ಕನಸು ಕಥೆಯಾದಾಗ...ಕನಸು-1
ಕನಸು-01
ಆರುಷಿಗೆ IPS ಮಾಡಬೇಕು ಅನ್ನುವುದು ಅವನ ಕನಸು. ಅದಕ್ಕೆ ಬೇಕಾದ ಜ್ಞಾನ ,ದೈಹಿಕ ಮತ್ತು ಮಾನಸಿಕವಾಗಿ ಸಿದ್ದವಾಗಿದ್ದ. ಆ್ಯಂಡ್ He is also an intellectual personality...!ಅವನು ಕ್ರಿಮಿನಾಲಾಜಿಯಲ್ಲಿ ಎಷ್ಟು ಅಡ್ವಾನ್ಸ್ ಆಗಿದ್ದ ಅಂದರೆ ಒಂದು ಘಟನೆಗೆ ಸಂಬಂಧಿಸಿದಂತೆ ಶಂಕಿತನ ಲಕ್ಷಣಗಳು ಹೇಳಿದರೆ ಶಂಕಿತನ ನಿಖರ ಸ್ಕೆಚ್ ಡ್ರಾ ಮಾಡುವ ಕಲೆಯೂ ತಿಳಿದಿತ್ತು. ಹಾಗೇಯೇ ಆ ಘಟನೆಯ ಪೂರ್ವ ಪರ ಚಿತ್ರಣವನ್ನು ನಡೆದಿರುವಂತೆಯೇ ಅದರ ಯಥಾ ಚಿತ್ರಣ ತಿಳಿಸಿಕೊಡುತ್ತಿದ್ದ. ಅವನ ಬುದ್ಧಿವಂತಿಕೆಯ ಜೊತೆಗೆ IPS ಮಾಡಲೇ ಬೇಕು... ಇನ್ನೆರಡು ವರ್ಷದಲ್ಲಿ ಆಯ್ಕೆ ಆಗಲೇ ಬೇಕೆಂದು ಸಕಲ ಸಿದ್ದತೆ ಮಾಡಿಕೊಂಡಿದ್ದ. ಪ್ರತಿದಿನ ಕನಿಷ್ಠ ಎಂಟತ್ತು ಗಂಟೆಗಳ ಅಭ್ಯಾಸ ಮತ್ತು ಒಂದೆರೆಡು ಗಂಟೆಗಳ ದೈಹಿಕ ಕಸರತ್ತು ಪ್ರತಿದಿನ ಅವನ ನಿತ್ಯಕಾಯಕ ಆಗಿತ್ತು. ನಿತ್ಯ ಓದಿನ ಮತ್ತು ದೈಹಿಕ ಸಿದ್ಧತೆಯ ನಡುವೆ ಆಗಾಗ ಪ್ರವಾಸ ಮಾಡುವುದು ಆರುಷಿಗೆ ಇಷ್ಟವೇ.. ಅನುಕೂಲ ಮತ್ತು ಬೇಜಾರಾದಾಗ ಬೇರೆ ಯೋಚನೆ ಮಾಡದೆ ಮನಸ್ಸಿಗೆ ಇಷ್ಟವಾದ ಸ್ಥಳಕ್ಕೆ ಸಿದ್ಧವಾಗಿ ಏಕಾಂಗಿಯಾಗಿ ಪ್ರವಾಸ ಹೊರಟೇಬಿಡುತ್ತಿದ್ದ.
