ಸೃಷ್ಠಿ -ಹಸಿವು -ಹೆಣ್ಣು..
ಸೃಷ್ಠಿ v/s ಕಾನೂನು... ಮೊನ್ನೆ ನನ್ನ ಮಗಳದೊಂದು ಆದರ್ಶ ಶಾಲೆಗೆ ಪ್ರವೇಶ ಪರೀಕ್ಷೆ ಇತ್ತು. ಎಲ್ಲಾ ಸಿದ್ಧತೆಯೊಂದಿಗೆ ಪರೀಕ್ಷೆಗೆ ಹೊರಟ ನಾವು ಹೋಗುವ ರಸ್ತೆಯಲ್ಲೊಂದು ರೈಲ್ವೆ ಟ್ರ್ಯಾಕ್ ದಾಟಿ ಹೋಗಬೇಕಿತ್ತು. ಸುಧಾ ಗೇಟ್ ಫ್ಲೈಓವರ್ ನಿರ್ಮಾಣ ಕಾರ್ಯದ ನಿಮಿತ್ತ ಆ ಗೇಟ್ ನ ವಾಹನ ಸಂಚಾರದ ಭಾರವನ್ನೆಲ್ಲಾ ಒಂದೇ ಗೇಟ್ ನಿರ್ವಹಿಸುತ್ತಿದ್ದುದರಿಂದ ತುಸು ಟ್ರಾಫಿಕ್ ಹೆಚ್ಚೇ ಇತ್ತು. ರೈಲು ಹಾದು ಹೋಗುವವರೆಗೂ ಕಾದು ನಿಂತಿದ್ದ ನಾವು ನನ್ನ ಮುಂದೆ ನಾಲ್ಕೈದು ಬೈಕುಗಳು ಅವುಗಳ ಮುಂದೆ ಟಾಮ್ ಟಾಮ್ ಒಂದರಲ್ಲಿ ಕಂಠದ ಮಟ್ಟ ಕರಬುಜಾ ಹಣ್ಣುಗಳು ತುಂಬಿದ ಗಾಡಿ ಒಂದು ಇತ್ತು. ಬೇಸಿಗೆ ಆದ್ದರಿಂದ ಬೆಳಗಿನ 10 ಗಂಟೆಯ ಬಿಸಿಲು ಸಾಧಾರಣವೇನೂ ಇರಲಿಲ್ಲ. ಸರಿಯಾಗಿಯೇ ಇತ್ತು. ಉದ್ದನೆಯ ಗೂಡ್ಸ್ ಗಾಡಿಯೊಂದು ಪಾಸ್ ಆದಮೇಲೆ ವಾಹನಗಳಿಂದ ಶಬ್ದಮಾಲಿನ್ಯ ವಾಯು ಮಾಲಿನ್ಯ ಅಧಿಕವಾಯಿತು. ಯಾವುದೇ ಟ್ರಾಫಿಕ್ ರೂಲ್ಸ್ ಫಾಲೋ ಮಾಡದೇ ಅಡ್ಡಾ ದಿಡ್ಡಿ ವಾಹನಗಳನ್ನು ಚಾಲನೆ ಮಾಡುವವರು ಬಳ್ಳಾರಿಯಲ್ಲಿ ಅಂತವರೇ ಹೆಚ್ಚಾಗಿ ಕಾಣ ಸಿಗುವ, ಸರಿಯಾಗಿ ಹೋಗುವವನೇ ಸರಿ ಇಲ್ಲವೇನೋ ಎಂಬಂತೆ ಯಾವಾಗಲೂ ಅನಿಸುತ್ತಿರುತ್ತದೆ.ಯರ್ರಾಬಿರ್ರಿ ಹೋಗುತ್ತಿದ್ದ ಬರುತಿದ್ದ ವಾಹನಗಳ ಮದ್ಯೇ ಮುಂದೆ ಸಾಗುತ್ತಿರುವಾಗ ಮುಂದಿದ್ದ ಕರಭುಜಾ ಹಣ್ಣಿನ ಗಾಡಿಯಿಂದ ಒಂದು ಹಣ್ಣು ಬಿತ್ತು. ಆ ಟಾಮ್ ಟಾಮ್ ಅವನಿಗೆ ಹಣ್ಣು ಬಿದ್ದದ್ದು ಗೊತ್ತಾಗಲಿಲ್ಲ ಅನಿಸುತ್ತೆ ಅವನು ವಾಹನ ದಟ್ಟಣೆ ಕಡಿಮ...