ಕನಸು ಕಥೆಯಾದಾಗ...ಕನಸು-2

#ಕನಸುಗಳು_ಕಥೆಯಾದಾಗ...
         _ಕನಸು-2_

ಆರುಷಿ ಮೊಬೈಲ್ ಹಿಡಿದು 'Sathish udupi'ಎಂಬ ಕಾಂಟ್ಯಾಕ್ಟ್ search ಮಾಡಿ ಡಯಲ್ ಮಾಡಿದ...

ಅಣ್ಣಾ ನನ್ನ ಊರು..ಅಣ್ಣಾ ನನ್ನ ಹೆಸರು..'ಎಂಬ ಕಾಲರ್ ಟ್ಯೂನ್ ಬರುತ್ತಿದೆ.. Long ring ಆಯಿತು ಆದರೂ  ಸತೀಶ ಪೋನ್ ತೆಗೆಯಲಿಲ್ಲ.. ಮತ್ತೊಮ್ಮೆ ಮಾಡಿದರೂ ಆಗಲೂ ತೆಗೆಯಲಿಲ್ಲ..!
ಏನೋ ಬ್ಯೂಸಿ ಇರಬೇಕು ಇಲ್ಲ ಬೈಕಲ್ಲೋ-ಕಾರಲ್ಲೊ  drive ಲ್ಲಿ ಇರಬಹುದೇನೋ...ನೋಡೋಣ  ನೋಡಿದ ಮೇಲೆ ಅವರೇ  ಮಾಡುವರು...  ಎಂದು  ಸುಮ್ಮನಾದ..

ಎಂಟತ್ತು  ನಿಮಿಷಗಳ ನಂತರ ಸತೀಶನೇ ಆರುಷಿಯ ಮೊಬೈಲ್ ಗೆ ಕರೆ ಮಾಡಿದ..ಕರೆ ಸ್ವೀಕರಿಸಿದ ತಕ್ಷಣ

"ನಮಸ್ತೇ ಮಾರಾಯ್ರೆ...ಹೊರ್ಗಡೆ ಚೂರ್ ಕೆಲ್ಸ ಇತ್ ಮಾರ್ಎ... ಪೋನ್  ಒಳ್ಗಿತ್ತು ..ಹೇಳಿ ಹೇಳಿ ಹೇಗಿದ್ದೀರಿ??

ಆರುಷಿ:ನಾವು ಚೆಂದ ಇದ್ದೇವೆ.. ನೀವು??

ಸತೀಶ:ನಾವು ಆರೋಗ್ಯ ವಾಗಿ ಇದ್ದೇವೆ...

ಆರುಷಿ:ಸತೀಶ್ ಎಂತಾ ಗೊತ್ತಾ ನಾನ್ ನಿಮಗೆ ಕಾಲ್ಮಾಡಿದ್ದು  
ನಾನು ನಾಳೆ 'ಹೆಬ್ರಿ'ಗೆ ಬರುತ್ತಿದ್ದೇನೆ..

ಓಹ್...ಏನ್ರೀ ನೀವು... ಬರ್ರೀ ಸ್ವಾಮಿ..  ಆಗ ನಿಮ್ಮನ್ನ  ಆಗ ಎಷ್ಟು ಭಾರಿ ಕರೆದರೂ  ನೀವು ಬರಲಿಲ್ಲ..  ಬನ್ನಿ ಬನ್ನಿ..

 ಸತೀಶ: ದೂರ ಹೊರಟಿದ್ದ ಅಥವಾ ದೂರದಿಂದ ಬರುತ್ತಿರೋದಾ??*

 *ಆರುಷಿ:ಎಂಥಾ ಇಲ್ಲ ಮಾರ್ರೆ.. ಎರ್ಡಮೂರು ವರ್ಷ ಆಯ್ತು ಎಲ್ಲೂ ಹೋಗಿಲ್ಲ.. ಹಾಗೆ ಬರುತ್ತಾ ಇದ್ದೀವಿ ಎರಡ್ಮೂರು ದಿನ ಇದ್ದು ಬರುವೆವು ಅಂತಾ ಹೇಳುವಾ ಅಂತ ಕಾಲ್ ಮಾಡ್ದೆ..

