ಸೃಷ್ಠಿ -ಹಸಿವು -ಹೆಣ್ಣು..

ಸೃಷ್ಠಿ v/s ಕಾನೂನು...


ಮೊನ್ನೆ ನನ್ನ ಮಗಳದೊಂದು ಆದರ್ಶ ಶಾಲೆಗೆ ಪ್ರವೇಶ ಪರೀಕ್ಷೆ ಇತ್ತು. ಎಲ್ಲಾ ಸಿದ್ಧತೆಯೊಂದಿಗೆ ಪರೀಕ್ಷೆಗೆ ಹೊರಟ ನಾವು ಹೋಗುವ ರಸ್ತೆಯಲ್ಲೊಂದು ರೈಲ್ವೆ ಟ್ರ್ಯಾಕ್ ದಾಟಿ ಹೋಗಬೇಕಿತ್ತು. ಸುಧಾ ಗೇಟ್ ಫ್ಲೈಓವರ್ ನಿರ್ಮಾಣ ಕಾರ್ಯದ ನಿಮಿತ್ತ ಆ ಗೇಟ್ ನ ವಾಹನ ಸಂಚಾರದ ಭಾರವನ್ನೆಲ್ಲಾ ಒಂದೇ ಗೇಟ್ ನಿರ್ವಹಿಸುತ್ತಿದ್ದುದರಿಂದ ತುಸು ಟ್ರಾಫಿಕ್ ಹೆಚ್ಚೇ ಇತ್ತು. ರೈಲು ಹಾದು ಹೋಗುವವರೆಗೂ ಕಾದು ನಿಂತಿದ್ದ ನಾವು ನನ್ನ ಮುಂದೆ ನಾಲ್ಕೈದು ಬೈಕುಗಳು ಅವುಗಳ ಮುಂದೆ ಟಾಮ್ ಟಾಮ್ ಒಂದರಲ್ಲಿ ಕಂಠದ ಮಟ್ಟ ಕರಬುಜಾ ಹಣ್ಣುಗಳು ತುಂಬಿದ ಗಾಡಿ ಒಂದು ಇತ್ತು. ಬೇಸಿಗೆ ಆದ್ದರಿಂದ ಬೆಳಗಿನ 10 ಗಂಟೆಯ ಬಿಸಿಲು ಸಾಧಾರಣವೇನೂ ಇರಲಿಲ್ಲ. ಸರಿಯಾಗಿಯೇ ಇತ್ತು. ಉದ್ದನೆಯ ಗೂಡ್ಸ್ ಗಾಡಿಯೊಂದು ಪಾಸ್ ಆದಮೇಲೆ ವಾಹನಗಳಿಂದ ಶಬ್ದಮಾಲಿನ್ಯ ವಾಯು ಮಾಲಿನ್ಯ ಅಧಿಕವಾಯಿತು. ಯಾವುದೇ ಟ್ರಾಫಿಕ್ ರೂಲ್ಸ್ ಫಾಲೋ ಮಾಡದೇ ಅಡ್ಡಾ ದಿಡ್ಡಿ ವಾಹನಗಳನ್ನು ಚಾಲನೆ ಮಾಡುವವರು ಬಳ್ಳಾರಿಯಲ್ಲಿ  ಅಂತವರೇ ಹೆಚ್ಚಾಗಿ ಕಾಣ ಸಿಗುವ,  ಸರಿಯಾಗಿ ಹೋಗುವವನೇ ಸರಿ ಇಲ್ಲವೇನೋ ಎಂಬಂತೆ ಯಾವಾಗಲೂ ಅನಿಸುತ್ತಿರುತ್ತದೆ.ಯರ್ರಾಬಿರ್ರಿ ಹೋಗುತ್ತಿದ್ದ ಬರುತಿದ್ದ ವಾಹನಗಳ ಮದ್ಯೇ ಮುಂದೆ ಸಾಗುತ್ತಿರುವಾಗ ಮುಂದಿದ್ದ ಕರಭುಜಾ ಹಣ್ಣಿನ ಗಾಡಿಯಿಂದ ಒಂದು ಹಣ್ಣು ಬಿತ್ತು. ಆ ಟಾಮ್ ಟಾಮ್ ಅವನಿಗೆ ಹಣ್ಣು ಬಿದ್ದದ್ದು ಗೊತ್ತಾಗಲಿಲ್ಲ ಅನಿಸುತ್ತೆ ಅವನು ವಾಹನ ದಟ್ಟಣೆ ಕಡಿಮೆ ಇರುವ ಕಡೇ ಹೋಗುತ್ತಿದ್ದುದು ಕಣ್ಣಿಗೆ ಕಾಣುತಿತ್ತು. ಆ ಹಣ್ಣನ್ನು ನೋಡಿದ ನಾನು ಅದರ ಪಕ್ಕದಲ್ಲೇ ಇದ್ದ Xuv700 ಕಾರಿನಲ್ಲಿದ್ದ ಡ್ರೈವರೋ ಓನರ್ ಗೋ ಕಣ್ಣಿನಲ್ಲೇ ತಿಳಿಸಿದೆ. ಅವನು ಸ್ಟೀರಿಂಗ್ ಹಿಡಿದೇ ಒಮ್ಮೆ ಡೋರ್ ತೆಗೆದು ನೋಡಿ ಏನೋ ಗಲೀಜು ನೋಡಿದಂತೆ ಮುಖ ಮಾಡಿದ. ಬೇಸಿಗೆ ಕಾಲದಲ್ಲಿ ಕಣ್ಣೆದುರಿಗೆ ಉದುರಿಬಿದ್ದ ಚನ್ನಾಗಿಯೇ ಇರುವ ಹಣ್ಣು, ಬಿಟ್ಟರೆ ಯವುದಾದ್ರು ವಾಹನ ಚಕ್ರಕ್ಕೆ ಸಿಲುಕಿ ಪಚ್ಚಿ ಆಗುವ ಸಾಧ್ಯತೆ ಇದ್ದುದರಿಂದ ತೆಗೆದು ಕೊಳ್ಳಲು ನಿರ್ಧಾರ ಮಾಡಿ ಮಗಳಿಗೆ ಇಳಿದು ಆ ಹಣ್ಣು ತೆಗೆದುಕೊಳ್ಳಲು ಹೇಳಿದೆ.ಮಗಳು ಹೇಳಿದ ತಕ್ಷಣ ಇಳಿದು ಹಣ್ಣಿನ ಕಡೆ ಧಾವಿಸಲು ಇನ್ನೇನು ಹೆಜ್ಜೆ ಹಾಕಬೇಕು ಎರಡಮೂರು ಗಜ ದೂರದಲ್ಲಿ  ವಿವಾಹಿತ ಮಹಿಳೆಯೊಬ್ಬರು ಆ ಹಣ್ಣಿನಕಡೆ ಧಾವಿಸಿ ಓಡಿ ಬರುತ್ತಿರುವುದು ಕಾಣಿಸಿತು. ಚುಮ್ಮಿ ಬೇಡ ತಡಿಯಮ್ಮ ಎಂದೇ... ಹಣ್ಣು ತಗ ಅಂತ ಹೇಳಿ ಈಗ ಬೇಡ ಅನ್ನುತ್ತಿದ್ದಾರಲ್ಲಾ ಎಂದು ಗೊಂದಲಕ್ಕೆ ಒಳಗಾಗಿ ಗಾಡಿ ಹತ್ತಿಕೂರಲು ತಿರುಗಿದಳು. ಆ ಮಹಿಳೆಯ ಚೂಡಿ, ಚಪ್ಪಲಿ,ಬಡತನ ಹಸಿವು ತೋರಿಸುತ್ತಿದ್ದರಿಂದ ಮತ್ತು ಆ ಹಣ್ಣು ಹಸಿದ ಮಕ್ಕಳಿಗೂ, ವೃದ್ಧರಿಗೂ ಆಗತ್ತೆ ಎಂಬಂತೆ ಅವರು ಓಡಿ ಬರುತ್ತಿದ್ದರಿಂದ ನಾನು ಬೇಡ ಅಂತ ಮಗಳಿಗೆ ಹೇಳಿದ್ದು. ನಾನು ಹಣ್ಣು ಸುಮ್ಮನೇ ಹಾಳಾಗತ್ತೆ  ತೆಗೆದುಕೊಳ್ಳೋಣ ಎಂದೆನಿಸಿದರೆ ಆ ಮಹಿಳೆಗೆ 'ಅಬ್ಬಾ... ತಿನ್ನಲು ಹಣ್ಣು ಸಿಕ್ತು' ಎಂಬಂತಿತ್ತು.ನಮಗಿಂತಲೂ ಆ ಹಣ್ಣು ಅವರಿಗೆ ಅವಶ್ಯಕತೆ ಇದೆ ನಾನು ಮಗಳಿಗೆ ಬೇಡ ಅಂತ ಹೇಳಿದ್ದೆ ಸರಿ ಎನಿಸಿ ನಮ್ಮ ಕೆಲಸಕ್ಕೆ ನಾವು ಸಾಗಿ ಬಂದೆವು. ಟ್ರಾಫಿಕ್ ಅಲ್ಲಿ ಆದ 20 ಸೆಕೆಂಡ್ ಚಿತ್ರಣವನ್ನು ಸೀರಿಯಲ್ ಎಳೆದ ಹಾಗೆ ಎಳಿತಿದ್ದೀನಲ್ಲಾ ಎಂದು ಭಾವಿಸಬೇಡಿ. ಅದಕ್ಕೇ ಸ್ತ್ರೀಯನ್ನು ಸೃಷ್ಠಿ ಅಂತ ಕರೆದಿರುವ ಕಾರಣ ಹಿನ್ನೆಲೆ ಎಲ್ಲಾ ನೋಡಿದರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..