ಕನಸು ಕಥೆಯಾದಾಗ-ಕನಸು-4
_ಕನಸು-4_
ಸಮಯ ಎಂಟೂ ಮುಕ್ಕಾಲು ಆಗಿದೆ.ಆರುಷಿಯು ಟೀ ಷರ್ಟ್ ಮತ್ತು cotton ಜೀನ್ಸ್ ಪ್ಯಾಂಟ್,power ಶೂ ಹಾಕಿಕೊಂಡು ಎಡಗೈಯಲ್ಲಿ ಒಂದು document ಪೈಲ್ ಮತ್ತು ಪಿಸ್ತುಲ್,ಬಲಗೈಯಲ್ಲಿ ಕಾರ್ ಕೀ ಹಿಡಿದು ಹನ್ನೊಂದು ಗಂಟೆಯೊಳಗೆ ನಾನು 'ಅಲ್ಲಿಗೆ' ಹೋಗಬೇಕು ಎಂದು ಅವಸರವಸರವಾಗಿ ಕಾರಬಳಿ ಬರುತ್ತಿದ್ದಾನೆ.ಕ್ಲಿಕ್ ಕ್ಲಿಕ್ ಎಂದು ಕಾರ್ ನ ಲಾಕ್ open ಮಾಡಿ ಎಡಗೈಯಲ್ಲಿ ಇದ್ದ file ಮತ್ತು ಪಿಸ್ತುಲ್ ಅನ್ನು ಖಾಲಿ ಇದ್ದ front passenger ಸೀಟ್ ಮೇಲೆ ಎಸೆದು ಕಾರ್ ಸ್ಟಾರ್ಟ್ ಮಾಡಿ ಕೆಲವೇ ಸೆಕೆಂಡ್ ಗಳಲ್ಲಿ ಹೊರಟ..
ಆರುಷಿ ಕಾರನ್ನು ಯಾವಾಗಲೂ ಅತೀ ವೇಗವಾಗಿ ಚಲಾಯಿಸುವುದಿಲ್ಲ. ಏನೋ ಒಳ್ಳೆಯ ರಸ್ತೆ ಇದ್ದು road free edre 100-120 km/h ಗರಿಷ್ಠ.. ಆದ್ರೆ ಅಂದು ಕಾರ್ ಸ್ಟಾರ್ಟ್ ಮಾಡಿದಾಗಿನಿಂದಲೂ ಎಕ್ಸ್ಕ್ಯೂಲೇಟರ್ ತುಳಿಯುತ್ತಿದ್ದ ಪರಿ ಅವಸರವನ್ನು ಸೂಚಿಸುತ್ತಿತ್ತು.. ಅಂದು Highway ಗೆ ಬಂದಾಗ ಗರಿಷ್ಠ 140+ km/h speed reach ಆಗಿತ್ತು..ಕಾರುವೇಗವಾಗಿ ಚಲಾಯಿಸುತ್ತಿರುವಾಗ ಅವನ ದೃಷ್ಟಿ ರಸ್ತೆಯಲ್ಲಿನ ಅವನ ಟ್ರ್ಯಾಕ್ ಬಿಟ್ಟು ಏನನ್ನು ನೋಡುವುದಿಲ್ಲ..ಹಾಗೆ ಏಕಚಿತ್ತತೆಯಿಂದ ಹೋಗುತ್ತಿರುವಾಗ ಯಾವುದೋ unknown ನಂಬರ್ ನಿಂದ ಮೊಬೈಲ್ ರಿಂಗಾಯಿತು.ನಂಬರ್ display device ಲ್ಲಿ ಕಂಡಿತಾದರೂ ಆಮೇಲೆ ನೋಡೋಣ ಟೈಂ ಆಯಿತು ಪಸ್ಟ್ ಹನ್ನೊಂದು ಗಂಟೆಯೊಳಗೆ ಅಲ್ಲಿಗೆ ಹೋಗಿ ತಲುಪಬೇಕು ಎಂದು ಅಂದುಕೊಂಡು ಮೊಬೈಲ್ ನೋಡಲಿಲ್ಲ.ಕಾಲ್ ಕೂಡ ರಿಸೀವ್ ಮಾಡಲಿಲ್ಲ.. Two line ಹೈವೇಯಲ್ಲಿ ಕಾರ್ 130+km/h ವೇಗವಾಗಿ ಮೂವ್ ಆಗುತ್ತಿದೆ..
ಮತ್ತೊಮ್ಮೆ ಗುರ್ರ್.. ಗುರ್ರ್.....ಎಂದು ಮೊಬೈಲ್ vibrate ಆಗುತ್ತಿದೆ.
ಅದೇ unknown ನಂಬರ್ ನಿಂದ ಮತ್ತೆ ಕಾಲ್ ಬಂತು...ಯಾರಿದೂ.. ಮತ್ತೆ ಕಾಲ್ ಮಾಡ್ತಿದ್ದಾರಲ್ಲ ಯಾರ್ ನೋಡೋಣ ಎಂದು ಕಾರ್ ನ info entertainment ಡಿವೈಸ್ ನ Bluetooth ಗೆ ಕನೆಕ್ಟ್ ಆಗಿತ್ತು. Call Receive ಮಾಡಿದ..
"Hello..."ಎಂದ..
ಅತ್ತ ಕಡೆಯಿಂದಲೂ
"ಹಲೋ.."