ಸತೀಶ: ನಾವೆಲ್ಲಿ  ಹೋಗೋಣರೀ ..? ಇಲ್ಲೇ  ಇದ್ದೇವೆ.. ಬನ್ನಿ ನೀವ್ ಬಂದಾಗ ತಪ್ಪದೇ ಕಾಲ್ ಮಾಡಿ ..ಆಯ್ತಾ  ಎಂದೇಳಲು ಆಯ್ತು ಮಾರ್ರೆ ಎಂದೇಳಿ ಸರಿ ಮತ್ತೆ ಸಿಗೋಣ ಎಂದು ಹೇಳಿ ಕಾಲ್ ಕಟ್ ಮಾಡಿದ..

ಆರುಷಿ ಮತ್ತು ಅಹನಾ ಮಕ್ಕಳಾದ ತನೇಹಾ ಮತ್ತು ಲಭನ್ಯ ನಾಲ್ಕು ಜನ ಸೇರಿ ಆಗುಂಬೆಯ ಸೂರ್ಯಾಸ್ತ ನೋಡುವ view point ಅಲ್ಲಿ ಸದ್ಯ  ಇದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಹತ್ತಾರು ಭಾರಿ ಆಗುಂಬೆಯ ಸೂರ್ಯಾಸ್ತದ ಸೊಬಗು ಸವಿದಿದ್ದರೂ ಪ್ರತಿಬಾರಿಯೂ ವಿಭಿನ್ನ ಮತ್ತು ವಿಶೇಷ.. ಅಂದಿನ ಸೂರ್ಯಾಸ್ತ ನೋಡಿಕೊಂಡು 'ಆಗುಂಬೆಯಾ ಪ್ರೇಮ ಸಂಜೆಯಾ.. ಎಂದು ಹಾಡನ್ನು ಕೇಳುತ್ತಾ, ಹಾಡುತ್ತಾ.. ಕಿರ್...  ಕಿರ್ ಎನ್ನುವ ಹುಳಗಳ ಶಬ್ಧದ ನಡುವೆ ಕಡಿದಾದ  sharp airpin ghat  ನ ತಿರುವುಗಳನ್ನು ಇಳಿಯುತ್ತಿರುವಾಗ ಘಟ್ಟಪ್ರದೇಶ ಮತ್ತು ಸಮುದ್ರದ ಮಟ್ಟದ ವಾತಾವರಣದ ವ್ಯತ್ಯಾಸ ಕ್ಕೆ ಆಗಾಗ್ಗೆ ಕಿವಿಗಳು ದಬ್ಬಾಕಿಕೊಂಡ ಅನುಭವ.ಅಹನಾ  ಮಲೆನಾಡಿನವಳಾದರೂ ಅವಳಿಗೆ ಈ ಕೋಲ್ಡ್ effect ಜಾಸ್ತಿಯೇ. ಹೀಗೆ ಕಿವಿ ದಬ್ಬಾಕಿಕೊಂಡಾಗ ಬಾಯಿ ಮತ್ತು ಮೂಗು ಒಟ್ಟಿಗೆ ಮುಚ್ಚಿ  ಹೊಟ್ಟೆಯಿಂದ ಉಸಿರನ್ನು ಬಾಯಿಯಲ್ಲಿ ಎಷ್ಟು ಸಾದ್ಯನೋ ಅಷ್ಟು ತುಂಬಿಸಿದರೆ ಕಿವಿ ಸರಿ ಹೋಗುತ್ತಿತ್ತು.. ಕಿವಿ ದಬ್ಬಾಕಿಕೊಳ್ಳುತ್ತಿದ್ದರಿಂದ ಅಹನಾ ಎಲ್ಲಿಯಾದರೂ ಕಾಫಿ ಕುಡಿಯಬೇಕು   ಎಂದಳು..

