ಪೋಸ್ಟ್‌ಗಳು

ಸೆಪ್ಟೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬೇರೆಯವರು ಬಿದ್ದಾಗ(ಸೋತಾಗ) ನಾವು ನಗುವುದೇಕೆ??

ಇಮೇಜ್
ಯಾರಾದರೂ ಬಿದ್ದಾಗ(ಸೋತಾಗ) ನಾವು ನಗುವುದೇಕೆ?? low we iosl ನಾಲ್ಕೈದು ವರ್ಷಗಳ ಹಿಂದೆ ಪರಿಚಿತರೊಬ್ಬರ  ಮಗಳ ಮದುವೆಗೆ  ನಾವು ಹೋಗಿದ್ದೆವು.  ಅಂದು ನಾವು ಹೋಗಿದ್ದು ತಡವಾಗಿತ್ತಾದರೂ  ಛತ್ರವು ಕೆಲವೇ ಅಡಿಗಳ ದೂರದಲ್ಲಿರುವಾಗ   ಪರಿಚಿತ ಶಿಕ್ಷಕರೊಬ್ಬರು  ತಮ್ಮ ಪಲ್ಸರ್ ಬೈಕ್ ಪಕ್ಕ ನಿಂತಿದ್ದವರು ನೋಡು ನೋಡುತ್ತಲೇ  ದೊಡ್ಡ ಚರಂಡಿಗೆ ಬಿದ್ದರು. ಪಲ್ಸರ್ ಬೈಕ್ ಚರಂಡಿಯ ಪಕ್ಕದಲ್ಲಿ ಬಿದ್ದಿದ್ದರೆ ಆ ವ್ಯಕ್ತಿ ಮಾತ್ರ  ಮಿರ್ಚಿ ಮಾಡುವಾಗ  ಹಿಟ್ಟಚ್ಚಿದ ಮಿರ್ಚಿ  ಎಣ್ಣೆಯಲ್ಲಿ ಪೂರಾ ಮುಳುಗಿ ಮೇಲೆಳುವಂತೆ ಇವರ ತಲೆ ಮುಖವೂ ಸೇರಿ ಸಂಪೂರ್ಣ ಮುಳುಗಿ ಎಷ್ಟೋ ದಿನಗಳ ಕೊಳೆತ ಕೊಚ್ಚೆ ನೀರಲ್ಲಿ ಮುಳುಗಿದ್ದುದರಿಂದ ಕರ್ರನೆ ಕೀಲೆಣ್ಣೆ ಬಳಿದುಕೊಂಡವರಂತೆ ಮೇಲೆದ್ದರು. ದಡಬಡನೆ ನಾನು ರಸ್ತೆಯ ಮದ್ಯದಲ್ಲೇ ಕಾರು ನಿಲ್ಲಿಸಿ ಇಳಿದು ಅವರ ಬಳಿ ಓಡಿದೆನಾದರೂ ಅವರನ್ನು ನೋಡಿ  ನನಗೆ ನಗು ತಡೆಯಲಾಗಲಿಲ್ಲ. ಎಬ್ಬಿಸಲು ಓಡೋಡಿ ಬಂದ ನಾನು   ಏನಾದರೂ  ಆಯಿತೇನ್ ಸಾರ್ ಎಂದು ಕೇಳಿದರೂ ನನ್ನ ಮುಖದಲ್ಲೂ ಮಾತಿನಲ್ಲೂ ನಗು ಮಾತ್ರ ಮರೆಯಾಗಿರಲಿಲ್ಲ. ಈಗಲೂ ಆ scene ನ್ನು ಜ್ಞಾಪಿಸಿಕೊಂಡರೆ  ನಗು  ಬರುವುದು. ಈ ರೀತಿಯಾಗಿ ನೀವು ಮಾಡಿರಹುದು  ಅಥವಾ ನೋಡಿರಬಹುದು. ಬೇರೆಯವರು ಬಿದ್ದಾಗ ಮುಂದೆ ಇರುವವರು ಏನು ಅಂದು ಕೊಳ್ಳುವರೋ ಎಂದು ಯೋಚಿಸದೇ...

