ಚಿಟ್ಟೆ ಬಂತು ಚಿಟ್ಟೆ...
ಚಿಟ್ಟೆ ಬಂತು ಚಿಟ್ಟೆ...
ನಮ್ಮ ಮನೆಯ ಮುಂದೆ ಅಮೃತೇಶ್ವರ ದೇವಸ್ಥಾನ.ಇಂದು ಭೀಮನ ಅಮಾವಾಸ್ಯೆ.ಶಿವನು ಪಾರ್ವತಿಯನ್ನು ಪತ್ನಿಯನ್ನಾಗಿ ಸ್ವೀಕರಿಸಿದ್ದು ಭೀಮನ ಅಮಾವಾಸ್ಯೆ ದಿನದಂದು ಅಂತೆ. ಪಾರ್ವತಿ ಸಮೃದ್ಧಿ, ಸಂತಾನ, ಪತಿವ್ರತೆ, ಶಕ್ತಿಯ ಸಂಕೇತ. ಹೀಗಾಗಿ ಈ ದಿನದಂದು ಹೆಂಗಳೆಯರು ವ್ರತ ಕೈಗೊಂಡು ಶಿವ ಮತ್ತು ಪಾರ್ವತಿಯನ್ನು ಆರಾಧಿಸಿದರೆ ಅವರಿಗೆ ಉತ್ತಮನಾದ ಗಂಡ ಸಿಗುತ್ತಾನೆ. ಅದೇ ರೀತಿ ವಿವಾಹಿತ ಹೆಂಗಸರು ಗಂಡನಿಗೆ ದೀರ್ಘಾಯುಷ್ಯ, ಯಶಸ್ಸು ಹಾಗೂ ಸಂತೋಷವನ್ನು ಬಯಸಿ ನೂರಾರು ಜನರು ಹಳೇವತ್ತಾರೆಯಿಂದಲೇ ಪೂಜೆ,ಪ್ರದಕ್ಷಿಣೆಯ ಸಂಭ್ರಮ ಗರಿ ಗೆದರಿತ್ತು.
ನಮ್ಮ ಮನೆಯ HALL ನ ಸೋಪಾ ಮೇಲೆ ಕುಳಿತರೆ ನವಗ್ರಹ ಪ್ರದಕ್ಷಿಣೆ ಹಾಕುವವರ ಮುಖ ಕಾಣಿಸುತ್ತದೆ. ಮೂರು ಬಾರಿ,ಹನ್ನೊಂದು ಸಲ ಪ್ರದಕ್ಷಿಣೆ ಹೀಗೆ ಅವರವರ ಹರಕೆಯಂತೆ ಕೈ ಮುಗಿದು ತಮ್ಮ ಕೋರಿಕೆಯ ಈಡೇರಿಕೆಗೆ ಪ್ರಾರ್ಥನೆ ಸಲ್ಲಿಕೆಯಾಗುತ್ತಿತ್ತು. ಹಾಗೆ ಹಾಯಾಗಿ ಗೇಟ್ ನ ಬಳಿ ನಿಂತು ನೋಡಲು ನಮ್ಮ ಗಾರ್ಡನ್ ಗೆ ಹೊಂದಿಕೊಂಡಂತೆ ಮನೆಯ ಮುಂಭಾಗದಲ್ಲಿ ನನ್ನ ಕಣ್ಣು ಸೆಳೆದದ್ದು ನೀಲಿ ಮತ್ತು ಕಪ್ಪು ಬಣ್ಣದ ಚಿಟ್ಟೆ.
ನಾನು ನೂರಾರುಬಾರಿ ರಾಶಿ ರಾಶಿ ಚಿಟ್ಟೆಗಳನ್ನು ನೋಡಿದ್ದರೂ ಈ ಒಂಟಿ ಚಿಟ್ಟೆ ನನಗೆ ವಿಚಿತ್ರ ಮತ್ತು ಚಮತ್ಕಾರವನ್ನೇ ತೋರಿಸಿತು. ಅದೇನು ಚಮತ್ಕಾರ ಅಂತೀರಾ??
'ಚಿಟ್ಟೆ ನೀರು ಕುಡಿದು Instant ಆಗಿ ವಿಸರ್ಜನೆಯನ್ನೂ ಮಾಡಿದ್ದು.!'
https://youtu.be/jNqTPdoFvkg
ಹೌದು.. ಸಜೀವಿಗಳಿಗೆ ವಿಸರ್ಜನೆ ಸಹಜವೇ ಆದರೂ ತನ್ನ ಮಕರಂದವನ್ನು ಹೀರುವ ಭಾಗದಿಂದಲೇ ನೀರನ್ನು ಕುಡಿದು ಕೆಲವೇ ಸೆಕೆಂಡ್ ಗಳಲ್ಲಿ ಒಂದೆರಡು ಎಂ ಎಲ್ ಗಳಷ್ಟು ನೀರನ್ನು ಹಾಗೆ ಹೋರಹಾಕಿದ್ದು ಅದನ್ನು ಕಣ್ಣಾರೆ ಕಂಡಿದ್ದು ಸೋಜಿಗ ಅನಿಸಿತು.
ನಾನು ದನಗಳನ್ನು ಕಾಯುವಾಗ ಚಿಟ್ಟೆ,ಕೊಲನ್ನೆ ಕಾಟ ಎಂದು ಕರೆಯಲ್ಪಡುವ ಡ್ರಾಯಗನ್ ಪ್ಲೈ ಹಾಗೂ ಜೀರಂಗಿ ಹಿಡಿಯುವುದೇ ನನ್ನ ಕೆಲಸವಾಗಿತ್ತು.ಅದೇ ರೀತಿಯಲ್ಲಿ ಇದನ್ನೂ ವೀಡೀಯೋ ಹಿಡಿದಿಟ್ಟಿದ್ದೇನೆ. ವೀಕ್ಷಿಸಿ...👇
ವೀಡಿಯೋ ನೋಡಿ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