ಆರುಷಿಯ ಅನೇಕ ಸ್ನೇಹಿತರು ದೆಹಲಿ ಮತ್ತು ಡೆಹರಾಡೂನ್ ನಲ್ಲಿ IAS ತರಬೇತಿ ಪಡೆಯಲು ಹೋಗಿದ್ದರು.IAS COACHING ಗೆ ಹೋಗಿದ್ದ ಅವನ ಅನೇಕ ಸ್ನೇಹಿತರು "ನೀನೂ ಕೋಚಿಂಗ್ ಗೆ ಬಂದು ಬಿಡು" ಎಂದು ಎಷ್ಟು ಒತ್ತಾಯಿಸಿದರೂ ಆರುಷಿಗೆ ಅದಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡಿ coaching ತೆಗೆದುಕೊಳ್ಳಲು ಇಷ್ಟವಾಗದೇ ಮನೆಯಲ್ಲೇ ಕುಳಿತು ಓದುತ್ತಿದ್ದ.ಅವನ ಸ್ನೇಹಿತರು ಅನೇಕ ಬಾರಿ ಕರೆದಾಗಲು ತರಬೇತಿಗೆ ಹೋಗಲು ಒಪ್ಪದ ಆರುಷಿ ಯಾವಾಗಲಾದರೂ ಒಮ್ಮೆ ಡೆಲ್ಲಿ-ಡೆಹ್ರಾಡೂನ್ ಆದರೂ ನೋಡಲು ಬರುತ್ತೇನೆ ಎಂದು ಹೇಳುತ್ತಿದ್ದ.ಅಂದು ಯಾಕೋ ಏನೂ ಮಾಡಲು ಮನಸ್ಸಾಗದೇ ನಾಲ್ಕೈದು ದಿನ ಎಲ್ಲಿಯಾದರೂ ಹೋಗಿಬರೋಣ ಎಂದೆನಿಸಿ ಸ್ನೇಹಿತರ ಆಹ್ವಾನದಂತೆ ಡೆಹ್ರಾಡೂನ್ ಗೆ ಹೋಗಿ ಬರಲು ನಿರ್ಧರಿಸಿ pink city ,ಅರಮನೆ ನಗರವೆಂದೇ ಹೆಸರಾಗಿದ್ದ ರಾಜಸ್ಥಾನ ಜೈಪುರಕ್ಕೆ ಹೋಗಲು ನಿರ್ಧರಿಸಿದ. ಪ್ರಯಾಣಕ್ಕೆ ರೈಲನ್ನೇ ಬಳಸುತ್ತಿದ್ದ ಆರುಷಿ ಡೆಹ್ರಾಡೂನ್ ಗೇ ಹೋಗುವ ಮುನ್ನಾ ಪಿಂಕ್ ಸಿಟಿ ರಾಜಸ್ಥಾನದ ಜೈಪುರ ನೋಡಲು ಹೋದ...ಮೊದಲದಿನ ಹವಾ ಮಹಲ್ ,ಅಂಬರ್ ಪ್ಯಾಲೇಸ್,ಜಯಗಡ ಪೋರ್ಟ್... ಎಲ್ಲವನ್ನೂ ನೋಡಿ ಆನಂದಿಸಿದ.. ಹವಾಮಹಲ್ ನ ಅದ್ಬುತ ವಾಸ್ತುಶಿಲ್ಪ ಕಂಡು ಸಂತಸಪಟ್ಟನು.ಅಂದು ಜೈಪುರದಲ್ಲೇ ಉಳಿದುಕೊಂಡು ಹಗಲೆಲ್ಲಾ ಸುತ್ತಾಡಿದ .. ಅಲ್ಲೇ ಯಾವುದೋ ಹೋಟೆಲೊಂದರಲ್ಲಿ ರೂಂ ಬಾಡಿಗೆ ಪಡೆದು ದಿನವಿಡೀ ಆದ ಸುಸ್ತಿಗೆ ಮಲಗಿಯೇ ಬಿಟ್ಟ.ಜೈಪುರದಲ್ಲಿ ಮುಂಜಾನೆಯ ಸೂರ್ಯೋದಯ ನೋಡಲು ಚೆಂದ ಎಂದು ಯಾವುದೋ ಪುಸ್ತಕದಲ್ಲಿ ಓದಿದ್ಧ ನೆನಪು. ಜೈಪುರಕ್ಕೆ ಬಂದು ಸನ್ ರೈಸ್ ನೋಡದೇ ಹೋಗಲು ಮನಸ್ಸಾಗದೇ ಬೆಳ್ಳಂಬೆಳಗ್ಗೆ ಸೂರ್ಯೋದಯ ನೋಡುವ ಎಂದೆನಿಸಿ Sunrise watching tower ಹುಡುಕಿಕೊಂಡು ಹೊರಟ. ಕೋಟೆಗಳ ನಾಡು,ಎಲ್ಲಿನೋಡಿದರೂ ಕೆಂಪು ಬಣ್ಣದ ಕಟ್ಟಡಗಳ ಮಧ್ಯೆ ಇದ್ದ watching ಟವರ್ ಹುಡುಕಿಕೊಂಡು ಹೊರಟ..
