ಹೋಮ,ಹವನ ಮತ್ತು ಪ್ರಾಣಿ ಬಲಿಕೊಟ್ರೆ ಕೊರೋನಾ ಹೋಗತ್ತಾ?

ಇತ್ತೀಚಿನ ದಿನಗಳಲ್ಲಿ ಕೊರೊನಾ ಹೆಸರಿನಲ್ಲಿ ಮಾಡುತ್ತಿರುವ  ಪೂಜೆ,ಹೋಮ ಹವನ ಮೌಢ್ಯಾಚರಣೆ ಹಿಂದಿಗಿಂತಲೂ ಇಂದು ಅಧಿಕ ಆಗಿದೆ ಅದರ ಬಗ್ಗೆ ಒಂದಷ್ಟು ನೋಡುವ..

 ಮೌಡ್ಯ -೧

ಕೊರೋನಾ ನಿಯಂತ್ರಣಕ್ಕೆ  ದೇವರಕಾಯಿ:

ಮನ್ನೇಕೊಟೆ ಎಂಬುದು ಚಳ್ಳಕೆರೆ ತಾಲೂಕಿನ ಸುಮಾರು ಎರಡುಸಾವಿರ ಜನಸಂಖ್ಯೆ ಇರುವ ಗ್ರಾಮ ನನ್ನ ತವರಿನ ನೆರಹೊರೆಯ ಗ್ರಾಮ. ಲಾಕ್ ಡೌನ್ ಘೋಷಣೆ ಮಾಡಿದ ನಂತರ ಬೆಂಗಳೂರಿನಿಂದ ತವರಿಗೆ ಹಿಂದುರುಗಿದ ಕಾರಣದಿಂದ ಅಲ್ಲಲ್ಲಿ ಸೊಂಕು ಹರಡಿ ಸುಮಾರು ಸಕರಾತ್ಮಕ(positive ) ಆಗಿದ್ದಾರೆ. ಮೂಗಿರುವವರೆಗೆ ನೆಗಡಿ ಕೆಮ್ಮು ತಪ್ಪಿದ್ದಲ್ಲ ಹೋಗತ್ತೆ ಬಿಡು ಅದೇನು ಮಹಾ ಎಂದು ಉದಾಸೀನ ಮಾಡಿದುದರ ಫಲವಾಗಿ ಒಂದೇ ಗ್ರಾಮದಲ್ಲಿ ಮೇ ತಿಂಗಳಲ್ಲಿ ಹದಿನೈದಕ್ಕೂ ವಿವಿಧ ವಯಸ್ಸಿನ ಜನರು ಅಸುನೀಗಿದ್ದಾರೆ. ಇಡೀ ಊರನ್ ಊರೇ ದಂಗು ಬಡಿದಂತಾಗಿ ಸ್ಥಳೀಯ ಆಡಳಿತ ವೈದ್ಯಕೀಯ ನೆರವು ಮತ್ತು ಆತ್ಮಸ್ಥೈರ್ಯ ಸಿಗದೇ  ಅಲ್ಲಿನ ಜನರು  ಕೋವಿದಮ್ಮಳ ಓಡಿಸಲು ಮಾರಿಯೇ ಸರಿ ಎಂದು  ಅಷ್ಟ ದಿಕ್ಕಿನಲ್ಲಿ ಮಾರಿದೇವರಿಂದ ಮಂತ್ರಿಸಿದ  ಕಾಯಿಗಳನ್ನು  ಕೆಂಪು ವಸ್ತ್ರ ಬಳಸಿ ಕಟ್ಟಿದ್ದಾರೆ. ಇದರಿಂದ  ಗ್ರಾಮಕ್ಕೆ ಕೋವಿದಮ್ಮಳಿಂದಾಗುವ ಬಲಿ ನಿಲ್ಲು ಬಹುದು ಎಂಬುದು ಈ ಜನರ ನಂಬಿಕೆಯಾಗಿದೆ.
 ಮಂತ್ರಿಸಿದ ಕಾಯಿ ಕಟ್ಟಿರುವುದು


ಮೌಢ್ಯ -೨

ಬುಡ್ಡೇಕಲ್ಲಿಗೆ ನೀರಿನ ಅಭಿಷೇಕ:

