೆ ನನಗೆ ಆ ಶೇಂಗಾ ಗಿಡಗಳ ಮದ್ಯೆ ಓಡಾಡುವುದೇ ಖುಷಿಯಾಗಿತ್ತು.ನಮ್ಮ ಪಕ್ಕದ ಹೊಲದ ತಿಪ್ಪೇಸ್ವಾಮಿ ಅವಸರ ಅವಸರದಿಂದ ಏನೋ ಕಳೆದುಕೊಂಡವರಂತೆ ಬಂದರು.  ಅಪ್ಪಾಜಿ ಹತ್ತಿರ ಬಂದು "ಎಂಥಾ ಅನ್ಯಾಯ ಆಯಿತು ತಿಮ್ಮಣ್ಣ.." " ಕೆಂಗಣ್ಣ ಮೇಷ್ಟ್ರುದು ಬಾರೀ ಅನ್ಯಾಯ ಆಗೋಯಿತು  ಹಂಗಾಗಬಾರದಾಗಿತ್ತು ತ್ಚೊ...ತ್ಚೊ..." ಎಂದರು..   "ಹ್ಞು ನೋಡಪ್ಪ ತಿಪ್ಪೇಸ್ವಾಮಿ  ಮಗಳ ಮದುವೆಯ ದಿನವೇ ಹಂಗೆ ಮಾಡಿಕೊಳ್ಳಲು ಏನು ಕಾರಣ ಇತ್ತೋ ಅವರಿಗೂ ಆ ಪರಮಾತ್ಮನಿಗೂ ಇಬ್ಬರಿಗೆ ಮಾತ್ರ ಗೊತ್ತು"  ಬಹಳ ಸಾಲ ಮಾಡಿ ಮದುವೆಗೆ ಹೋಜು ಮಾಡಿದ್ರಂತೆ ತಿಮ್ಮಣ್ಣ..  "ಅನ್ಯಾಯ ಅನ್ಯಾಯ ಬಾರೀ ಅನ್ಯಾಯ.." ಸಾಲ ಮಾಡಿದ್ರೇನಂತೆ ಈ ವರ್ಸಲ್ಲ ಮುಂದಿನ ವರ್ಸ ತೀರ್ಸಬಹುದಿತ್ತು. ಅಂತವರೇ ಹಂಗಾದರೇ ನಮ್ಮಂತವರ ಗತಿ ಏನು    ಎಂದು ಪರಸ್ಪರ ಮಾತಾನಾಡಿಕೊಳ್ಳುತ್ತಿದ್ದರು..  ನನಗೆ ಅಂದು ವಿಷಯದ ಗಂಭೀರತೆ ಅರ್ಥ ಆಗಿರಲಿಲ್ಲ. ಅದಾದ ನಾಲ್ಕಾರು ದಿನಗಳಲ್ಲಿ   ನಮ್ಮ ಅಕ್ಕಪಕ್ಕದ ಹೊಲದ ಇನ್ನೊಬ್ಬರು "ನೋಡು ಕೆಂಗಣ್ಣ ಮೇಷ್ಟ್ರು  ಜನರಿಗೆಲ್ಲಾ ಏನು ಒಳ್ಳೆಯದು ಮಾಡಿದ್ದರೂ ಕೊನೆಗೆ ತಮ್ಮ ಜ...

ಭೂಮಿಯ ಮೇಲೆ ಜೇನುಹುಳುಗಳ ಪ್ರಾಮುಖ್ಯತೆ..