ಅದು ಸಿಟಿ ಮಧ್ಯದಲ್ಲಿರುವ ವೀಕ್ಷಣಾ ಗೋಪುರ.(watching tower) ದೊಡ್ಡ ಛತ್ರಿಯಾಕಾರದ ಮೇಲೆ ಮತ್ತೊಂದು ಸಣ್ಣ ಛತ್ರಿ..! ಎರಡರ ಮೇಲೂ ಪ್ರವಾಸಿಗರು ನಿಂತು ಸೂರ್ಯನ ಉದಯದ ದರ್ಶನ ಮಾಡಲು ಅವಕಾಶ ಇದ್ದ ಮಲ್ಟಿ ಲೆವೆಲ್ watching tower. ಅದು ನಗರದ ಕೇಂದ್ರ ಭಾಗ,ನಾಲ್ಕಾರು ಪ್ರಮುಖ ರಸ್ತೆಗಳು ಸೇರುವಂತಹ ಪ್ರಧಾನ ರಸ್ತೆ..ರಸ್ತೆಯಲ್ಲಿ ಹಾಲು ಹಾಕುವವರು, ಅಲ್ಲಲ್ಲಿ ರಿಕ್ಷಾಗಳಲ್ಲಿ ಮಾರುಕಟ್ಟೆಗೆ ಹೋಗುತ್ತಿದ್ದವರು ಮತ್ತು ಅಲ್ಲೊಬ್ಬ ಇಲ್ಲೊಬ್ಬ ರಸ್ತೆ ಸ್ವಚ್ಚತಾ ಕಾರ್ಯ ಮಾಡುತ್ತಿದ್ದ ಪೌರಕಾರ್ಮಿಕರು ಬಿಟ್ಟರೆ ಯಾರೂ ಇರಲಿಲ್ಲ.. ನೂರು ಮೀಟರ್‌ಗಳಷ್ಟು ಮುಂದೆ ಬಂದಾಗ ಒಂದು ಬಿಳಿ innova ಸರ್ಕಾರಿ ಪೋಲಿಸ್ ಎಂಬ ಸ್ಟಿಕ್ಕರ್ ಇದ್ದ ಕಾರ್ ನಲ್ಲಿ ಪೋಲಿಸ್ ಉನ್ನತಮಟ್ಟದ ಅಧಿಕಾರಿಯೊಬ್ಬರು 'ಘಂಟಾ ಘರ್ ಸರ್ಕಲ್' ನಲ್ಲಿ D y sp ಲೆವೆಲ್ ನ ಅಧಿಕಾರಿಗಳಿಗೆ ಯಾರೋ VIP ಈ ರಸ್ತೆಯಲ್ಲಿ ಬರುವರು ಅವರಿಗೆ ಬಂದೋಬಸ್ತ್ ಕಲ್ಪಿಸುವ ವಿಚಾರವಾಗಿ ಕಾರಿನಿಂದಲೇ ಮತ್ತೊಂದು ಪೋಲೀಸ್ ಜೀಪ್ ನಿಲ್ಲಿಸಿಕೊಂಡು ನಿಂತಿದ್ದ Dy sp ಲೆವೆಲ್ ನ ಅಧಿಕಾರಿಗಳಿಗೆ ಯಾರೋ ಪ್ರಮುಖ VVIP ಯೊಬ್ಬರು ಹಾದುಹೋಗುತ್ತಿದ್ದಾರೆ. ಏನೂ ಪ್ರಾಬಲಮ್ ಆಗಬಾರದು.. ಎಂದು ಕಾರಿನ ಗ್ಲಾಸ್ ಇಳಿಸಿ ಅಲ್ಲಿಂದಲೇ ಆರ್ಡರ್ ಮಾಡಿ ಮುಂದೆ ಹೋದರು. ಮೇಲಾಧಿಕಾರಿಗಳ ಮೌಖಿಕ ಆದೇಶಕ್ಕೆ ಹಿಂದಿಯಲ್ಲೇ ಏನು ಪ್ರಾಬಲಮ್ ಆಗದಂತೆ ಅಲರ್ಟ್ ಇರುವೆವೆಂದು ಹೇಳಿ ಪೋಲಿಸ್ salute ಹೊಡೆದ ಮೇಲೆ ಮೇಲಾಧಿಕಾರಿಯ ಕಾರು ಮುಂದೆ ಹೋಯಿತು. ಟ್ರ್ಯಾಕ್ ಸೂಟ್ ಧರಿಸಿದ್ದ ಆರುಷಿ ಅದನ್ನು ನೋಡುತ್ತಾ watching tower ಕಡೆ ಬಂದನು.. Sunrise ನೋಡಲು ಬಂದವರು ಬಹಳ ವಿರಳ ಸಂಖ್ಯೆಯಲ್ಲಿ ಇದ್ದರು. ಸುಮಾರು ನೂರೈವತ್ತು-ಇನ್ನೂರು ಜನ ಒಮ್ಮೇಲೆ ನಿಂತು ನೋಡಬಹುದಾದ watching tower ನಲ್ಲಿ ಒಂದಿಬ್ಬರು ಐವತ್ತು-ಐವತ್ತೆರಡು ವಯಸ್ಸಿನ ಆಸುಪಾಸಿನವರು ಸರಳ ವ್ಯಾಯಾಮ ಮಾಡುತ್ತಿದ್ದರು. ತಲೆ ಎತ್ತಿ ನೋಡಿದರೆ ಮೇಲೆ ಹತ್ತಲು ಸ್ಟೆಪ್ಸ್ ನೋಡಿ ಮೇಲೆಯೇ ಹೋಗೋಣ ಎಂದೆನಿಸಿ ಮೇಲೆ ಹತ್ತಿದ.. ಮೇಲೆ ಯಾರೂ ಇರಲಿಲ್ಲ... ಸದ್ಯ ಮೇಲಿರುವುದು ಆರುಷಿಯೊಬ್ಬನೇ! almost ಬೆಳಕಾಗುತ್ತಲಿದೆ.