ಪೋಸ್ಟ್‌ಗಳು

ಡಿಸೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಿಡಿಂಬಾವನ ಮತ್ತು ರಾಕ್ಷಸನ ಹಲ್ಲು

*ಹಿಡಿಂಬಾವನ  ಮತ್ತು  ರಾಕ್ಷಸನ ಹಲ್ಲು..* ✍️ ನಾಗೇಂದ್ರ ಬಂಜಗೆರೆ   *ನಾನು ಪ್ರೌಢಶಾಲಾ ಶಿಕ್ಷಣ ಮುಗಿಸಿ ಕಾಲೇಜ್ ಶಿಕ್ಷಣಕ್ಕಾಗಿ  ನಮ್ಮ ಜಿಲ್ಲಾಕೇಂದ್ರ ಚಿತ್ರದುರ್ಗಕ್ಕೆ ಹೋದೆ.. ಅಲ್ಲಿ ಸೇರಿದ್ದು ಚಂದ್ರವಳ್ಳಿ ತಪ್ಪಲಿನಲ್ಲಿ ಇರುವ ಶ್ರೀ ಜಗದ್ಗುರು ಮುರುಘರಾಜೇಂದ್ರ ಕಲಾ ಕಾಲೇಜ್ಗೆ...  ಊಟಕ್ಕೂ ಅದೇ ಕಾಲೇಜಿನ ಹಾಸ್ಟೆಲ್ಗೂ ಸೇರಿದೆ...ದುರ್ಗಕ್ಕೆ  ನನಗೆ ಸಾಥ್ ಕೊಟ್ಟವರು ನನ್ನ ಸೋದರ ಸಂಬಂಧಿ  ನಾಗರಾಜ ಮತ್ತು ಬೀಗ ಶಿವರಾಮ.. ಶಿವರಾಮ ನಾನು ಒಂದೇ ಕಾಲೇಜು.. ಈ ನಾಗರಾಜ ಮಾತ್ರ ಸೈನ್ಸ್ ಕಾಲೇಜು... ರೂಮು ಮಾತ್ರ ಮೂವರದೂ ಒಂದೇ...ನಮ್ಮ ಕಾಲೇಜ್ ಕ್ಲಾಸ್ ಟೈಮಿಂಗ್್ಸ ಇದ್ದದ್ದು  ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ ಐದು ಗಂಟೆವರೆಗೆ ... ಬೆಳ್ಳಿಗ್ಗೆ ಹನ್ನೊಂದು ಘಂಟೆಗೆ ಊಟ ಮಾಡಿಕೊಂಡು ದೊಡ್ಡಪೇಟೆಯ ಉಯ್ಯಾಲೆ ಕಂಬದ ಸಮೀಪದಿಂದ ಸಿಹಿನೀರು ಹೊಂಡದ ಮೇಲೆ ಸುಮಾರು ಮೂರು ಕಿಮೀ ನಡೆದು ಹೋಗಬೇಕಿತ್ತು... ಒಳ್ಳೆ ನಿದ್ದೆ ಸಮಯ.ಕಾಲೇಜ್‌ನಲ್ಲಿ ಪಾಠ ಕೇಳುತ್ತಿದ್ದರೆ ಹತ್ತು ಹದಿನೈದು ನಿಮಿಷಕ್ಕೋಮ್ಮೆ ಎಲ್ಲೋ  ಕಿಲೋ ಮೀಟರ್ ದೂರದಲ್ಲಿ ಯಾರೋ ಮಾತಾಡುತ್ತಿದ್ದಾರೇನೋ ಎಂಬಂತೆ ಕೇಳುತಿತ್ತು. ಉಳಿದ ಸಮಯ ಕೇಳುತಿತ್ತು ಅಂತ ಭಾವಿಸಿದ್ರ?? ಖಂಡಿತಾ ಇಲ್ಲ..  ಲೆಕ್ಚರ್ ವಾಯ್ಸ್ ಏರಿಳಿತಕ್ಕೆ ನಿದ್ದೆ ಡಿಸ್ಟರ್ಬ್ ಆಗಿ ಎದ್ದಾಗ ಕಣ್ಣು ಬಿಡಲು ಆಗುತ್ತಿರಲಿಲ್ಲ.because  ಆಗ ನಾನ...

ಕೊನೋಕಾರ್ಪಸ್...

