ಪೋಸ್ಟ್‌ಗಳು

ಆಗಸ್ಟ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜೇನು ಹುಳುಗಳ ಸಂತಾನೋತ್ಪತ್ತಿ...

ಇಮೇಜ್
ಜೇನುಗೂಡು,ಅವುಗಳ ಸಂತಾನೋತ್ಪತ್ತಿ ಪ್ರಕ್ರಿಯೆ.. ಜೇನು ಮತ್ತು ಜೇನುಗೂಡಿನ ಬಗ್ಗೆ ಒಂದಷ್ಟು ಮಾಹಿತಿ.. ವೀಡಿಯೋ ನೋಡಲು ಕ್ಲಿಕ್ ಮಾಡಿ https://youtu.be/6OpU3jM6o4M https://m.facebook.com/story.how%20to%20remove%20honeycomb. ವೀಡಿಯೋ ಮತ್ತು ಮಾಹಿತಿ ನಾಗೇಂದ್ರ ಬಂಜಗೆರೆ. ವೀಡಿಯೋ ನೋಡಲು ಕ್ಲಿಕ್ ಮಾಡಿ

ಜೇನು ಕಚ್ಚಿಸಿ ಕೊಳ್ಳದೆ ತೆಗೆಯುವ ರೀತಿ...how to remove honey..??

ಇಮೇಜ್
ಜೇನು ಹುಳುಗಳು ಎಂದರೆ ಯಾರಿಗೆ ಭಯವಿಲ್ಲ? ಜೇನು ಹುಳುಗಳಿಂದ ಕಚ್ಚಿಸಿಕೊಂಡು  ಅದೆಷ್ಟೋ ಜನ ಆಸ್ಪತ್ರೆಗೆ ಸೇರಿದ್ದಾರೆ.ಇಹ ಲೋಕವನ್ನು ತ್ಯಜಿಸಿದ್ದಾರೆ. ನನ್ನ ಬಾಲ್ಯದ  ಸುದೀರ್ಘ ಹವ್ಯಾಸದಿಂದ ನಾನು ಜೇನನ್ನು ಸುಲಭವಾಗಿ ಕಚ್ಚಿಸಿಕೊಳ್ಳದೇ ತೆಗೆಯುವೆ.. ನೋಡಿದರೆ ನಿಮಗೆ ಅಚ್ಚರಿಯಾಗುವುದಂತೂ ಸತ್ಯ.. ವೀಡಿಯೋ ನೋಡಿ..👇 ಜೇನು ತೆಗೆಯುವ ವೀಡಿಯೋಗಾಗಿ ಕ್ಲಿಕ್ ಮಾಡಿ.. https://www.facebook.com/nagendra.banjagere/videos/1641618526024269/?sfnsn=wiwspwa ವೀಡಿಯೋ ಮತ್ತು ಮಾಹಿತಿ ನಾಗೇಂದ್ರ ಬಂಜಗೆರೆ.

ವ್ಹಾವ್ ಕಾರೇಹಣ್ಣು ಏನ್ ರುಚಿ ಗೊತ್ತಾ?