ಚಿತ್ರದುರ್ಗದ ಪಾಳೆಯಗಾರರು ಮತ್ತು ಮುರುಘಾ ಮಠ

ಇಮೇಜ್
  ದುರ್ಗದ ಪಾಳೆಯಗಾರರು ಮತ್ತು ಮುರಘಾ ಮಠ...  (ಇತಿಹಾಸದಿಂದ ಇಂದಿನವರೆಗೆ...)    ಅದು ಬಯಲು ಸೀಮೆ..ಹಳ್ಳದ ಪ್ರದೇಶದಲ್ಲಿ ಮಾತ್ರ  ಅಲ್ಲಲ್ಲಿ ಗುಂಪು ಗುಂಪುಗಳಲ್ಲಿ ಪೊದೆಗಳಂತೆ ಬೆಳೆದ ಈಚಲಮರಗಳು.ಅಲ್ಲೋಂದು ಇಲ್ಲೋಂದು ಕರಿಜಾಲೀಮರಗಳು.ಮಳೆಗಾಲದಲ್ಲಿ ಮಾತ್ರ ದನಕರುಗಳಿಗೆ ಸೊಂಪಾದ ಹುಲ್ಲು.ಬೇಸಿಗೆಯಲ್ಲಿ ಬಿಸಿಲಿಗೆ ನೆಲ ಒಣಗಿ ಬಿರುಕು ಬಿಟ್ಟಿರುತ್ತದೆ.ನೂರಾರು ದನಕರುಗಳು ವಿಶಾಲ ಗೋಮಾಳದಲ್ಲಿ ಹನ್ನೆರಡು ಹದಿಮೂರು ವರ್ಷಗಳ ಒಬ್ಬ ಹುಡುಗ ದನಗಳ  ಕಾಯುತ್ತಿದ್ದ. ಅಂದಿನ ಜಾತಿಪದ್ದತಿಯಿಂದ ಅವನು ನಾಯಕ ಜನಾಂಗಕ್ಕೆ ಸೇರಿದ ಹುಡುಗ.ನಿತ್ಯವೂ ಅವನದು ದನಕಾಯುವುದೇ ಕಾಯಕ..ಬೇಸಿಗೆಯ ಬಿರು ಬಿಸಿಲಿನ ತಾಪಕ್ಕೆ ದನಗಳ ನೋಡುತ್ತಾ ಬಿಸಿಲಲ್ಲೇ ನೆಲದ ಮೇಲೆ ಕುಳಿತ ಬಾಲಕನಿಗೆ ನಿದ್ದೆಯ ಮಂಪರು ಬಂದು ಅಲ್ಲೇ ಮಲಗಿಬಿಟ್ಟ.ಮಲಗಿದ್ದು ಅವನಿಗೆ ಅರಿವಿರಲಿಲ್ಲವಾದರೂ ನೆತ್ತಿಯಮೇಲೆ ಸುಡುಬಿಸಿಲು ಉರಿಯುತ್ತಿತ್ತು.ಮಲಗಿದ ಬಾಲಕನ ಮುಖಕ್ಕೆ ಬಿಸಿಲು ಬೀಳದಂತೆ ದೊಡ್ಡ ನಾಗರಹಾವೊಂದು ಹೆಡೆ ಬಿಚ್ಚಿ ಹೆಡೆಯ ನೆರಳು ಆ ಬಾಲಕನ ಮುಖಕ್ಕೆ ಬೀಳುವಂತೆ ಮಾಡಿತ್ತು. ಆ ಕ್ಷಣಕ್ಕೆ ಸರಿಯಾಗಿ ಅಲ್ಲಿಗೆ ಬಂದ   ಮುರಿ ಮುರಿ ಪೇಟ ಸುತ್ತಿ ಕೈಯ್ಯಲೊಂದು ಬೆತ್ತವ ಹಿಡಿದು ಬಂದ  ಕಾವಿಧಾರಿಯೊಬ್ಬ ಆ ದೃಶ್ಯವನ್ನು ನೋಡಿ ಕೈಯಲ್ಲಿ ಹಿಡಿದ ಬೆತ್ತದಿಂದ ಶಬ್ಧಮಾಡಿ  ಆ ಹಾವನ್ನು ಅಲ್ಲಿಂದ ಕದಲಿಸಿದ. ಆ ಕ್ಷಣವೇ ಆ...