ಮೂಡಣದ ದಿಗಂತದ ಅಂಚಿನಲ್ಲಿ ಹಳದಿ ಮತ್ತು ಕೆಂಪು ಮಿಶ್ರಿತ ಹೊಂಬೆಳಕು ರಂಗು ರಂಗಾಗಿ ಕಾಣುತ್ತಿದೆ. ವಿವಿಧ ಜಾತೀಯ ನೂರೆಂಟು ಪಕ್ಷಿಗಳು ಚಿಲಿಪಿಲಿ ಕಲರವದೊಂದಿಗೆ ಅವುಗಳು ಕಾಳಿನ ಚೀಲ ತುಂಬಿಸಲು ಪಯಣ ಆರಂಭಿಸಿದ್ದಾವೆ. ಇನ್ನೇನು ಮೂರ್ನಾಲ್ಕು ನಿಮಿಷಗಳಲ್ಲಿ ಆ ದಿನದ ದಿನಕರ ದರ್ಶನ ಆಗುತಲಿತ್ತು. ಮೂಡಣದ ಆಗಸ ನೋಡುತ್ತಾ ಹಾಗೆ ಆ ಛತ್ರಿಯಾಕಾರದ ಟವರ್ ನ ಮೇಲ ಹೊದಿಕೆಯನ್ನು ಒಮ್ಮೇ ತಲೆ ಎತ್ತಿ ನೋಡಿದ. ಹಿಡಿ ಗಾತ್ರದ ಕಬ್ಬಿಣದ ಪೈಪ್ ಗಳು ಹಾಕಿ ಛತ್ರಿಯಾಕಾರವಾಗಿ ಮಾಡಿದ್ದಾರೆ.. ಪೈಪ್ ಮುಟ್ಟಿ ನೋಡಿದರೆ ಗಟ್ಟಿ ಮುಟ್ಟಾಗಿಯೇ ಇವೆ.. ಹಾಗಾದರೆ ಎರಡು push ups ಆದರೂ ಹೋಡೆಯೋಣ ಎಂದು ಎರಡೂ ಕೈಯಲ್ಲಿ ಪೈಪ್ ಹಿಡಿದು push ups ಹೊಡೆದು ಕೈಯನ್ನು ಬೀಸುತ್ತಾ ಅಡ್ಡಲಾಗಿ ಕಟ್ಟಿದ್ದ ಗ್ರಿಲ್ಸ್ ಕಡೆ ಬಂದ. ಮೂಡಣದ ನೇಸರನ ಉದಯ ಕುಂಕುಮದಂತೆ ತೇಲಿ ಬರುತ್ತಿತ್ತು.. ವಾವ್ಹ್...!! Amazing.. Super... Wonderful sunrise..ಎಂದು ಅಂದು ಕೊಳ್ಳುತ್ತಿರುವಾಗಲೇ ಕೆಳಗಿನಿಂದ ಯಾರೋ black ಸ್ವೇಟರ್ ಖಾಕಿ pant,ಶೂ ಹಾಕಿದ ವ್ಯಕ್ತಿಯೊಬ್ಬ ಕೆಳಗಿನಿಂದ ಆರುಷಿಯ ಕಡೆ ನೋಡಿ
" hello... You.."
You
" hey..Come down.. Come down quick..." ಅಂದ.
ಮೇಲೆ ಹತ್ತಬಾರದಿತ್ತೇನೋ ಅದಕ್ಕೇ ಯಾರೋ watching tower ಕಾಯೋ watchman ಇರಬೇಕೆಂದು ಕೆಳಗಿಳಿದು ಬಂದ ಆರುಷಿ..
"ಹಾವೋ ಇದರ್..."ಎಂದು ಮತ್ತಿಬ್ಬರು ಪ್ಯಾರಾ ಮಿಲಿಟರೀ ಪರ್ಸನ್ಸ್ ತರ ಇದ್ದರು.. But armour ಬ್ಯಾಗ್ ಯಾವುದೂ ಅವರ ಬಳಿ ಇರಲಿಲ್ಲ.. ಒಂಥರಾ ದೊಡ್ಡ ದೊಡ್ಡ casino ಗಳಲ್ಲಿ ಇರುವಂತಹ bouncers ತರಹ ಇದ್ದರು.. ಎಲ್ಲರೂ ಗಂಭೀರವಾಗಿ ಇದ್ದರು.