ಇಮೇಜ್
ಭೂಮಿಯ ಮೇಲೆ ಜೇನುಹುಳುಗಳ ಪ್ರಾಮುಖ್ಯತೆ..   ಬಾಲ್ಯದಿಂದಲೂ ನನ್ನದು ಮೂಲತಃ ಜೇನು ಕೀಳುವುದೇ ಕೆಲಸ ಆಗಿತ್ತು.ಐದಾರನೇ ವಯಸ್ಸಿನಿಂದಲೇ ಆರಂಭವಾದ ಈ ಅಭ್ಯಾಸ ಇಲ್ಲಿಯವರೆಗೆ ನಾನು ಕನಿಷ್ಟ ಸುಮಾರು ಹತ್ತುಸಾವಿರ ಜೇನು ಬಿಡಿಸಿರಬಹುದು. ಆ ಅನುಭವದ ಹಿನ್ನೆಲೆಯಲ್ಲಿ ಈ ಅಖಂಡ ಭೂ ಪ್ರದೇಶದ ಮೇಲೆ ಜೇನುಹುಳಗಳು ಭೂಮಿಯ ಮೇಲೆ ಇರದಿದ್ದರೆ ಏನಾಗುತ್ತಿತ್ತು?ಜೇನುಹುಳಗಳಿಗೂ ಮತ್ತು ಈ ಭೂಮಿಯ ಜೀವರಾಶಿಗಳ ಆಹಾರದ ಮೇಲಿನ ಸಂಬಂಧ ಹೇಗಿದೆ  ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ..  ಜೇನುಹುಳುಗಳು ಸುಮಾರು 6000 ವರ್ಷಗಳ ಹಿಂದೆ ಉಗಮ ಆಗಿರಬಹುದು. ಮನುಷ್ಯನ ಉಗಮಕ್ಕಿಂತಲೂ ಮೊದಲೇ ಜೇನುನೊಣಗಳು ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದವು. ಜೇನುತುಪ್ಪ ಭೂಮಿಯ ಮೇಲಿನ ಕೀಟಗಳು ತಯಾರಿಸುವ ಅದ್ಭುತ ವಸ್ತು ಅಂತನೇ ಹೇಳಬಹುದು. ಇದರಲ್ಲಿರುವ ವ್ಯಾಪಕ ಔಷದೀಗುಣಗಳು  ಬಹಶಃ ಮಾನವ ನಿರ್ಮಿತ ಯಾವದ್ರವದಲ್ಲೂ ಇಲ್ಲ. ಆದ್ದರಿಂದನೇ ಈ ಆಂಗ್ಲ ಮೆಡಿಸಿನ್ ಬರುವ ಮುನ್ನ ಪ್ರತಿಮನೆಯಲ್ಲೂ ಜೇನುತುಪ್ಪ ಅಗತ್ಯ ಮತ್ತು ಕಡ್ಡಾಯವಸ್ತು ಆಗಿಯೂ, ಶಾಸ್ತ್ರವೆಂಬಂತೆ ಒಂದೆರಡು ಹನಿಯಷ್ಟಾದರೂ ಇದ್ದೇ ಇರುತ್ತಿತ್ತು. ಕೇವಲ ಭಾರತದಲ್ಲಿ ಅಷ್ಟೆ ಅಲ್ಲ ಪ್ರಾಚೀನ  ಈಜಿಪ್ಟ್,ಸುಮೇರಿಯನ್ನರು ಹೀಗೆ ಹಲವು ನಾಗರೀಕತೆಯ ಆರಂಭದಿಂದಲೂ ಇದನ್ನು ಬಳಸುತ್ತಾ ಬಂದಿದ್ದಾರೆ. ಅಧ್ಯಯನದ ಪ್ರಕಾರ ಇತಿಹಾಸ ನೋಡಿದರೆ ಪುರಾತತ್ವಶಾಸ್ತ್ರಜ್ಞರು ಪ್ರಾಚೀನ ಈಜಿಪ್ಟಿನ...

