ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..

ನಾ ಕಂಡ ಸಂಗನಕಲ್ಲು....

ಒಂದೆರಡು ದಿನಗಳಿಂದ ಬಳ್ಳಾರಿಯಲ್ಲಿ ಸ್ವಲ್ಪ ಮಳೆ. ಮಳೆ ಎಂದರೇ ಬಿಟ್ಟು ಬಿಡದೇ ಸುರಿಯುವುದಲ್ಲ ಬದಲಾಗಿ ಬರೀ ಬಿಸಿಲು ಗಾಳಿಯಲ್ಲದ ದಿನಕೊಮ್ಮೆಯೋ ಎರಡು ಬಾರಿಯೋ  ಹತ್ತಿಪ್ಪತ್ತು ನಿಮಿಷ ಬಂದೋಗುವ ಸಾಧಾರಣ ಮಳೆ.. ನಮ್ಮ್ ಉಡುಪಿ ಮಂಗಳೂರಿಂನಂತಹ ಕರಾವಳಿ ಭಾಗದಲ್ಲಿ ಎಷ್ಟು ಮಳೆ ಸುರಿದರೂ ಮಳೆ ನಿಂತ ಮರು ಕ್ಷಣ ಮಳೆಯೇ ಬಂದಿಲ್ಲದಂತಹ ಉರಿ ನಮ್ಮ ಬಯಲು ಸೀಮೆಕಡೆ ಇರುವುದಿಲ್ಲ... ಒಮ್ಮೆ ಮಳೆ ಸುರಿದರೆ ಮೂರು ನಾಲ್ಕು ದಿನ ಕೆಸರು  ತಂಪು ಇದ್ದೇ ಇರುತ್ತದೆ. ನಾಳೆ ಸಂಡೇ ಎಲ್ಲಿಗಾದರೂ ಹೋಗೋಣ ಎಂದು ಯೋಚನೆ ಮಾಡಿದಾಗ ನೆನಪಾಗಿದ್ದು ಬಳ್ಳಾರಿಯ ಸಂಗನಕಲ್ಲು. ಹೆಗಲಿಗೆ ಕ್ಯಾಮೆರಾ ಹಾಕಿ, ಗಾಡಿ ಹತ್ತಿ ಹೋಗಿ ಇಳಿದದ್ದು ಸಂಗನಕಲ್ಲಿನ ತಪ್ಪಲಿನಲ್ಲಿ. 

  ಸುಮಾರು ಮೂರು ಲಕ್ಷ ವರ್ಷಗಳ ಹಿಂದೆ ಜ್ವಾಲಾಮುಖಿಯ ಪರಿಣಾಮದಿಂದ   ನಿರ್ಮಾಣವಾದ  spike ಬೆಟ್ಟವೇ ಈ ಸಂಗನಕಲ್ಲುಗಳ ರಾಶಿ. ಜ್ವಾಲಾಮುಖಿಯಾಗಿ ಗುಡ್ಡ ರಚನೆಯಾದ ಕಾಲದಲ್ಲಿ  
 ಭೂಮಿಯ ಅಂತರಾಳದಲ್ಲಿ(Mantal) ಸುಮಾರು 70 ಕಿಲೋ ಮೀಟರ್ ಆಳದಲ್ಲಿ ಉದುಗಿದ್ದ ಆಲಿವಿನ್ ಡಯಾಬೇಸ್ ಅಥವಾ ಆಲಿವಿನ್ ಬಸಾಲ್ಟ್  ಕಲ್ಲಿನ ರಾಶಿ ಮ್ಯಾಂಟಲ್ ನಲ್ಲಿನ ಕೆಲವು  ಅಡಚಣೆಗಳಿಂದಾಗಿ ಭೂಮಿಯ ಮೇಲ್ಮೈ ಮೇಲೆ ಬರುತ್ತವೆ. ಜ್ವಾಲಾಮುಖಿ ಸ್ವರೂಪದ ಗಟ್ಟಿಹುಂಡೆಗಳಂತಹ ಕಲ್ಲುಗಳನ್ನ ಈಗಲೂ ಕೂಡ ನಾವು ಅಲ್ಲಿ ಕಾಣಬಹುದಾಗಿದೆ. ಈ  ಬಸಾಲ್ಟ್ ಕಲ್ಲುಗಳ ವಿಶೇಷ ಎಂದರೆ ಕಲ್ಲುಗಳಲ್ಲಿ ಲೋಹದನಾದ (METAL SOUND) ಹೊರಹೊಮ್ಮುವುದು!. ಎಲ್ಲಾ ಕಲ್ಲುಗಳು ಒಂದೇ ತರವಾಗಿದ್ದು ಕೆಲವು ಆಯ್ದ ಕಲ್ಲುಗಳಲ್ಲಿ ಮಾತ್ರ ಈ ಲೋಹದ ಶಬ್ದ ಬರುತ್ತಿದೆ.
ಡಯಾಬೇಸ್ ಅಥವಾ ಆಲಿವಿನ್ ಬಸಾಲ್ಟ್  ಕಲ್ಲುಗಳಲ್ಲಿ ಮಾತ್ರ
 ಆ ಬಂಡೆಯ ಸಂಯೋಜನೆಯಿಂದಾಗಿ ಈ ಪ್ರಕಾರದ ಶಬ್ದಗಳು ಬರುತ್ತವೆ. ಲೋಹದನಾದ ಬರುವ 
 ಬಂಡೆಗಳು  ಲೈವ್ ಬಂಡೆಗಳು(Live rock)ಮತ್ತು ಲೋಹದ ಶಬ್ದ ಬರದ  ಬಂಡೆಗಳನ್ನು ಡೆಡ್ ಬಂಡೆಗಳು (Dead rocks) ಎಂದು ಕರೆಯಲಾಗುವುದು.