ಒಕ್ಕಲು ತುಳಿಸಲು ಮೇಟಿಗೂಟ ಎಷ್ಟು ಮುಖ್ಯವೋ ಊರಿಗೆ ದೇವರಿಂದ ರಕ್ಷಣೆಪಡೆಯಲು ಬಡ್ಡೇಕಲ್ಲು ಅಷ್ಟೇ ಮುಖ್ಯ. ಒಂದರ್ಥದಲ್ಲಿ ಇದನ್ನು ಮೌಢ್ಯದ ಕಲ್ಲು ಅಂದರೂ ತಪ್ಪಾಲಿಕ್ಕಿಲ್ಲ. ಇದು ಎಲ್ಲಾ ಊರುಗಳಲ್ಲೂ ಸಾಮಾನ್ಯವಾಗಿ ಬುಡ್ಡೇಕಲ್ಲು ಇರುತ್ತಾವೆ.ನಮ್ಮೂರಿನ  ಪಕ್ಕದ ಬೇಡರೆಡ್ಡಿ ಹಳ್ಳಿ ಎಂಬ ಗ್ರಾಮದಲ್ಲಿ  ದಿನಕ್ಕೆ ನೂರಾ ಒಂದು ಕೊಡ ನೀರು ಬುಡ್ಡೇಕಲ್ಲಿಗೆ ಹಾಕಿದರೆ ಕೊರೋನಾ ಹೋಗುತ್ತದೆ ಎಂಬ ಶಿಖಾಮಣಿಗಳ ಮಾತುಕೇಳಿ  ಹೆಂಗಸರು,ಯುವತಿಯರು ಮಕ್ಕಳು ಗುಂಪು ಗುಂಪಾಗಿ ನೀರೊತ್ತು ತರುತ್ತಿರಲು ಕೊರೋನಾ ಜಾಸ್ತಿಯಾಗಿ  ಬೇರೆಯವರಿಗೆ ಹರಡಬಹುದು ಎಂಬ ಸಾಮಾನ್ಯ ಅರಿವಿಲ್ಲದೇ ಮಾಡಿರುವ ಕೆಲಸ ಅಲ್ಲದೇ ಮತ್ತೇನು ಅಲ್ಲ. ಎಷ್ಟೋ ಭಾರಿ ಇಂತಹ ಆಚರಣೆಗಳು ಅದನ್ನು ಮಾಡಲು ಹೇಳಿದ ವ್ಯಕ್ತಿಗಳ ಪ್ರತಿಷ್ಠೆಯ ಸಂಕೇತವಾಗಿ ಕುರಿಯು ಹಳ್ಳಕ್ಕೆ ಬೀಳುವಹಾಗೆ ಊರಿಗೇ ಊರೆ  ಹೋಗಿ  ಬರಡು ಬುಡ್ಡೆಕಲ್ಲಿನ ಮೇಲೆ ನೀರು ಸುರಿದುಬಂದಿದ್ದರು.ಇದರಿಂದ ಯಾವ ಲಾಭ ಆಗುವುದೋ ನಾನರಿಯೆ..

ಮೌಡ್ಯ -3

ಕೋವಿದಮ್ಮಳಿಗೆ ವಾಮಾಚಾರ: 

