ಎಣ್ಣೆ.. ಎಣ್ಣೆ..
ನನ್ನವಳಿಗೆ ನಾ ಕೇಳಿದೆ ಲೇ ಮೊದಲೆಲ್ಲ ನೀ ಹತ್ತಿರ ಕರೆದು ಪಕೋಡ,ನಿಪ್ಪಟ್ಟು.ಚಕ್ಕಲಿ ಕೋಡುಬಳೆ ಕೊಡುತ್ತಿದ್ದೆ ನೀ ಕರಿದು..
ಈಗ ನಾಲ್ಕೈದು ತಿಂಗಳಿನಿಂದ ನೀ ಯಾಕೆ ಏನನ್ನು ಕರೆದು ಕೊಡುತ್ತಿಲ್ಲ ಕರಿದು?
ಅದಕ್ಕೆ ಅವಳೆಂದಳು ನನ್ನ ಇನಿಯ ನೀ ನನಗೆ ಜೊತೆಯಾದಾಗ ನಿ ತೂಗತ್ತಿದ್ದೆ ನಲವತ್ತೇಳು
ಈ ಹೆಣ್ಣು ಕರೆದು ಎಣ್ಣೆಯಲಿ ಕರಿದು ಕೊಟ್ಟಿದ್ದರಿಂದಲೇ ನೀ ತೂಗುತ್ತಿರುವೆ ಎಪ್ಪತ್ತೇಳು.
ಒಳ್ಳೆಣ್ಣೆಆಗಿಹುದು ಬಾರೀ ದುಭಾರಿ
ಹೋಟ್ಟೆ ಬೆಳೆಸಿ ಆಯಿತು ಬಾರಿ
ಎದ್ದು Walk ಹೋಗಿ ಎರಡುಬಾರಿ ಎಂದು ತಂದಿಟ್ಟಳು ತಣ್ಣೀರು..
ಮೊನ್ನೆ ಎಣ್ಣೆಯ Tin ತರಲು ಹೋದಾಗ ನನ್ನ ಜೇಬು ಸುಟ್ಟಿದ್ದು ನೆನಪಾಗಿ ಹೊಟ್ಟೆಯ ಸವರುತಾ ಮೇಲೆದ್ದೆ..
ಸಾಕಿ ಸಲುಹಿದ ಹೊಟ್ಟೆಯ ಕರಗಿಸಲು ಮಾಡಿದೆ ಬಿರುಸಾದ Walk ಬಿರಿಬಿರಿ
ಮುಂಜಾನೆ ಚಳಿ ಮಾಯ ಆಗಿರುವುದರಿಂದ ಸುತ್ತು ಹಾಕಿದೆ ಹತ್ತು ಹಲವು ಬಾರಿ
ಸಂಜೆಗೆ ಸ್ವಲ್ಪ ಕಾಲುನೋವಾಗಿ ಮರುದಿನ ಮುಂಜಾನೆಗೆ ನೋವ ಆಗಿತ್ತು ಭಾರೀ ಮನೆಯಲ್ಲೇ ಕುಳಿತಿದ್ದೆ ಕಾಲನೋವಿಗೆ ಹೆದರಿ
ನನ್ನವಳು ಕೇಳಿದಳು ಒಂದೇ ದಿನಕ್ಕೇ ಹೊಟ್ಟೆ ಕರಗಿತೇನ್ರಿ
ನಾ ಹೇಳಿದೆ ನನ್ನ ನಲ್ಲೇ ನನ್ನ ಕಾಲುನೋವಾಗಿದೆಯಲ್ಲೇ
ನೋವಿನೆಣ್ಣೆ ತರ್ರೀ ಹಚ್ಚಿ ನೀಯುವೆಂದಳು
ಅಂಗಡಿಗೆ ಹೋಗಿ ನೋವಿನ ಕೇಳಲು ಎಣ್ಣೆ ಕೊಡೆಂದನು ನೂರ ಎಂಭತ್ತ..
ಇದಕ್ಕಿಂತ ಇದಕ್ಕಿಂತಲೂ ಒಳ್ಳೆಣ್ಣೇಯೇ ವಾಸಿ ಸಂಜೆ ನೋಡುವ ಎಂದು ಕೆಲಸಕ್ಕೆ ಹೋದೆ.