ಹ್ಞೂಂ... ಯಾವುದಾದರೂ ಹೋಟೆಲ್ ಕಂಡರೆ ನೋಡೋಣ ಇಲ್ಲ ನಾವು ಈ ರಸ್ತೆಯಲ್ಲಿ ಬಂದಾಗ ಮಾಮೂಲಿಯಾಗಿ  ಹೆಬ್ರಿ ಹೊರವಲಯದ 'ಹೋಟೆಲ್ ಸೀತಾನದಿ' ಯಲ್ಲಂತೂ ಖಂಡಿತಾ ಕುಡಿಯೋಣ ಎಂದೇಳಿದೆ..

ಮಗಳು ತನೇಹಾಳಿಗೆ ಏನಾದರೂ ಸ್ನ್ಯಾಕ್ಸ್ ಬೇಕಿತ್ತಾದರೂ ಅಮ್ಮನೇ ಹೋಟೆಲ್ಗೆ ಹೋಗೋಣ ಎಂದು ಹೇಳುತ್ತಿದ್ದುದರಿಂದ ಸುಮ್ಮನಿದ್ದಳು.. ಆಗುಂಬೆ ಘಾಟ್ ಇಳಿದಾಗ ನಮಗೆ ಮೊದಲು ಎದುರಾಗುವುದು ಸೋಮೇಶ್ವರ ಎಂಬ ಸ್ಥಳ.. ಅಲ್ಲಲ್ಲಿ ಕೆಲವು ಹೊಟೇಲ್ ಕಂಡರೂ ನಿಲ್ಲಿಸುವ ವೇಳೆಗೆ ಕಾರ್  ಮುಂದಕ್ಕೆ ಹೋಗಿದ್ದರಿಂದಲೂ, ಮುಂದೆ ನೋಡುವ ಬೇರೆ ಯಾವುದಾದರೂ ಅಂತ ಮುಂದೆ ಮುಂದೆ ಬರಲು ಕೊನೆಗೆ ನಮಗೆ ಮುಂದೆ  ಸಿಕ್ಕಿದ್ದೇ ಹೋಟಲ್ ಸೀತಾನದಿ..ಘಟ್ಟ ಇಳಿದರೆ coastal ಪರಿಣಾಮಿತ ವಾಯುಗುಣ... ಬಿಸಿ ಬಿಸಿ ಕಾಫಿ ಕುಡಿದು,ತನೇಹಾಳಿಗೆ ಮತ್ತು ಸತೀಶನ ಮನೆಗೆ ಒಂದೆರಡು ಪೊಟ್ಟಣ ತಿಂಡಿ ತೆಗೆದುಕೊಂಡು ಸತೀಶನಿಗೆ ಕಾಲ್ ಮಾಡಿ ಹೊರಟೆವು..

’ಈಶಾ ವಾಸ್ಯಂ' ನಿವಾಸದಲ್ಲಿ ಸತೀಶ ಸುಮಾ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳ ಸುಖೀ ಕುಟುಂಬ.. 400-450 km ಸುಧೀರ್ಘ ಡ್ರೈವ್ ಮಾಡಿದ್ದರಿಂದ ಸಹಜವಾಗಿ ಸುಸ್ತಾಗಿತ್ತು.ಊಟ ಮಾಡಿ ಉಭಯ ಕುಶಲೋಪರಿ ಮಾತಾಡಿ  ಎರಡ್ಮೂರು ದಿನ ಇಲ್ಲೇ surrounding  ಒಳ್ಳೆ ಪ್ಲೇಸ್  ತೋರಿಸಿ ಎಂದೇಳಿ ಹಾಸಿಗೆ ಹಿಡಿದು ಬಿದ್ದುಕೊಂಡಿದ್ದೇ ನೆನಪು ನಿದ್ದೆ ಯಾವಾಗ ಹತ್ತಿತ್ತೋ ಗೊತ್ತಿಲ್ಲ..

