ಕನಸು ಕಥೆಯಾದಾಗ....ಕನಸು-6

#ಕನಸು_ಕಥೆಯಾದಾಗ...

      ಕನಸು-06

ಏಯ್... ಹೊಡೆಯಬೇಡ...ಬಿಡು ಅವನನ್ನ...ಬಿಡು... ಹೇಯ್ ಬೇಡ... ಬೇಡ..." ಆರುಷಿ ಜೋರಾಗಿ ಸಿದ್ಧಾರೂಢನನ್ನು ಹೊಡೆಯುತ್ತಿದ್ದ ಇನ್ಯಾರಿಗೋ ಕೂಗಿ ಹೇಳುತ್ತಿದ್ದಾನೆ.

ಆದರೆ ಪಕ್ಕಾ ನಟೋರಿಯಸ್ ಕಿಲ್ಲರ್ಗಳಂತೆ ಮುಖ ಕಾಣದಂತ ನಾಟಕದಲ್ಲಿ ಧರಿಸುವ mask ಧರಿಸಿ ಬಂದಿದ್ದ ಇಬ್ಬರೂ ಸಿದ್ಧರೂಢನನ್ನು ಮಾರಕಾಸ್ತ್ರಗಳಿಂದ ಬರ್ಬರ ಹಲ್ಲೆ ಮಾಡಿಯೇ ಬಿಟ್ಟರು.. "ಛೆ... ಎಂಥಾ ಜನಗಳು ಅನ್ಯಾಯವಾಗಿ ಸಿದ್ಧಾರೂಢನನ್ನು
ಹೊಡೆದಾಕಿಬಿಟ್ಟರು..."! ಆರುಷಿಗೆ ಹಲ್ಲೆ ಮಾಡಿದವರ ಗುರುತು ಪರಿಚಯ ಇಲ್ಲ... ಆದರೆ ಹಲ್ಲೆ ನಡೆಸುವಾಗ "ಇದೇ ಕೈ ಅಲ್ಲವೇನೋ*
*ಹಣಕೊಡದಿದ್ದುದಕ್ಕೆ ನನ್ನ ಅಪ್ಪನ ಮೇಲೆ ಕೈ ಮಾಡಿದ್ದು...?? ಮಗನೇ... ಇನ್ಮೇಲೆ  ಕೈ ಮಾಡಲೇ..." ಎಂದು ಲಾಂಗ್ ಇಂದ ಬೀಸುತ್ತಿದ್ದು ಇದು ಪಕ್ಕಾ ಹಣದ ವ್ಯವಹಾರಕ್ಕಾಗಿಯೇ ನಡೆದ ಹಲ್ಲೆಯಂತೂ ಸತ್ಯ... ಆದರೆ ಆರುಷಿಗೆ ಈ ಸಿಧ್ಧಾರೂಢನೊಬ್ಬನೇ ಪರಿಚಯ ಇತ್ತು. ಪಕ್ಕದ ರೂಂ ವಾಸಿಯಾಗಿದ್ದ ಈತ ನಿರುದ್ಯೋಗಿ ಪದವೀಧರ..ಆದರೆ ಹಲ್ಲೆ ಮಾಡಿದವರ ಯಾವ ಗುರುತು ಪರಿಚಯ ಆರುಷಿಗೆ ಇರಲಿಲ್ಲ. ಬೆಳಿಗ್ಗೆ  7:15 ಕ್ಕೆ ಆರುಷಿಯನ್ನು ಎಬ್ಬಿಸಿದ ಶಿವರಾಮ್ "ಏನೋ... Daily ನೀನೆ ನಮ್ಮನ್ನು ಎಬ್ಬಿಸುತ್ತಿದ್ದೆ... ಯಾಕ್ ಇವತ್ತು ಪುಲ್ ಮಲಗ್ಬಿಟ್ಟೀಯಾ??? ಎದ್ದೇಳು.. ಬ್ರಷ್ ಮಾಡಿಕೊಂಡು ಬಾ ಹಾಸ್ಟೆಲ್ಗೆ ಹೋಗಿ breakfast ಮಾಡಿಕೊಂಡು ಬರೋಣ..."ಏಳು ಎಂದು ಎಬ್ಬಿಸಿದ ... ಶಿವರಾಮನ ಮಾತಿಗೆ ಎದ್ದ ರಿಷಿ ಮಹೇಂದ್ರ ಎಲ್ಲಿ? ಎಂದು ಕೇಳಿದ...

