ಕೊರೊನಾ..‌ಕೊರೋನ..

ಕೊರೊನಾ.. ಕೊರೋನಾ..

ದೇಶ ದೇಶಗಳ ಎಲ್ಲೇ ಮೀರಿ 
 ರಾಜ್ಯ ರಾಜ್ಯದೊಳು ತೂರಿ
ತಲುಪಿತು  ಹಳ್ಳಿ ಊರು ಕೇರಿ.
ಅದೇ  ಮಾರಿ ಕೋರೋನಾ .

ನಾ ಬಲಶಾಲಿ ಎಂದು  ಎದೆಯುಬ್ಬಿ ಬೀಗುತ್ತಿದ್ದೆ..
 ನೀ ಅಂಗೈಯಲ್ಲೇ ಬಂದು ಅವಿತು ಕುಳಿತದ್ದು ಮರೆತಿದ್ದೆ..

ಹೊಯ್ ಕೊರೊನಾ ನಿನ್ನ ತವರಂತೆ ವುಹಾನ
ನೀನೆ ಕಕ್ಕಬೇಕು ನಿಜನಾ
ಹತ್ತಿಕ್ಕಿದೆಯಲ್ಲಾ ನಮ್ಮೆಲ್ಲರ ಜೀವ, ಜೀವನನಾ..

ಅಲ್ಪ ಸ್ವಲ್ಪ ಉಳಿದಿದ್ದ ಸಂಸ್ಕಾರ  ಅದನೂ ನುಂಗಿದೆ  ಅಷ್ಟೇ ಅಲ್ಲ ನಮ್ಮೆಲ್ಲರ ಅಮೂಲ್ಯ ಹಿತ ಬಂಧುಗಳ ಬಲಿ ಪಡೆದ ರಕ್ಕಸ ನೀನಾದೆ..

ಸಣ್ಣವನೆಂದು ನಿರ್ಲಕ್ಷಿಸುವ ಜನರಿಗೆ ತಕ್ಕ ಪಾಠ ಕಲಿಸಿದೆ ಜಗತ್ತಲ್ಲಿ ಎಲ್ಲವೂ ಬಂದ್ ಆದರೆ ಬಡಾಯಿ ಕೊಚ್ಚಿಕೊಳ್ಳುವ ಬಾಯಿ ಆಗಲಿಲ್ಲ ಬಂದ್..

ನಿನ್ನಾಗಮನ ಪೂರ್ವ ಎಲ್ಲಾ ಕೆಲಸಕ್ಕೂ ನಿಲ್ಲಬೇಕಿತ್ತು ಲೈನ್..
ಆದರೆ  ಈಗ ಎಲ್ಲದೂ ಆಗಿದೆ ಆನ್ಲೈನ್..
 ಆಡುತ್ತಾ ಹಾಡುತ್ತಾ ಕುಣಿಯುತ್ತಾ ನಲಿಯುತ್ತಿದ್ದರು ಕಲಿತು ನಿರ್ಭಯವಾಗಿ..

ಮಕ್ಕಳು ಮೊಬೈಲ್ ನೊಡಬಾರದೆಂದವರು ಕೊಡಬೇಡಿ ಎಂದವರು  ಕೊಡುವರು ಎಲ್ ಕೆಜಿ ಯೂಕೆಜಿ ಮಕ್ಕಳೆಲ್ಲಾ ಮನೆಯಲ್ಲೇ ಕಲಿಯುತ್ತಿದ್ದಾರಂತೆ  ಮೊಬೈಲಲ್ಲಿ ನಿನ್ನ ಭಯಕ್ಕೆ...

ಆಗ ಬರುತ್ತಿದ್ದರು ಮನೆಯಿಂದ ಶಾಲೆಗೆ
ಈಗ ಹೋಗುತ್ತಿದ್ದಾರೆ ಮನೆಯಿಂದ ಕೂಲಿಗೆ.
ಹಾಗೆ ಕೆಲ ಶಾಲಾಬಾಲೆಯರು ಗಂಡನ ಮನೆಗೆ..

ಇಲ್ಲಿ  ಬೆಲೆ ಕಟ್ಟಲಾಗುತ್ತಿದೆ ಜೀವ ಮತ್ತು ಸಂಬಂಧಗಳಿಗೆ
ಸಮಾಧಿಯೂ ಸಹ..
ನಾವು ಬದುಕಬೇಕಿಲ್ಲ ನಿಯಮಗಳಿಗಾಗಿ
ನಾವು ಬದುಕಬೇಕಿದೆ ನಮ್ಮ ನಂಬಿರುವ ಜೀವಗಳಿಗಾಗಿ..

ಇಷ್ಟುದಿನ  ಕಾಲಕಳೆದೆವು ಏನ್ ಮಾಡಾಕೂ  ಕೊರೊನಾ ಇದೆ ಕ್ಯಾ ಕರೋನ ಎಂದು..
ಇನ್ನು ಮೇಲಾದರೂ ಹೋಗಣ ಸಾಲಿಗೆ 'ಪಾಸಿಟಿವ್' ಅಗದೇ ಪಾಸಿಟಿವ್ ಆಗಿಯೇ ಕಲಿಸುತಾ ಕಲಿಯೋಣೆಂದ ಇಂದ್ರ..

✍️ ನಾಗೇಂದ್ರ ಬಂಜಗೆರೆ..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..