ಆರುಷಿ:ಯಾರಿದು..ಬೇಗ ಮಾತಾಡಿ...
ಏ ನಾನು ಕಣೋ... ಗೊತ್ತಾಯ್ತಾ..??
ವಾಯ್ಸ್ femilier ಇದೆ ಆದ್ರೆ ಯಾರ್ ಅಂತ ಗೊತ್ತಾಗುತ್ತಿಲ್ಲ..sorry ಹೇಳಿ ಹೇಳಿ ಯಾರ್ ಹೇಳಿ..
ಯಾಕೋ ಅಷ್ಟು ಅರ್ಜೆಂಟ್?? ಎಲ್ಲಿಗೋ ಹೋಗುತ್ತಿರೋ ಆಗಿದೆ.. ನಾನು ಕಣೋ ಶಿವರಾಮ್..
ಆರುಷಿ:ಓಹ್ ಶಿವರಾಮ್ ಹೇಗಿದ್ದೀಯಾ???
ಶಿವರಾಮ್:ಚೆನ್ನಾಗಿದ್ದೀನಿ ಕಣ್ಲೇ.. ನೀನು??
ಆರುಷಿ:ನಾನು ಚೆನ್ನಾಗಿದ್ದೀನಿ.. ಹೇಳು ಶಿವು ಎಲ್ಲಿದ್ದೆ? ಏನ್ ಸಮಾಚಾರ??
ಶಿವರಾಮ್:ಊರಲ್ಲಿ ಇದ್ದೆ ಕಣ... ಐದಾರು ದಿನ ರಜೆ ಹಾಕೀದ್ದೀನಿ ಸ್ವಲ್ಪ ಮನೆಕಡೆ ಕೆಲಸಗಳು ಇದ್ದವು.. ಹಾಗೆ ಬಹಳ ದಿನಗಳಾಯಿತು ಹಾಗೇ ಮಾತಾಡೋಣ ಅಂತ ಕಾಲ್ ಮಾಡಿದೆ..ಬ್ಯುಸಿ ಇದ್ದೀಯಾ??
ಆರುಷಿ:ಹೌದಾ?? ಕರೆಮಾಡಿದ್ದು ತುಂಬಾ ಸಂತೋಷ.. ಬ್ಯುಸಿ ಏನ್ ಇಲ್ಲ ದುರ್ಗಕ್ಕೆ ಹೊರಟಿದ್ದೆ.. ಪ್ರೀ ಇದ್ದರೆ ನೀನು ರೆಡಿ ಆಗು ಹೋಗಿಬರೋಣ..
ಶಿವರಾಮ್:ಈಗ ನೀನ್ ಎಲ್ಲಿದ್ದೀಯಾ??
ನಾನು ಈಗ ಗರಣಿ ಕ್ರಾಸ್ ಲ್ಲಿ ಇದ್ದೀನಿ ನಿನ್ ಹ್ಞುಂ ಅಂದ್ರೆ ಇನ್ನೂ 18-20 ನಿಮಿಷದಲ್ಲಿ ನಿನ್ನ ಮುಂದೆ ಇರ್ತೀನಿ ನೋಡು..
ಶಿವು:ಹೊಲಕ್ಕೆ ಬಂದಿದ್ದೆ.. ಮನೆಗೆ ಹೋಗಿ ರೆಡಿಯಾಗಿ ಬರಾಕೆ ಆಗಲ್ಲ.. ಲುಂಗಿಯಲ್ಲಿ ಇದೀನಿ ಬಾ..ಬಾ.. ಹಿಂಗೆ ಹೋಗಣಾ ಬಾ..
ಆರುಷಿ;ಹ್ಞುಂ.. ಸರಿ ಎಂದವನೇ ಕಾರನ್ನು ಪ್ಲೈ ಓವರ್ ಮೇಲೆ ತೆಗೆದುಕೊಳ್ಳದೇ ಸರ್ವೀಸ್ ರಸ್ತೆಯಲ್ಲಿ ಹಾಗೆ ಬಂದು ಹೈವೇಯಿಂದ ನಾಯಕನಹಟ್ಟಿ ರಸ್ತೆಗೆ ಕಾರನ್ನು ತಿರುಗಿಸಿದ..
ಶಿವರಾಮ್ ಆರುಷಿಯ PU ಕಾಲೇಜು ದಿನಗಳ classmate ಮತ್ತು ಸಂಬಂಧಿಯೂ ಹೌದು. ಆದ್ರೆ ಇವನದೂ ಟೆಕ್ನಿಕಲ್ ಪಿಲ್ಡ್.. ಆರುಷಿಯದು ಟೀಚಿಂಗ್ ಫೀಲ್ಡ್.. ಹದಿನೆಂಟು ಇಪ್ಪತ್ತು ವರ್ಷಗಳಲ್ಲಿ ಪರಸ್ಪರರ ಬೇಟಿಯೇ ಆಗಿರಲಿಲ್ಲ.. ಅಪರೂಪಕ್ಕೆ ವರ್ಷಕ್ಕೆ ಒಂದೆರಡು ಬಾರಿ ಒಂದೆರಡು ನಿಮಿಷಗಳ ಮಾತುಕಥೆ ಅಷ್ಟೇ..ಒಮ್ಮೆ ಈ ಶಿವರಾಂ ಆರುಷಿ ಚಿತ್ರದುರ್ಗದ ರೂಮ್ ನಲ್ಲಿ ಇದ್ದಾಗ ಆರುಷಿಯೂ ರಾತ್ರಿ ಹತ್ತಾಯಿತು ನನಗೆ ನಿದ್ದೆ ಬರತ್ತಿದೆ. ನಾನು ಮಲಗುವೆ ನೀನು ಮಲಗು ಅಂದ.. ಅದಕ್ಕೇ ಶಿವರಾಂ "ಮಲಗಾಕೆ ಬಂದಿಯೋ ಓದದಕ್ಕೇ ಬಂದೀಯೋ.. ??ನಿನ್ತರ ಮಾಡಿದರೆ ಅಷ್ಟೇ ಉದ್ದಾರ ಆದಂಗೆ ಹೋಗಲೇ" ಎಂದು ಎದ್ದು ಹೊರಗಡೆ ಹೋದ...ಹೋದವನು ಎಂಟತ್ತು ನಿಮಿಷಗಳಲ್ಲಿ ವಾಪಾಸು ಬಂದ..