ಮಹೇಂದ್ರ ಮುಖ ತೊಳೆಯುತ್ತಿದ್ದಾನೆ ಬಾ... ಬಾರಲೇ ಟೈಂ ಅಯಿತು ಎಂದ... ಆರುಷಿ ಬ್ರಷ್ ಕೈಗಿಡಿದು paste ಹಾಕಿಕೊಳ್ಳುತ್ತಿದ್ದಾಗ ಬಂದ ಮಹೇಂದ್ರನನ್ನು ಕರೆದು .."ಶಿವರಾಮ್ ಮಹೇಂದ್ರ  ಒಂದು ಕನಸು ಕಣ್ರೋ ಎಂದು ಈಗ ತಾನೇ ಕಾಣುತ್ತಿದ್ದ ಕನಸಿನ ಬಗ್ಗೆ ಹೇಳಿದ... ನಮ್ಮ ಪಕ್ಕದ ರೂಂ ನ ಸಿದ್ದರೂಢನ ಮೇಲೆ ಮಾರಣಾಂತಿಕ ಹಲ್ಲೆ ಆದ ಬಗ್ಗೆಯೂ ತಿಳಿಸಿದ.. ಆದರೆ ಅವರೂ ಸಾರ ಸಗಟಾಗಿ ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ  ಹೌದ? ಎಂದಷ್ಟೇ ಹೇಳಿ ರೆಡಿಯಾಗಿ ಹೊರಬಂದರು..ಆರುಷಿ ತಡವಾಗಿ ಹೊರಬಂದದ್ದರಿಂದ ಅವನೇ ರೂಮ್ ನ ಬಾಗಿಲು ಹಾಕಿದ..ಆರುಷಿಗಿಂತ ನಾಲ್ಕು ಹೆಜ್ಜೆ ಮುಂದೆ ಬಂದಿದ್ದ ಅವರು ಸಿದ್ಧಾರೂಢನ ರೂಂ 3-4 ದಿನದಿಂದ ರೂಂಗೆ ಬಂದಿರದ ಕಾರಣಹಾಕಿದ ಬಾಗಿಲು ಹಾಕಿಯೇ ಇತ್ತು..ನೋಡುತ್ತಾ ಹಾಸ್ಟೆಲ್ಗೆ ಹೋಗಿ ಟಿಪಿನ್ ಮಾಡಿಕೊಂಡು ಬಂದರು.

ಆರುಷಿ ಮತ್ತು ಮಹೇಂದ್ರ ಚಿತ್ರದುರ್ಗದ ಆನೆ ಬಾಗಿಲ ಬಳಿ ಇರುವ ರೂಪವಾಣಿ ಟಾಕೀಸ್ ಎದರುಗಡೆಯಿಂದ ಹಾದು  ರೂಮ್ ಗೆ ಹೋಗಲು ಹೆಜ್ಜೆ ಹಾಕುತ್ತಿದ್ದರು. ನಮ್ಮ ರೂಂ ನ neighbor ತಿಪ್ಪಣ್ಣ ಯಾರೋ ಪ್ರಮುಖ VIP ಗಳ ಬಳಿ ಮಾತಾಡುತ್ತಾ ನಿಂತಿದ್ದರು. ಅವರು ನಮ್ಮನ್ನು ನೋಡಿ ಏನ್ರಪ್ಪ ರೂಂ ಕಡೆನಾ??? "ಶೆಟ್ರ ಬಿಲ್ಡಿಂಗ್‌ ಗೆ ಪೋಲಿಸ್ನವರು ಹೋಗಿದ್ರಂತೆ ...." ಸದ್ಯ ರೂಂ ಕಡೆ ಹೋಗಬೇಡ್ರಪ್ಪ" ಎಂದನು.ಈ ತಿಪ್ಪಣ್ಣ ಬಗೆಗೆ ನಮಗೆ ಅಪಾರ ಗೌರವ ಇತ್ತು. ಇವರು ನಮ್ಮ ರೂಂನ neighbor ಆಗಿಯೂ, ನಮಗಿಂತಲೂ ತುಂಬಾ ಸೀನಿಯರ್ ಆಗಿಯೂ,  ಬಾಡಿ ಬಿಲ್ಡರ್ ಆಗಿ ದುರ್ಗದ ತುಂಬಾ ಅಲ್ಲಲ್ಲಿ ಹವಾ ಇಟ್ಟಿದ್ದ ತಿಪ್ಪಣ್ಣ ಎಲ್ಲಾ ಗಲ್ಲಿಗಲ್ಲಿಗಳಲ್ಲೂ  ಪುಡಿ ರೌಡಿಗಳಿಂದ ಹಿಡಿದು ಡಾನ್ಗಳವರೆಗೂ ಗೊತ್ತಿರುವ ಒಂದಿಬ್ಬರು ಇದ್ದೇ ಇರುತ್ತಿದ್ದರು.
ಇಂತಹ ತಿಪ್ಪಣ್ಣನೇ 'ರೂಂ ಕಡೆ ಹೋಗಬೇಡಿ' ಎನ್ನುತ್ತಿದ್ದಾನೆ ಎಂದರೆ ಏನೋ matter ಇದೆ ಎಂದು ಅಂದುಕೊಂಡರು...