ಸಸ್ಯಗಳ ಸಂವಹನ ಮತ್ತು ಪರಿಣಾಮ

ಇಮೇಜ್
ಸಸ್ಯಗಳ ಸಂವಹನ ಮತ್ತು ಪರಿಣಾಮ. ಸಸ್ಯಗಳಿಗೆ ಅತ್ಯುತ್ತಮವಾದ ಸಂವಹನ ಮತ್ತು ಶತ್ರುಗಳ ದಾಳಿಯಾದಾಗ ಅವು ಹೇಗೆ ತಮ್ಮೋಳಗೆ ಪ್ರತಿಕ್ರಿಯಸಲ್ಪಡುವವು ಎಂಬುದನ್ನು ನಾ ಕಂಡಂತೆ ತಿಳಿಸಲು ಪ್ರಯತ್ನಿಸುವೆ. ಪ್ರಕರಣ-1 ನಾನು ಬಾಲ್ಯದಲ್ಲಿ ದನಗಳ ಮೇಯಿಸಲು ಹೋಗುತ್ತಿದ್ದೆ.ಏಪ್ರೀಲ್ ಮೇ ತಿಂಗಳುಗಳಲ್ಲಿ ನಮ್ಮ ದನಗಳಿಗೇ ತಿನ್ನಲೂ ಏನೂ ಸಿಗದೇ  ಕೆಲವೇ ದಿನಗಳ ಹಿಂದೆ ಆಗತಾನೇ ಚಿಗುರಿದ ಹೊಂಗೆಯ  ಎಲೆಗಳನ್ನು ತರಿದು ತಂದು ಹಾಕುತ್ತಿದ್ದೆವು.ಅವು ಪ್ರಾರಂಭದಲ್ಲಿ ಸ್ವಲ್ಪಮಟ್ಟಿಗೆ ಖುಷಿಯಿಂದಲೇ ತಿಂದು ಆಮೇಲೆ ನಿರುತ್ಸಹದಿಂದ ಬೇರೆ ಐಟಂ ತಂದು ಹಾಕುವರೋ ಎಂದು ಎದುರುನೋಡುತಿರುತಿದ್ದವು.ಹುಲ್ಲಿನ ಬುಡದಲ್ಲಿ ಅಳಿದುಳಿದ ಹಲ್ಲಲ್ಲಿ ಸಿಕ್ಕಿಸಲು ಬಳಸುವ ಕಡ್ಡಿಯಂತಹವುಗಳನ್ನೂ ಬಿಡದೇ ತಿನ್ನುತ್ತಿದ್ದವು.ಮುಂಗಾರು ಹಿಂದೆ ಮುಂದೆ ಸ್ವಲ್ಪಮಟ್ಟಿಗೆ ಮಳೆ ಆದರೆ ಚಿಗುರಿದ ಹಸಿ ಹುಲ್ಲನ್ನು ಒಂದೇ ವಾರದಲ್ಲಿ ಮಿಡತೆಗಳು ಮತ್ತು ಪಶುಗಳು ಸ್ಪರ್ಧೆಗೆ ಇಳಿದವರಂತೆ ತಿಂದು ಖಾಲಿ ಮಾಡುತ್ತಿದ್ದವು. ಮಳೆ ನಿರಂತರ ಇದ್ದರೆ ಹುಲ್ಲೂ ಸಿಗುತ್ತಿತ್ತು ಇಲ್ಲವಾದರೆ ಆಗಲೂ ಹೊಟ್ಟೆ ತುಂಬಾ ಹುಲ್ಲು ಇಲ್ಲ.ಬಹಳ ವರ್ಷಗಳ ಕಾಲ ನಾವು ಕುಂಟೆ ಕಟ್ಟಿ ಚಿಗುರಿದ ಹುಲ್ಲನ್ನು ಹರಗಿಕೊಂಡು ಬಂದು ಮೇಯಿಸಿರುವ ಉದಾಹರಣೆ ಇದೆ. ಆದರೆ ಆಗತಾನೇ ಹರಗಿಕೊಂಡು ತಂದು ಹಾಕಿದ ಹುಲ್ಲನ್ನು ಅವು ಬಹಳ ಹೊತ್ತು ಇಷ್ಟಪಟ್ಟು ತಿನ್ನುತ್ತಲಿರಲಿಲ್ಲ.  ಪ್ರಕರಣ-2 ಆಗಸ್ಟ್ ಸೆಪ್ಟೆಂ...

ಜೇನಿನ ಉಪಯೋಗಗಳು...