ಇತ್ತ ಉತ್ತರ ಕರ್ನಾಟಕದ ಒಂದು ಹಳ್ಳಿಯಲ್ಲಿ ಕೊರೋನ ಹರಡದಂತೆ ಚಿತ್ರ ವಿಚಿತ್ರವಾಗಿ  ವಾಮಾಚಾರ ಮಾಡಿರುವುದು. ಕಣ್ಣಿಗೆ ಕಾಣದ ವೈರಸ್ ಇವರ ತಂತ್ರಕ್ಕೆ ಅದೇಗೇ ಬಂದಿಯಾಗುತ್ತೋ ನಾ ಕಾಣೆ. ಇನ್ನೊಂದು ಊರಿನಲ್ಲಿ ಕೊರೋನಾ ರೋಗ ಊರಿಗೆ ಬಾರದಿರಲು ಒಂದಲ್ಲ ಎರಡಲ್ಲ ಇಪ್ಪತ್ತೊಂದು ಗಂಡು ಮೇಕೆ(ಹೋತ)ಗಳು ಅದು ಹದಿನೇಳು ಸಾವಿರಕ್ಕೊಂದು ಕೊಂಡು ಬಲಿಯನ್ನೂ ಕೊಡಬೇಕೆಂದು ಆ ಊರಿನ ಅರ್ಚಕರು ಹೇಳಿದ್ದಾರಂತೆ.!ಬಾಡೂಟ ಇದ್ದರೆ ಐದು ಮೈಲಿ ನಡೆದುಕೊಂಡು ಹೋಗಿ ಊಟ ಮಾಡಿಬರುವ ಮಂದಿ ಇರುವಾಗ ಇಪ್ಪತ್ತೊಂದು ಮೇಕೆಗಳ ಬಲಿಯಾದಾಗ ಅದನ್ನು ಎಸೆಯುವರೇ? ಎಸೆಯದೆ ಅಡುಗೆ ಮಾಡಿ ತಿನ್ನಲು ಅದೆಷ್ಟು ಜನ ಸೇರಿ ರೋಗ ಹಬ್ಬದೇ ಇರತ್ತಾ?

ಹೋಮ ಹವನ: 


ಇತ್ತೀಚಿನ ಒಂದೆರಡು ದಿನಗಳಿಂದ ಮುನ್ನೆಲೆಗೆ ಬಂದಿರುವ ಆಚರಣೆ ಎಂದರೆ 'ಹೋಮ'. ಯಾವುದೇ ಧರ್ಮದ ನಂಬಿಕೆ ಮತ್ತು ಆಚರಣೆಗಳಿಗೆ ನನ್ನ ವಿರೋಧ ಇಲ್ಲವಾದರೂ ಹೋಮ  ಮಾಡುವುದರಿಂದ  ಆಮ್ಲಜನಕವನ್ನು ಶುದ್ಧೀಕರಿಸುತ್ತದೆ ಎಂದು ದಟ್ಟವಾದ ಹೊಗೆಯನ್ನು ಹಾಕುವುದರಿಂದಲೂ ವಾಯುಮಾಲಿನ್ಯಕ್ಕೆ ಕಾರಣವಾಗುತ್ತವೆ. ನನಗೆ ಯಾವುದೇ ಆಚರಣೆಯ ವಿರೋಧ  ಇಲ್ಲವಾದರೂ ಇದನ್ನು ನೀವು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು  ಇಂದಿನ ದಿನಗಳಲ್ಲಿ  ಹೋಮ,ಪೂಜೆ ಹವನಕ್ಕೆ ಬಳಸುವ  ತುಪ್ಪವೂ ಸೇರಿದಂತೆ ಬಹುತೇಕ ವಸ್ತುಗಳು ಮೂಲದಲ್ಲೇ ಕಲಬೆರಕೆಯಾಗಿ ಮಲಿನ ಆಗಿದ್ದಾವೆ. ಇವೆಲ್ಲವೂ ಸುಳ್ಳು ಅಂತ ನಾನು ಹೇಳುತ್ತಿಲ್ಲ ಆದರೆ ಎಲ್ಲವೂ ಎಲ್ಲಾ ಕಾಲಕ್ಕೂ ಅಷ್ಟೇ ಸಂಪೂರ್ಣವಾಗಿ ಸತ್ಯವಾಗಿ ಉಳಿದಿಲ್ಲ.
ಉದಾಹರಣೆಗೆ:ಚಿಕ್ಕಮಕ್ಕಳಿಗೆ  ಸ್ನಾನದ ನಂತರ  ಕೆಂಡಕ್ಕೆ  ಸಾಂಬ್ರಾಣಿ ಹಾಕುವ ಪದ್ದತಿಯು ನಮ್ಮೆಲ್ಲರಿಗೂ ಚಿರಪರಿಚಿತ.ಇದರಿಂದ ಮಗುವಿಗೆ ಶೀತ ಕೆಮ್ಮು ಆಗದಂತೆ ತಡೆಯುವ ಪದ್ದತಿಯು  ಇದಾಗಿರುತ್ತದೆ.  ನನ್ನ ಅನುಭವದಲ್ಲಿ  ಈ ಸಾಂಬ್ರಾಣಿಯೂ ಕೂಡ ಅತೀ ರಾಸಾಯನಿಕ ವಸ್ತುಗಳು ಬಳಸಿ ತಯಾರು ಮಾಡಲ್ಪಟ್ಟ ಆವಿಯಾಗುವ ಘನವಸ್ತು.ಇದರಿಂದಲೇ ಮಕ್ಕಳಿಗೆ ಶೀತ ಕೆಮ್ಮು ಆಗುತ್ತಿದೆ. ಕೆಲವು ವೈದ್ಯರು ಅಂತವುಗಳನ್ನು ಮಾಡಬೇಡಿ ಎಂದೂ ಹೇಳುತ್ತಿದ್ದಾರೆ. ಇದರಂತೆಯೇ ಎಲ್ಲವೂ ಅವುಗಳ ಮೂಲದಲ್ಲಿ ಯೇ ಈಗಾಗಲೇ ಮಲಿನ ಆಗಿ ಹೋಗಿದೆ.ನನ್ನ ಜ್ಞಾನದ ಮಟ್ಟಿಗೆ ಹೇಳುವುದಾದರೆ ಯಾವುದಾದರೂ ವಸ್ತುವನ್ನು ಸುಟ್ಟಾಗ ಲಭ್ಯವಾಗುವುದು ಇಂಗಾಲವೇ ವಿನಃ ಬೇರೊಂದು ವಸ್ತು ಅಲ್ಲ. ಆದ್ದರಿಂದ   ಬಹುಶಃ ಇಂದು ಮನುಷ್ಯನ ಯಾವ ಚಟುವಟಿಕೆಗಳೂ  ಪ್ರಕೃತಿ ಗೆ ಪೂರಕವಾಗದೇ ಇನ್ನೊಂದು ರೀತಿಯಲ್ಲಿ ಮಾರಕವಾಗುವುದೇ ಹೆಚ್ಚು.