ಮಧ್ಯರಾತ್ರಿ 1:00-1-30 ಆಗಿರಬಹುದು.. Ape ಟಾಮ್ ಟಾಮ್ goods vehicle ಲ್ಲಿ   ಇಳಿದು ದೊಡ್ಡ ಸಂತೆ ಬ್ಯಾಗ್ ಹಿಡಿದು ಅತ್ತಕಡೆ   ನಾಲ್ಕೈದು ಜನ ಹೋದರು. ನಾವು ಮಲಗಿದ ಬೆಡ್ ರೂಮ್ನ ಕಿಟಕಿಯಿಂದ  ಅವರು ಹೋಗಿದ್ದು ಕಾಣುತ್ತಿದೆ. ಬ್ಯಾಗ್ ಹಿಡಿದು ಹೋದವರು ಬ್ಯಾಗನ್ನು ಕೆಳಗಿಟ್ಟು  ಬ್ಯಾಗ್ ನಿಂದ ಮತ್ತೆ ಏನನ್ನೋ ಹಿಡಿದು ಟವೆಲ್ ಕೊರಳಿಗೆ ಹಾಕಿಕೊಂಡ ಹಾಕಿ ನೇತುಹಾಕಿಕೊಂಡು ಇಬ್ಬರು ಒಂದೊಂದು ಮರ ಹತ್ತಿದರು.ಆರುಷಿಗೆ ವಿಪರೀತವಾದ ನಿದ್ದೆ ಇದ್ದದ್ದರಿಂದ ಎದ್ದು ನೋಡದೇ ಮಲಗಿದಲ್ಲೇ ಏನೋ ಯಾರೋ ಬಂದಂತಹ ಕನಸು ಎಂದು ಒದ್ದಾಡುತ್ತಿದ್ದಾನೆ.. ಹತ್ತು ಹದಿನೈದು ನಿಮಿಷಕ್ಕೊಮ್ಮೇ ಕೆರ್ರ್...ಕೆರ್ರ್...ಎಂಬಂತಹ ಶಬ್ದ ಎಲ್ಲಿಯೋ  ಕೇಳುತ್ತಿತ್ತು.ಮಲೆನಾಡಿನ ಜೀರುಂಡೆ ಹುಳು ಆ ರೀತಿಯಾಗಿ ಶಬ್ಧ ಮಾಡುತ್ತದೆ.  ಅವುಗಳನ್ನು ಅಡಕೆ ಹುಳು ಎಂದು ಕರೆಯಲಾಗುತ್ತದೆ ಆ ಹುಳ ಇಲ್ಲೆಲ್ಲಾ ಇದ್ದಾವೆ ಆ ಹುಳಗಳೇ ಈ ರೀತಿಯ ಕೆರ್ರೋsss.. ಎಂಬಂತಹ ಶಬ್ಧವನ್ನು ಮಾಡುತ್ತಿದ್ದಾವೆ ಎಂದು ಅಂದುಕೊಂಡು ಪಕ್ಕಕ್ಕೆ ತಿರುಗಿ ಹಾಗೆ ಮಲಗಿದಲ್ಲೇ ಮಲಗಿದ್ದ... ನಾಲ್ಕೈದು ನಿಮಿಷಗಳಲ್ಲಿ ಒಂದೊಮ್ಮೆ ದೊಪ್ಪನೆ  ಏನೋ ಬಿದ್ದ ಶಬ್ದ ಕೇಳಿದಂತಾಯಿತು. ಆ ಶಬ್ದಕ್ಕೆ ಆರುಷಿ ಎಚ್ಚರಗೊಂಡನಾದರೂ ದೇಹದ ಜೀವಕೋಶಗಳೆಲ್ಲಾ ನಿದ್ರೆಯ ಮಂಪರಿನಲ್ಲಿದ್ದುದರಿಂದ  ಎದ್ದೇಳಲಾಗಲಿಲ್ಲ.ಮನಸ್ಸಿಗೆ ಯಾರೋ ಮರವನ್ನು ಕಡಿದು ಉರುಳಿಸಿದಂತಾಯಿತು.  ಎದ್ದು ಹೊರಗೆ ಹೋಗಿ ನೋಡಬೇಕು ಎಂದೆನಿಸುತ್ತಿದೆ.ಏಳಲಾಗದೇ ಇದೊಂದು ಕನಸು  ಎಂದು ತಿರುಗಿ ಮಲಗಿದ. ಒಮ್ಮೆ ಗಟ್ಟಿ ಮನಸುಮಾಡಿ ಎದ್ದೇಳಬೇಕು ಎಂದು ಎದ್ದ. ಲೈಟ್ ಆನ್ ಮಾಡಿದ.. ಆದರೆ ಈಗ ಯಾವ ಶಬ್ಧವೂ ಕೇಳುತ್ತಿಲ್ಲ..ಅದೊಂದು ದೇಹಕ್ಕೂ  ಮನಸ್ಸಿಗೂ ಮಂಕು ಕವಿದ ಸಮಯ..ಏಳಲಾಗದೇ  ಹಾಗೆ ಮಲಗಿದ್ದ.  ಆ ಕೆಲಹೊತ್ತಿನಲ್ಲಿ ಆಟೋ ಸ್ಟಾಟ್ ಮಾಡಿಕೊಂಡು  ಹೋದಂತಹ  ಶಬ್ದವಾಯಿತು. ಆರುಷಿಗೆ ವಾಹನ ಕಾಣದೇ ಇದ್ದರೂ ಅವನ ನಿರಂತರ ಅಭ್ಯಾಸ ಬಲದಿಂದ ವಾಹನದ ಶಬ್ಧ ಕೇಳಿದರೆ ಇಂತದ್ದೇ ವಾಹನ  ಎಂದು ಕರೆಕ್ಟಾಗಿ ಹೇಳುವ ಪರ್ಫೆಕ್ಟ್ನೆಸ್ ಇತ್ತು. ಆದರೆ ಅದೆಲ್ಲವೂ ಕನಸು ಎಂದು ನಿದ್ದೆಯಲ್ಲೇ ಇದ್ದ ಆರುಷಿ..