ಅಭಿವೃದ್ಧಿಯ ಅವೈಜ್ಞಾನಿಕ ಕಥೆ..

ಇಮೇಜ್
#ದೇಶದ_ಪ್ರಗತಿಯ_ಅವೈಜ್ಞಾನಿಕ_ಕಥೆ... ನೀವು ಕೆಲವು ಫಾರಿನ್ ರಸ್ತೆಗಳ ವೀಡಿಯೋ ನೋಡಿರಬಹುದು. ಎಂತಹ ಹೆದ್ದಾರಿಗಳಾದರೂ ಅವು ಸಾಮಾನ್ಯ ನೆಲಮಟ್ಟಕ್ಕೆ ಸರಿ ಸಮಾನವಾದ ಎತ್ತರದಲ್ಲಿಯೇ ಇರುತ್ತಾವೆ. ಆದರೆ ನಮ್ಮ ದೇಶದ ರಸ್ತೆಗಳು ಆಯಾ ರಸ್ತೆಯ ಹೆಸರಿಗೆ ತಕ್ಕಂತೆ ಎತ್ತರ ಮಾಡಿಕೊಂಡಿದ್ದೇವೆ. ನಮ್ಮ ದೇಶದ ಹಳೇ ಊರುಗಳನ್ನೋ ಹಳೇ ಟೌನ್ಗಳನ್ನೋ ನೋಡಿದರೆ ರಸ್ತೆಗೂ ಅಂದು ಕಟ್ಟಡ ಕಟ್ಟಿದ ಹೊಸಲಿನ ಮಟ್ಟಕ್ಕೂ (ground level)ಕನಿಷ್ಠ  ನಾಲ್ಕೈದು ಅಡಿಗಳಷ್ಟು  ವ್ಯತ್ಯಾಸದ ಎತ್ತರದಲ್ಲಿ ನಮ್ಮ ರಸ್ತೆಗಳು ಇವೆ. ಯಾಕೆ ಹಿಂಗಾಯ್ತು??ಇದು ಅಭಿವೃದ್ಧಿಯೋ ಅದಃಪತನವೂ?? ನಮ್ಮ ಸಿಟಿಗಳಲ್ಲಿ/ಊರುಗಳಲ್ಲಿ ಸರಾಸರಿ ಪ್ರತಿ ಅರವತ್ತು ಅಡಿಗೊಂದರಂತೆ  ಒಂದೊಂದು ರಸ್ತೆಗಳು ಇವೆ. ಸರ್ಕಾರದ ನಾನಾ ಯೋಜನೆಗಳಲ್ಲಿ ರಸ್ತೆಯ ಅಭಿವೃದ್ಧಿಗೆ ಬಿಡುಗಡೆಯಾಗುವ ಹಣದ ಬಳಕೆ ಮತ್ತು ದುರ್ಬಳಕೆಯ ವಿಧಾನವೇ ನೆಲ ಮಟ್ಟದಿಂದ ಎತ್ತರದಲ್ಲಿ ರಸ್ತೆಗಳ ಮಾಡಿರುವುದು. ರಸ್ತೆಗಳನ್ನು ಎತ್ತರಿಸಿದ ಕಾರಣ   ರಸ್ತೆಯ ಮೇಲಿನ ನೀರು ಮನೆಯ ಮೇಲಿನ ಮಳೆಯ ನೀರು ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗುವುದು ಸಾಮಾನ್ಯ.ಆ ನೀರು ಮನೆಯ ಒಳಗಡೆಯೂ ಬರುವುದು ಮನೆಯ ಅಡಿಯೂ ಹೋಗಿ ಮನೆಗಳು ಕುಸಿಯುವಂತೆ ಮಾಡುವುದು.ನೀರು ಅತಿಯಾಗಿ ರಸ್ತೆ ಕೊಚ್ಚಿಹೋಗುವುದು,ಕೆಲವೊಮ್ಮೆ ನೀರು ಹೊರಹಾಕಲು ಉದ್ದೇಶಪೂರ್ವಕವಾಗಿ ಜೆಸಿಬಿಗಳ ತರಿಸಿ ರಸ್ತೆ ಬಗೆದು ಗುಂಡಿ ಮಾಡಿ ನೀರು ಹೊರಗ...