ಇಮೇಜ್
ಕಾರೆಹಣ್ಣು.. ದಿನಾಂಕ :೧೧-೦೮-೨೦೨೧  ನನ್ನ ಕರ್ತವ್ಯ ಸ್ಥಳವಾದ  ಸಂಡೂರು ತಾಲ್ಲೂಕಿನ ತುಮಟಿಯ ಸುತ್ತಲೂ ಬೆಟ್ಟಗುಡ್ಡಗಳ ಸಾಲು. ಪ್ರಕೃತಿ  ಬಸಿರಾಗಿ ಹಸಿರಾಗಿ,ನೋಡುವ ಕಂಗಳಿಗೆ ಆನಂದ ಉಂಟಾಗುತ್ತಿದೆ.  ಅದೇ ಖುಷಿಗೆ ಬೆಟ್ಟ ಹತ್ತಿದ ನನಗೆ ಬಾಯಿ ನೋವು ಆಗುವ ವರೆಗೂ creamy filled chocolate  ನಂತೆ ಕಾರೆಹಣ್ಣು  ತಿಂದ ದಿನ ಇಂದು.ನನಗೆ ಸರಿಯಾಗಿ ನೆನಪಿದೆ. ಈಗಿನ ಚಾಕೋಲೇಟನ್ನೇ ಹೋಲುವ ಮುಳ್ಳಿನ ಪೊದೆಯಲ್ಲಿ ಮುಳ್ಳುಗಳನ್ನು ಚುಚ್ಚಿಸಿಕೊಳ್ಳುತ್ತಾ ಎರಡೆರಡು ಬೀಜ ಇರುವ ದಪ್ಪ ದಪ್ಪನೆಯ ಡಬ್ಬಲ್ ಹಣ್ಣುಗಳನ್ನು ಬಾಲ್ಯದಲ್ಲಿ ತಿಂದಿರುವ ನೆನಪಿದೆ. ಆ ನೆನಪು ಪ್ರತೀವರ್ಷವೂ ಶ್ರಾವಣ ಮಾಸದ ಮದ್ಯದಲ್ಲಿ ಬರುವ ಇವುಗಳ ತಿನ್ನಲೇ ಬೇಕೆನ್ನುವ ಚಪಲ. ಈ ಕಾಲದಲ್ಲಿ ಈ ಹಣ್ಣುಗಳ ಪೊದೆಗಳ ಸರ್ಚ್ ಮಾಡಿ ವರ್ಷಕ್ಕೆ ಒಂದೆರಡು ಹಣ್ಣುಗಳಾದರೂ ತಿಂದೆ ತಿನ್ನುವೆ. ಮೊದಲು ಹಸಿರುಕಾಯಿಗಳು ಇದ್ದು, ಆನಂತರ ಹಳದೀ ಕಾಯಿ ಆಗುತ್ತಾವೆ. ಈ ಹಳದಿ ಕಾಯಿಗಳನ್ನೂ ನಾವು 'ಕಾರೆ ಕೆಂಗ' ಎಂದು ಕರೆಯುತ್ತಿದ್ದೆವು. ಇವುಗಳನ್ನೂ ನಾವು ತಿನ್ನುತ್ತಿದ್ದೆವಾದರೂ,ಒಗರು ಇರುತ್ತಿದ್ದರಿಂದ ಹೆಚ್ಚು ತಿನ್ನಲಾಗದೇ ಬಾಯಾರಿಕೆಯಿಂದ ತಪ್ಪಿಸಿಕೊಳ್ಳಲು ಇವುಗಳನ್ನು ಅನಿವಾರ್ಯವಾಗಿ ಬಾಯಲ್ಲಿ ಹಾಕಿ ಅಗೆಯುತ್ತಿದ್ದೆವು. ಆದರೆ ದೋರಾಗಾಯಿಗಳಾದ ಕಾರೆಕೆಂಗ ಕಿತ್ತುಕೊಂಡು, ಅದೇ ಗಾತ್ರದ ನಾಲ್ಕರೂ ಕಲ್ಲುಗಳನ್ನೂ ಜೇಬಲ್ಲಿ ಹಾಕಿ ಕೊಂಡು ಓಡಾ...

ಚಿಟ್ಟೆ ಬಂತು ಚಿಟ್ಟೆ...

