ನನ್ನ ಕನ್ನಡ ನಾಡು

ನನ್ನ ಕನ್ನಡ ನಾಡು..

ಹಸಿರ ನಾಡಿದು ನನ್ನುಸಿರ ನಾಡಿದು
ಖನಿಜಗಳ ಬೀಡಿದು
ಖಗ-ಮೃಗವು ನಲಿದಾಡುವ ನೆಲವಿದು
ವೀರ ಧೀರರ ಕವಿರತ್ನ ಪುಂಗವರ ಕಂಡ ನಾಡಿದು

/ನನ್ನ ಕನ್ನಡ ನಾಡಿದು/

ಎರೆ ಕೆಂಗು ಮಣ್ಣಿದು ತೆಂಗು ಕಂಗು  ಕಾಫಿಯ ಕಂಪು ಹೊಮ್ಮುವ ನಾಡಿದು
ಧಾನ್ಯಗಳ ಕಣಜವ ಹೊತ್ತ ಸಿರಿನಾಡಿದು
ದಾನ ಧರ್ಮಕೆ ಆತಿಥ್ಯಕೆ ಹೆಸರಾದ ಪುಣ್ಯಭೂಮಿಯಿದು 

/ನನ್ನ ಕನ್ನಡ ನಾಡಿದು/

ದಕ್ಷಿಣ ಗಂಗೆಯು ಜೀವವಾಗಿ ಹರಿದಿಹಳು ನೋಡಿಲ್ಲಿ
ನಾಡಿಗೇ ಅನ್ನ ಪಾನವ ನೀಡಿಹರು ತುಂಗಾ-ಭದ್ರೆಯರಿಲ್ಲಿ
ಸರ್ವಧರ್ಮದವರಿಹರೀ  ಸಾಮರಸ್ಯದ ಗೂಡಲ್ಲಿ... ಕಲೆಗಳ ನಾಡು ದಾಸರ ಶರಣರ   ಶ್ರೀಗಂಧದ ಬೀಡು
/ನನ್ನ ಕನ್ನಡ ನಾಡಿದು /

ಕಾವೇರಿಯಿಂದ ಗೋದಾವರಿಗಿದ್ದ ನಾಡಿದು ಅಷ್ಟ ದಿಕ್ಕಲ್ಲೂ ಪರಭಾಷಾ ಪ್ರಾಬಲ್ಯಗಳ ಕೆಚ್ಚೆದೆಯಿಂ ಎದುರಿಸಿ ಅಚ್ಚಳಿಯದೆ ನಿಂತಿಹುದು ಬೆಳೆದಿಹುದು ಕಟ್ಟಾಳುಗಳ ಬೆವರಿನಲ್ಲಿ  ಬದುಕರಿಸಿ ಬಂದವರ ಕೈಚಾಚಿ ಅಪ್ಪಿಹುದು 
/ನನ್ನ ಕನ್ನಡ ನಾಡಿದು/

ಮಾತಾಡ್ ಮಾತಾಡು ನೀ ಕನ್ನಡ ಎನ್ನಡ ಎಕ್ಕಡ ದವರಿಗೂ ಆಗಬೇಕು ಗಡಗಡ ಸಹಸ್ರ ಕೃತಿಗಳಲಂಕಾರದಿ ಮೆರೆಯುತ್ತಿರಲಿ ಕನ್ನಡ ಗಳಿಸುತ್ತಿರಲಿ ಮಾನ ಸಮ್ಮಾನಗಳ  ಸದಾಭಿಮಾನವಿರಲಿ ಸಂಗಡ
/ನನ್ನ ಕನ್ನಡ ನಾಡಿದು /

ತಾನು ಮೇಲು ನೀನು ಕೀಳೆಂಬ ಕಿತ್ತಾಟದೀ ಗಳಿಸಲೇನಿಲ್ಲವೆಂದು ಅರಿಯಬೇಕಿದೆ ನಾವೂ-ನೀವೂ-ಅವರೂ  ಹೊರಡಬೇಕಿದೆ ಸಮರಸದೀ ಸರ್ವರೂಳು ಸಮತೆಯ ಭಾವ ಜ್ಯೋತಿಯ ಉರಿಸಿ
/ನನ್ನ ಕನ್ನಡ ನಾಡಿದು/

*ಮೆರೆಯುತ್ತಾ ಮೆರೆಸುತ್ತಾ ಕನ್ನಡದ ಕೀರ್ತಿ ಹಾಡುತ್ತಾ ಹೊಗಳುತ್ತಾ ನವ ಭಾವದ ರೀತಿ ಮನೆ-ಮನದಲ್ಲಿ ನಾಡಲುಮೆಯು ಉಕ್ಕಿಹುದು ಇದೇ ನೋಡು ಕರುಣೆಯ ಕರುನಾಡು*

 /ನನ್ನ ಕನ್ನಡ ನಾಡಿದು/

✍️ ನಾಗೇಂದ್ರ ಬಂಜಗೆರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..