"ಯಾಕೋ ಇಷ್ಟೊತ್ತಲ್ಲಿ ಕೆಳಗೆ ಎಲ್ಲಿ ಹೋಗಿದ್ದೆ?"ಎಂದು ಕೇಳಿದ್ದಕ್ಕೆ ಜೋಗಿಮಟ್ಟಿ ಸರ್ಕಲ್ ಗೆ ಹೋಗಾಣ ಅಂತ ಹೋಗುತ್ತಾ ಇದ್ದೆ ಆದ್ರೆ... ಎಂದು ಮಾತು ನಿಲ್ಲಿಸಿದ..
ಆದ್ರೆ... ಏನಾಯಿತೋ ಯಾಕ್ ಹೋಗ್ಲಿಲ್ಲ??
ಒರೆಗೆ ಬಗ್ಗಿ ಬಲಗಾಲ ಮೀನ ಖಂಡವನ್ನು ಕೆರೆದುಕೊಳ್ಳುತ್ತಾ "ಗೊಬ್ಬು ನನಮಗನ್ದು.. ರಂಗಯ್ಯನ ಬಾಗಿಲ ಹತ್ರ ನಾಯಿ ಕಚ್ಚಿಬಿಡ್ತು" ಅಂದ...
ಇವನ್ಯಾವನ್ಲೇ ಮಲಗು ಅಂದ್ರೆ ಹೊರಗೋಗಿ ನಾಯಿ ಕಚ್ಚಿಸಿಕೊಂಡು ಬಂದೀಯಲ್ಲಲೇ..ಹೌದು ಅದ್ಹೇಗೆ ಕಚ್ಚಿತು??
ರಂಗಯ್ಯನ ಬಾಗಿಲ ಒಳಗೆ ಹೋಗತ್ತಾ ಇದ್ದನಾ...ಯಾರೂ ಇರಲಿಲ್ಲ ಒಂದು ನಾಯಿ ಮಾತ್ರ ಎದುರು ಬರ್ತಾ ಇತ್ತು..ಸೇಪ್ಟೀಗೆ ಅಚ್ಚಾ..ಅಂದೆ..ಅದು ಎದುರುಗಡೆಯಿಂದ ನನ್ನ ಸಮನಾಂತರದಲ್ಲಿ ಮುಂದೆ ಪಾಸ್ ಆಯಿತು...ಆದರೆ ಮುಂದೆ ಹೋಗಿದ್ದು ಹಿಂದೆ ಬಂದು ಬಾಯಿ ಹಾಕಿ ಬಿಡ್ತು ಎಂದ...ಜಾಸ್ತಿ ಗಾಯ ಆಗಿರಲಿಲ್ಲ.. ತೊಳೆದು ಅರಿಶಿಣ ಹಾಕ್ಯ ಎಂದು ಹೇಳಿದ ಸೀನ್ ನೆನಪಿಸಿಕೊಳ್ಳುತ್ತಾ ಹದಿನೈದು ಇಪ್ಪತ್ತು ನಿಮಿಷಗಳಲ್ಲಿ ಶಿವರಾಮ್ ಇರುವ ಸ್ಥಳಕ್ಕೆ ಬಂದು ತಲುಪಿದ..
ಶಿವರಾಂ ನಲಗೇತನಹಟ್ಟಿ ಸಮೀಪದಲ್ಲಿ ಹೊಸಗುಡ್ಡಕ್ಕೆ ಸಮಾಂತರವಾಗಿ ರಸ್ತೆಯ ಪಕ್ಕ ನಿಂತು ದೂರದಲ್ಲಿ ಬರುತ್ತಿದ್ದ ಕಾರನ್ನು ಆರುಷಿಯದು ಇದೇ ಕಾರು ಇರಬಹುದಾ ಅಂತಾ ಡೌಟಲ್ಲಿ ನೋಡುತ್ತಾ ಇದ್ದಾ.. Speed slow ಆದ ತಕ್ಷಣ ಲುಂಗಿ ಕೆಳಗೆ ಬಿಟ್ಟು ಕಾರು ಹತ್ತಲು ರೆಡಿಯಾದ. ಸೀಟ್ ಮೇಲೆ ಇದ್ದ ಪೈಲನ್ನು ಡ್ಯಾಶ್ಬೋರ್ಡ್ ಮೇಲಿಟ್ಟು ಪಿಸ್ತೂಲ್ ನ್ನು ಎತ್ತಿ glouse box ಲ್ಲಿ ಆರುಷಿ ಇಡುತ್ತಿದ್ದ..
