ಅಭಿವೃದ್ಧಿಯ ಅವೈಜ್ಞಾನಿಕ ಕಥೆ..

#ದೇಶದ_ಪ್ರಗತಿಯ_ಅವೈಜ್ಞಾನಿಕ_ಕಥೆ...

ನೀವು ಕೆಲವು ಫಾರಿನ್ ರಸ್ತೆಗಳ ವೀಡಿಯೋ ನೋಡಿರಬಹುದು. ಎಂತಹ ಹೆದ್ದಾರಿಗಳಾದರೂ ಅವು ಸಾಮಾನ್ಯ ನೆಲಮಟ್ಟಕ್ಕೆ ಸರಿ ಸಮಾನವಾದ ಎತ್ತರದಲ್ಲಿಯೇ ಇರುತ್ತಾವೆ. ಆದರೆ ನಮ್ಮ ದೇಶದ ರಸ್ತೆಗಳು ಆಯಾ ರಸ್ತೆಯ ಹೆಸರಿಗೆ ತಕ್ಕಂತೆ ಎತ್ತರ ಮಾಡಿಕೊಂಡಿದ್ದೇವೆ. ನಮ್ಮ ದೇಶದ ಹಳೇ ಊರುಗಳನ್ನೋ ಹಳೇ ಟೌನ್ಗಳನ್ನೋ ನೋಡಿದರೆ ರಸ್ತೆಗೂ ಅಂದು ಕಟ್ಟಡ ಕಟ್ಟಿದ ಹೊಸಲಿನ ಮಟ್ಟಕ್ಕೂ (ground level)ಕನಿಷ್ಠ  ನಾಲ್ಕೈದು ಅಡಿಗಳಷ್ಟು  ವ್ಯತ್ಯಾಸದ ಎತ್ತರದಲ್ಲಿ ನಮ್ಮ ರಸ್ತೆಗಳು ಇವೆ. ಯಾಕೆ ಹಿಂಗಾಯ್ತು??ಇದು ಅಭಿವೃದ್ಧಿಯೋ ಅದಃಪತನವೂ??

ನಮ್ಮ ಸಿಟಿಗಳಲ್ಲಿ/ಊರುಗಳಲ್ಲಿ ಸರಾಸರಿ ಪ್ರತಿ ಅರವತ್ತು ಅಡಿಗೊಂದರಂತೆ  ಒಂದೊಂದು ರಸ್ತೆಗಳು ಇವೆ. ಸರ್ಕಾರದ ನಾನಾ ಯೋಜನೆಗಳಲ್ಲಿ ರಸ್ತೆಯ ಅಭಿವೃದ್ಧಿಗೆ ಬಿಡುಗಡೆಯಾಗುವ ಹಣದ ಬಳಕೆ ಮತ್ತು ದುರ್ಬಳಕೆಯ ವಿಧಾನವೇ ನೆಲ ಮಟ್ಟದಿಂದ ಎತ್ತರದಲ್ಲಿ ರಸ್ತೆಗಳ ಮಾಡಿರುವುದು. ರಸ್ತೆಗಳನ್ನು ಎತ್ತರಿಸಿದ ಕಾರಣ   ರಸ್ತೆಯ ಮೇಲಿನ ನೀರು ಮನೆಯ ಮೇಲಿನ ಮಳೆಯ ನೀರು ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗುವುದು ಸಾಮಾನ್ಯ.ಆ ನೀರು ಮನೆಯ ಒಳಗಡೆಯೂ ಬರುವುದು ಮನೆಯ ಅಡಿಯೂ ಹೋಗಿ ಮನೆಗಳು ಕುಸಿಯುವಂತೆ ಮಾಡುವುದು.ನೀರು ಅತಿಯಾಗಿ ರಸ್ತೆ ಕೊಚ್ಚಿಹೋಗುವುದು,ಕೆಲವೊಮ್ಮೆ ನೀರು ಹೊರಹಾಕಲು ಉದ್ದೇಶಪೂರ್ವಕವಾಗಿ ಜೆಸಿಬಿಗಳ ತರಿಸಿ ರಸ್ತೆ ಬಗೆದು ಗುಂಡಿ ಮಾಡಿ ನೀರು ಹೊರಗೆ ಬಿಡುವುದು ಸಾಮಾನ್ಯ. ಹಾಗಾದರೆ ರಸ್ತೆಗಳ ಎತ್ತರಿಸಿದ್ದು ಅಭಿವೃದ್ಧಿಗಾಗಿಯೋ ಅವನತಿಗಾಗಿಯೋ??