ಇಮೇಜ್
*ಕೋನೋಕಾರ್ಪಸ್...* ಅದು ತೊಂಭತ್ತರ ದಶಕ... ಚಳಿಗಾಲದ ಆರಂಭಕ್ಕೆ ಮಳೆಗಾಲದಲ್ಲಿ ಹಸಿರಾಗಿ ಸೊಂಪಾಗಿ ಬೆಳೆದಿದ್ದ ಹುಲ್ಲು ಬೀಜವಾಗಿ ಒಣಗುತ್ತಿದ್ದ ಕಾಲ.. ಆಗ ನಮ್ಮದು ಪ್ರತಿದಿನ ಒಂದು ಪುಟ್ಟಿ (ಹೆಡಿಗೆ) ಸಗಣಿ ತಂದು ತಿಪ್ಪೆಗೆ ಹಾಕುವುದು.ಇದೇ ದಿನಚರಿ ಆದುದರಿಂದ  ನಮ್ಮ ಮನೆಯ ಸುತ್ತಲೂ ಕಿಲೋಮೀಟರ್ ಗಟ್ಟಲೆ ಹುಡುಕಾಡಿ ಒಣಗಿದ ಪಿಜ್ಜಾ ತರಹದ ವಿವಿಧ ಅಗಲದ, ವಿವಿಧ ಗಾತ್ರದ ಸಗಣಿ ತೊಪ್ಪೆಗಳನ್ನು ನೀಟಾಗಿ ಜೋಡಿಸಿಕೊಂಡು ಬರುತ್ತಿದ್ದೆವು.ಅಲ್ಲಲ್ಲಿ ಎರಡು ಮೂರು ಕಡೆ ಸುರಿದುಕೊಂಡು ಒಂದು ಹೆಡಿಗೆ ಪೂರಾ ಭರ್ತಿ ಆಗಬಹುದಿದ್ದರೆ ಬೇರೆಬೇರೆ ಕಡೆ ಸುರಿದ ತೊಪ್ಪೆಗಳನ್ನು  ಒಂದುಕಡೆ ತಂದು ಪುಡಿಯಾದುದನೆಲ್ಲಾ ಹೆಡಿಗೆಯ ತಳಕ್ಕೆ ತುಂಬಿ ಅಗಲವಾದ ತೊ ಪ್ಪೆಗಳನ್ನೆಲ್ಲಾ ಹೂವಿನ ಧಳಗಳಂತೆ ಒಪ್ಪವಾಗಿ ಪೋಣಿಸಿ ಎತ್ತಿಕೊಂಡು ಬಂದು ತಿಪ್ಪೆಗೆ ಹಾಕುವ ಹೊತ್ತಿಗೆ ಮನೆಯಲ್ಲಿ ಸಿದ್ದವಾಗಿರುತಿದ್ದ ಬೆಳಗಿನ ಬಿಸಿ ಬಿಸಿ ಮುದ್ದೆ ಉಂಡು ಶಾಲೆಗೆ ಹೋಗಬೇಕಿತ್ತು.ಡಿಸೆಂಬರ್ ತಿಂಗಳಿನಿಂದ ಮುಂಗಾರು ಮಳೆ ಆಗಮನದವರೆಗೂ ನಾವು ದಿನಕ್ಕೆ ಒಂದು ಬಾರಿಯಾದರೂ ಸಗಣಿ ತರಲು ಹೋಗಲೇಬೇಕಿತ್ತು. ಪರಿಸ್ಥಿತಿ ಹೀಗೆ ಇದ್ದಾಗ ಡಿಸೆಂಬರ್ ತಿಂಗಳ ಮಾಗಿಯ ಚಳಿ ಗಡ ಗಡ ನಡುಗಿಸುವಂತಿತ್ತು.ಕಾಫಿ ಟೀ ಸ್ವೇಟರ್ ಮಂಕಿ ಟೋಪಿ   ಕಾಣದ ನಮ್ಮ ಸಣಕಾಲು ದೇಹವನ್ನು ತೀರಾ ಅಲ್ಲಾಡಿಸಿ ಬಿಡುತಿತ್ತು. ತಲೆಗೆ ಟವೆಲ್ ಸುತ್ತಿಕೊಂಡು ತಲೆಯ ಮೇಲೆ ಹೆಡಿಗೆ ಬೋರಲು ಹಾಕಿಕೊಂಡು ಕೈ ...

