ಪೋಸ್ಟ್‌ಗಳು

ಆಗಸ್ಟ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಿಕ್ಷಕರ ಕೆಲಸಕ್ಕೆ ಕೃತಕ ಬುದ್ಧಿಮತ್ತೆಗಳು (AI)ಗಳು ಬಂದರೆ???

ಶಿಕ್ಷಕರ ಕೆಲಸಕ್ಕೆ  'ಕೃತಕಬುದ್ಧಿಮತ್ತೆ'ಗಳು (ಅರ್ಟೀಪಿಶಿಯಲ್ ಇಂಟೆಲಿಜೆನ್ಸ್-AI)ಬಂದಾಗ....  ಆ ಮೇಡಂ  ಏನ್  ಕೇಳಿದರೂ ಥಟ್ ಅಂತಾ ಉತ್ತರ ಕೊಡುತ್ತಾರೆ ಗೊತ್ತಾ??? ಎಷ್ಟು ಬಾರಿ ಹೇಳಿ ಎಂದರೂ ಬೇಜಾರು ಮಾಡಿಕೊಳ್ಳದೇ ಪಟಪಟನೇ  ಮಾತನಾಡುತ್ತಾ ಇರುತ್ತಾರೆ.. ಇನ್ನೂ ಈ ಸರ್ ಇದ್ದಾರಲ್ಲಾ?? ಇವರು ಅಷ್ಟೆ... ಅವರೂ ಎಷ್ಟೊಂದು ಭಾಷೆಗಳನ್ನು ಮಾತಾಡುತ್ತಾರೆ ಗೊತ್ತಾ ?? ಚಿತ್ರಗಳನ್ನು ಎಷ್ಟು ಚಂದ ಬಿಡಿಸುತ್ತಾರೆ.. ಹಾಗೇ ಆದರೆ  ಆ ಮೇಡಂ ರವರ ಕೂದಲು ಇದೆಯಲ್ಲಾ?? ಅದು Original ಅಲ್ಲಾ...ಅವರ ಹಲ್ಲೂ ಕೂಡ...ಅವರು ಮನೆಗೆ ಹೋಗಲ್ಲ... ಇಲ್ಲೇ ಶಾಲೆಯಲ್ಲೇ ಇರುತ್ತಾರೆ.ಅವರೂ ನಮ್ಮ ತರ ಊಟ ಮಾಡಲ್ಲಾ... ನೀರನ್ನು ಸಹಾ  ಕುಡಿಯುವುದಿಲ್ಲ... ಅವರಿಗೆ ನಮ್ ತರ ಕೈ ಕಾಲು ನೋವು,ತಲೆನೋವು, ಜ್ವರ ಬರದೇ  ಇಲ್ಲ... ಇದ್ಯಾವುದರ ಬಗ್ಗೆ ನಾ ಮಾತಾಡುತ್ತಿರುವುದು ಅಂತ ಅನ್ನಿಸುತ್ತಿದೆಯಾ??ಹೇ... ನಾನ್ ಹೇಳ್ತಾ ಇರೋದು  ಮನುಷ್ಯರ ಬಗ್ಗೆ ಅಲ್ಲ ಕಣ್ರಿ...! 'Artificial intelligence' ಎಂದು ಕರೆಯಲ್ಪಡುವ ರೊಬೋಟ್ ಶಿಕ್ಷಕರು. ಇವರು ಒಂಥರಾ ಮನುಷ್ಯರು  ಇದ್ದಹಾಗೆನೇ... ಆದರೆ  ಇವು ಜೀವಿಗಳಲ್ಲ..... ಇವರುಗಳು ಸರ್ಕಾರಕ್ಕೆ ಪ್ರತಿ ತಿಂಗಳು ಲಕ್ಷ ಲಕ್ಷ ಸಂಬಳಕೊಡಿ ಎಂದು ಕೇಳುವುದಿಲ್ಲ.ಎಷ್ಟು ಕೆಲಸ ಮಾಡು ಅಂದರೂ ಅವು  ಪ್ರತಿಭಟಿಸಲ್ಲ..ನಾಗರಿಕ ಸೌಲಭ್ಯಗಳನ್ನು ಕೇಳಲ್ಲ...ಅವುಗ...