ಯಾರೋ ನಾಲ್ಕಾರು ಜನ ತಿಪ್ಪಣ್ಣನೊಂದಿಗೆ ಸೇರಿ ಟೀ ಕುಡಿಯುತ್ತಾ 'ಪಕ್ಕಾ ಅವನೇ... ಹೊಡೆದಿದ್ದಾನೆ ಅಣ್ಣಾ....'ಅದು ಅವನದೇ ಸ್ಕೆಚ್...' ಎಂದು ಒಬ್ಬ ಅಂದರೆ ಇನ್ನೊಬ್ಬ Yes ಅವನದೇ ಕೆಲಸ... ಎಂದು ಇನ್ನೊಬ್ಬ ದ್ವನಿಗೂಡಿಸುತ್ತಿದ್ದಾನೆ... ತಿಪ್ಪಣ್ಣನೊಂದಿಗೆ ಮಾತನಾಡುತ್ತಿರುವರು ರ್ಯಾರೂ ಈ  ಆರುಷಿ,ಮಹೇಂದ್ರ, ಶಿವರಾಮ್ ಗೊತ್ತಿಲ್ಲ..ಆನೆ ಬಾಗಿಲನ್ನು ದಾಟದೇ ಆನೆ ಬಾಗಿಲಿನ ಮುಂಭಾಗದಲ್ಲಿ ಇರುವ ಗಣೇಶ ಗುಡಿಯ ಮುಂದೆ ನಿಂತುಕೊಂಡರು.ಇವರನ್ನು ನೋಡುತ್ತಿದ್ದ ತಿಪ್ಪಣ್ಣ ಇವರಿಗೆ matter ಅರ್ಥ ಆಗ್ಲಿಲ್ಲ ಎಂದೆನಿಸಿ ಟೀ ಕುಡಿದ ಮೇಲೆ  ಅವರನ್ನು ಬೀಳ್ಕೊಟ್ಟು ನಮ್ಮ ಬಳಿ ಬಂದು "ಯಾಕ್ರಪ್ಪ?ಇಲ್ಲೇ ನಿಂತು ಬಿಟ್ರಿ??"

ಆರುಷಿ:ಅಣ್ಣ.... ಏನಾಯಿತು ಅಂತ ಗೊತ್ತಾಗಲಿಲ್ಲ...

ತಿಪ್ಪಣ್ಣ: ರಿಷಿ ಅದು ಅವನು ಸಿಧ್ಧಾರೂಢ ಇದ್ನಲ್ಲ ಅವನು ಮರ್ಡರ್ ಮಾಡಿದ್ದಾನಂತ ಸುದ್ದಿ... ಕನ್ಪರ್ಮ್ ಇಲ್ಲ... ಅವನೂ ನಿಮ್ ರೂಂ ಪಕ್ಕದಲ್ಲೇ ಅಲ್ಲ ಇರೋದು... ಅಲ್ಲಿ search ಮಾಡಲಿಕ್ಕೆ  ಹೋಗಿದ್ದರಂತೆ...

ರಿಷಿ-ಮಹೇಂದ್ರ:ಕೊಲೆನಾ???

