ಸ್ವಾತಂತ್ರ ಇದ್ದರೂ ಬದುಕು ಅತಂತ್ರ...
Nagendra Banjagere
*ದಾಸ್ಯಕ್ಕೆ ತೆರಿಗೆಯ ತೇದು ಗ್ಯರಸೆ ಗ್ಯರಸೆ ದಿನಸೀ ಧಾನ್ಯ ಬೆಳೆದ ಅನ್ನದಾತ ಅಂದು ತಲೆಯಲ್ಲಿ ಅಕ್ಷರವಿರಲಿಲ್ಲ ಎದೆಯಲ್ಲಿ ಅಕ್ಕರೆಯಿತ್ತು ಸಕಲ ಜೀವಿಗಳಲ್ಲಿ...*
*ಜವಾರಿ ಬೆಳೆದು ತಿಂದುಂಡ ಜನರ ಜೀವ ಗುಂಡ್ಕಲ್ಲು.. ಗುಡಿಸಲಾದರೂ ಜೋಪಡಿಯಾದರೂ ಚಳಿ ಮಳೆ ಸಿಡಿಲಿಗೆ ಬೆದರದೆ...*
*ಸ್ವದೇಶಿಗಳೇಕೆ ತೆರಬೇಕು ಪರದೇಶಿಯರಿಗೆ ತೆರಿಗೆ??ದಂಗೆದ್ದರು ಒಟ್ಟಾದರು ಇಷ್ಟಾದರೂ ಪರದೇಶಿಗಳ ಸ್ವದೇಶದಿ ಓಡಿಸಿ ತಿರಂಗವ ಹಾರಿಸಿ ಜನಗಣಮನ ಹಾಡಿ..ಅಖಂಡ ದೇಶವು ಮೂರಾಗಿ ಇಬ್ಬಾಗಿಸಿ..*
*ಭಾರತಮಾತೆ ಹೆಣ್ಣು..ಆದಿವಕಾಲದಿಂದಲೂ ಸ್ವಾತಂತ್ರ ಕಸಿದ ಜನ ಸ್ವತಂತ್ರ ಸಿಕ್ಕ ಮೇಲೂ ಸ್ವಾತಂತ್ರ್ಯ ಕೊಡದೆ ಜನಗಣಮನ ಹೇಳುವ ಜನಮನ...*
*ಅನ್ನದಾತನ ಬೆಳೆಗೆ ಬೆಲೆ ಇಲ್ಲದಾಯ್ತು ಅನ್ನವಿಲ್ಲದಂತಾಯ್ತು... ರಾಜಕಾರಣಿಗಳು ಅನ್ನ ರಾಜನಿಗೆ ಬೀಜದ ಹೆಸರಲ್ಲಿ ಅರೆ ಜೀವ.. ಕೀಟನಾಶಕದಿ ಪೂರ ಜೀವವ ತೆಗೆದು ತರಾವರಿ ತೆರಿಗೆಯ ಬರೆ ಹಾಕಿ ಬೀದಿಗೆ ನೇತಾಕಿದರು ಅವನ...*
*ಶ್ರಮಿಕರ ರಕ್ತ ಬೆವರು ಹೀರಿ ಸಂಪಾದಿಸಿದ ಧನಿಕನ ಮನೆಯ ಮೇಲೆ ತಿರಂಗ ಧರ್ಪದಿ ನಗುತ್ತಿದ್ದರೆ ತಿರುಕನ ಮನೆಯ ತಿರಂಗ ಸ್ವಾತಂತ್ರ್ಯದ ಸಂಕೇತವಾದರೂ ನಿಂದೇನೂ ನಡೆಯದೆಂಬಂತಿತ್ತು...*
Happy Independence day...
✍️ *ನಾಗೇಂದ್ರ ಬಂಜಗೆರೆ.*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