ಮಳೆ..ಮಳೆ..ಮಳೆ..

ಇಮೇಜ್
#ಮಳೆ..#ಮಳೆ..#ಮಳೆ.. ಮಳೆಯೋ ನೀನು ಅಸವಲ್ಲದ ಮಳೆಯಾಗಿಹೆ ಇತ್ತೀಚೆಗೆ..ಹವಾಮಾನ ಸುದ್ದೀ ಕೊಟ್ಟವರಿಗೂ ಅಳತೆಗೂ ಸಿಗದಷ್ಟು ಸುರಿದು ಅವಮಾನ ಮಾಡಿಬಿಟ್ಟೆ.. ಶತಕಗಳಿಂದಲೂ ತುಂಬದ ಕೆರೆ ಬಾವಿಗಳನು ಒಡೆದು ಹೋಗುವಷ್ಟು ತುಂಬಿಸಿ ಮನೆ ಮನೆಗಳಿಗೂ ನುಗ್ಗಿ ನಿನ್ನ ಸ್ಥಳವ ಆಕ್ರಮಿಸಿ. ಅಷ್ಟದಿಕ್ಕುಗಳಲಿ ಹಬ್ಬಿ  ನಮ್ಮೂರು ನಿಮ್ಮೂರು ಆ ಊರು ಈ ಊರು ಯಾವ ಊರು ಬಿಡದೆ ಬಿಟ್ಟು ಬಿಡದೆ ಸುರಿದೆ..  ಮಳೆಯ ನಂಬಿ ಇಳೆಯ ನಂಬಿ ಬೀಜ ಬಿತ್ತಿರಲು ಬೆಳೆಗಳು ಬತ್ತದಂತಿರುವಂತೆ ಬಾರೋ ಮಳೆಯೇ ಎಂದರೆ ಬೆಳೆಯೇ ಕೊಚ್ಚಿ ಹೋಗುವಂತೆ ಸುರಿದಿಹೆಯಲ್ಲ.. ರಾಯಚೂರು ಬಳ್ಳಾರಿ ಈ ಊರುಗಳು ನೀನ್ ಬರುವ ಮುನ್ನ ಆಗಿದ್ದವು  ಬಿಸಿಲೂರು..ಈಗಾಗಿವೇ ನೀರೂರುಗಳು.. ಸುರಿಯಲು ನಿನಗೆ ಸುಖವೆನಿಸಿ  ಮುಂಬರುವ ಮೂರುವರ್ಷದ ಮಳೆಯ ಈಗಲೇ ಸುರಿಸಿ  ಮುಂದಿನ ವರ್ಷ ವರುಷಬಾರದೇ ಬರವ ತರಿಸಿ ಅನ್ನದಾತರ ಕಣ್ಣಲ್ಲಿ ಕಣ್ಣೀರು ಸುರಿಸದಿರು  ಓ ಮಳೆರಾಯ.. ✍️ನಾಗೇಂದ್ರ ಬಂಜಗೆರೆ.