ಬೆಳಿಗ್ಗೆ  ಆರುಷಿಯದು ಪ್ರತಿದಿನ 4-50 am alarm ಪ್ರತಿದಿನವೂ alaram ಗಿಂತಲೂ ಮುಂಚೇನೇ ಏಳುತ್ತಿದ್ದನಾದರೂ ಅಂದು ಮಾತ್ರ alaram ಆದ ಮೇಲೆಯೇ ಎದ್ದ... ಎದ್ದು ಪ್ರೆಶ್ ಅಪ್ ಆಗಿ ಹೊರಗಡೆ ಹೋದೆ.. ಯಾರೋ ಸತೀಶನೊಂದಿಗೆ  "ಅಣ್ಣು.. ಏ ಯಾರೋ ರಾತ್ರಿ ಗಂಧದಮರ ಕಡ್ಕೊಂಡು ಹೋಗಿದ್ದಾರೆ ಮಾರ್ರೆ..ಗೊತ್ತೆ ಆಗಿಲ್ಲ ." ಅಂತ ಸತೀಶನತ್ರ ಮಾತನಾಡುತ್ತಿರುವ ಶಬ್ದ ಕೇಳಿಸುತ್ತಿದೆ. ಮನುಷ್ಯ ಕಾಣುತ್ತಿಲ್ಲ. ಒಂದೆರೆಡು ಹೆಜ್ಜೆ ಮುಂದೆ ಹೋಗಿ ನೋಡಿದರೆ ..ಸತೀಶ ಅವರೆಂತ ಗೊತ್ತಾ ಆ  ಕಾಂಡದ ಮೇಲ್ಬಾಗದಲ್ಲಿ ಇತರೆ ಮರಗಳಿಗೆ ಗಟ್ಟಿ ವಯರ್ ಹಾಕಿ  ಸಮಾ ಕಟ್ಟಿದ್ದಾರೆ ಮಾರ್ರಾಯ.. ಕಾಂಡ ಮಾತ್ರ ಕಟ್ ಮಾಡಿ ಕದ್ದೊಯ್ದಿದ್ದಾರೆ.ಖತರ್ನಾಕ್ ಕಳ್ಳರು...ಎಂದು ಸರಿ ನೀ ಬಾ ಬಾ.. ನಾನು ಆಮೇಲೆ ಮಾತಾಡುವೆ ಎಂದು ಪೋನ್ ಕಟ್ ಮಾಡುತ್ತಾ ನೋಡಿ 'ಸರ್ ರಾತ್ರಿ ಕಳ್ಳರು ಗಂಧದ ಮರ ಕಡ್ಕೊಂಡ್ ಹೋಗಿದ್ದಾರೆ' ಎಂದೇಳಿದ ಸತೀಶ..ಅಯ್ಯೋ ಅದ್ಹೇಗೆ ಮರವನ್ನು ಕತ್ತರಿಸಿ ಹೊತ್ತೊಯ್ದಿದ್ದಾರೆಂದು  ನೋಡಿದರೆ  ಸುಮಾರು ಒಂದೂವರೆ ಅಡಿ ಸುತ್ತಳತೆಯ ಎಂಟೊಂಭತ್ತು ಅಡಿ ಎತ್ತರದ ಮರ. ಮೊದಲು ಗಂಧದಮರದ ಮೇಲ್ಭಾಗದ (Top) ರೆಂಬೆಕೊಂಬೆಗಳನ್ನು  ತೇಗ,ಹಲಸು ಇತರೆ  ಮರಗಳಿಗೆ ಅದು ಕೆಳಗೆ ಬೀಳದಂತೆ ಕಟ್ಟಿದ್ದಾರೆ.