ಪೋಸ್ಟ್‌ಗಳು

ಜೂನ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನಸು ಕಥೆಯಾದಾಗ-ಕನಸು-4

ಇಮೇಜ್
#ಕನಸು_ಕಥೆಯಾದಾಗ...           _ಕನಸು-4_  ಸಮಯ ಎಂಟೂ ಮುಕ್ಕಾಲು ಆಗಿದೆ.ಆರುಷಿಯು ಟೀ ಷರ್ಟ್ ಮತ್ತು cotton ಜೀನ್ಸ್ ಪ್ಯಾಂಟ್,power ಶೂ ಹಾಕಿಕೊಂಡು ಎಡಗೈಯಲ್ಲಿ ಒಂದು document ಪೈಲ್ ಮತ್ತು ಪಿಸ್ತುಲ್,ಬಲಗೈಯಲ್ಲಿ  ಕಾರ್ ಕೀ ಹಿಡಿದು ಹನ್ನೊಂದು ಗಂಟೆಯೊಳಗೆ ನಾನು 'ಅಲ್ಲಿಗೆ' ಹೋಗಬೇಕು ಎಂದು ಅವಸರವಸರವಾಗಿ  ಕಾರಬಳಿ ಬರುತ್ತಿದ್ದಾನೆ.ಕ್ಲಿಕ್ ಕ್ಲಿಕ್ ಎಂದು ಕಾರ್ ನ ಲಾಕ್ open ಮಾಡಿ ಎಡಗೈಯಲ್ಲಿ ಇದ್ದ file ಮತ್ತು ಪಿಸ್ತುಲ್ ಅನ್ನು ಖಾಲಿ ಇದ್ದ front passenger ಸೀಟ್ ಮೇಲೆ ಎಸೆದು ಕಾರ್ ಸ್ಟಾರ್ಟ್ ಮಾಡಿ ಕೆಲವೇ ಸೆಕೆಂಡ್ ಗಳಲ್ಲಿ ಹೊರಟ.. ಆರುಷಿ  ಕಾರನ್ನು  ಯಾವಾಗಲೂ ಅತೀ ವೇಗವಾಗಿ ಚಲಾಯಿಸುವುದಿಲ್ಲ. ಏನೋ ಒಳ್ಳೆಯ ರಸ್ತೆ ಇದ್ದು road free edre 100-120 km/h ಗರಿಷ್ಠ.. ಆದ್ರೆ ಅಂದು ಕಾರ್ ಸ್ಟಾರ್ಟ್ ಮಾಡಿದಾಗಿನಿಂದಲೂ  ಎಕ್ಸ್ಕ್ಯೂಲೇಟರ್ ತುಳಿಯುತ್ತಿದ್ದ ಪರಿ ಅವಸರವನ್ನು ಸೂಚಿಸುತ್ತಿತ್ತು..  ಅಂದು Highway ಗೆ ಬಂದಾಗ ಗರಿಷ್ಠ 140+ km/h speed reach ಆಗಿತ್ತು..ಕಾರುವೇಗವಾಗಿ ಚಲಾಯಿಸುತ್ತಿರುವಾಗ ಅವನ ದೃಷ್ಟಿ ರಸ್ತೆಯಲ್ಲಿನ ಅವನ ಟ್ರ್ಯಾಕ್ ಬಿಟ್ಟು ಏನನ್ನು ನೋಡುವುದಿಲ್ಲ..ಹಾಗೆ ಏಕಚಿತ್ತತೆಯಿಂದ ಹೋಗುತ್ತಿರುವಾಗ ಯಾವುದೋ unknown ನಂಬರ್ ನಿಂದ ಮೊಬೈಲ್ ರಿಂಗಾಯಿತು.ನಂಬರ್ display device ಲ್ಲಿ ಕಂಡಿತಾದರೂ ಆಮೇ...