ಇನ್ನೂ ಹೆದ್ದಾರಿಗಳ ವಿಷಯಕ್ಕೆ ಬಂದರೆ  ಒಂದು ಕಿಲೋಮೀಟರ್ ಗೆ ಕೋಟಿ- ಎರಡು ಕೋಟಿಯಷ್ಟು ಬಿಡುಗಡೆಯಾದ ಹಣದ ಸದ್ಬಳಕೆಯ ಲೆಕ್ಕ ಪರಿಶೋಧಕರ ಕಣ್ಣಿಗೆ ಕಾಣುವಂತೆ ತೋರಿಸುವ   highly planned engineering ಕಾಮಗಾರಿಗಳೇ  ಈ ಹೆದ್ದಾರಿ ನಿರ್ಮಾಣಗಳು. ರಸ್ತೆಗೆ ನೀರು ಬಾರದಿರಲು(ಬರಲು)ಎತ್ತರದ ಭೂ ಪ್ರದೇಶವ ತಗ್ಗು ಮಾಡಿ..(under ground) ತಗ್ಗು ಪ್ರದೇಶಗಳ ಎತ್ತರಿಸಿ ಪ್ಲೈ ಓವರ್ ರಸ್ತೆಗಳ ಮಾಡಿ ಹೆದ್ದಾರಿಗಾಗಿ ನೀರಿನ ಹೆದ್ದಾರಿಯ ಮುಚ್ಚಿದ ಕಾರಣ ಇಂದು ಊರು ರಸ್ತೆಗಳೆಲ್ಲಾ ಕೆರೆಯಂತಾಗಿವೆ.!

ರಸ್ತೆ ಮಾಡಿದವರು, ಮಾಡಿಸಿದವರ ಹಣಬಲ ಜಾಸ್ತಿಯಾಯಿತು ಬಿಟ್ಟರೆ ವಾಸ್ತವವಾಗಿ ಇಂತಹ  ಯೋಜನೆಗಳ ಕಾಲೋನಿಯ ಫಲಾನುಭವಿಗಳಿಗೆ ಸಿಕ್ಕಿದ್ದು   ಮ್ಯಾನ್ ಹೋಲ್ ನಿಂದ  ಬುಗ್ಗೆಯಂತೆ ಬಂದ ಕೊಚ್ಚೆಯ ನೀರು !  ರಸ್ತೆಗಳು ಪ್ರಗತಿಯ ಸಂಕೇತ ಎಂದು ನಾವು ತಿಳಿದಿದ್ದೇವೆ. ಆದರೆ ಪ್ರಕೃತಿಯ ಹರಿವಿಗೆ ವಿರುದ್ದವಾಗಿ ರಸ್ತೆಯ ಮಾಡಿದ್ದು ಪ್ರಗತಿಗೆ ಮಾರಕ ಎಂಬುದನ್ನು ಮರೆತಿದ್ದೇವೆ.ಇದಕ್ಕೆ ಪ್ರಮುಖ ಉದಾಹರಣೆ ಎಂದರೆ ಕಳೆದ ವಾರ ಬೆಂಗಳೂರು-ಮೈಸೂರು ನೈಸ್ ರಸ್ತೆ, ರಾಮನಗರ ಕನಕಪುರ  ಭಾಗದ ಎಲ್ಲಾ ರಸ್ತೆಗಳು ಮುಳುಗಿದ್ದು.  ಹೆದ್ದಾರಿಗಳಲ್ಲಿ ಪ್ರಮುಖವಾಗಿ ಗುರುತಿಸಲ್ಪಡುವ ನೈಸ್ ರಸ್ತೆ ಮುಳುಗಿದ್ದು ಯಾಕೆ?  ಈ ಭೂಮಿಯ ಮೇಲೆ ಮನುಷ್ಯ ಹುಟ್ಟುವ ಮೊದಲೇ ನೀರು ತನ್ನದೇ ಆದ ಹರಿಯಯವ ಹಾದಿಯನ್ನು ಕಟ್ಟಿಕೊಂಡಿತ್ತು.ಅದರ ದಾರಿಗೆ ವಿರುದ್ಧವಾದ ಹಾದಿಯನ್ನು ಮಾನವ ನಿರ್ಮಿಸಿದ್ದರ ಫಲ ಇಂದು ಅನುಭವಿಸುತ್ತಿದ್ದೇವೆ. ಮೇಲಾಗಿ ನಾವೇ ಬಳಸಿ ಎಸೆದ ಪ್ಲಾಸ್ಟಿಕ್ ವಾಟರ್ ಬಾಟಲ್, ಹಳೆಯ ಹಾಸಿಗೆ ಬಟ್ಟೆಗಳು  ನೀರಿನ ಹರಿವಿಗೆ ಅಡ್ಡವಾಗಿವೆ. ಇನ್ನಾದರೂ ನಿಲ್ಲಿಸಿ ವೈಜ್ಞಾನಿಕ ರಸ್ತೀಕರಣ/ನಗರೀಕರಣ ಬೆಳವಣಿಗೆಯ ಹೆಸರ ಅವೈಜ್ಞಾನಿಕತೆಯಲಿ ಮುಳುಗದಿರಲಿ ಜನರ ಬದುಕು..🙏

✍️ನಾಗೇಂದ್ರ ಬಂಜಗೆರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..