ಇಮೇಜ್
ಚಿಟ್ಟೆ ಬಂತು ಚಿಟ್ಟೆ...         ನಮ್ಮ ಮನೆಯ ಮುಂದೆ ಅಮೃತೇಶ್ವರ ದೇವಸ್ಥಾನ.ಇಂದು ಭೀಮನ ಅಮಾವಾಸ್ಯೆ.ಶಿವನು ಪಾರ್ವತಿಯನ್ನು ಪತ್ನಿಯನ್ನಾಗಿ ಸ್ವೀಕರಿಸಿದ್ದು ಭೀಮನ ಅಮಾವಾಸ್ಯೆ ದಿನದಂದು ಅಂತೆ. ಪಾರ್ವತಿ ಸಮೃದ್ಧಿ, ಸಂತಾನ, ಪತಿವ್ರತೆ, ಶಕ್ತಿಯ ಸಂಕೇತ. ಹೀಗಾಗಿ ಈ ದಿನದಂದು ಹೆಂಗಳೆಯರು ವ್ರತ ಕೈಗೊಂಡು ಶಿವ ಮತ್ತು ಪಾರ್ವತಿಯನ್ನು ಆರಾಧಿಸಿದರೆ ಅವರಿಗೆ ಉತ್ತಮನಾದ ಗಂಡ ಸಿಗುತ್ತಾನೆ. ಅದೇ ರೀತಿ ವಿವಾಹಿತ ಹೆಂಗಸರು ಗಂಡನಿಗೆ ದೀರ್ಘಾಯುಷ್ಯ, ಯಶಸ್ಸು ಹಾಗೂ ಸಂತೋಷವನ್ನು ಬಯಸಿ ನೂರಾರು ಜನರು ಹಳೇವತ್ತಾರೆಯಿಂದಲೇ ಪೂಜೆ,ಪ್ರದಕ್ಷಿಣೆಯ ಸಂಭ್ರಮ ಗರಿ ಗೆದರಿತ್ತು. ನಮ್ಮ ಮನೆಯ HALL ನ ಸೋಪಾ ಮೇಲೆ ಕುಳಿತರೆ ನವಗ್ರಹ ಪ್ರದಕ್ಷಿಣೆ ಹಾಕುವವರ ಮುಖ ಕಾಣಿಸುತ್ತದೆ. ಮೂರು ಬಾರಿ,ಹನ್ನೊಂದು ಸಲ ಪ್ರದಕ್ಷಿಣೆ ಹೀಗೆ ಅವರವರ ಹರಕೆಯಂತೆ ಕೈ ಮುಗಿದು ತಮ್ಮ ಕೋರಿಕೆಯ ಈಡೇರಿಕೆಗೆ ಪ್ರಾರ್ಥನೆ ಸಲ್ಲಿಕೆಯಾಗುತ್ತಿತ್ತು.  ಹಾಗೆ ಹಾಯಾಗಿ ಗೇಟ್ ನ ಬಳಿ ನಿಂತು ನೋಡಲು ನಮ್ಮ ಗಾರ್ಡನ್ ಗೆ ಹೊಂದಿಕೊಂಡಂತೆ  ಮನೆಯ ಮುಂಭಾಗದಲ್ಲಿ ನನ್ನ ಕಣ್ಣು ಸೆಳೆದದ್ದು ನೀಲಿ ಮತ್ತು ಕಪ್ಪು ಬಣ್ಣದ ಚಿಟ್ಟೆ. ನಾನು ನೂರಾರುಬಾರಿ ರಾಶಿ ರಾಶಿ ಚಿಟ್ಟೆಗಳನ್ನು ನೋಡಿದ್ದರೂ ಈ ಒಂಟಿ ಚಿಟ್ಟೆ ನನಗೆ ವಿಚಿತ್ರ ಮತ್ತು ಚಮತ್ಕಾರವನ್ನೇ ತೋರಿಸಿತು. ಅದೇನು ಚಮತ್ಕಾರ ಅಂತೀರಾ?? 'ಚಿಟ್ಟೆ ನೀರು ಕುಡಿದು Instant ಆಗಿ ವಿಸರ್ಜನೆ...

ಕಡ್ಡೀಹುಳ..

