ಮಳೆ..ಮಳೆ..ಮಳೆ..
#ಮಳೆ..#ಮಳೆ..#ಮಳೆ..
ಮಳೆಯೋ ನೀನು ಅಸವಲ್ಲದ ಮಳೆಯಾಗಿಹೆ ಇತ್ತೀಚೆಗೆ..ಹವಾಮಾನ ಸುದ್ದೀ ಕೊಟ್ಟವರಿಗೂ ಅಳತೆಗೂ ಸಿಗದಷ್ಟು ಸುರಿದು ಅವಮಾನ ಮಾಡಿಬಿಟ್ಟೆ..
ಶತಕಗಳಿಂದಲೂ ತುಂಬದ ಕೆರೆ ಬಾವಿಗಳನು ಒಡೆದು ಹೋಗುವಷ್ಟು ತುಂಬಿಸಿ ಮನೆ ಮನೆಗಳಿಗೂ ನುಗ್ಗಿ ನಿನ್ನ ಸ್ಥಳವ ಆಕ್ರಮಿಸಿ.
ಅಷ್ಟದಿಕ್ಕುಗಳಲಿ ಹಬ್ಬಿ ನಮ್ಮೂರು ನಿಮ್ಮೂರು ಆ ಊರು ಈ ಊರು ಯಾವ ಊರು ಬಿಡದೆ ಬಿಟ್ಟು ಬಿಡದೆ ಸುರಿದೆ..
ಮಳೆಯ ನಂಬಿ ಇಳೆಯ ನಂಬಿ ಬೀಜ ಬಿತ್ತಿರಲು ಬೆಳೆಗಳು ಬತ್ತದಂತಿರುವಂತೆ ಬಾರೋ ಮಳೆಯೇ ಎಂದರೆ ಬೆಳೆಯೇ ಕೊಚ್ಚಿ ಹೋಗುವಂತೆ ಸುರಿದಿಹೆಯಲ್ಲ..
ರಾಯಚೂರು ಬಳ್ಳಾರಿ ಈ ಊರುಗಳು ನೀನ್ ಬರುವ ಮುನ್ನ ಆಗಿದ್ದವು ಬಿಸಿಲೂರು..ಈಗಾಗಿವೇ ನೀರೂರುಗಳು..
ಸುರಿಯಲು ನಿನಗೆ ಸುಖವೆನಿಸಿ ಮುಂಬರುವ ಮೂರುವರ್ಷದ ಮಳೆಯ ಈಗಲೇ ಸುರಿಸಿ ಮುಂದಿನ ವರ್ಷ ವರುಷಬಾರದೇ ಬರವ ತರಿಸಿ ಅನ್ನದಾತರ ಕಣ್ಣಲ್ಲಿ ಕಣ್ಣೀರು ಸುರಿಸದಿರು ಓ ಮಳೆರಾಯ..
✍️ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