*ಕೆಳಗಡೆ ಕರೆದ ವ್ಯಕ್ತಿಯು ಆರುಷಿಯನ್ನು ತೊರಿಸಿ ಇತರ ಸಿಬ್ಬಂದಿಗೆ*
"Take him to control room..."
ಎಂದು ಆದೇಶಿಸಿ ಕಂಟ್ರೋಲ್ ರೂಂ ಕಡೆ ಹೋದರು.
ಆರುಷಿಯನ್ನು ಎಡ -ಬಲಕ್ಕೆ ಕೈ ಹಿಡಿದುಕೊಳ್ಳಲು ಬಂದ ಆರುಷಿಗೆ ಯಾಕೇ take him to control room ಅಂತ ಹೇಳುತ್ತಿದ್ದಾರೋ ಗೊತ್ತಾಗುತ್ತಿಲ್ಲ.
"ಸರ್ ಸರ್.. Í am from Karnataka.. Why you people taking me to control room.?"
"ಸಾರ್ ಬೋಲೇನಾ..??"ಸಾರ್ ಬೊಲೇತೋ ಖತಂ..
ಕುಚ್ ನೈ ಬಾತ್ಕರ್ನೇಕಾ ಜರೂರತ್ ನಹೀ..ಚಲ್..." ಎಂದು ಒಬ್ಬ ಕೈ ಹಿಡಿದರೆ ಇನ್ನೊಬ್ಬ ಕೊರಳಪಟ್ಟಿ ಹಿಡಿಯಲು ಬಂದ..
ಆರುಷಿಯೂ ಗಟ್ಟಿ ಮುಟ್ಟಾಗೇ ಇದ್ದ.. ಪ್ರೊಫೆಷನಲ್ ಜಿಮ್ ಬಾಡಿ..
"ಹೊಯ್ ...ಹಟ್.. ಮೈ ಕಿದರ್ ಹಾನಾ ?ಚಲ್ ...ಮೈ ಹಾತೂ.."
ಎಂದು ಜೋರಾಗಿಯೇ ಮಾತಾಡಿದ್ದಕ್ಕೇ ಕೊರಳಪಟ್ಟಿಗೆ ಕೈ ಹಾಕದೇ ಹಾಗೇಯೇ ಕರೆದುಕೊಂಡು ಹೋದರು..
ದೊಡ್ಡ ಗೇಟ್... ಅದು ಬೆಂಗಳೂರಿನ ಕಬ್ಬನ್ ಪಾರ್ಕ್ ರೀತಿಯ ಸ್ಥಳ.. ಪಿಂಕ್ ಕಟ್ಟಡಗಳ ಸುತ್ತಲೂ ಮಿಲಿಟರೀ ಯೂನಿಪಾರ್ಮನಂತೆ ಪೇಂಟ್ ಮಾಡಿ ಏನೇನೊ ಬರೆದಿರುವುದು ಕಾಣಿಸಿತು..ಆದರೆ ಗಡಿಬಿಡಿಯಲ್ಲಿ ಏನೆಂದು ನೋಡಲೂ ಆಗಲಿಲ್ಲ..
ಕಂಟ್ರೋಲ್ ರೂಂ ಒಳಗಡೆ ಹೋದರೆ ಅಲ್ಲೊಬ್ಬ ಮುಸುಕುದಾರಿ ಒಂದು ದೊಡ್ಡ sharp shooters ಬಳಸುವ ಒಂದು ಗನ್! ಗನ್ ಸ್ಟಾಂಡ್ ಲ್ಲಿಟ್ಟು ಮುಖ್ಯ ರಸ್ತೆಗೆ ಪಾಂಯಿಂಟ್ ಬ್ಲಾಂಕ್ ಮಾಡಿ ಇಟ್ಟಿದ್ದಾನೆ.. ಅಲ್ಲಿಂದ ಆ ಮುಖ್ಯ ರಸ್ತೆಯಲ್ಲಿ ಓಡಾಡುವ ಎಲ್ಲಾ ವಾಹನಗಳೂ,ವಾಹನದಲ್ಲಿರುವ ವ್ಯಕ್ತಿಗಳೂ ಪುಲ್ ಕ್ಲಿಯರ್ ಆಗಿ ಕಾಣಿಸುತ್ತಿದೆ.
ಆರುಷಿಯನ್ನು ಕರೆದುಕೊಂಡು ಹೋದ ವ್ಯಕ್ತಿಗಳು ಅವನನ್ನು ಅಲ್ಲಿ ನಿಲ್ಲಿಸಿ ಟೇಬಲ್ ಡ್ರಾದಿಂದ 8mm ನ ಗನ್ ತೆಗೆದು ಟೇಬಲ್ ಮೇಲಿಟ್ಟರು.