ಆಲಿವಿನ್ ಬಸಾಲ್ಟ್ ಅಥವಾ ಆಲಿವಿನ್ ಡಯಾಬೇಸ್.
ಇಂದುಲೋ ಕಬ್ಬಿಣದ ಶೇಕಡಾವಾರು 7% ಮಾತ್ರ ಇದ್ದು ಆದರೂ ಈ ಪ್ರಕಾರದ ಧ್ವನಿ ಇದೆ.

ಈ ಪ್ರಕಾರದ ಬಂಡೆಗಳ ಬಗ್ಗೆ ಈ ಹಿಂದೆ ಇದ್ದಂತಹ ನಮ್ಮ ಪೂರ್ವಜರಿಗೆ ತುಂಬಾ ಚೆನ್ನಾಗಿ ಗೊತ್ತಿತ್ತು. ಪುರಾತನ ದೇವಾಲಯಗಳಲ್ಲಿ ಇಂತಹ ಬಸಾಲ್ಟ್ ಕಲ್ಲುಗಳನ್ನು ಬಳಸಿರುವುದು ವಿಶೇಷ.

 ಹಂಪೆಯ ವಿಜಯ ವಿಠಲ ದೇವಸ್ಥಾನದಲ್ಲಿ ಸಂಗೀತ ಮಂಟಪಗಳು ಮತ್ತು ಸ ರಿ ಗ ಮ ಪ ಇದೇ ಸಂಯೋಜನೆಗೊಂಡಂತಹ ಕಲ್ಲುಗಳಿಂದಲೇ ರಚನೆ ಗೊಂಡಿವೆ. ಆಂಧ್ರ ಪ್ರದೇಶದ  ತಾಡಿಪತ್ರಿ ಹತ್ತಿರ ಬುಗ್ಗರಾಮಲಿಂಗೇಶ್ವರ ದೇವಸ್ಥಾನ ಮತ್ತು ಚಿಂತಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಈ ಶಬ್ದಬರುವ ಬಂಡೆಗಳು,ಕಂಬಗಳು ಇರುವುದು ವಿಶೇಷ. ಈ ಬಂಡೆಗಳು ಲಿಥೋಫೇನ್ ಎಂದು ಕರೆಯಲ್ಪಡುವ ಸಣ್ಣ ಬಂಡೆಗಳ ಸರಣಿಯಾಗಿದ್ದು ಅದ್ಭುತ ಶಬ್ದಗಳನ್ನು ಹೊಂದಿವೆ.
ಒಲಿವಿನ್ ಬಸಾಲ್ಟ್ ಅಪರೂಪದ ಭೂಮಿಯ ಅಂಶವಾಗಿದೆ.
ನಿಲುವಂಗಿಯಿಂದ ಪಡೆದ ಬಂಡೆಯ ಆಲಿವಿನ್ ಅನ್ನು ಆಲಿವ್ ಹಸಿರು ಬಣ್ಣದಲ್ಲಿ ಕರೆಯಲಾಗುತ್ತದೆ ಮತ್ತು ಇದನ್ನು ಆಲಿವಿನ್ ಎಂದು ಕರೆಯಲಾಗುತ್ತದೆ. ಜ್ವಾಲಾಮುಖಿ ಸಮಯದಲ್ಲಿ ಅಖಂಡ ಉಂಡೆಗಳಂತೆ ಇದ್ದಂತಹ ಬೆಟ್ಟದ ರಾಶಿ ಪ್ರಾಸ್ಟ್  ವೆಡ್ಜ್ಯಿಂಗ್ ಪ್ರಕ್ರಿಯೆಯ ಮೂಲಕ ಸಣ್ಣ ಸಣ್ಣ ಕಲ್ಲುಗಳಾಗಿ ವಿಭಜನೆಗೊಂಡಿದೆ.
ಫ್ರಾಸ್ಟ್ ವೆಡ್ಜಿಂಗ್ ಎಂದರೆ ಬಂಡೆಗಳಲ್ಲಿ ಸಣ್ಣ ಸಣ್ಣ ಮುರಿತಗಳನ್ನು ರೂಪಿಸುವ ಪ್ರಕ್ರಿಯೆ.

