ಮುದ್ದು ಶ್ವಾನ ಮತ್ತು ಮಾರ್ಜಾಲ
ಮುದ್ದು ಶ್ವಾನ-ಮಾರ್ಜಾಲ
ಮಕ್ಕಳ ಹೆಂಗೆಳೆಯರ ಮುದ್ದು ಮಾರ್ಜಾಲ
ಮನೆಯ ಕಾವಲುಗಾರ ನೀನೇ ಶ್ವಾನ..
ಇಬ್ಬರೂ ಅಚ್ಚುಮೆಚ್ಚಿನ ಮಿತ್ರರು ಮನುಷ್ಯರಿಗೆ..
ಸದಾ ಬೆಚ್ಚಗಿರಲು ಒಲೆಯ ಪಕ್ಕದಲ್ಲಿ ನಿನ್ನ ಟಿಕಾಣಿ
ಸಾಕುವ ವ್ಯಾಘ್ರ ನೀನು ಬಳಕುವ ಮಾಯಾ ಮಾರ್ಜಾಲ ನೀನು ಯಾಕೆ ನೀ ಕಣ್ಣು ತೆರೆದು ಹಾಲು ಕುಡಿಯಲೊಲ್ಲೇ??
ಆದಿಮಾನವನ ಶ್ವಾಸ ನೀನು ಓ ಶ್ವಾನ ನೀನು ಪಕ್ಕದಲ್ಲಿ ಇರುವ ದೈರ್ಯ ಅಲ್ಲವೇ ನಮ್ಮೀ ನಾಗರೀಕತೆಯು ಬೆಳೆದದ್ದು?
ನಿನ್ನ ನಿಯತ್ತಿಗೆ ಸಾಟಿ ಇಲ್ಲ ಯಾರೂ ಬೇಕಾಗಿದೆ ನಮಗೆ ಕಿಂಚಿತ್ತಾದರೂ ನಿನ್ನ ನಿಯತ್ತು.
ನೀವಿಬ್ಬರೇ ನಮಗೆ ರಂಜನೆ ಭೌ ಬೌ..ಮಿಯಾಂವ್ ಮಿಯಾಂವ್..ಗಳೇ ನಮಗಾದವು ಸಂಗೀತದ ಮನೋರಂಜನೆ.. ಓ ಬಾವುಗಾ ನೀನೇಕೆ ಓಡುವೆ ನಾಯಿಯ ಕಂಡರೇ?
ಮಾಡುವರು ಮನೆಯಲಿ ಯಾರಾದರೂ ಕಚ್ಚಾಡಿದರೆ ಶ್ವಾನ ಮಾರ್ಜಾಲದ ಹೋಲಿಕೆ
ಅಜನ್ಮ ವೈರಿಗಳಲ್ಲ ನೀವು ಜೊತೆಯಾಗಿರೆ ಜನ್ಮ ಜನ್ಮದ ಮಿತ್ರರಂತೆ..
ನಿಮ್ಮ ನೋಡಿ ಕಲಿಯಬೇಕಿದೆ ನಾವು ಸಣ್ಣ ಸಣ್ಣದಕ್ಕೂ ಜಗಳ ಆಡಿ ಹಾವು ಮುಂಗುಸಿಯಂತೆ ಮುನಿಸಿಕೊಂಡು ಮೂತಿತಿರುವುತ್ತಿರುವ ನಾವೂ..
✍️ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