ಕೋವಿಡ್ ಒಂದನೆಯ ಅಲೆಯಲ್ಲಿ ಕೋಳಿ ತಿನ್ನುವುದರಿಂದ ಕರೋನ ಬರುತ್ತೆ ಎಂದು ಸುದ್ದಿಯಾಗಿದ್ದರೆ,ಈ ಬಾರಿ ನಾಟಿಕೊಳಿ ತಿಂದರೇ ಕರೋನ ಬರದಿಲ್ವಂತೆ ಎಂಬ ಸುದ್ದಿ ಹರಿದಾಡುತ್ತಿದೆ.ಹಾಗೆ  ಕುರಿ ಕೋಳಿ ಗಳನ್ನು ಬಲಿಕೊಡುವುದರಿಂದ ಕೊರೋನಾ ವೈರಸ್ ಮಾಯವಾಗುವುದಂತೆ.!

 ಇನ್ನೂ ಕೆಲವು ಸಂಗತಿಗಳನ್ನು ನೋಡುವುದಾದರೆ ಪತಿಯ ಕೊರೋನಾ ಪಾಸಿಟಿವ್ ಗೆ  ಹೆದರಿ ಹೆಂಡತಿಯ ಆತ್ಮಹತ್ಯೆ, ಇನ್ನೊಂದು ಪ್ರಕರಣದಲ್ಲಿ ನನ್ನಿಂದ ಮನೆ ಮಂದಿಗೆಲ್ಲಾ  ಸೊಂಕು ಹರಡಬಹುದು ಎಂದು ನಿವೃತ್ತ ಉಪ ತಹಾಸೀಲ್ದಾರೊಬ್ಬರು ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಬ್ಬಾಬ್ಬಾ  ಒಂದೇ ಎರಡೇ ಹೇಳುತ್ತಾ ಹೋದರೆ ಈ ತರಹದ್ದು ಸಾವಿರ ಸಿಗುತ್ತಾವೆ. ಇವೆಲ್ಲವೂ ಅನಾಹುತಗಳು ನಡೆದಿರುವುದು ಸರಿಯಾದ ತಿಳುವಳಿಕೆ ಇಲ್ಲದ ಮನೋಭಾವ ಮತ್ತು ಆಚರಣೆಯಿಂದ.