ಆರುಷಿಗೆ ಇಲ್ಲೇನೋ ವಿದ್ವಂಸಕ ಕೃತ್ಯ ಕ್ಕೆ ದುಷ್ಕರ್ಮಿಗಳು ಸಿದ್ದತೆ ನಡೆಸಿದ್ದಾರೆ ಅನಿಸಿತು.ಇಲ್ಲಿಗೆ ಬರುವಾಗ ಯಾರೋ VVIP ಬರುವರು ಅಂತ ಪೋಲಿಸ್ ಅಧಿಕಾರಿಗಳು ಮಾತಾಡುತ್ತಿದ್ದರಲ್ಲಾ?? ಅವರಿಗೇ ಹೊಡೆಯಲು ಸಿದ್ದತೆ ನಡೆಸಿದಂತಿದೆ.. ಅಥವಾ ಅವರ ಮೇಲೆ ಯಾರಾದರೂ attack ಮಾಡಿದರೆ ಅವರ ಮೇಲೆ ಪ್ರತಿ ದಾಳಿ ಮಾಡಲು ಎಂದು ಅಂದುಕೊಳ್ಳುತ್ತಿರುವಾಗ ಆ ಮುಸುಕುಧಾರಿ ವಾಕಿ ಟಾಕಿ ಪಕ್ಕಕ್ಕಿಟ್ಟು ತನ್ನ ಜೇಬಿಂದ ಮೊಬೈಲ್ ತೆಗೆದು
"ಹ್ಞೂಂ...ಹ್ಞೂಂಂ.."
"Everything alright and target fixed..."
OK
Done..
ಎಂದು ಮೊಬೈಲ್ ಕೆಳಗಿಟ್ಟು ಗನ್ ನ ಲೆನ್ಸ್ ನಲ್ಲಿ ಮತ್ತೊಮ್ಮೆ ಒಂದೇ ಕಣ್ಣಿನಿಂದ ನೋಡುತ್ತಲಿದ್ದ..ನೋಡಿದ ಮೇಲೆ ಅಲ್ಲೇ ಟೇಬಲ್ ಮೇಲಿದ್ದ ಒಂದೂವರೆ ಮೂರಿಂಚು ಗಾತ್ರದ 10*8 ಅಳತೆಯ ಒಂದು sweet box ನಂತಿದ್ದ ಬಾಕ್ಸನ್ನು ನೀಡಿ ಮರಾಠಿ,ಗುಜರಾತೀ ಭಾಷೆಯಂತಹ ಮಿಕ್ಸ್ language ಲ್ಲಿ ಆರುಷಿಗೆ ಘಂಟಾ ಘರ್ ಚೌಕನಲ್ಲಿ ನಿಂತಿದ್ದ ಪೋಲಿಸ್ ಅಧಿಕಾರಿಗಳಿಗೆ ನೀಡಲು ತಿಳಿಸಿದರು..ಆರುಷಿಗೆ ಇವರು ಪೋಲಿಸರಂತೂ ಅಲ್ಲ ಎಂದು ಖಚಿತವಾಯಿತು.
ಸದ್ಯ ಆರುಷಿಯು ಅಲ್ಲಿಂದ ಹೊರಬರಬೇಕಿತ್ತು..ಅಪರಿಚಿತ ಸ್ಥಳದಲ್ಲಿ ಏಕಾಏಕಿ ಬಂದೊದಗಿದ ಅದೂ ಆ sharp shooter's ಜೊತೆ fight ಮಾಡುವ ಸ್ಥಿತಿಯಲ್ಲಿ ಇರಲಿಲ್ಲ.
ಆ ಬಾಕ್ಸ್ ಸುಮಾರು 700-800 ಗ್ರಾಂ ನಷ್ಟು ಭಾರ ಇದೆ. ಆ ಬಾಕ್ಸ್ ಹಿಡಿದು ಏನೂ ಮಾಡಬೇಕೆಂದು ತೋಚದೇ ಏನಾಗತ್ತೋ ಏನೋ ಈಗ ಎಂಬ ಆತಂಕದಿಂದ ಏದುಸಿರು ಬಿಡುವಂತೆ ರಸ್ತೆಯ ಕಡೆ ಹೊರಗೆ ಬರುತ್ತಿದ್ದಾನೆ.
