ಪೋಸ್ಟ್‌ಗಳು

ಡಿಸೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗಾಳಿಕೆರೆ ( ಪ್ರವಾಸ ಕಥನಾ)

ಇಮೇಜ್
ಮಲೆನಾಡಿನ ಚೆಲುವೆ ಬಂದೌಳೇ ಊರಿಗೆ ಎಂಬ ಭಾವಗೀತೆಯನ್ನು ಕಾಲೇಜು ದಿನಗಳಲ್ಲಿ ಅದೆಷ್ಟು ಸಾವಿರ ಭಾರಿ ನಾನು ಹಾಡಿದ್ದೇನೋ ಗೊತ್ತಿಲ್ಲ. ಅಂದಹಾಗೆ  ನನ್ನ ಮನದರಸಿಯ ತವರು ಮಲೆನಾಡು, ಮಳೆಯ ನಾಡು ಕಾಫಿಯ ಬೀಡು ಚಿಕ್ಕಮಗಳೂರು.ಪ್ರತಿ ವರ್ಷವೂ ಸಾವಿರಾರು ಕಿಮೀ ಸುತ್ತುವ ಚಾಳಿ ನಮ್ಮದು. ಅದರಂತೆ ಅವಳಿಗೆ ತವರಿಗೆ ಬಂದ ಖುಷಿಯಂತೆ ನನಗೆ ಮಲೆನಾಡಿನ  ವಾತಾವರಣದಲ್ಲಿ ರಮಣೀಯ ಸ್ಥಳಗಳಿಗೆ ಬೇಟಿ ಕೊಡುವುದು ಕುಟುಂಬ ಸಹಿತ ಟ್ರೆಕ್ಕಿಂಗ್ ಹೋಗುವುದು  ನಮಗೆ ಅಭ್ಯಾಸ.ಅದರಂತೆ ಸುಂದರವಾದ ಒಂದು ಸ್ಥಳವನ್ನು ನೀವು ನೋಡಲೇಬೇಕು ಅದೇ ಗಾಳಿಕೆರೆ.  ದತ್ತಪೀಠಕ್ಕೆ ವರ್ಷದಲ್ಲಿ ನಾಲ್ಕಾರು ಬಾರಿ ನಾವು ಹೋಗಿ ಬರುವೆವು. ದತ್ತಪೀಠದ ಸುತ್ತಾಮುತ್ತಾ ಹಸಿರರಾಶಿಯ ಮದ್ಯೆ ತಣ್ಣನೆಯ ಗಾಳಿಯನ್ನು ಆಸ್ವಾದಿಸುತ್ತಾ,ಅಲ್ಲಿ ಓಡಾಡುವುದೇ ಹಿತಕರ‌. ಆ weather ಮತ್ತು ಪ್ಯೂರ್ ಆಕ್ಸಿಜನ್ ಗಾಗಿ ಅಲ್ಲಿಗೆ ಹೋಗಬೇಕು ನೋಡಿ.ಅದೆಷ್ಟುಬಾರಿ ಹೋದರೂ ಬೇಜಾರಾಗದೇ ಪ್ರತಿಬಾರಿಯೂ ಹೊಸತು ಹೊಸತೆನಿಸುವ ಭಾವದೊಂದಿಗೆ ಹಾಯಾಗಿ ಬರುತ್ತಾ ದತ್ತಪೀಠದ ಪಕ್ಕ ಗಾಳಿಕೆರೆ  ಎಂಬ ಬೋರ್ಡ್ ಪ್ರತಿ ಬಾರಿಯೂ ನೋಡಿ ಒಮ್ಮೆ ಹೋಗಬೇಕು ಆ ಕೆರೆಯ ಹತ್ತಿರ ಅಂದುಕೊಳ್ಳುತ್ತಿದ್ದೆ.ಗಾಳಿಕೆರೆ ಅಂದ್ರೆ ಅದು ಊರೋ ಅಥವಾ ಕೆರೆನಾ ಎಂಬ  ಪ್ರಶ್ನೆಗಳೊಂದಿಗೆ  ಅದು ಕೆಲವು ಮನೆಗಳಿರುವ ಊರಾಗಿರಬೇಕು ಅದು ಚಂದ್ರ ದ್ರೋಣ ಪರ್ವತಗಳ ಶಿಖರ ಸಾಲಿನ ಮೇರುಭಾಗ ಅಲ್ಲಿ ...