ಹಿಂದೂ-ಮುಸ್ಲಿಂ... ಕನ್ನಡ ಕವ್ವಾಲಿ

ಕವ್ವಾಲಿ-ಕನ್ನಡ /ಹಿಂದೂ-ಮುಸ್ಲಿಮ್ ಅಲಗ್ ಹೈ ದೋನೋಂಕಾ ಮತ್ಲಬ್ ಏಕ್ ಹೈ.../ 1️⃣ಹಿಂದೂ ಮಾಡ್ತಾರೆ ನಮಸ್ಕಾರ... ಅ............        ಅ......ಟ ಮುಸ್ಲಿಮ್ ಮಾಡ್ತಾರೆ ಸಲಾಂ ವಾಲೆಕ್ಯೂಂ....   /ಹಿಂದೂ-ಮುಸ್ಲಿಂ/ 2️⃣ಹಿಂದೂ ಹೋಗ್ತಾರೆ ದೇವಸ್ಥಾನ.... ಅ............        ಅ...... ಮುಸ್ಲಿಮ್  ಹೋಗ್ತಾರೆ ಮಸೀದೀ...    /ಹಿಂದೂ-ಮುಸ್ಲಿಮ್/ 3️⃣ಹಿಂದೂ ಹಾಕ್ತಾರೆ ನಾಮ.... ಅ............        ಅ...... ಮುಸ್ಲಿಮ್ ಹಾಕ್ತಾರೆ ಟೋಪಿ....    /ಹಿಂದೂ-ಮುಸ್ಲಿಂ/ 4️⃣ಹಿಂದೂ ಉಡ್ತಾರೆ ಸೀರೆ... ಅ............        ಅ......... ಮುಸ್ಲಿಮ್ ಹಾಕ್ತಾರೆ ಬುರ್ಕಾ.... /ಹಿಂದೂ ಮುಸ್ಲಿಮ್/   5️⃣ಹಿಂದೂ ಮಾಡ್ತಾರೆ ಯುಗಾದಿ ಅ............        ಅ......... ಮುಸ್ಲಿಮ್ ಮಾಡ್ತರೆ  ರಂಜಾ....ನ್.. /ಹಿಂದೂ-ಮುಸ್ಲಿಮ್/ 6️⃣ಹಿಂದೂ ಮಾಡ್ತರೆ ಕಿಚಡಿ..  ಅ............        ಅ......... ಮುಸ್ಲಿಮ್ ಮಾಡ್ತಾರೆ ಬಿರಿಯಾನಿ.. /ಹಿಂದೂ-ಮುಸ್ಲಿಂ/ 7️⃣ಹಿಂದೂ ಹೋಗ್ತಾರೆ ಕಾಶಿ.... ಅ............        ಅ......... ಮುಸ್ಲಿಮ್ ಹೋಗ್ತಾರೆ ಮೆಕ್ಕಾ.... /ಹಿಂದೂ-ಮುಸ್ಲಿಮ್ ಅಲ...

ಕನಸು ಕಥೆಯಾದಾಗ....ಕನಸು-6

ಇಮೇಜ್
#ಕನಸು_ಕಥೆಯಾದಾಗ...       ಕನಸು-06 ಏಯ್... ಹೊಡೆಯಬೇಡ...ಬಿಡು ಅವನನ್ನ...ಬಿಡು... ಹೇಯ್ ಬೇಡ... ಬೇಡ..." ಆರುಷಿ ಜೋರಾಗಿ ಸಿದ್ಧಾರೂಢನನ್ನು ಹೊಡೆಯುತ್ತಿದ್ದ ಇನ್ಯಾರಿಗೋ ಕೂಗಿ ಹೇಳುತ್ತಿದ್ದಾನೆ. ಆದರೆ ಪಕ್ಕಾ ನಟೋರಿಯಸ್ ಕಿಲ್ಲರ್ಗಳಂತೆ ಮುಖ ಕಾಣದಂತ ನಾಟಕದಲ್ಲಿ ಧರಿಸುವ mask ಧರಿಸಿ ಬಂದಿದ್ದ ಇಬ್ಬರೂ ಸಿದ್ಧರೂಢನನ್ನು ಮಾರಕಾಸ್ತ್ರಗಳಿಂದ ಬರ್ಬರ ಹಲ್ಲೆ ಮಾಡಿಯೇ ಬಿಟ್ಟರು.. "ಛೆ... ಎಂಥಾ ಜನಗಳು ಅನ್ಯಾಯವಾಗಿ ಸಿದ್ಧಾರೂಢನನ್ನು ಹೊಡೆದಾಕಿಬಿಟ್ಟರು..."! ಆರುಷಿಗೆ ಹಲ್ಲೆ ಮಾಡಿದವರ ಗುರುತು ಪರಿಚಯ ಇಲ್ಲ... ಆದರೆ ಹಲ್ಲೆ ನಡೆಸುವಾಗ "ಇದೇ ಕೈ ಅಲ್ಲವೇನೋ* *ಹಣಕೊಡದಿದ್ದುದಕ್ಕೆ ನನ್ನ ಅಪ್ಪನ ಮೇಲೆ ಕೈ ಮಾಡಿದ್ದು...?? ಮಗನೇ... ಇನ್ಮೇಲೆ  ಕೈ ಮಾಡಲೇ..." ಎಂದು ಲಾಂಗ್ ಇಂದ ಬೀಸುತ್ತಿದ್ದು ಇದು ಪಕ್ಕಾ ಹಣದ ವ್ಯವಹಾರಕ್ಕಾಗಿಯೇ ನಡೆದ ಹಲ್ಲೆಯಂತೂ ಸತ್ಯ... ಆದರೆ ಆರುಷಿಗೆ ಈ ಸಿಧ್ಧಾರೂಢನೊಬ್ಬನೇ ಪರಿಚಯ ಇತ್ತು. ಪಕ್ಕದ ರೂಂ ವಾಸಿಯಾಗಿದ್ದ ಈತ ನಿರುದ್ಯೋಗಿ ಪದವೀಧರ..ಆದರೆ ಹಲ್ಲೆ ಮಾಡಿದವರ ಯಾವ ಗುರುತು ಪರಿಚಯ ಆರುಷಿಗೆ ಇರಲಿಲ್ಲ. ಬೆಳಿಗ್ಗೆ  7:15 ಕ್ಕೆ ಆರುಷಿಯನ್ನು ಎಬ್ಬಿಸಿದ ಶಿವರಾಮ್ "ಏನೋ... Daily ನೀನೆ ನಮ್ಮನ್ನು ಎಬ್ಬಿಸುತ್ತಿದ್ದೆ... ಯಾಕ್ ಇವತ್ತು ಪುಲ್ ಮಲಗ್ಬಿಟ್ಟೀಯಾ??? ಎದ್ದೇಳು.. ಬ್ರಷ್ ಮಾಡಿಕೊಂಡು ಬಾ ಹಾಸ್ಟೆಲ್ಗೆ ಹೋಗಿ breakfast ಮಾಡಿಕೊಂಡು ಬರೋಣ...