ಇದರಿಂದ ರೆಂಬೆಕೊಂಬೆಗಳು ನೆಲಕ್ಕುರುಳದೇ ಮೇಲ್ಗಡೆಯೇ ಜೋತು ಬಿದ್ದಿವೆ.ಕಟ್ಟಿದ ವಯರ್ ಗಳು  ಮರದ ಮೇಲ್ಬಾಗವನ್ನು ನೆಲಕ್ಕೆ ಉರುಳಲು ಬಿಟ್ಟಿಲ್ಲ. ತಮಗೆಷ್ಟಕ್ಕೆ ಬೇಕೋ ಅಷ್ಟಕ್ಕೆ    ಕಾಂಡ ಕತ್ತರಿಸಿದ್ದಾರೆ. ಮರ ಕತ್ತರಿಸುವಾಗ ಹೆಚ್ಚು ಶಬ್ದ ಬಾರದೇ ಇರಲಿ ಎಂದು ಸತೀಶನ ಬಾವಿಯಿಂದಲೇ ಬಕೆಟ್ ಲ್ಲಿ ನೀರು, ಜಗ್ ತಗೊಂಡ್ಹೋಗಿ ನೀರು ಹಾಕಿ ಕಟ್ ಮಾಡಿದ್ದಾರೆ.. ಆನಂತರ ಎರಡ್ಮೂರು ತುಂಡುಮಾಡಿ ಹೊತ್ತುಕೊಂಡು ಹೋಗಿದ್ದಾರೆ.ಆಗಲೇ ಆರುಷಿ ಬಾಯ್ದೆರೆದು ರಾತ್ರಿ ಯಾರೋ ಓಡಾಡುತ್ತಿದ್ದುದು,ಮರ ಹತ್ತಿದಹಾಗೆ  ನನಗೆ ಅನಿಸಿತು ಆದರೆ  ಅದೆಲ್ಲಾ  ಕಂಡದ್ದು ಕನಸು ಅನ್ಕೊಂಡ್ ಸುಮ್ಮನಾದೆ ಮಾರ್ರೆ ಥೋ ಎಂದ ಖತರ್ನಾಕ್ ಖದೀಮರೋ ಏನೋ ಮಾರ್ರೆ..ನಮ್ ಕಡೆ ಈತರಹದ  ಕಳ್ಳರಿದ್ದಾರೆ ಆದರೆ ಈ ಭಾಗದಲ್ಲೂ ಈತರಹದ ಕಳ್ಳರು ಇದ್ದರಾ ಎಂದು ಆ ಆಶ್ಚರ್ಯಕರವಾಗಿ ಪತ್ನಿ ಅಹನಾಳನ್ನು ಕರೆದು  ಆ ಘಟನಾ ಸ್ಥಳವನ್ನು ಆಶ್ಚರ್ಯ ಚಕಿತರಾಗಿ ನೋಡುತ್ತಾ ನಿಂತರು...

_ಕನಸುಗಳು ಕಥೆಯಾದಾಗ..._
ಮುಂದುವರೆಯುವುದು...

✍️ *ನಾಗೇಂದ್ರ ಬಂಜಗೆರೆ.*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..