ಆರುಷಿಗೆ ಹೊರಗಡೆ ಬಂದ ತಕ್ಷಣ ಕಿವಿಗೆ ಕೇಳಿಸಿದ್ದು ಪೋಲಿಸ್ ವಾಹನಗಳ ಸೈರನ್...!ಆರುಷಿ ರೋಡಿಗೆ ಹತ್ತಿರವಾಗುತ್ತಿದ್ದಂತೆ ಆ ಸೈರನ್ ಶಬ್ಧವೂ ಹತ್ತಿರ ಆಗುತ್ತಿದೆ..ನೋಡು ನೋಡುತ್ತಿದ್ದಂತೆಯೇ ಒಂದು ಬಿಳಿ Scorpio ಪೋಲಿಸ್ escort ವಾಹನ ಸೈರನ್ ಮಾಡುತ್ತಾ ಮುಂದೆ ಪಾಸ್ ಆಯಿತು.ಅದರ ಹಿಂದೆ ಸ್ವಲ್ಪವೇ ದೂರದಲ್ಲಿ ಒಂದು ಕಡು ನೀಲಿ ಬಣ್ಣದ ಅಂಬಾಸಿಡರ್ ರೀತಿಯ ದೊಡ್ಡದಾದ foreign ಲಕ್ಸೂರಿ ವಾಹನವೊಂದು ಬರುತ್ತಿದೆ. ದಪ್ಪ ಗಾಜಿನ ಒಳಗೆ ನೋಡಿದರೆ ಕ್ರೀಮ್ ಕಲರ್ ನ ಬಾರೀ ಲಕ್ಸೂರಿ ಸೋಪಾ Seat ಅಲ್ಲಿ ಬಿಳಿಬಣ್ಣದ ಬಟ್ಟೆಗಳು ಹಾಕಿದ ಯಾವುದೋ ದೇಶದ VIP ಗಳು ಕುಳಿತಿರುವುದು ಕಾಣುತ್ತಿದ್ದಾರೆ.ಅವರು ನಗುಮುಖದಲ್ಲಿ ಹೊರಗಡೆಯ ಸಿಟಿಯನ್ನು ನೋಡುತ್ತಾ ಏನೋ ಮಾತಾಡುತ್ತಿದ್ದಾರೆ.ಆ ವಾಹನದಲ್ಲಿ ಅವರದೇ ಆದ ಭದ್ರತಾ ಪಡೆಯೂ ಇದೆ. ಇತ್ತ ಆ ಶಾರ್ಪ್ ಶೂಟರ್ಸ ನೋಡಿದರೆ ಆ ವಾಹನದ ಕಡೆಯೇ ಪಾಯಿಂಟ್ ಮಾಡಿ ಆರುಷಿಗೆ ಅದರ ಬಗ್ಗೆ ತುಟ್ಟಿ ಬಿಚ್ಚದಂತೆ ಬಾಯಿ ಮೇಲೆ ಬೆರಳಿಟ್ಟು ಶ್...! ಎನ್ನುತ್ತಿದ್ದಾನೆ.
ಆರುಷಿ ದೊಡ್ಡ ದೊಡ್ಡ ಹೆಜ್ಜೆ ಹಾಕುತ್ತಾ ಆ ಪೋಲಿಸ್ ವಾಹನದ ಕಡೆ ವೇಗವಾಗಿ ಎದೆ ಬಡಿತ ಬಿಗಿ ಹಿಡಿದು ಬರುತ್ತಿರಲು ಒಮ್ಮೇಲೇ ಪಳ್... ಪಳ್... ಎಂದು ಗ್ಲಾಸ್ ಗಳು ಒಡೆದು ಪುಡಿ ಪುಡಿಯಾದ ಶಬ್ಧ!.. ಗಾಜಿನ ಹರಳುಗಳು ಅವನಿಗೂ ತಾಗಿ ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾದವು. ಗ್ಲಾಸ್ ಒಡೆದಿದ್ದು ಆ VIP ವಾಹನದ್ದಲ್ಲ ಅದರ ಬೆಂಗಾವಲಿಗೆ ಇದ್ದ ಮತ್ತೊಂದು ವಾಹನದ್ದು.. ಎಲ್ಲಾ ವಾಹನಗಳೂ long ಬ್ರೇಕ್ ಹೊಡೆದ ಶಬ್ಧ..ಆದರೆ ಆ VIP ವಾಹನ ನೋಡು ನೋಡುತ್ತಾ ಕಣ್ಮರೆಯಾಯಿತು.