ಪಿಚ್ಚರ್ಗಳಲ್ಲಿ ಮಾತ್ರ ನೋಡುತ್ತಿದ್ದ ಕೊಲೆಯನ್ನು ನಾವು ದಿನಾಲು ನೋಡುತ್ತಿದ್ದ  ಪಕ್ಕದ ರೂಂ ನ ಸಿದ್ದಾರೂಢ ಮಾಡಿದನೇ???ಅದ್ಹೇಗೆ ಮಾಡಿದ??ಯಾರನ್ನು ಮಾಡಿದ??ಯಾಕೆ ಮಾಡಿದ?? ಒಂದು ವೇಳೆ ಕೊಲೆ ಮಾಡಿದ್ದು ಸತ್ಯ ಆದರೆ ಸಿದ್ದಾರೂಢನ ಕತೆ ಮುಗಿಯಿತು ಎಂದು ಅಂದು ಕೊಳ್ಳುತ್ತಿದ್ದ ಅವರಿಗೆ ಈಗ ಸದ್ಯ ರೂಂ ಗೆ ಹೋಗುವುದು ಬೇಡ ಅಂತ ನಿಜವಾಗ್ಲೂ ಅನಿಸಿತು.

ತಿಪ್ಪಣ್ಣ:  ಊರಿಗೆ ಪಾರಿಗೆ ಹೋಗ್ಬೇಡಿ...ಎಲ್ಲಿಯಾದ್ರೂ ಸಂಜೆವರೆಗೆ ಹೋಗಿ ಬರ್ರಿ... ಅವನು ತಪ್ಪು ಮಾಡಿದ್ರೆ ಅವನಿಗೆ ಶಿಕ್ಷೆ ಆಗತ್ತೆ...ಏನೂ ಗೊತ್ತಿಲ್ಲದ ನೀವ್ಯಾಕೆ ಹೆದರುತ್ತಿದ್ದೀರಿ?? ಹೋಗ್ರಿ.. ಹೋಗ್ರಿ... ಹಾಗೇನಾದರೂ ಸಮಸ್ಯೆ ಆದರೆ 'ನಾನಿದ್ದೀನಿ' ಎಂದನು...ಹೀಗೇ ಮಾತಾಡುತ್ತಿದ್ದಾಗ ಮತ್ಯಾರೋ  ಮುವತ್ತು ಮುವತ್ತೈದು ವರ್ಷದ ಅಪರಿಚಿತ ವ್ಯಕ್ತಿಯೋರ್ವ ಬಂದು ತಿಪ್ಪಣ್ಣ ಅಂದ್ರೆ ಯಾರು?? ಯಾರು??ಎಂದು ಹುಡುಕುತ್ತಿದ್ದರು..

ಹುಡುಕುತ್ತಾ ಬಂದ ವ್ಯಕ್ತಿ ನಮಗಂತೂ ಗೊತ್ತಿಲ್ಲ... ತಿಪ್ಪಣ್ಣನ ಮುಖ ನೋಡಿದರೆ ಅವರಿಗೂ 'ಇವರ್ಯಾರು'ಎಂಬ ಪ್ರಶ್ನೆ ಮುಖದಲ್ಲಿ ಕಾಣುತ್ತಿದೆ
ಸಮಯ ಸ್ವಲ್ಪ hot ಇದ್ದುದರಿಂದ ಅವರಿಗೂ ನಾನೇ ತಿಪ್ಪಣ್ಣ ಅಂತ ಒಪ್ಪಿಕೊಳ್ಳಲಾಗುತ್ತಿಲ್ಲ...
ತಿಪ್ಪಣ್ಣನೇ ಬಾಯ್ದೆರೆದು "ತಿಪ್ಪಣ್ಣ ಬೆಳಿಗ್ಗೆನೇ ಊರಿಗೆ ಹೋದರು" ಏನು ಸಮಾಚಾರ ಎಂದರು...

ಅಪರಿಚಿತ:ಯೋಗೇಶ್ ಅವರು ಆ ತಿಪ್ಪಣ್ಣನ ಹತ್ರ Urgent ಮಾತಾಡಬೇಕಂತೆ  ಅವರು ಬರೋ ಪರಿಸ್ಥಿತಿಯಲ್ಲಿ ಇಲ್ಲ...ಅದಕ್ಕೆ ನಾನು ಬಂದೆ...