ಕನಸು ಕಥೆಯಾದಾಗ-ಕನಸು-3

ಇಮೇಜ್
ಕನಸು ಕಥೆಯಾದಾಗ... (ಕನಸು-3)   ಅದು ಶನಿವಾರ ರಾತ್ರಿ.. ನೆಡ್ರಿ  ಊರಿಗೆ ಹೋಗದ ಬಹಳ ದಿನಗಳಾಯಿತು.. ಊರಿಗಾದರೂ ಹೋಗಿಬರೋಣ ಎಂದಳು ಅಹನಾ.. ಆರುಷಿ: ಸರಿ ಬೆಳಿಗ್ಗೆ ಆರು ಗಂಟೆ ಒಳಗಡೆ ಮನೆ ಬಿಟ್ಟು ರಸ್ತೆಯಲ್ಲಿರಬೇಕು..ಬೇಗ ರೆಡಿ ಆಗಬೇಕು, ಕಡಿಮೆ ಲಗೇಜ್ ಪ್ಯಾಕ್ ಮಾಡಬೇಕು ಎಂದು ಸಮ್ಮತಿ ಸೂಚಿಸಿದ..  ಬಳ್ಳಾರಿ ನಗರದಿಂದ ಆರುಷಿಯ ಊರು ನೂರು ಕಿಮೀ.. ಬಳ್ಳಾರಿ ಹೊರ ವಲಯದ ಹೀರೆಹಾಳ್ ಗೆ ಬಂದ ಮೇಲೆ ಯಾಕೋ  ನೇಚರ್ ಕಾಲ್ ಆರುಷಿಯನ್ನು ಒತ್ತಡಕ್ಕೀಡು ಮಾಡಿದ್ದರಿಂದ   ಹೈವೇಯ ನರ್ಸರಿಗಳ ಪಕ್ಕದಲ್ಲಿಯೇ ಕಾರು ನಿಲ್ಲಿಸಿ  ಕೆಳಗಿಳಿದು ಆನಂದಿಸುತ್ತಾ ಅಕ್ಕ-ಪಕ್ಕ ನೋಡಿದಾಗ ಒಂದು ಪಪ್ಪಾಯಿ ಗಿಡದಲ್ಲಿ  ಎರಡ್ಮೂರು ಕಾಯಿಗಳು.. ಗಿಡ ಬಾಡಿ ಹೋಗಿದೆ ಅದರಲ್ಲಿ ಒಂದು  ಸಾಧರಣ ತೆಂಗಿನ ಕಾಯಿ ಗಾತ್ರದ ಒಂದು  ಕಾಯಿ  ಹಣ್ಣಾಗಿತ್ತು. ಆರುಷಿಯು ಕೈ ಎತ್ತಿದರೂ ನಿಲುಕದ ಎತ್ತರದಲ್ಲಿ ಇದ್ದುದರಿಂದ ಅಲ್ಲೇ  ಸ್ವಲ್ಪ ದೂರದಲ್ಲಿ ಬಿದ್ದಿದ್ದ ಒಂದೆರಡು ಮೊಳ ಉದ್ದದ   ಬೇಲಿಗೆ ಹಾಕಿದ ಮುಳ್ಳುಕೊನೆಯನ್ನು ಕಾಲಲ್ಲಿ ತುಳಿದು ಮುರಿದ. ಮುರಿದ ಕೋಲಿನಿಂದ  ಆ ಹಣ್ಣನ್ನು ಕೆಡವಿ ಕ್ಯಾಚ್ ಹಿಡಿದು full  ಹಣ್ಣಾಗಿದ್ದುದರಿಂದ  ಸ್ಥಳದಲ್ಲೇ ಕೈಯಿಂದ ಅದುಮಿ ಓಪನ್ ಮಾಡಿದ. ಅಹನಾ ಕಾರಿನಿಂದ ನೋಡು ನೋಡುತ್ತಲೇ ಬಾಯಿಗೆ ಹಾಕಿ ತಿನ್ನುತ್ತಾ ಕಾರಿನ ಬಳಿಗೆ ಬ...