ಕೆಲಸದ ಸ್ಥಳದೀ ಅಣ್ಣಾ ಕಾಲ್ ನೋವಿಗೆ ಏನಣ್ಣ ಔಷದಿ ಎಂದು ಕೇಳಿದೆ ನಾ ಮಂಜಣ್ಣನ ಸರ್ವ ರೋಗಕ್ಕೂ ಮದ್ದು ಅದು ತಗೋ ಎಂದರು 'ತೊಂಭತ್ತು'..
ಯಾವುದು ಒಳ್ಳೆಯದೆಂದು ನಾ ಕೇಳಲು take Blenders pride live pride ಎಂದನು..
ಅದರ ಬಗ್ಗೆ ಜ್ಞಾನ ಇಲ್ಲದ ನಾನು ಕೇಳಿದೆ ಧರ
ತೊಂಭತ್ತಕ್ಕೆ 360 ಎಂದನು ಸುಮ್ಮನಾದೇನು ಅದಕ್ಕಿಂತ ನೋವಿನ ಎಣ್ಣೆ ವಾಸಿ ಎಂದು.
ನನ್ನವಳು ನನ್ನ ಜೋತೆ ಕೂತು ಎಣ್ಣೆಯದು ತಿಂದು ಹೊಟ್ಟೆಯ ಕರಗಿಸಲು ಹೋಗಿ ಆದ ಕಾಲನೋವಿಗೆ ನೋವಿನ ಎಣ್ಣೆಯೂ ತರಲಿಲ್ಲ ನೀವಲು
ಹೇಳಿದಳು ಮೂಳೆ ತಜ್ಞರ ಬಳಿ ಹೋಗಿಬರಲು..
ಬಿರಿದು ಬಾವುಬಂದಿದ್ದ ಕಾಲನೋವಿಗೆ ಮುಲಾಮು ಕೇಳಲು ಆರ್ಥೋ ಬಳಿ ಅವರು ಕೈಗಿತ್ತರು ಬಿಲ್750!
ಬಾಯಿ ಮುಚ್ಚಿಕೊಂಡು ಬಿಲ್ ಕೊಟ್ಟು ಇದಕ್ಕಿಂತ '90' ತಂಗಂಡಿದ್ದರೆ ವಾಸಿಯಾಗುತ್ತಿತ್ತೇನೋ ಇಷ್ಟೊತ್ತಿಗೆ ಎಂದು ಅಲ್ಲಿಂದ ಕಾಲ್ಕಿತ್ತೆ..
ನಾನು ನನ್ನವಳು ಕಾರಿನಲ್ಲಿ ಹೊರಟಿದ್ದೆವು ಟೂರು
ಸಮಯ ಬೆಳಿಗ್ಗೆ ಹತ್ತು ಮುಕ್ಕಾಲು ಅದೊಂದು ಊರು ಅಲ್ಲಿ ಸೆರಿದ್ದರು ಜನ ನೂರಾರು
ಯಾಕೆ ಸೇರಿಹರೆಂದು ತಿರುಗಿ ನೋಡಿದರೆ ಕಂಡಿದ್ದು 'MRP-MSIL' ಹಳದಿಬೋರ್ಡ್!
ಮಧ್ಯ ಕೇಳಿದಳು ಅದು ಏನಂಗಡಿ ಎಂದು.
ಈ ಕವನ ಓದಿ ನಾನೆಂದೆ ಅದು ಮದ್ಯದ ಅಂಗಡಿ ಎಂದು
ಟೂರ್ ಮುಗಿಸಿಕೊಂಡು ಬಂದ ಸಂಜೆ ತಂದು ಮುಂದಿಟ್ಟಳು ಗರಿ ಗರಿ ಪಕೋಡ.!!
ಒಂದುದಿನ ಎಂದಂದುಕೊಂಡಿದ್ದು ಸುಳ್ಳಾಗಿ ಕರೆದು ಕರೆದು ತಂದಿಡುತ್ತಿದ್ದಾಳೆ ಬಗೆಬಗೆಯವು ಕರಿದು ಕರಿದು..
✍️ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