ತಿಪ್ಪಣ್ಣ:ನೀವ್ಯಾರು ಸರ್... ನೀವ್ ಫಸ್ಟ್ ನೀವ್ಯಾರು ಅಂತ ಹೇಳಿ ತಿಪ್ಪಣ್ಣ ಅವರು ಎಲ್ಲಿದ್ದಾರೆ  ಅಂತ ಅವರಿವರನ್ನು ಕೇಳಿ ಹೇಳುವೆವು... ಏನು ಸಮಾಚಾರ? ನೀವ್ಯಾಕೆ ತಿಪ್ಪಣ್ಣನ ಹುಡುಕುತ್ತಿದ್ದೀರಿ??

ಅಪರಿಚಿತ:ಸರ್ ನನ್ನದು ಶಿವಮೊಗ್ಗ... ಯೋಗೇಶ  ನಾನು ಸ್ನೇಹಿತರು.. ಯೋಗೇಶ ಅಂಗಡಿಗೆ ಅವರನ್ನು ಪೋಲಿಸರು ಹುಡುಕಿಕೊಂಡು ಬಂದಿದ್ದರಂತೆ...

ತಿಪ್ಪಣ್ಣ: ಏನಾದರೂ ಹೇಳಿದರ??

ಮರ್ಡರ್ ಗೆ ಬಳಸಿದ ಮಾಸ್ಕ್ ನಲ್ಲಿ ಟೈಲರ್ ನೇಮ್ label ಸಿಕ್ಕಿದೆಯಂತೆ... ಅದಕ್ಕೆ ಬಂದಿದ್ದಾರಂತೆ...

 ಯೋಗೇಶ್ ಅವರೇ ನಿಮ್ಮನ್ನು ಕರೆದುಕೊಂಡು ಬರಲು ಕಳಿಸಿಕೊಟ್ಟಿದ್ದು..

ತಿಪ್ಪಣ್ಣ: ತಿಪ್ಪಣ್ಣ ಅಂದರೆ ನಾನೇ...ಈಗ ಎಲ್ಲಿದ್ದಾರಪ್ಪ ಯೋಗೇಶ??... ಹೇಳಿ..

ಅಪರಿಚಿತ:ಸರ್ ಅವರು ಅಲ್ಲಿದ್ದಾರೆ ಬನ್ನಿ.. ಅವರೇನೋ ಅರ್ಜೆಂಟ್ ನೋಡಬೇಕಂತೆ ಎಂದು ಹೇಳಿದನು...

ತಿಪ್ಪಣ್ಣ: ಸರಿ ಕಣ್ರಪ್ಪ...  ಹುಷಾರು ನೀವು ಹೆದರಬೇಡಿ... ದೈರ್ಯವಾಗಿರ್ರಿ..ಆ ಯೋಗಿಯದು ಏನೂ ಅಂತ ನೋಡಿಕೊಂಡು ಬರುವೆ ಎಂದು ಅಪರಿಚಿತ ವ್ಯಕ್ತಿಯ ಹಿಂದೆ ಹೋದರು.

ಈ ಮೂವರಿಗೂ ಯೋಗೇಶ್ ಗೊತ್ತು... ಅವರು ಮತ್ತೊಂದು ರೂಂ ನ ವಾಸಿ... ವೃತ್ತಿಯಲ್ಲಿ ಟೈಲರ್...