ಇಮೇಜ್
ಸವಿಜೇನು Part-6 ಜೇನಿನ ಉಪಯೋಗಗಳು  ಜೇನುಹುಳುಗಳು ಸುಮಾರು 6000 ವರ್ಷಗಳ ಹಿಂದೆ ಉಗಮ ಆಗಿರಬಹುದು. ಮನುಷ್ಯನ ಉಗಮಕ್ಕಿಂತಲೂ ಮೊದಲೇ ಜೇನುನೊಣಗಳು ಈ ಭೂಮಿಯಮೇಲೆ ಅಸ್ತಿತ್ವದಲ್ಲಿದ್ದವು.ಜೇನುತುಪ್ಪ ಭೂಮಿಯಮೇಲೆ ಕೀಟಗಳು ತಯಾರಿಸುವ ಅದ್ಬುತ ವಸ್ತು ಅಂತನೇ ಹೇಳಬಹುದು. ಇದರಲ್ಲಿರುವ ಔಷದೀಗುಣಗಳು ಮಾನವ ನಿರ್ಮಿತ ಯಾವದ್ರವದಲ್ಲೂ ಇಲ್ಲ. ಆದ್ದರಿಂದನೇ ಪ್ರತಿಮನೆಯಲ್ಲೂ ಜೇನುತುಪ್ಪ ಅಗತ್ಯ ಮತ್ತು ಕಡ್ಡಾಯವಸ್ತು ಆಗಿತ್ತು. ಕೇವಲ ಭಾರತದಲ್ಲಿ ಅಷ್ಢೆ ಅಲ್ಲ ಪ್ರಾಚೀನ ನಾಗರೀಕತೆಯ ಆರಂಭದಿಂದಲೂ ಇದನ್ನು ಬಳಸುತ್ತಾ ಬಂದಿದ್ದಾರೆ. ಶೇ.೩೦% ಸುಮೇರಿಯನ್ನರ ವೈದ್ಯಕೀಯ ಚಿಕಿತ್ಸೆಗಳಲ್ಲಿ ಜೇನು ತುಪ್ಪದ ಬಳಕೆಯಿತ್ತು. ಭಾರತದಲ್ಲಿ, ಜೇನುತುಪ್ಪವು, ಪುರಾತನ, ಪ್ರಾಚೀನ ಸಾಂಪ್ರದಾಯಿಕ ಔಷಧಗಳಾದ ಸಿದ್ಧ ಮತ್ತು ಆಯುರ್ವೇದದ ಪ್ರಮುಖ ಭಾಗವಾಗಿದೆ. ಪ್ರಾಚೀನ ಈಜಿಪ್ಟ್‍ನಲ್ಲಿ ಇದು ಚರ್ಮ ಮತ್ತು ಕಣ್ಣಿನ ರೋಗಗಳನ್ನು ನಿರ್ವಹಿಸುವಲ್ಲಿ ಹಾಗೂ ಹುಣ್ಣುಗಳು, ಸುಟ್ಟ ಗಾಯಗಳ ಮೇಲೆ ಹಾಕುವಂತಹ ಒಂದು ನೈಸರ್ಗಿಕ ಬ್ಯಾಂಡೇಜ್ ಆಗಿಯೂ ಬಳಸಲಾಗುತ್ತಿತ್ತು. ಸುಟ್ಟಗಾಯಗಳಿಗೆ ಜೇನುತುಪ್ಪ ಹಚ್ಚುವಿದರಿಂದ ಬೊಬ್ಬೆ ಬರದೇ ಮುಖ ಇನ್ನೀತರೇ ಭಾಗಗಳಲ್ಲಿ ಕಲೆ ಆಗುವುದಿಲ್ಲ.ಇತರ ಹಲವಾರು ಸಂಸ್ಕೃತಿಗಳು ಕೂಡ, ವಿವಿಧ ವೈದ್ಯಕೀಯ ಉದ್ದೇಶಗಳಿಗಾಗಿ ಜೇನುತುಪ್ಪವನ್ನು ಬಳಸಿಕೊಂಡಿವೆ. ಇಂದು, ಜೇನುತುಪ್ಪವು ವೈದ್ಯಕೀಯ ಸಮುದಾಯದ ವೈಜ್ಞಾನಿಕ ಸಂಶೋಧನೆಯ ಕೇಂದ್ರಬಿಂದುವ...