ಇ- ಮಾಲಿನ್ಯ..(E-POLLUTION)

#ಇ-ಮಾಲಿನ್ಯ.. ( E- Pollution ) 90 ರ ದಶಕದಲ್ಲಿ ಪ್ರಪಂಚದಾದ್ಯಂತ ಬಳಕೆಗೆ ಬಂದ ಪ್ಲಾಸ್ಟಿಕ್ ಒಂದು  'ಅದ್ಭುತ ವಸ್ತು'  ಎಂದು ಕರೆಯಲ್ಪಡುತ್ತಿದ್ದರು. ಕಾರಣ ಬಕೆಟ್ ಪಾತ್ರೆ ಲೋಟದಲ್ಲಿ ಕೊಂಡಯ್ಯಬೇಕಾಗಿದ್ದ  liquid ,solid ಐಟಾಮ್ಸ್ಗಳನ್ನು ಪ್ಲಾಸ್ಟಿಕ್ ನಲ್ಲಿ ಸುಲಭವಾಗಿ ಕೊಂಡಯ್ಯಬಹುದಾದ್ದರಿಂದ ಸಹಜವಾಗಿಯೇ ಎಲ್ಲರ ಮನ-ಮನೆಗಳನ್ನು ರಾಕೆಟ್ ವೇಗದಲ್ಲಿ ತಲುಪಿದ್ದು ಇತಿಹಾಸ. ಆ 'ಪ್ಲಾಸ್ಟಿಕ್' ಎಂಬ ಸಂಶ್ಲೇಷಿತ ವಿಷಕಾರಕ ವಸ್ತುವೊಂದಕ್ಕೆ ನಾವು  ಯಾವ ಪ್ರಮಾಣದಲ್ಲಿ ಅಂಟಿಕೊಂಡಿದ್ದೇವೆಂದರೇ ಇಡೀ ಭೂಮಿಯನ್ನು  ನಾಲ್ಕೈದು ಅಡಿಯ ಗಾತ್ರದ ಪ್ರಮಾಣದಲ್ಲಿ ಪ್ಲಾಸ್ಟಿಕ್ ನಿಂದಲೇ ಮುಚ್ಚಿಡಬಹುದು.ಅಷ್ಟೊಂದು ಪ್ಲಾಸ್ಟಿಕ್ ಬಳಕೆ ಮತ್ತು ಸಂಗ್ರಹ ಈಗಾಗಲೇ ನಮ್ಮ ಬಳಿ ಇದೆ. ನೂರಾರು ವರ್ಷಗಳವರೆಗೆ  ಅಚ್ಚಳಿಯದೇ ಪ್ರಕೃತಿಯಲ್ಲಿ ಉಳಿಯಬಲ್ಲ ಇಡೀ ಜೀವಮಂಡಲಕ್ಕೆ ಕಂಟಕವಾಗಿರುವ ಈ ಪ್ಲಾಸ್ಟಿಕ್‌  ಮಾಡಿದ ,ಮಾಡುತ್ತಿರುವ ಅವಾಂತರ ಜೀವಾಂತವಾಗಿರುವಾಗಲೇ ಇಂತಹದ್ದೇ ಇನ್ನೊಂದು ಹೆಚ್ಚು ಅಪಾಯಕಾರಿ  pollution ಎದುರಾಗುತ್ತಿದೆ  ಅದೇ e-pollution.  ಈಗಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಇಲ್ಲದವರು ಅಪರೂಪ. ಅದರಲ್ಲೂ ಈ ಪೇಸ್ಬುಕ್ ,ವಾಟ್ಸಾಪ್,tik tak ,sharechat ಅವು ಇವು ಬಂದು ಇವುಗಳ ಬಳಕೆದಾರರು  ಇಂದು ಇವುಗಳ ಬಳಕೆಯಿಂದ Busy ಆಗಿದ್ದಾರಾದರೂ, ಇವುಗಳು ಬಳಸಿಕೊಂಡು  ಪ್ರತ...

ಧಾರವಾಡದ ಚಳಿಗೆ ಉಡುಪಿಯ ಸತೀಶ ಗಡಗಡ...