ನನ್ನ ಕನ್ನಡ ನಾಡು

ಇಮೇಜ್
ನನ್ನ ಕನ್ನಡ ನಾಡು.. ಹಸಿರ ನಾಡಿದು ನನ್ನುಸಿರ ನಾಡಿದು ಖನಿಜಗಳ ಬೀಡಿದು ಖಗ-ಮೃಗವು ನಲಿದಾಡುವ ನೆಲವಿದು ವೀರ ಧೀರರ ಕವಿರತ್ನ ಪುಂಗವರ ಕಂಡ ನಾಡಿದು /ನನ್ನ ಕನ್ನಡ ನಾಡಿದು/ ಎರೆ ಕೆಂಗು ಮಣ್ಣಿದು ತೆಂಗು ಕಂಗು  ಕಾಫಿಯ ಕಂಪು ಹೊಮ್ಮುವ ನಾಡಿದು ಧಾನ್ಯಗಳ ಕಣಜವ ಹೊತ್ತ ಸಿರಿನಾಡಿದು ದಾನ ಧರ್ಮಕೆ ಆತಿಥ್ಯಕೆ ಹೆಸರಾದ ಪುಣ್ಯಭೂಮಿಯಿದು  /ನನ್ನ ಕನ್ನಡ ನಾಡಿದು/ ದಕ್ಷಿಣ ಗಂಗೆಯು ಜೀವವಾಗಿ ಹರಿದಿಹಳು ನೋಡಿಲ್ಲಿ ನಾಡಿಗೇ ಅನ್ನ ಪಾನವ ನೀಡಿಹರು ತುಂಗಾ-ಭದ್ರೆಯರಿಲ್ಲಿ ಸರ್ವಧರ್ಮದವರಿಹರೀ  ಸಾಮರಸ್ಯದ ಗೂಡಲ್ಲಿ... ಕಲೆಗಳ ನಾಡು ದಾಸರ ಶರಣರ   ಶ್ರೀಗಂಧದ ಬೀಡು /ನನ್ನ ಕನ್ನಡ ನಾಡಿದು / ಕಾವೇರಿಯಿಂದ ಗೋದಾವರಿಗಿದ್ದ ನಾಡಿದು ಅಷ್ಟ ದಿಕ್ಕಲ್ಲೂ ಪರಭಾಷಾ ಪ್ರಾಬಲ್ಯಗಳ ಕೆಚ್ಚೆದೆಯಿಂ ಎದುರಿಸಿ ಅಚ್ಚಳಿಯದೆ ನಿಂತಿಹುದು ಬೆಳೆದಿಹುದು ಕಟ್ಟಾಳುಗಳ ಬೆವರಿನಲ್ಲಿ  ಬದುಕರಿಸಿ ಬಂದವರ ಕೈಚಾಚಿ ಅಪ್ಪಿಹುದು  /ನನ್ನ ಕನ್ನಡ ನಾಡಿದು/ ಮಾತಾಡ್ ಮಾತಾಡು ನೀ ಕನ್ನಡ ಎನ್ನಡ ಎಕ್ಕಡ ದವರಿಗೂ ಆಗಬೇಕು ಗಡಗಡ ಸಹಸ್ರ ಕೃತಿಗಳಲಂಕಾರದಿ ಮೆರೆಯುತ್ತಿರಲಿ ಕನ್ನಡ ಗಳಿಸುತ್ತಿರಲಿ ಮಾನ ಸಮ್ಮಾನಗಳ  ಸದಾಭಿಮಾನವಿರಲಿ ಸಂಗಡ /ನನ್ನ ಕನ್ನಡ ನಾಡಿದು / ತಾನು ಮೇಲು ನೀನು ಕೀಳೆಂಬ ಕಿತ್ತಾಟದೀ ಗಳಿಸಲೇನಿಲ್ಲವೆಂದು ಅರಿಯಬೇಕಿದೆ ನಾವೂ-ನೀವೂ-ಅವರೂ  ಹೊರಡಬೇಕಿದೆ ಸಮರಸದೀ ಸರ್ವರೂಳು ಸಮತೆಯ ಭಾವ ಜ್ಯೋತಿಯ ಉರಿಸಿ /ನನ್ನ ಕನ್ನ...