ಜೀರಂಗಿ (Jewel beetle)

ಇಮೇಜ್
ಜೀರಂಗಿ..( Jewel Beetle)  ಈ ಹಳ್ಳಿ ಹುಡುಗರಿಗೆ  ಜೀರಂಗಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ??ಎಲ್ಲಾರ ಬಾಲ್ಯದ ಸಂಗಾತಿ,ಮೃದ್ವಂಗಿಯಲ್ಲದ,ಕೆಂಪು ಅಂಗಿ ಅಥವಾ ಹಸಿರು ಅಂಗಿ ತೊಟ್ಟಿರುವ, ಚಿಣ್ಣರ  ಆಟದ ಸಾಮಾನು..               ಕೆಮ್ಮಣ್ಣು ಜೀರಂಗಿ  ತೊಂಭತ್ತರ ದಶಕದಲ್ಲಿ ಮಳೆಗಾಲದಲ್ಲಿ ನಮಗೆ ಇದ್ದ ಇಂಟರೆಸ್ಟಿಂಗ್ ಮತ್ತು ಆಟದ ಜೀವಂತ  ಏಕೈಕ ವಸ್ತು ಎಂದರೆ ಅದು ಜೀರಂಗಿ ಮಾತ್ರ.ಈಗಿನ ಮಕ್ಕಳ ರೀತಿಯಲ್ಲಿ ವೆರೈಟಿ ಆಟದ ವಸ್ತುಗಳು ಇರಲಿಲ್ಲ..ಯಾವುದೋ ಆಯತಾಕಾರದ ಇಟ್ಟಿಗೆಯೇ ನಮಗೆ ಲಾರಿ ಬಸ್ಸು, ತುಂಡಾದ ಅರ್ಧ ಭಾಗವೇ ಟ್ರಾಕ್ಟರ್ ಕಾರು ಜೀಪ್ ಎಲ್ಲವೂ ಆಗಿತ್ತು. ಇಂತಹವುಗಳ ಮದ್ಯೆ ಆಟದ  ಜೀವಂತ ವಸ್ತುಗಳೆಂದರೆ ಒಂದು ನಾಯಿ ಇನ್ನೊಂದು ವರ್ಷಕ್ಕೊಮ್ಮೆ ಬಂದು ಹೋಗುವ ಜೀರಂಗಿ ಆಭರಣ ಸುಂದರಿ ಈ ಜೀರಂಗಿ. ನಮ್ಮದು ತೋಟದ ಮನೆ. ಶನಿವಾರ ಭಾನುವಾರ ನಾನು ನನ್ನ ತಮ್ಮ ಮನೆಯಲ್ಲಿಯೇ ಇರುತ್ತಿದ್ದೆವು. ಜುಲೈನ ಕೊನೆಯ ದಿನಗಳಿಂದ ಆರಂಭವಾಗುತ್ತಿದ್ದ ಈ ಜೀರಂಗಿಗಳು ಎಲ್ಲಿಯಾದರೂ  ಒಂದೇ ಒಂದು ಹಾರಾಡುವುದು ಕಂಡರೂ ಜೀರಂಗಿ ಬಂದಾವೇ ಎಂದು ಕೂಗಾಡಿ ಸಂಭ್ರಮ ವಿಜೃಂಬಿಸುತ್ತಿತ್ತು.ಹಾಗೆ ಅವುಗಳನ್ನು ಹುಡುಕುವ ಕಾರ್ಯವೂ ಶುರುವಾಗುತ್ತಿತ್ತು.ನಮಗಾಗ ಮನೆಕಾಯುವುದೇ ಕೆಲಸ. ಮನೆಯ ಪಕ್ಕ ಮುನ್ನೂರು ಮೀಟರ್ ದೂರಕ್ಕೆ 'ಬಯಲುತಿಮ್ಮಪ್ಪ'ಎಂಬ ದೇವಸ್ಥಾನ. ಅದರ ಪ...

ಅಣಬೆ..ಅಣಬೆ..ಅಣಬೆ...