ಕನಸು ಕಥೆಯಾದಾಗ...ಕನಸು-2

ಇಮೇಜ್
#ಕನಸುಗಳು_ಕಥೆಯಾದಾಗ...          _ಕನಸು-2_ ಆರುಷಿ ಮೊಬೈಲ್ ಹಿಡಿದು 'Sathish udupi'ಎಂಬ ಕಾಂಟ್ಯಾಕ್ಟ್ search ಮಾಡಿ ಡಯಲ್ ಮಾಡಿದ... ಅಣ್ಣಾ ನನ್ನ ಊರು..ಅಣ್ಣಾ ನನ್ನ ಹೆಸರು..'ಎಂಬ ಕಾಲರ್ ಟ್ಯೂನ್ ಬರುತ್ತಿದೆ.. Long ring ಆಯಿತು ಆದರೂ  ಸತೀಶ ಪೋನ್ ತೆಗೆಯಲಿಲ್ಲ.. ಮತ್ತೊಮ್ಮೆ ಮಾಡಿದರೂ ಆಗಲೂ ತೆಗೆಯಲಿಲ್ಲ..! ಏನೋ ಬ್ಯೂಸಿ ಇರಬೇಕು ಇಲ್ಲ ಬೈಕಲ್ಲೋ-ಕಾರಲ್ಲೊ  drive ಲ್ಲಿ ಇರಬಹುದೇನೋ...ನೋಡೋಣ  ನೋಡಿದ ಮೇಲೆ ಅವರೇ  ಮಾಡುವರು...  ಎಂದು  ಸುಮ್ಮನಾದ.. ಎಂಟತ್ತು  ನಿಮಿಷಗಳ ನಂತರ ಸತೀಶನೇ ಆರುಷಿಯ ಮೊಬೈಲ್ ಗೆ ಕರೆ ಮಾಡಿದ..ಕರೆ ಸ್ವೀಕರಿಸಿದ ತಕ್ಷಣ "ನಮಸ್ತೇ ಮಾರಾಯ್ರೆ...ಹೊರ್ಗಡೆ ಚೂರ್ ಕೆಲ್ಸ ಇತ್ ಮಾರ್ಎ... ಪೋನ್  ಒಳ್ಗಿತ್ತು ..ಹೇಳಿ ಹೇಳಿ ಹೇಗಿದ್ದೀರಿ?? ಆರುಷಿ:ನಾವು ಚೆಂದ ಇದ್ದೇವೆ.. ನೀವು?? ಸತೀಶ:ನಾವು ಆರೋಗ್ಯ ವಾಗಿ ಇದ್ದೇವೆ... ಆರುಷಿ:ಸತೀಶ್ ಎಂತಾ ಗೊತ್ತಾ ನಾನ್ ನಿಮಗೆ ಕಾಲ್ಮಾಡಿದ್ದು   ನಾನು ನಾಳೆ 'ಹೆಬ್ರಿ'ಗೆ ಬರುತ್ತಿದ್ದೇನೆ.. ಓಹ್...ಏನ್ರೀ ನೀವು... ಬರ್ರೀ ಸ್ವಾಮಿ..  ಆಗ ನಿಮ್ಮನ್ನ  ಆಗ ಎಷ್ಟು ಭಾರಿ ಕರೆದರೂ  ನೀವು ಬರಲಿಲ್ಲ..  ಬನ್ನಿ ಬನ್ನಿ..  ಸತೀಶ: ದೂರ ಹೊರಟಿದ್ದ ಅಥವಾ ದೂರದಿಂದ ಬರುತ್ತಿರೋದಾ??*  *ಆರುಷಿ:ಎಂಥಾ ಇಲ್ಲ ಮಾರ್ರೆ.. ಎರ್ಡಮೂರು ವರ್ಷ ಆಯ್ತು...