ಇತ್ತ ಆರುಷಿ ಮಹೇಂದ್ರ ಶಿವರಾಮ್ ಏನು ಮಾಡಬೇಕೆಂದು ತೋಚದೇ ಆನೆ ಬಾಗಿಲ ಪಕ್ಕದಲ್ಲೇ ನಡೆದು ರಂಗಯ್ಯನ ಬಾಗಿಲ ಕಡೆ ಬಂದರು..ಜಿಲ್ಲಾ ಆಸ್ಪತ್ರೆಯ ಮುಂದೆಯಿಂದ ಇವರು ಹಾದು ಹೋಗ ಬೇಕಾದುದ್ದರಿಂದ ಜಿಲ್ಲಾ ಆಸ್ಪತ್ರೆಯ ಮುಂದೆ   EMERGENCY WARD ಸಮೀಪ ಒಂದು ಅ್ಯಂಬುಲೆನ್ಸ್,  ಅದರ ಹಿಂದೆ ಒಂದೆರಡು ಪೋಲಿಸ್ ಜೀಪ್ ಗಳು ಒಂದಷ್ಟು ಕಿಕ್ಕಿರಿದ ಜನ ಸಂದಣಿ ಇತ್ತು. ಆಗಾಗ NH-4ನಲ್ಲಿ ದೊಡ್ಡ ಪ್ರಮಾಣದ ಅಪಘಾತಗಳು ನಡೆದಾಗ ಈ ತರ ಕಿಕ್ಕಿರಿದು ಜನ ಸೇರುತ್ತಿದ್ದರು. ಇವತ್ತೂ ಎಲ್ಲೋ  ಏನೋ ಆಗಿದೆ.. ಅದಕ್ಕೆ ಜನ ಸೇರಿದ್ದಾರೆಂದೆಣಿಸಿ  ಈ ಮೂವರ್ರು  ಅವರೊಂದಿಗೆ ಸೇರಿ ಬಗ್ಗಿ ಬಗ್ಗಿ ಘಟನೆಯ ಬಗ್ಗೆ ತಿಳಿಯಲು ನೋಡುತ್ತಿದ್ದರು.  ಆಸ್ಪತ್ರೆಯ ಒಂದು ಕೋಣೆಯ ಮುಂದೆ ಬಹಳ ಜನ ಜಮಾಯಿಸಿದ್ದರು. ಪೋಲಿಸ್ನವರು ಆ ಕೋಣೆಗೆ ಯಾರೂ ಹೋಗದಂತೆ ತಡೆದು ನಿಲ್ಲಿಸಿದ್ದರು. ಬಿಟ್ಟರೆ   ಯಾರಿಗೂ ಅಂತಹ ದೊಡ್ಡ ಮಟ್ಟದ  ತೊಂದರೆಯಾದಂತೆ ಕಾಣಲಿಲ್ಲ... ಅಲ್ಲಿ ನೆರದ ಜನರು ಮಾತಾಡಿಕೊಳ್ಳುತ್ತಿದ್ದು  ಎಂಜಿನೀಯರನ್ನೆ ಹೊಡೆದ... ಅಲ್ಲಿ ಆಕಸ್ಮಿಕವಾಗಿ  ಇವನ ಕೈಗೆ ಬಿದ್ದ ಮಚ್ಚಿನೇಟಿಗೆ ಎಡಗೈ ಬೆರಳು ಕಟ್ ಆಗಿವೆ... ಮಾಡಿದ ನಾಟಕ ಗೊತ್ತಾ ??ಮದಕರಿಪುರದಲ್ಲಿ  ಕಟ್ಟಿಗೆ ಕಡಿಯುವಾಗ ಬಿದ್ದ ಏಟು ಎಂದು ಇವನ ವಾದವಾದರೆ ಇವನ ಅಳಿಯ ಅಣ್ಣತಮ್ಮಗಳ ಜಗಳ ಎಂದು ಪೋಲಿಸರ ಕಣ್ಣಿಗೆ ಮಣ್ಣೆರಚಲು ನೋಡಿದ್ದಾನೆ. ಪಾಪ ಅವನನ್ನು ಹೊಡಿಬಾರದಿತ್ತು... ಈ ತರ ಮಾತುಗಳು ಕಿವಿಗೆ ಬಿದ್ದವು. ಕೆಲವೇ ನಿಮಿಷಗಳಲ್ಲಿ ಇಬ್ಬರು ವ್ಯಕ್ತಿಗಳ ಕೈಗೆ ಕೊಳ ತೊಡಿಸಿ ವಾರ್ಡ್ ನಿಂದ ಹೊರಗೆ ಕರೆದುಕೊಂಡು ಬಂದರು ಪೋಲಿಸರು. ಕೊಳಹಾಕಿಕೊಂಡ ವ್ಯಕ್ತಿ ಅವರ ಪಕ್ಕದ ರೂಂ ನ ವಾಸಿ ಸಿದ್ಧಾರೂಢನೇ ಆಗಿದ್ದ! ಎಡಗೈ  ಬೆರಳುಗಳಿಗೆ bandage ಮಾಡಿದ್ದರೂ ಬಿಳಿಯ ಬ್ಯಾಂಡೇಜ್ ರಕ್ತ ನಿಲ್ಲದೇ, ರಕ್ತ ಕಾರಿ ಕೆಂಪಾಗಿತ್ತು.ಆಗ ಅರಿವಾಗಿದ್ದು ಈ ಸಿದ್ಧಾರೂಢನನ್ನು ಹುಡುಕಿಕೊಂಡು ಪೋಲಿಸ್ನವರು  ನಮ್ಮ ರೂಂಗಳ ಕಡೆ ಹೋಗಿದ್ದು ಸತ್ಯ ಎಂದು...

