ಮಾತೆ ಮತ್ತು ಗೋ ಮಾತೇ..
ಮಾತೆ ಮತ್ತು ಗೋಮಾತೆ..
ಹವ್ಯಾಕ ದೇಶದ ಅರಸಿ ನೀನು ಪಶುಪತಿಯ ಸತಿಯೂ ನೀನು
ನೀಡುವೆ ಎನಗೆ ನೀನು ಭೂಲೋಕದ ಅಮೃತ ಹೈನು
ಹವಿಸ್ಸನ್ನು ನೀಡುವ ಗೋವು ನೀನು
ನೀನಾಗಿಹೆ ಈ ಧರಿತ್ರಿಯ ಕಾಮದೇನು..
'ಅಮ್ಮಾ' ಜಗದ ಮೂಲ ನೀನಮ್ಮ ನಮ್ಮ ದೇವರು ನೀನಮ್ಮ ಈ ಜಗದ ಸಿರಿಯ ಸೀಮಾಂತಿನಿ ನೀನು ಆದಿಯ ಆರ್ಯೆ ನೀನು ಈ ಜಗದ ಮಾಯೆಯೂ ನೀನು...
ಈ ಭರತ ಭಮಿಯ ದೇವರ ಪ್ರತಿರೂಪ ಮಾತೆ ಮತ್ತು ಗೋಮಾತೆ
ಸಾತ್ವಕತೆಯ ಸಾಧ್ವಿಯರು ನೀವು
ಈ ಜಗದ ಜನ ಅಂದುಕೊಂಡಂತೆ ಅಬಲೆಯರು ನೀವಲ್ಲ ಸಬಲೆಯರು ನೀವು..
ಧನಧಾನ್ಯದ ಮೂಲ ನೀವು ಮಹಾಸತಿಯರು ನೀವು..
ನೀವೀಜಗದ ಅರಕ್ಷಕರು ನಿಮಗಿಲ್ಲ ರಕ್ಷಕರು
ನಿಮ್ಮನು ಸಿಕ್ಕ ಸಿಕ್ಕಲ್ಲೇ ಭಕ್ಷಿಸುತಿಹರು..
ದನ ಸಾಕುತಿಹರು ಧನಕ್ಕಾಗಿ ಇವಳನ್ನು ಧನಕ್ಕಾಗಿ ದಹಿಸುತಿಹರು...
ಗೃಹಿಣಿಗೆ ಗೃಹಬಂಧನ ಗೋವಿನ ಹರಣ ಮುಕ್ತವಾಗಬೇಕಿದೆ ಎಂದ ಇಂದ್ರ...
✍️ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