ಕನಸು ಕಥೆಯಾದಾಗ...ಕನಸು-1

ಇಮೇಜ್
#ಕನಸು_ಕಥೆಯಾದಾಗ..        ಕನಸು-01 ಆರುಷಿಗೆ IPS ಮಾಡಬೇಕು ಅನ್ನುವುದು ಅವನ ಕನಸು. ಅದಕ್ಕೆ ಬೇಕಾದ ಜ್ಞಾನ ,ದೈಹಿಕ ಮತ್ತು ಮಾನಸಿಕವಾಗಿ ಸಿದ್ದವಾಗಿದ್ದ.  ಆ್ಯಂಡ್ He is also  an intellectual personality...!ಅವನು  ಕ್ರಿಮಿನಾಲಾಜಿಯಲ್ಲಿ ಎಷ್ಟು ಅಡ್ವಾನ್ಸ್ ಆಗಿದ್ದ ಅಂದರೆ  ಒಂದು ಘಟನೆಗೆ ಸಂಬಂಧಿಸಿದಂತೆ ಶಂಕಿತನ ಲಕ್ಷಣಗಳು ಹೇಳಿದರೆ ಶಂಕಿತನ ನಿಖರ ಸ್ಕೆಚ್ ಡ್ರಾ ಮಾಡುವ ಕಲೆಯೂ ತಿಳಿದಿತ್ತು. ಹಾಗೇಯೇ ಆ ಘಟನೆಯ ಪೂರ್ವ ಪರ ಚಿತ್ರಣವನ್ನು  ನಡೆದಿರುವಂತೆಯೇ ಅದರ ಯಥಾ ಚಿತ್ರಣ  ತಿಳಿಸಿಕೊಡುತ್ತಿದ್ದ. ಅವನ ಬುದ್ಧಿವಂತಿಕೆಯ ಜೊತೆಗೆ IPS  ಮಾಡಲೇ ಬೇಕು... ಇನ್ನೆರಡು ವರ್ಷದಲ್ಲಿ ಆಯ್ಕೆ ಆಗಲೇ ಬೇಕೆಂದು   ಸಕಲ ಸಿದ್ದತೆ ಮಾಡಿಕೊಂಡಿದ್ದ. ಪ್ರತಿದಿನ ಕನಿಷ್ಠ ಎಂಟತ್ತು ಗಂಟೆಗಳ  ಅಭ್ಯಾಸ ಮತ್ತು ಒಂದೆರೆಡು ಗಂಟೆಗಳ ದೈಹಿಕ ಕಸರತ್ತು ಪ್ರತಿದಿನ ಅವನ  ನಿತ್ಯಕಾಯಕ ಆಗಿತ್ತು. ನಿತ್ಯ ಓದಿನ ಮತ್ತು  ದೈಹಿಕ ಸಿದ್ಧತೆಯ ನಡುವೆ ಆಗಾಗ ಪ್ರವಾಸ ಮಾಡುವುದು ಆರುಷಿಗೆ ಇಷ್ಟವೇ.. ಅನುಕೂಲ ಮತ್ತು ಬೇಜಾರಾದಾಗ ಬೇರೆ ಯೋಚನೆ ಮಾಡದೆ ಮನಸ್ಸಿಗೆ ಇಷ್ಟವಾದ ಸ್ಥಳಕ್ಕೆ ಸಿದ್ಧವಾಗಿ ಏಕಾಂಗಿಯಾಗಿ ಪ್ರವಾಸ ಹೊರಟೇಬಿಡುತ್ತಿದ್ದ.   ಆರುಷಿಯ ಅನೇಕ ಸ್ನೇಹಿತರು ದೆಹಲಿ ಮತ್ತು ಡೆಹರಾಡೂನ್ ನಲ್ಲಿ IAS ತರಬೇತಿ ಪಡೆಯಲು ಹೋಗಿದ್ದರು....

ಸಮೂಹ ಸನ್ನಿಯಿಂದ ಮೊಬೈಲ್ ಸನ್ನಿಯವರೆಗೆ...