ಇಮೇಜ್
ಅಣಬೆ ಅಣಬೆ ಅಣಬೆ..  ನನಗೆ ಸರಿಯಾಗಿ ನೆನಪಿದೆ ಆಗ ನನಗೆ ಎಂಟೊಂಬತ್ತು ವರ್ಷ ಇತ್ತು.  ಮದ್ಯರಾತ್ರಿ "ಅಮ್ಮ ಅಮ್ಮ "ಎಂದು ಮಲಗಿದ್ದವರನ್ನು ಎಬ್ಬಿಸಿದೆ.  ಏನಪ್ಪ ?ಎಂದರು ಅಮ್ಮ  "ಅಮ್ಮ ಹೊಟ್ಟೆ ಹಸಿತಿದೆ." ತಡಬಡಿಸಿ ಎದ್ದ ಅಮ್ಮ ರಾತ್ರಿ ಉಳಿದಿದ್ದ ಅರ್ಧ ಮುದ್ದೆ ಇಟ್ಟು ಅಣಬೆ ಸಾರು ಹಾಕಿ ಕೊಟ್ಟಿದ್ದರು‌. ನನಗೆ ಅಂದು ನಿಜವಾಗಲೂ ಹೊಟ್ಟೆ ಹಸಿವಾಗಿರಲಿಲ್ಲ. ಅಂದು ರಾತ್ರಿ ತಿಂದಿದ್ದ ಅಣಬೆ ತೃಪ್ತಿಯಾಗಿರಲಿಲ್ಲ ಅದಕ್ಕೆ ಮದ್ಯರಾತ್ರಿ ಕೇಳಿ ತಿಂದಿದ್ದೆ! ಬಾರೀ ಇದೀರಾ ನೀವು.ಎರಡು ಅಣಬೆ ತಿನ್ನಲು ಮದ್ಯರಾತ್ರಿ ಅಮ್ಮನಿಗೆ ಇಷ್ಟೆಲ್ಲಾ ಕಾಟ ಕೊಟ್ಟಿರಾ ಎಂದು ಬಯ್ಯುತ್ತಿದ್ದೀರಲ್ಲಾ ನೀವು?? ಹೌದು ಮಾರ್ರೆ ಆಗಲೂ ಈಗಲೂ ಈ ಅಣಬೆಗಳು ಅಂದರೆ ನನಗೆ ಭಲೇ ಇಷ್ಟ. ಅದಕ್ಕಾಗಿ ನಾನು ಕಳೆದ ಇಪ್ಪತ್ತು ಇಪ್ಪತ್ತೈದು ವರ್ಷಗಳಿಂದ ಇಂದಿನವರೆಗೆ  ಮಳೆಗಾಲದಲ್ಲಿ ನಿರಂತರ ವಾಗಿ ಅಣಬೆಗಳನ್ನು ಹುಡುಕಿಕೊಂಡು ಹೋಗುತ್ತಿದ್ದೆನೆ. ನನ್ನವು ಅದ್ಯಾವ ಕಣ್ಣುಗಳೋ ಗೊತ್ತಿಲ್ಲ ಕೆಲವರು ಅವುಗಳ  ಮಗ್ಗುಲಲ್ಲಿ ಹೋದರೂ,ಅಷ್ಟೇ ಏಕೆ ಕೆಲವರು  ಅವುಗಳನ್ನು ತುಳಿದುಕೊಂಡು ಹೋಗಿದ್ದರೂ ಅವರ ಕಣ್ಣಿಗೆ ಬೀಳದ ಈ ಅಣಬೆಗಳು ನನ್ನ ಕಣ್ಣಿಗೆ ಮಾತ್ರ ಸಲೀಸಾಗಿ ದೂರದಿಂದಲೇ ಕಾಣುತ್ತಿದ್ದವು.ನಾನು ಅಣಬೆ ಹುಡುಕಲು ಹೋದರೆ  ಅಂದು ಬಹುತೇಕ ಅಣಬೆಗಳು ಅಂದು ಸಿಕ್ಕೇ ಸಿಗುತ್ತಿದ್ದವು. ಈ ಅನುಭವದಲ್ಲಿ ಅಣಬೆಗಳ ಬಗ್ಗೆ ಒಂದಷ್ಟು ...

ನಾ ನಾಸ್ತಿಕನಾಗಿದ್ದು...