ಕಾರನ್ನು ಹತ್ತಿದ ಶಿವು ಇದೇನೋ ಪಿಸ್ತೂಲ್ ಎಲ್ಲಾ ಇಟ್ಕೊಂಡಿಯಾ.??
ಆರುಷಿ:ಹ್ಞುಂ ಹಾಗೆ ಇರುತ್ತೆ ಜೊತೆಗೆ ಯಾವಾಗಲೂ..
ಟಿಫಿನ್ ಮಾಡಿದೆಯಾ??
ಶಿವರಾಂ:ಹ್ಞು ಆಯಿತು...ನಿಂದೂ..?
ಆರುಷಿ: ನಂದೂ ಆಯಿತು... ಮತ್ತೆ ಏನ್ ಸಮಾಚಾರ ಮನೆಯಲ್ಲಿ ಎಲ್ಲರೂ ಚೆನ್ನಾಗಿ ಇದ್ದಾರಾ??
ಶಿವರಾಂ:ಹ್ಞು... ಚೆನ್ನಾಗಿದ್ದಾರೆ..ಏನ್ ಕೆಲಸ ಈಗ ದುರ್ಗದಲ್ಲಿ??
ಆರುಷಿ:ಕಾಲೇಜಿಗೆ ಹೋಗಬೇಕಿತ್ತು.. ಅಲ್ಲೊಂದು ಒಂದು marks card verification ಕೆಲಸ ಇದೆ..
ಶಿವು: ಡ್ಯಾಶ್ ಬೋರ್ಡನಿಂದ ನೂರು ರುಪಾಯಿಯ ಒಂದು ಬಂಡಲ್ ಸರಿಸಿ ಪಿಸ್ತೂಲ್ ತೆಗೆಯುತ್ತಾ..ಕೈಗೆ ತೆಗೆದುಕೊಂಡು ಒಮ್ಮೆ ನೋಡಿದ... ಏ ನಾನು ಗನ್ ನೋಡೆ ಇಲ್ಲ ಕಣಯ್ಯ.... ಎಂದು ಭಯದಿಂದಲೇ ಕೆಳಗಿನಿಂದ ಮೇಲಕ್ಕೆ ನೋಡುತ್ತಿದ್ದ..
ಎಷ್ಟು ಮ್ಯಾಗಜಿನ್ ಇದೆ ಇದರಲ್ಲಿ??
ಆರು ಇದೆ..
*ಶಿವು:ಆಗ ಕಾಲಲ್ಲಿಜೇಬಲ್ಲಿ ಪೆನ್ನು ಸಮೇತ ಇರಲಿಲ್ಲ.. ಈಗ ಕಾರು ದುಡ್ಡು ಪಿಸ್ತೂಲ್ ಬಾರಿ ಕೆಲಸ ಬಿಡಪ್ಪ.. ನಿನ್ದು..
ಆರುಷಿ:ಏನಿಲ್ಲ.. ಸಹಜವಾಗಿ ಹಾಗೆ ಕಾಲಕ್ರಮೇಣ ಎಲ್ಲವೂ ಅಗತ್ಯ ಆದವು ಸೊ ತಗಂಡೀನೊ..ಹೀಗೆ ಬಹಳ ವರ್ಷಷಗಳಿಂದ ಬೇಟಿಯಾಗದೇ ಉಳಿದಿರುವ ವಿಷಯಗಳ ಬಗ್ಗೆ ಅಲ್ಪಸಮಯದಲ್ಲಿ ಮಾತನಾಡುತ್ತಾ ಚಂದ್ರವಳ್ಳಿಯ ಸಮೀಪ ಇರುವ ಕಾಲೇಜು ತಲುಪಿದರು..ಅದು ಕಾಲೇಜಿನ ರೀತಿಯಲ್ಲೇ ಇರಲಿಲ್ಲ.. ಕಾಲೇಜಿನ ಹೊರಗೆ ಒಳಗೆಲ್ಲಾ ಪೋಲಿಸ್ ಮತ್ತು CRPF ಬೆಟಾಲಿಯನ್..! ಒಳಹೋಗಲು ಕಾಲೇಜಿನ main ಗೇಟಲ್ಲಿ ಗೇಟಿನ ಸ್ವಲ್ಪವೇ open ಮಾಡಿ ಬಗ್ಗಿ ಒಳಗೆ ಹೊರಹೋಗಲು ಅವಕಾಶ ಮಾಡಿದ್ದರು. ಇನ್ನೂ ಕಾಲೇಜಿನ ಹುಡುಗರು-ಹುಡುಗಿಯರು ಒಳಹೋಗಲು ಬೇರೆ ಎರಡು ಗೇಟಿನಲ್ಲಿ ಪೋಲಿಸ್ ಪೇದೆಗಳು,ಸೆಕ್ಯೂರಿಟಿ ಗಾರ್ಡ್ಗಳು,ಕಾಲೇಜಿನ ವಾಚ್ ಮ್ಯಾನ್ ಗಳೂ ಸೇರಿ ವಾಟರ್ ಬಾಟಲ್,ಬಟ್ಟೆಗಳ ಒಳಗೆ ಯಾವುದಾದರೂ weapon ಇದ್ದಾವಾ ಅಂತ ಪರಿಶೀಲನೆ ನಡೆಸಿ ಒಳಗೆ ಬಿಡುತ್ತಿದ್ದರು.