ಬಂಡೆಗಳಲ್ಲಿ ಸಣ್ಣ ಮುರಿತಗಳನ್ನು ರೂಪಿಸುವ ಪ್ರಕ್ರಿಯೆ.
ಮೂಲಭೂತ ಜ್ವಾಲಾಮುಖಿಗಳು ಈ ಪ್ರದೇಶದಲ್ಲಿ ಕಂಡುಬರುತ್ತವೆ
ಆಲಿವಿನ್ ಬಸಾಲ್ಟ್ ಈ ಪ್ರದೇಶದಲ್ಲಿ ಕಂಡುಬರುತ್ತದೆ. ಬಂಡೆ ಗಲ್ಲುಗಳಲ್ಲಿ ಮುರಿತ ಉಂಟಾದಾಗ ಚೂಪಾದಂತಹ ಅಲಗಿನಂತಹ, ಕತ್ತಿಯಂತಹ, ಕೊಡಲಿಯಂತಹ  ರಚನೆಗಳು ಸ್ವಾಭಾವಿಕವಾಗಿ ಆಗಿದ್ದು ಇಲ್ಲಿಯ ವಿಶೇಷ. ಈ ರಚನೆಗಳಾಗಿ ಅದೆಷ್ಟೋ ಸಾವಿರ ವರ್ಷಗಳ ನಂತರ ಆಗಮಿಸಿದಂತಹ ಆದಿಮಾನವರು ಅವುಗಳನ್ನು ತಮ್ಮ ಆಯುಧಗಳಾಗಿ ಬಳಸಿಕೊಂಡು ಅಲ್ಲಿಯೇ ತಮ್ಮ ನೆಲೆಯನ್ನು ಕಂಡುಕೊಂಡು ವಿರಾಮವಾದಾಗ ರೇಖಾಚಿತ್ರಗಳನ್ನು ವಿಶೇಷ. ಇತಿಹಾಸದಲ್ಲಿ  ಸಂಗನಕಲ್ಲು ಶಿಲಾಯುಗದಲ್ಲಿ ಆಯುಧಗಳ ಕಾರ್ಖಾನೆ ಎಂದು ಓದುತ್ತೇವೆ. ಆದರೆ ನನ್ನ ಪ್ರಕಾರ ಆದಿಮಾನವರು ಇಲ್ಲಿ ಕೆಲವು ಆರು ವರ್ಷಗಳವರೆಗೆ ನೆಲೆ ನಿಂತು ಇಲ್ಲಿ ಅವರಿಗೆ ಸಿಕ್ಕಂತಹ ಶಿಲಾಯುಧಗಳಲ್ಲ ಅವರು ತಮ್ಮ ಜೊತೆಗೆ ಕೊಂಡು ಒಯ್ದಿರಬಹುದು. ಅಂತಹ ಆಯುಧಗಳು ಅವನಿಂದ ಸವಿದುದಾಗ ಅವನು ಅದೇ ತೆರನಾದಂತಹ ಪರ್ಯಾಯ ಶಿಲಾಯುಧಗಳನ್ನು ತಯಾರು ಕೊಂಡಿರಬೇಕು.

 ಮೂರು ಸಾವಿರ ಇತಿಹಾಸವುಳ್ಳಂತಹ ನಮ್ಮ ಆದಿಮಾನವರ ರೇಖಾಚಿತ್ರಗಳನ್ನ ಇಂದು ಸರ್ಕಾರ ಮತ್ತು ಸಾರ್ವಜನಿಕರು ಉಳಿಸಿ ಸಂರಕ್ಷಿಸಬೇಕಾಗಿದೆ. ಆದಿಮಾನವನ ರೇಖಾಚಿತ್ರಗಳ ಜೊತೆಗೆ ಆಧುನಿಕ ಮಾನವನ ಹೆಸರಿನ ಇನ್ಸುರೆನ್ಸ್ ಗಳನ್ನ ಅದು ಇದು ಕೆತ್ತನೆ ಮಾಡಿರುವುದನ್ನು ನಿಷೇದಿಸ ನಿಷೇಧಿಸಬೇಕಾಗಿದೆ.

ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...