ಲೇಖನ ಮುಗಿಸುವ ಮುನ್ನಾ ಎರಡು ವರ್ಷಗಳಿಂದ ಇಡೀ  ವಿಶ್ವಕ್ಕೆ ಕಂಟಕವಾಗಿರುವ ಕೊರೋನಾ ವಿಶ್ವದ ಆರ್ಥಿಕ ವ್ಯವಸ್ಥೆ, ಅಳಿದುಳಿದ ಸಂಸ್ಕಾರಗಳನ್ನೂ ಬುಡಮೇಲು ಮಾಡಿದೆ. ಯಾವ ಪೂಜೆ ಪುನಸ್ಕಾರ ಇಲ್ಲದೇ ಎಚ್ಚರಿಕೆ ಮತ್ತು ವ್ಯಾಕ್ಸಿನೇಷನ್‌ ಮುಲಕ ಇಂದು ಜೀರೋ ಕೋವಿದ್ ಪ್ರಕರಣ ಇರುವ ಇಸ್ರೇಲ್ ನಂತಹ ರಾಷ್ಟ್ರಗಳೂ ನಮ್ಮ ವಿಶ್ವದಲ್ಲಿ ಇರುವುದನ್ಮು ನಾವು ಗಮನಿಸಬಹುದು.
ನಮ್ಮ ದೇಹ ಮತ್ತು ಬುದ್ದಿ ಗಟ್ಟಿಮಾಡಿಕೊಳ್ಳಬೇಕೇ ವಿನಃ ಮೌಢ್ಯಗಳನ್ನಲ್ಲ. ಈ ಮೌಢ್ಯಗಳು ಇಪ್ಪತ್ತನೆಯ 
ಶತಮಾನದಲ್ಲೂ  ತಾಂಡವಾಡುತ್ತಿರುವುದು ನಮ್ಮ ದುರ್ದೈವವೇ  ಸರಿ.

✍️ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು


  1. ಸರ್ ಲೇಖನ ತುಂಬಾ ಚೆನ್ನಾಗಿದೆ. ಡಾ, ಎಂ ವಿ ರೇಣುಕಾಚಾರ್ಯರ "ಆರೋಗ್ಯ ಅನಾರೋಗ್ಯದ ಬಗ್ಗೆ ನಮ್ಮ ಮೂಢನಂಬಿಕೆಗಳು" ಪುಸ್ತಕ ಒಮ್ಮೆ ಓದಿ.. ರೋಗಗಳ ಬಗ್ಗೆ ಜನಸಾಮಾನ್ಯರಿಗೆ ಇರೋ ತಪ್ಪು ಕಲ್ಪನೆಗಳು, ಮೂಢನಂಬಿಕೆ ಆಚರಣೆಗಳ ಬಗ್ಗೆ ವೈಜ್ಞಾನಿಕ ತಳಹದಿಯಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದಾರೆ

    ಪ್ರತ್ಯುತ್ತರಅಳಿಸಿ

  2. ಸರ್ ಲೇಖನ ತುಂಬಾ ಚೆನ್ನಾಗಿದೆ. ಡಾ, ಎಂ ವಿ ರೇಣುಕಾಚಾರ್ಯರ "ಆರೋಗ್ಯ ಅನಾರೋಗ್ಯದ ಬಗ್ಗೆ ನಮ್ಮ ಮೂಢನಂಬಿಕೆಗಳು" ಪುಸ್ತಕ ಒಮ್ಮೆ ಓದಿ.. ರೋಗಗಳ ಬಗ್ಗೆ ಜನಸಾಮಾನ್ಯರಿಗೆ ಇರೋ ತಪ್ಪು ಕಲ್ಪನೆಗಳು, ಮೂಢನಂಬಿಕೆ ಆಚರಣೆಗಳ ಬಗ್ಗೆ ವೈಜ್ಞಾನಿಕ ತಳಹದಿಯಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದಾರೆ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..