ಆರುಷಿ ಯ ಡಿಪಾರ್ಟ್ಮೆಂಟ್ ಐಡಿ ಕಾರ್ಡ್ ಕೊರಳಲ್ಲೇ ಇತ್ತು.. ಎಂದಿನಂತೆ ಪೈಲ್, ಪೈಲ್ ಮೇಲೆ ಪಿಸ್ತೂಲ್ ಎರಡನ್ನೂ ಎಡಗೈಯಲ್ಲಿ ಹಿಡಿದುಕೊಂಡು main gate ಇಂದ ಒಳಗೆ ಹೋಗುತ್ತಿದ್ದಾಗ ಒಬ್ಬ ಪೋಲೀಸ್ ಕಾನ್ಸ್‌ಟೇಬಲ್ "ಗುಡ್ ಮಾರ್ನಿಂಗ್" ಸರ್ ಎಂದು ಪೋಲಿಸ್ ಸೆಲ್ಯೂಟನ್ನು ಹೊಡೆದರು.
ನಮಸ್ತೇ.. ನಮಸ್ತೇ...
ಕಾನ್ಸ್‌ಟೇಬಲ್: ಲುಂಗಿಯಲ್ಲಿದ್ದ ಶಿವರಾಂನನ್ನು ನೋಡುತ್ತಾ ಸರ್ ಇವರು...??
ಅವರೂ ಡಿಪಾರ್ಟ್ಮೆಂಟ್ ನವರೇ ಕಂಡ್ರಿ...
ಕಾನ್ಸ್‌ಟೇಬಲ್: ಆದ್ರೆ ಸಾರ್ ಅವರು ಸಿವಿಲ್ ಡ್ರೆಸ್ ಅದೂ ಲುಂಗಿಯಲ್ಲಿ ಇದ್ದಾರೆ..
ಆರುಷಿ:ಅರ್ಜೆಂಟ್ ಅಂತಾ ನಾನೇ ಕರೆದುಕೊಂಡು ಬಂದೆ.. ಇರಲಿ ಬಿಡಿ nothing problem..
ಸರಿ ಸರ್ its OK... ಎಂದ.
ಹೌದು ಆ ಲೇಡೀಸ್ ವಾಟರ್ ಬಾಟಲ್ ಎಲ್ಲಾ ಕ್ಯಾಪ್ ಬಿಚ್ಚಿ ಬಿಚ್ಚಿ ನೋಡ್ತಿದ್ದಾರಲ್ಲರೀ ಯಾಕೆ ಏನಾದರೂ problem ಆಗಿತ್ತಾ??
ಕಾನ್ಸ್‌ಟೇಬಲ್: ಏನಿಲ್ಲ ಸಾರ್.. ಇದೇ ಈ ಹಿಜಾಬ್ ಸಣ್ಣ ಪುಟ್ಟ ಗಲಾಟೆಯಲ್ಲಿ ಯಾರಾದರೂ ವಾಟರ್ ಬಾಟಲ್ ರೂಪದಲ್ಲಿ ಪೆಟ್ರೋಲ್ ಬಾಂಬ್ ಒಳಗೆ ತಗಂಡ್ ಹೋಗಬಾರದು ಅಂತಾ precaution ಗೆ ಚೆಕ್ ಮಾಡ್ತೀದರೆ ಸಾರ್...
ಹ್ಞುಂ ಆಗಲಿ ಆಗಲಿ.. ಎಂದು ಪಿಸ್ತೂಲ್ ಸಮೇತ ಯಾವುದೇ ತಕರಾರು ಇಲ್ಲದೇ ಒಳಗೆ ಹೋದರು.ಆ ವಿದ್ಯಾರ್ಥಿಗಳ ಕ್ಯೂ ನಲ್ಲಿ ಇದ್ದ ಕೆಲವರು 'ಯಾರ್ರೋ ಅದು ಪಿಸ್ತಲ್ ಎಲ್ಲಾ ಇಡ್ಕೊಂಡಿದ್ದಾರೆ' ಅಂತ ನೋಡುತ್ತಾ ಮಾತಾಡಿಕೊಳ್ಳುತ್ತಿದ್ದರು..
ಒಳಗಡೆ ಹೋದವರೇ ಆಡಳಿತ ಕಛೇರಿಯ ಒಳಹೊಕ್ಕು ಹದಿನೈದು ಇಪ್ಪತ್ತು ಜನ case worker ಮಧ್ಯೆ ಸುತ್ತಲೂ ಕಣ್ಣಾಡಿಸಿ ಸಫಾರಿ ಹಾಕಿರುವ ವ್ಯಕ್ತಿಯ ಟೇಬಲ್ ಮುಂದೆ ಹೋಗಿ ಕುಳಿತು ಪೈಲ್ ಮತ್ತು ಗನ್ ನ್ನು ಇಟ್ಟರು..
ಆ ಸಫಾರಿ ಹಾಕಿದ ಮನುಷ್ಯನ ಹೆಸರು ಆರುಷಿಗೂ ಗೊತ್ತಿರಲಿಲ್ಲ ಆದರೆ ಅವರದೂ ಯಾವಾಗಲೂ multicoloured same safari custom...ಜೊತೆಗೆ ಹಣೆಯಲ್ಲೊಂದು ಸಿಂಗಲ್ ರೆಡ್ ನಾಮ..!