ಆ ಕಂಟ್ರೋಲ್ ರೂಂ ನಿಂದ ನಾಲ್ಕಾರು ಅರೆ ಸೇನಾಪಡೆಯ ಸೈನಿಕರು ಗನ್ ಹಿಡಿದು 'ಏ.....' ಏ..... ಎಂದು vip ಕಾರುಕಡೆ ಬರುತ್ತಿದ್ದಾರೆ.. ತಕ್ಷಣವೇ ಒಂದೆರಡು ಟಪ್ ಟಪ್ ಎಂದು ಬಂದೂಕಿನಿಂದ ಬಂದ ಗುಂಡಿನ ಸೌಂಡ್..! ಆ ಪೋಲಿಸ್ ವಾಹನದತ್ತ ಓಡಿ ಬರುತ್ತಿದ್ದ ಆರುಷಿಯನ್ನು "stop him" ಎಂದು ಯಾರೋ ಒಬ್ಬ ಕೂಗಿದರೆ ಉಳಿದ ಮೂರ್ನಾಲ್ಕು ಶಸ್ತ್ರದಾರಿ ಮಿಲಿಟರಿ ಮ್ಯಾನ್ ಗನ್ ತೆಗೆದು ಆರುಷಿಗೆ point blank ಮಾಡಿ ಕ್ಲಿಕ್ ಕ್ಲಿಕ್ ಎಂದು ಗನ್ unlock ಮಾಡಿ shot ಗೆ ಸಿದ್ಧವಾಗಿ "ರುಕ್ ಜಾ..." ಎಂದರು. ಆರುಷಿಗೆ ಈಗ ಬೇರೆ ಯಾವುದೇ option ಇರಲಿಲ್ಲ.. ಹಿಡಿದು ಬಂದ ಆ ಬಾಕ್ಸ್ ಸಹಿತ ಎರಡೂ ಕೈಗಳನ್ನು ಮೇಲಕ್ಕೆತ್ತಿ ಮೊಣಕಾಲೂರಿ ಕೂತ.. ಕ್ಷಣಾರ್ಧದಲ್ಲಿ ಆ watching tower ನಿಂದ ಕೆಳಗೆ ಕರೆದವರು ,ಕಂಟ್ರೋಲ್ ರೂಂ ಗೆ ಕರೆದುಕೊಂಡು ಹೋದವರು ಆ ಮುಸುಕು ದಾರಿ ಹೊರತುಪಡಿಸಿ ಎಲ್ಲರೂ ಆರುಷಿಗೆ ಗನ್ ಹಿಡಿದು ನಿಂತಿದ್ದಾರೆ..!
ಆರುಷಿಯ ಹೃದಯಬಡಿತ ಜೋರಾಯಿತು. ಹಿಂದೆ ಮುಂದೆ ನೋಡದೇ ಯಾವನಾದರೂ ಶೂಟ್ ಮಾಡಿಯಾನು ಎಂಬ ಭಯವೂ ಆಯಿತು! ಇವರು ಎಲ್ಲರೂ ಡಿಪಾರ್ಟ್ಮೆಂಟಿಂದಲೇ ಶಾಮೀಲಾಗಿ ಈ ದುಷ್ಕೃತ್ಯ ಮಾಡಲು ಪ್ಲಾನ್ ಮಾಡಿದಂತಿದೆ. ಈ ಬಾಕ್ಸ್ ಹಿಡಿದು ತಂದದ್ದಕ್ಕೆ ನನ್ನನ್ನೇ ಆರೋಪಿಯನ್ನಾಗಿ ಮಾಡಬಹುದು.ಎಂದು ಗನ್ ಇಟ್ಟಿರುವ ಬಾಕ್ಸ್ ನ್ನೇ ಇವರು ನನ್ನ ಕೈಗೆ ಕೊಟ್ಟಿದ್ದಾರೆ. ಈಗ ಏನೂ ಮಾತನಾಡುವುದು ಬೇಡ... Don't get tension... Bee cool ಎಂದು ಅವನನ್ನೇ ಅವನು ಸಂತೈಸಿಕೊಳ್ಳುತ್ತಾ ಮುಂದೆ investigation ಟೈಮ್ ಲ್ಲಿ ಕೊರ್ಟಲ್ಲೇ ಸತ್ಯ ಹೇಳಿದ್ರಾಯಿತು. ಆದರೂ ಎಂತ ಕೆಲಸ ಆಯಿತು.. ಅನ್ಯಾಯವಾಗಿ ಎಲ್ಲಿಂದಲೋ ಬಂದ ನನ್ನನ್ನು ಅರೋಪಿಯನ್ನಾಗಿ ಮಾಡಿದ್ರಲ್ಲಾ???ಅಂತ ದಡಕ್ಕನೆ ಹಾಸಿಗೆಯಿಂದ ಎದ್ದ ಆರುಷಿ ಹೊರಗಡೆ ನೋಡಿದರೆ time is same but ಆರುಷಿ on his bed...😀😀
( _ಕನಸು ಕಥೆಯಾದಾಗ... ಬರಹ ಸರಣಿ ಮುಂದುವರೆಯುವುದು...._)
✍️ ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