ಇಮೇಜ್
ಕಡ್ಡೀ ಹುಳ.. ಈ ಬಯೋ ಸಿಸ್ಟಮ್ ಅಲ್ಲಿರುವ ಜೀವಿಗಳ ಬಗ್ಗೆ ನಮಗೆ ಗೊತ್ತಿರುವುದು ರವೆಯಷ್ಟು.  ಕ್ರಿಮಿ ಕೀಟಗಳ ಬಗ್ಗೆ ಇದುವರೆಗೂ ಮನುಷ್ಯನ ಗಮನಕ್ಕೇ ಬಾರದ ಅದೆಷ್ಟೋ ಸಂಗತಿಗಳು ನಡೆಯುತ್ತಲೇ ಇವೆ.ನಮ್ಮ ನಮ್ಮ ತಾಪತ್ರಯಗಳಲ್ಲೇ ಬ್ಯೂಸಿ ಆಗಿರುವ ನಾವು   ಈ ಹುಳ ಉಪ್ಪಟೆಗಳ ಬಗ್ಗೆ ಅಗೋಚರ ಚಟುವಟಿಕೆಗಳ ಬಗ್ಗೆ ಗಮನಿಸಲು ಯಾರಿಗೂ ಪುರಸೊತ್ತಿಲ್ಲ ಬಿಡಿ. ಆದರೂ ನಮ್ಮ ಮನೆಯ ಮುಂದಿನ ಗಾರ್ಡನ್ ನಲ್ಲಿ  ನಾನು ಗಮನಿಸಿದ ಈ ಹುಳುಗಳ ಬಗ್ಗೆ ಹೇಳುವೆ. ಸೌದೆ ಹೊರೆಯಂತೆ ಕಾಣುವ ಕಡ್ಡೀಹುಳಗಳ ಗೂಡು.   ನೋಡಲು ಅಕ್ಷರಶಃ ಸಣ್ಣ  ಸೌದೆಯ ಹೊರೆಯಂತೆಯೇ ಕಾಣುವ ಈ ಕಡ್ಡೀ ಹುಳಗಳ ರಕ್ಷಣಾ ಕವಚವೇ ಎಂದು ಹೇಳಬಹುದು.  ಸಣ್ಣ ಸಣ್ಣ ಕಡ್ಡಿಗಳನ್ನೇ ಸಮನಾಂತರ ಅಳತೆಗೆ ಕೊರೆದು ಕತ್ತರಿಸಿ ತನ್ನ ಮನೆಯ ಸುತ್ತಲೂ ನೀಟಾಗಿ ಪೋಣಿಸಿಕೊಂಡು  ತಮ್ಮದೇ ಮನೆಯ ಹೊತ್ತು ತಿರುಗುವ  ಮತ್ತು ಇದನ್ನು  ಕೀಟಗಳ ಅಧ್ಯಯನ ಶಾಸ್ತ್ರ ದಲ್ಲಿ ಏನೆಂದು ಕರೆಯುವರೋ ಗೊತ್ತಿಲ್ಲ ಆದರೆ ನನಗೆ ಬುದ್ದಿ ಬಂದಾಗಿನಿಂದ ಇದನ್ನು ನಾನು 'ಕಡ್ಡೀಹುಳ' ಅಂತಲೇ  ಕರೆಯುವುದು.ನಾವು ಬಾಲ್ಯದಲ್ಲಿ ಇದ್ದಾಗ ತಲೆಯಲ್ಲಿ ಏನಾದರೂ ಚರ್ಮರೋಗ ಬಂದರೆ ಆ ವ್ಯಾದಿಗೆ  ತಂಗಡಗಿ ಗಿಡಗಳಲ್ಲಿರುವ ಈ ಹುಳಗಳ ಹಿಡಿದು ಆ ಇನ್ಪೆಕ್ಷನ್ ಜಾಗಕ್ಕೆ ಅವುಗಳನ್ನು ಹಿಸುಕಿ ರಾಚುತ್ತಿದ್ದರು. ಇದರಿಂದ ಆಕಸ್ಮಿಕವೋ ಅಥವಾ ಕಾಕತಾಳೀಯವಾಗಿಯೋ ಎಂಬಂತೆ...