ಸರ್ ನಮಸ್ತೇ.. ಒಂದು details ಇರುವ ಪೇಪರ್ ನ್ನು ಅವರ ಮುಂದಿರಿಸುತ್ತಾ master ಡಿಗ್ರಿಯ ಸರ್ಟಿಫಿಕೇಟ್ ವೆರಿಪಿಕೇಶನ್ ಬೇಕು..
ನೋಡ್ತೀನಿ ಸರ್ ಒಂದೇ ನಿಮಿಷ.. ಟೇಬಲ್ ಡ್ರಾ ಓಪನ್ ಮಾಡುತ್ತಾ ಅರುಷಿಯ ಎದೆಯ ಮೇಲೆ ನೇತಾಡುತ್ತಿದ್ದ ಡಿಪಾರ್ಟ್ಮೆಂಟ್ id ಯನ್ನು ನೋಡುತ್ತಾ education ಡಿಪಾರ್ಟ್ಮೆಂಟ್ ನವರಿಗೆ department ನಿಂದ ಗನ್ ಕೊಡ್ತಾರಾ ಎಂಬಂತೆ ಆ ಸಫಾರಿ ಕೇಸ್ ವರ್ಕರ್ ತಲೆಯಲ್ಲಿ ಬಂತಾದರೂ ಅದೆಲ್ಲಾ ನನಗ್ಯಾಕೆ ಅವರು ಕೇಳಿದ್ದು ನೋಡಿ ಕೊಟ್ರಾಯಿತು ಎಂಬಂತೆ ಅವರ ಮುಖ ಚರ್ಯೆ ಇತ್ತು..
ಸರ್ ಐದಾರು ದಿನ ಆಗತ್ತೆ... ಬಂದ ತಕ್ಷಣ mail ಮಾಡುವೆ... ಒಂದು ಪೇಪರ್ ಪ್ರಿಂಟ್ ತೆಗೆದು ಸರ್ ಈ received ಪೇಪರ್ ಗೆ ನಿಮ್ಮ mail address ಬರೆದು ಒಂದು sign ಮಾಡಿ.. ಎಂದರು.
ಆರುಷಿಯು ತನ್ನ ಜೇಬಿನಿಂದ ಗೋಲ್ಡ್ ಕಲರ್ parker ಪೆನ್ ತೆಗೆದು ಹೆಸರು ಬರೆದು ವಿಳಾಸ ಬರೆಯುವಾಗ ಸ.. ಹಿ..ಪ್ರಾ... ಶಾಲೆ.. ಎಂದು ಉದ್ಘರಿಸಿದ. ಅದಕ್ಕೆ ಪ್ರತಿಯಾಗಿ ಆ ಸಫಾರಿ ಕೇಸ್ ವರ್ಕರ್ ಸ.. ರಿ...ಗ..ಮ... ಎಂದು ಲಯಬದ್ದವಾಗಿ ದ್ವನಿಗೂಡಿಸಿದ..ಆರುಷಿಯೂ ಕೂಡ ಪ..ದ...ನಿ...ಸಾ... ಎಂದು ಹಾಡಿದ..ಅಲ್ಲಿಗೆ ಸುಮ್ಮನಾಗದೇ ಆ ಸಫಾರಿ ಮ್ಯಾನ್ ಸ...ನಿ..ದ..ಪ... ಎಂದ ಆರುಷಿಯೂ ಕೂಡ ಮ..ಗ..ರಿ..ಸ.. ಎಂದು ಹಾಡಲು ಅಲ್ಲೇ ಕುಳಿತಿದ್ದ ಒಬ್ಬ ಮಹಿಳಾ ಕೇಸ್ ವರ್ಕರ್ ಸ..ಸ.. ರಿ...ರಿ.. ಗ..ಗ..ಮ..ಮ ಎಂದು ಶುರಮಾಡಿದರು..ಕೆಲವರು ಬೆಳಿಗ್ಗೆ ಬೆಳಿಗ್ಗೆ ಮಜಾ ಇವತ್ತು ಎಂದು ನೋಡ್ತಿದ್ದರೆ ಇನ್ನೂ ಕೆಲವರು ಇವರು ಶುರು ಮಾಡಿದ್ರೆ ಕೆಲಸ ಹಾಳು ಎಂದು ಎಲ್ಲಾ ಎತ್ತಿಟ್ಟು ಜುಗಲ್ ಬಂದಿಯನ್ನು ಕೇಳುತ್ತಾ ಕುಳಿತಿದ್ದರು.. ಹೀಗೆ ಸುಮಾರು ಎಂಟತ್ತು ನಿಮಿಷಗಳವರೆಗೂ ಮುಂದುವರೆಯಿತು.full sportive ಮೂಡ್ ಲ್ಲಿ ಇದ್ದ ಆ ಸಫಾರಿ ಮ್ಯಾನ್ ಸರ್ if I am not wrong.. ಹದಿನೆಂಟು ಇಪ್ಪತ್ತು ವರ್ಷಗಳ ಹಿಂದೆ 'ಗಣರಾಜ್ಯೋತ್ಸವ'ಅಂತ ಧ್ವಜಸ್ತಂಭದ ಬಳಿ ಸ್ಟೈಲ್ ಆಗಿ ಬರೆದು ಕೊಟ್ಟಿದ್ರಿ ಅದು ನೀವೇ ಅಲ್ಲವಾ??