ಸಿದ್ಧಾರೂಢನನ್ನು enquiry ಮಾಡಲು ಕೆಲವೇ ನಿಮಿಷಗಳಲ್ಲಿ SP ಅವರು ಬಂದರು... ಏನಂತೆ ಅವನದು??ಸರ್ details ಪ್ರಕಾರ ಮತ್ತು ಅವರಿಬ್ಬರೂ ಹೇಳೋ ಪ್ರಕಾರ ಅವನೇ ಮಾಡಿರುವುದು. ಆದರೆ ಅವನು ಸದ್ಯ ಇನ್ನೂ ಒಪ್ಪಿಲ್ಲ... ಎಂದು ಕೆಲ ಪೋಲಿಸ್ ಅಧಿಕಾರಿಗಳು ಮಾಹಿತಿಯನ್ನು ಕೊಟ್ಟರು. ಸರಿ ಸರಿ ಎಂದು ಎಮರ್ಜೆನ್ಸಿ ವಾರ್ಡ್ ಒಳಗೆ ಹೋದರು ಎಸ್ಪಿ . ಅಷ್ಟೊತ್ತಿಗೆ ಜನಸಂದಣಿ ಜಾಸ್ತಿ ಆಗುತ್ತಲೇ ಇದ್ದುದರಿಂದ ಎಲ್ಲಾ ಜನರನ್ನು ಪೋಲಿಸ್ನವರು ಹೊರಗೆ ಕಳಿಸಿದರು. ಆ ಕ್ಷಣವೇ ಎಸ್ ಪಿ ಮುಂದೆ ಸತ್ಯ ಒಪ್ಪಿಕೊಂಡು ಮಾಡಿದ ಅಪರಾಧ ಮಾಡಿ ಸೆರೆಯಾದ ಸಿದ್ಧಾರೂಢ ಮತ್ತೊಬ್ಬ ಸಹಚರ. ಆದಿನದ ವಿಶೇಷ ಎಂದರೇ ಅದೇ ಆಸ್ಪತ್ರೆಯ ಶವಗಾರದ postmortem ಸೆಕ್ಷನ್ ನಲ್ಲಿ ಕೊಲೆಯಾದ ವ್ಯಕ್ತಿಯ  postmortem!! ಪತ್ರಕರ್ತರಿಗೆ,ಸಾರ್ವಜನಿಕರಿಗೆ  ಕೊಲೆಯಾದವ ಮತ್ತು ಕೊಲೆ ಮಾಡಿದವನನ್ನು ಒಂದೇ ಕವರಿಂಗ್ ಏರಿಯಾದಲ್ಲಿ ಕಾಣುವ ಅವಕಾಶ ಲಭಿಸಿತ್ತು.

ಆರುಷಿ ಕಾಣುವ ಕನಸುಗಳು ಕನ್ನಡಿಯ ಪ್ರತಿಬಿಂಬದಂತೆ ಎಡ ಬಲವಾಗಿ,ಬಲ ಎಡವಾಗಿ ಕನಸಿನ ಕನಿಷ್ಠಪಕ್ಷ 25% ಆದರೂ  ಕನಸು ನನಸಾಗುತ್ತದೆ.ಆಗ ಹೇಳಿದ ಆರುಷಿ ನಾನು ಹೇಳ್ಲಿಲ್ಲ ಬೆಳಿಗ್ಗೆ ಕನಸು ಬಿದ್ದಿದ್ದು.... ಅಂತ ಮಹೇಂದ್ರ ಮತ್ತು ಶಿವರಾಮನಿಗೆ ಹೇಳಿದ ಹೇಳಿದೆ ಆದ್ರೆ ನೀನು ಹೇಳಿದ್ದು ಸಿದ್ದಾರೂಢನನ್ನು ಬೇರೆಯವರು ಹೊಡೆದಿದ್ದಾರೆ ಅಂತ ಇಲ್ಲಿ ನೋಡಿದರೆ ಇವನೇ ಮರ್ಡರ್ ಮಾಡಿದ್ದಾನೆ...ಏನೋ ಒಟ್ಟು ಒಂದು ಕೊಲೆಯ ಸುಳಿವನ್ನು ನಾನು ಹೇಳಿದ್ದೇನೆ. ಇಲ್ಲಿ ಆರೋಪಿ ಬದಲಾಗಿದ್ದಾರೆ ಅಷ್ಟೆ ಎಂದು ಚರ್ಚೆ ಮಾಡುತ್ತಾ   ಈ ಮೂವರ ಜೀವನದಲ್ಲಿ ಅದೊಂದು ಬಹುದೊಡ್ಡ ವಿದ್ಯಮಾನ ಆಗಿ ಹೋಗಿತ್ತು.

ಕೆಲವೇ ದಿನಗಳಲ್ಲಿ ಈ ಮೂವರ ಶಿಕ್ಷಣ ಮುಗಿಯುತ್ತಾ ಬಂತು.  ಮೂವರೂ ಅವರವರ ಪಾಡಿಗೆ ಉನ್ನತ ಶಿಕ್ಷಣ,ಜಾಬ್  ಎಂದೇಳಿ ಬೇರೆ ಬೇರೆ ದಿಕ್ಕುಗಳಲ್ಲಿ ಹೋದರು.ಈ ಕೇಸಿನ ಬಗ್ಗೆ ಆಗಾಗ ನೆನಪಾಗುತ್ತಿದರೂ ಈ ಕೇಸಿನ ಬಗ್ಗೆ ಹೆಚ್ಚು ಮಾಹಿತಿ ಸಿಗಲಿಲ್ಲ. ಹದಿನಾಲ್ಕು ವರ್ಷ ಜೈಲು ಖಚಿತವಾಗಿ ಆಗಿರತ್ತೆ ಎಂದು ಭಾವಿಸಿದ್ದರು.ಆದರೂ ತಪ್ಪು ಮಾಡಿದರೆ ಶಿಕ್ಷೆ ಖಚಿತ ಎಂಬುದು ಮತ್ತು ಕಾನೂನು ಬಿಗಿಯಾಗಿದೆ ಯಾರೂ ಅದರಿಂದ ತಪ್ಪಿಸಿಕೊಳ್ಳಲು ಸಾದ್ಯವಿಲ್ಲ ಎಂಬ ಪಾಠ ಈ ಘಟನೆ ನೀಡಿತು.

_21 ವರ್ಷಗಳ ನಂತರ:_

(ವಾಸ್ತವ)

ಮೊನ್ನೆ ಜುಲೈ-2024  ತಿಂಗಳ ಮೊದಲವಾರದಲ್ಲಿ ದರ್ಶನ್ ನ್ನು ಬೇಟಿ ಮಾಡಿದ ಕೈದಿ... ಜೈಲು ನರಕ... ಜೈಲೂಟ  ನಾಯಿ ಸಮೇತ ಮೂಸು ನೋಡಲ್ಲ ಎಂದು ಹೇಳುತ್ತಾ ಒಬ್ಬ ವ್ಯಕ್ತಿ ಮಾಧ್ಯಮಗಳಲ್ಲಿ ಬಹಳ ಸುದ್ದಿ ಮಾಡಿದ. ನನಗೂ ಆಗಲೇ ಗೊತ್ತಾಗಿದ್ದು ಸಿದ್ದರೂಢನಿಗೆ ಇಪ್ಪತ್ತೊಂದು ವರ್ಷ ಜೈಲು ಶಿಕ್ಷೆ ಆಗಿದೆ. ಅದು ಸನ್ನಡತೆಯ ಆಧಾರದಲ್ಲಿ ಬಿಡುಗಡೆಯಾಗಿ ಬಂದಿದ್ದಾರೆ ಎಂದು..

  ಕೋಪದ ಕೈಗೆ ಬುದ್ದಿ ಕೊಟ್ಟು ಆವೇಶದಲ್ಲಿ ಮಾಡಿದ ತಪ್ಪಿಗೆ  ಸುದೀರ್ಘವಾದ ಇಪ್ಪತ್ತೊಂದು ವರ್ಷ ಸಜೆಯನ್ನು ಅನುಭವಿಸಿದ ಈ ಸಿಧ್ದಾರೂಢ ಇನ್ಮೇಲೆಯಾದರೂ   ಉತ್ತಮ ಬದುಕು ಕಟ್ಟಿಕೊಳ್ಳಲಿ ಎಂಬ ಆಶಯ...

_ಕನಸು ಕಥೆಯಾದಾಗ_ ಮುಂದುವರೆಯುವುದು...

✍️ ನಾಗೇಂದ್ರ ಬಂಜಗೆರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..