ಇಮೇಜ್
#_ಸಮೂಹಸನ್ನಿ_ಯಿಂದ_ಮೊಬೈಲ್_ಸನ್ನಿ_ವರೆಗೆ.. ಮುದ್ದೇರು ಕಪ್ಪಲೆಯಲ್ಲಿದ್ದ ಒಂದು ಬೃಹತ್ ನೇರಳೆ ಮರ ಮತ್ತು ಅತ್ತಿಹಣ್ಣಿನ ಮರ ನಮ್ಮ ಬಾಲ್ಯದ ಆಕರ್ಷಣೆ.ನೇTVರಳೆ ಮರ ವರ್ಷಕೊಮ್ಮೆ ಮಾತ್ರ ಫಲಬಿಡುತಿತ್ತು. ಆದರೆ ಅತ್ತಿ ಹಣ್ಣಿನ ಮರ ಒಂದೂವರೆ ತಿಂಗಳಿಗೊಮ್ಮೆ ಹಣ್ಣು ಬಿಡುತ್ತಿತ್ತು.ಸದಾ ಬರಗಾಲದ ಮಕ್ಕಳಿಗೆ 'ಔದುಂಬರ' ಫಲಕ್ಕಿಂತ ಮಿಗಿಲಾದ ಹಣ್ಣು ಬೇಕೇ??ರಾಶಿ ರಾಶಿ ಹಣ್ಣಿನ ವೃಷ್ಠಿಯನ್ನೇ ಸುರಿಸುತ್ತಿದ್ದ ಈ ಮರದ ಬಳಿ ನನಗೆ ದಿನಗಳ ಲೆಕ್ಕ ಗೊತ್ತಾಗುತ್ತಿರಲಿಲ್ಲವಾದರೂ ಹತ್ತು ಹದಿನೈದು ದಿನಕ್ಕೊಮ್ಮೆ ಅತ್ತಕಡೆ ಹೋಗಿಬರುತ್ತಿದ್ದೆ. ನನಗೆ ಕಡಿಮೆ ವಯಸ್ಸು... ಹತ್ತರ ಆಸುಪಾಸು ಇರಬೇಕು..ಆ ನಾನು ಹೇಳುತ್ತಿರುವ ಘಟನೆಗೆ ಅದಾಗಲೇ ಶೇಂಗಾ ಬೀಜ ಸಿದ್ಧ ಪಡಿಸಿಕೊಂಡು ಬಹಳ ದಿನಗಳಾಗಿತ್ತು. ವಯಸ್ಕರರು ಪರಸ್ಪರ ಯಾರು ಜೊತೆಯಾದರೂ ಇನ್ನೂ  ಮಳೆಬರಲಿಲ್ಲ...ದನಕರುಗಳಿಗೆ ಹುಲ್ಲು-ಸೊಪ್ಪು, ನೀರು- ನಿಡಿ ಬಗ್ಗೆಯೇ ಮಾತು. ಅದೇ ಎಲ್ಲರ ಮಾತುಕತೆಯಾಗಿತ್ತು.ಅಂದರೇ ಮಳೆಗಾಲ ಆರಂಭವಾಗಿತ್ತಾದರೂ ಸಮಯಕ್ಕೆ ಸರಿಯಾಗಿ ಮಳೆ ಬಾರದೇ ಅದಾಗಲೇ ಬಿತ್ತುವ ಸಕಾಲ ಮೀರಿತ್ತು.. ಮೊದಲು ಬಿತ್ತಿದ್ದ ಪೈರು ಮಳೆ ಇಲ್ಲದೇ ಒಣಗತೊಡಗಿತ್ತು.  ಒಂದು ಸಂಜೆ ನಾಲ್ಕೈದು ಗಂಟೆಯ ವೇಳೆಗೆ ಅತ್ತಿ ಮರದ ಸಮೀಪ ಹೋಗಿದ್ದೆ. 'ಭೂಮಪ್ಪ' ಎಂಬ ಹಿರಿಯಜ್ಜ ಒಂದು ಆಕಳು ,ಒಂದು ಎಮ್ಮೆ ,ಒಂದು ಎಮ್ಮೆ ಮಣಕ,ಮತ್ತು ಒಂದು ಕರುವನ್ನು ಬಿಟ್ಟುಕೊಂಡು  ಬೇಸಿಗೆಯಲ್ಲಿ ಬೆಳೆದ ಜೋಳದ ...