ಇಮೇಜ್
ನಾ ನಾಸ್ತಿಕನಾಗಿದ್ದು...  ನನ್ನ ಬಾಲ್ಯದ ಆರಂಭದ ದಿನಗಳು.ಪ್ರತಿದಿನ ನಮ್ಮ ತಂದೆಯವರು ಸ್ನಾನದ  ನಂತರ ಊದಿನ ಕಡ್ಡಿ ಹಿಡಿದು ಸೂರ್ಯನಿಗೆ  'ಸ್ವಾಮಿ  ದೇವ ಶ್ರೀಕೃಷ್ಣ ಪರಮಾತ್ಮ  ಕಾಪಾಡಪ್ಪ' ಎಂದು ಕೈ ಮುಗಿಯುತ್ತಿದ್ದರು.ಸೂರ್ಯನೇ ಶ್ರೀಕೃಷ್ಣನಾಗಿದ್ದಾನೆ ಎಂದು ಭಾವಿಸಿದ ನಾನು ಕಾಲ ಕ್ರಮೇಣ ಮರಗಿಡಗಳ ಬುಡಕ್ಕೆ ಗುಂಡು ಕಲ್ಲು ಇಟ್ಟು,ಅರಿಶಿಣ ಕುಂಕುಮ ಹಚ್ಚಿ ಪೂಜಿಸುವ ಆಚರಣೆ ನನಗೆ ಸೋಜಿಗ ಅನಿಸಿತ್ತು.ಹಿರಿಯರೊಂದಿಗೆ ಹೋಗಿ ಬರುತ್ತಿದ್ದ ನಾನು ಎಲ್ಲೋ ಈ ದೇವರುಗಳು ಇರುತ್ತಾರೆ ಯಾವಾಗಲಾದರೂ ಒಮ್ಮೆ ನೆಂಟರ ಹಾಗೆ ಮನೆಗೆ ಬಂದು ಹೋಗುತ್ತಾರೆ. ಕುಚೇಲನ ಗುಡಿಸಲು ಶ್ರೀ ಕೃಷ್ಣನ ಅನುಗ್ರಹದಿಂದ ಅರಮನೆಯಾದಂತೆ ನಮ್ಮ ಗುಡಿಸಲು ಕೂಡ ಅರಮನೆಯಲ್ಲದಿದ್ದರೂ ಒಂದು ದೊಡ್ಡಮನೆ ಆ ದೇವರು ನೀಡುವರೆಂದು ಭಾವಿಸಿದ್ದೆ. ಬಿತ್ತುವಾಗ,ಕೊಯ್ಯುವಾಗ, ಒಳ್ಳೆಯದು ಕೆಟ್ಟದ್ದು ಆದಾಗ ಮೊದಲು ಸ್ಥಳೀಯ ದೇವರ ಬೇವಿನ ಮರಗಳ ಕಟ್ಟೆಗಳಿಗೆ ಪೂಜಿಸಿ  ಕೆಲಸ ಆರಂಭ ಮಾಡುವುದು ವಾಡಿಕೆಯಾಗಿತ್ತು.ಮನೆಯಲ್ಲಿ ವಿಶೇಷವಾಗಿ ದೇವರ ಕೋಣೆಯೂ ಇಲ್ಲದಿದ್ದರೂ ಕಳೆದ ಇಪ್ಪತ್ತು ವರ್ಷಗಳ ಹಿಂದೆ ತಿರುಪತಿ ತಿಮ್ಮಪ್ಪ, ಶಿವ ಪಾರ್ವತಿ ಹೀಗೆ ನಾಲ್ಕೈದು ಪೋಟೋಗಳ ತಂದು ಮನೆಯಲ್ಲಿ ಹಾಕಿ ಅಪರೂಪಕ್ಕೆ ತಿಳಿದಂತೆ ಪೂಜೆಮಾಡುವ ಪದ್ದತಿಯೂ ನಮ್ಮ ಮನೆಯಲ್ಲಿತ್ತು.  ಪೋಟೋದಲ್ಲಿರುವ ದೇವರು ಯಾವತ್ತೂ ನನಗೆ ಕಾಣಲಿಲ್ಲವಾದರೂ,ನಮ್ಮ ಊರಿನಲ್ಲಿರುವ...