Yes sir absolutely that's me..
ಅವತ್ತು ಅದನ್ನು ನೀವ್ ಬರೆದು ನನ್ನ ಮರ್ಯಾದೆ ಉಳಿಸಿದ್ರಿ thank you .. thank you .. ಸೋ ಮಚ್ ಪೇಪರ್ ಇಸ್ಕೊಂಡ್ ಪೈಲ್ ಒಳಗೆ ಸೇರಿಸಿಕೊಂಡು ಬನ್ನಿ ಟೀ ಕುಡಿಯೋಣ ಎಂದು ಎಲ್ಲರನ್ನೂ ಅಲ್ಲೇ ಕಾಲೇಜು ಸಮೀಪದ ರೋಡ್ ಸೈಡ್ ನ ಒಂದು ಢಾಬಾ ತರಹದ ಹೋಟೆಲ್ಗೆ ಕರೆದುಕೊಂಡು ಹೋದರು..ಅದು ಮಟ್ಕಾ ಟೀ. ಟೀ ಕುಡಿಯುತ್ತಾ ಸರ್ ಬೇಜಾರಗಬೇಡಿ ನೀವು ಯಾವಾಗಲೂ ಬರೀ ಇದೇ ತರಹದ ಡ್ರೆಸ್ ಹಾಕ್ತೀರಲ್ಲಾ. ನಿಮಗೆ ಬೇಜಾರಾಗಲ್ವ??
ಬೇಜಾರ್ ಯಾಕ್ರಿ ಖುಷಿಯಿಂದಲೇ ನಾನು ಈ ಡ್ರೆಸ್ ನ್ನು ಹಾಕುವೇ.. ವಿವಿಧ ಬೆಲೆಯ ಸುಮಾರು ಡ್ರೆಸ್ ಇದ್ದಾವೆ ಅಂದರು.. ಆಗ್ಲಿ ಆಗ್ಲಿ ಚೆನ್ನಾಗಿರ್ರಿ ಎಂದು ಹೇಳುತ್ತಿರುವಾಗ ಅಲ್ಲೊಬ್ಬ ತೆಳ್ಳಗಿನ ವ್ಯಕ್ತಿ ಸೀಗರೇಟ್ ಗೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದ. ಅವನ ದೃಷ್ಟಿಯು ಆರುಷಿಯ ಪೈಲ್ ಮೇಲಿದ್ದ ಗನ್ ಮೇಲೆ ಇತ್ತು.ಬಹುಶಃ ಸ್ವಲ್ಪ ಟೈಟ್ ಆದ್ದರಿಂದ ತುಸು body ಬ್ಯಾಲೆನ್ಸ್ ತಪ್ಪಿದಂತೆ ಕಾಣಿಸುತ್ತಿತ್ತು. ಹೀಗೆ ಐದಾರು ಬಾರಿ ಕಡ್ಡಿ ಗೀಚಿ ಹಚ್ಚಿದರೂ ಸೀಗರೇಟ್ ಹಚ್ಚಿಕೊಳ್ಳಲಾಗಲಿಲ್ಲ...
ಆರುಷಿ: ಏಯ್ ಅಣ್ಣಯ್ಯ.. ಮೇಲೆ ಪ್ಯಾನ್ ನೋಡು.. ಎಂದು ಹೇಳಿದ ಮೇಲೆ ಥೋ ಎಂಥಾ ಮೂರ್ಖ ನಾನು ಎಂದು ಅಂದಕೊಂಡಂತೆ ಆಚೆ ಹೋದ..
ಸಫಾರಿ ಮನುಷ್ಯನಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿ ಹೊರಟು ಕಾರಲ್ಲಿ ಕುಳಿತೆವು. ಶಿವು ಯಾರಿಗೋ ಪೋನ್ ಮಾಡಿ ಮನೆಯಲ್ಲಿದ್ದೀರಾ ಅಂದ... ಸರಿ ಸರಿ ಎಂದು ಪೋನ್ ಜೇಬಲ್ಲಿ ಇಟ್ಕೊಂಡ..ಆ ಬರಗೇರಮ್ಮ ದೇವಾಲಯ ಬಳಿ ಬರುವಾಗ ಏನೋ ಉತ್ಸವದಂತೆ ವಿವಿಧ ಮಂಗಳವಾದ್ಯಗಳ ಶಬ್ಧದ ಜೊತೆಗೆ ಸುಮಾರು ಜನ ರಸ್ತೆಗೆ ಬಂದರು. ಅದರಲ್ಲೊಬ್ಬ ಮ್ಯಾರೆಜ್ invitations ಹಿಡ್ಕೊಂಡ್ ಎದುರು ಬರುವ ವಾಹನಗಳಿಗೆ ಸೈಡ್ಗೆ ಹೋಗಿ ಎನ್ನುವ ಸೂಚನೆ ಕೊಡುತ್ತಿದ್ದ.. ಅವನು ಆರುಷಿಯನ್ನು ಗುರುತಿಸಿ ಲೇ ರಿಷಿ.. ಎಂದನು.. ಯಾರಿದು ಎಂದು ನೋಡಿದರೆ ರಿಷಿಯ ಮತ್ತೊಬ್ಬ ಕ್ಲಾಸ್ ಮೆಟ್ ಗುರುಪ್ರಸಾದ.. ನಿಮಗೋಸ್ಕರ ಬಳ್ಳಾರಿಗೆ ಬರಬೇಕಿತ್ತು.. ನೀವ್ ಇಲ್ಲೇ ಸಿಕ್ಕಿದ್ರಿ ಎಂದು ಹೇಳಿದ್ದಕ್ಕೇ ಇಬ್ಬರೂ ಇಳಿದು ಮಾತನಾಡಿಸಿ invitation ಪಡೆಯುವಾಗ ಬರಗೇರಮ್ಮ ದೇವರ ಉತ್ಸವದ ಅಡ್ಡ ಪಲ್ಲಕ್ಕಿ ಹಾದು ಹೋಯಿತು. ಒಂದೆರಡು ಕಿಮೀ ಮುಂದೆ ಬಂದಾಗ ಶಿವು ರಿಷಿ ಸ್ವಲ್ಪ ಇಲ್ಲಿ left ಗೆ ತಗೋ ಅಂದ... ರಿಷಿ ಏನೂ ಕೇಳದೇ ಹೋದ..ಹೊರಗಡೆ ನೋಡುತ್ತಾ ಇದ್ದ ಶಿವು ಇಲ್ಲೇ ಇಲ್ಲೇ ನಿಲ್ಲಿಸು ಎಂದ..ಇಳಿ.. ಬಾ ಇಲ್ಲೆ ಹೋಗಿಬರೋಣ ಎಂದು ರಸ್ತೆಯ ಪಕ್ಕದ ಯಾರದ್ದೋ ಮನೆಯೊಳಗೆ ಹೋದೆವು.ಮನೆ ಡೋಪ್ಲೆಕ್ಸ್ ಮನೆ..ಒಂದಿಬ್ಬರು ನಾಲ್ಕೈದು ವಯಸ್ಸಿನ ಹುಡುಗರು ಕಂಡರು..ಸೋಪಾ ಮೇಲೆ ಕೂರಲು ಯಾರೋ ಒಬ್ಬ ಮಹಿಳೆ ಒಂದು ಲೋಟದಲ್ಲಿ ನೀರು ತಂದು ಕೊಟ್ಟರು.ಅದೊಂದು ಚೌಕಾಕಾರದ ಲೋಟ..ಆ ಲೋಟದಲ್ಲಿ ಇದಕ್ಕೂ ಮುನ್ನ ನೀರು ಕುಡಿದಿರುವ ನೆನಪು ಬಂತು..ನೀರು ಕುಡಿಯುತ್ತಾ ಇದೇ ಲೋಟದಲ್ಲಿ ಬಹಳ ವರ್ಷಗಳ ಹಿಂದೆ ನೀರು ಕುಡಿದಿದ್ದ ನೆನಪು.. ಹೌದು ನಾವು ಯಾರ ಮನೆಗೆ ಬಂದಿದ್ದು ಅಂತಾ ನೋಡುತ್ತಿರುವಾಗ ಹೇಗಿದ್ದೀರಾ ಇಬ್ಬರೂ...ಎಂದು ಕೇಳುತ್ತಾ ಒಬ್ಬ ಮಹಿಳೆ ಹೊರಬಂದರು. ಏನಾಶ್ಚರ್ಯ ??ಅವರೂ ನಮ್ಮ ಕ್ಲಾಸ್ಮೆಟ್ .. !!ಲೇ ಶಿವ ಇವರ ಮನೆಗೆ ಅಂತ ಮೊದಲೇ ಹೇಳದಲ್ಲೇನ್ಲೇ..??ಆ ಮಕ್ಕಳಿಗೆ ಏನಾದರೂ ತರಬಹುದಿತ್ತು.. ಛೇ ಎಂಥಾ ಕೆಲಸ ಮಾಡಿದೆಯಲ್ಲೋ?? ಎಂದು ನಾನು ಮಾತಾಡುತ್ತಿರುವಾಗ ಆ ನನ್ನ ಕ್ಲಾಸ್ಮೇಟ್ ಎಷ್ಟು ಬೇಗ ಮರೆಯುತ್ತಾರಪ್ಪ ಜನ... ದುರ್ಗ ಕ್ಕೆ ಬಂದು ಐದು ನಿಮಿಷ ಮನೆಗೆ ಬಂದು ಮಾತಾಡಸಿಕೊಂಡು ಹೋಗಲು ಪುರಸೊತ್ತಿಲ್ಲ...ಇರಲಿ ಇರಲಿ ಬನ್ನಿ ಕೈ ತೊಳೆದುಕೊಳ್ಳಿ ಊಟ ಮಾಡುವಿರಂತೆ ಎಂದರು.. ಆರುಷಿಗೆ ಅನ್ನ ಹಾಕಿದ ಮನೆ. ಅವರ ಮಾತಿಗೆ shame ಎನಿಸಿ ಛೇ... ದಡ್ಡ ನಾನು ಎಂದು ಪೇಚಾಡುತ್ತಾ ಎದ್ದು ಹೊರಗೆ ನೋಡಿದರೆ ಬೆಳಕಾಗುತ್ತಲಿತ್ತು....
_ಕನಸು ಕಥೆಯಾದಾಗ_ ಮುಂದುವರೆಯುವುದು...
✍️ ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