ಧಾರವಾಡದ ಚಳಿಗೆ ಉಡುಪಿ ಸತೀಶ ಗಡಗಡ...  ಸರ್ಕಾರಿ ವೃತ್ತೀ ಜೀವನಕ್ಕೇ ಕಾಲಿರಿಸಿ ಆರೇಳು ತಿಂಗಳಿರುವಾಗ ಹೆಚ್ಚು ಕಮ್ಮಿ ನಮ್ಮ ವಾರಗೆಯವರಾದ ಸತೀಶ ನಾನು  ರೂಮ್ ಮೇಟ್ಸ್.  ಇಬ್ಬರಿಗೂ ಇಪ್ಪತ್ತೊಂದು ಇಪ್ಪತ್ತೆರಡರ ಹರೆಯ. ಹೀಗೆ ಮಾತನಾಡುತ್ತಾ ಧಾರವಾಡ ಓಪನ್ ಯೂನಿವರ್ಸಿಟಿ ಅವರು ಕರೆಸ್ಪಾಂಡೆನ್ಸ್ ಡಿಗ್ರಿ ಕಾಲ್ ಮಾಡಿದ್ದಾರೆ ಕಟ್ಟೋಣವಾ ಎಂದ ಸತೀಶ. ನಾನು ಡಿಗ್ರಿ ಕಟ್ಟಬೇಕು ಅಂದುಕೊಂಡಿದ್ದೆಯಾದರೂ ಸದ್ಯದ ಪ್ಲಾನಿಂಗ್ ಇರಲಿಲ್ಲ. ಸತೀಶ ಹೇಳಿದ್ದು ಕೇಳಿ ಐದತ್ತು ನಿಮಿಷ ಸಮಾಲೋಚನೆ ಮಾಡಿ ನೆಡಿರಿ ಸಾರ್ ಹೋಗೋಣ ಡಿಗ್ರಿ ಕಟ್ಟೋಣ  ಎಂದು ಸಮ್ಮತಿ ಸೂಚಿಸಿ ಧಾರವಾಡಕ್ಕೆ ಹೋಗಲು ಡಿಸೆಂಬರ್ ತಿಂಗಳಿನ ಕೊನೆಯವಾರದ ದಿನಗಳಲ್ಲಿ ಒಂದು  ಸಮಯ ಪಿಕ್ಸ್ ಮಾಡಿಕೊಂಡು ಮುಖ್ಯಗುರುಗಳಾಗಿದ್ದ ರಂಗಪ್ಪ ಚಲವಾದಿ ಇವರಿಗೆ ನಾಳೆ ನಾಡಿದ್ದು ಬರುವುದಿಲ್ಲವೆಂದು ಹೇಳಿ, ರೈಲಿಗಾಗಿ 'ತೋರಣಗಲ್ಲು'ಎಂಬಲ್ಲಿಗೆ ಬರಬೇಕಾಗಿದ್ದರಿಂದ ಸಂಜೆಯೇ ಸಂಡೂರಿನ ಸತೀಶನ ಮಾವನ ಮನೆಗೆ ಹೊರಟುಬಿಟ್ಟೆವು. 2008-09 ನೇ ಸಾಲಿನಲ್ಲಿ ಸಂಡೂರಿನ ರಸ್ತೆಗಳು ಕಲ್ಪನೆಗೂ ನಿಲುಕಷ್ಟು ದುಸ್ಥಿತಿಯಲ್ಲಿದ್ದವು.ಅದರಲ್ಲೂ ಸಂಡೂರು ತೋರಣಗಲ್ಲು ರಸ್ತೆಯು ಅತ್ಯಂತ ಹೆಚ್ಚು heavy goods vehicles ಗಳನ್ನು ಯಾವುದೇ ಟ್ರಾಪಿಕ್ ರೂಲ್ಸ್ ಗಳನ್ನು ಕಿಂಚಿತ್ತೂ ಪಾಲಿಸದ, ಎರ್ರಾಬಿರ್ರಿ ವಾಹನಗಳನ್ನು ಓಡಿಸುವ  ಅಪಾಯಕಾರೀ ರಸ್ತೆಯಲ್ಲಿ ಇದು ನಂಬರ್ ಒನ್..! ಒಂದು ಕಡೆ ರಸ...

ಯಾಕೋ ಈ ಮಕ್ಕಳು ಮೊದಲಿನ ತರ ಇಲ್ಲ...

 *ಆತ್ಮೀಯರೇ...ಎಲ್ಲಾ ಶಿಕ್ಷಕರು ಮತ್ತು ಪೋಷಕರು ಓದಲೇ ಬೇಕಾದ ಲೇಖನ ತಪ್ಪದೇ ಬಿಡುವು ಮಾಡಿಕೊಂಡು ಓದಿ..* *ಅದ್ಯಾಕೋ  ಶಾಲಾ ಮಕ್ಕಳು ಮೊದಲಿನ ತರ ಇಲ್ಲ...* *ಕೋವಿಡ್ ಬಂದ ಮೇಲೆ ಇಡೀ ಪ್ರಪಂಚದ ಎಲ್ಲಾ  ವ್ಯವಸ್ಥೆಗಳು ಪಾತಾಳಕ್ಕೆ ಕುಸಿದಿದ್ದು ನಮಗೆಲ್ಲಾ ಚೆನ್ನಾಗಿಯೇ ಗೊತ್ತಿದೆ. ಅದರಲ್ಲೂ ಶಾಲೆಯ ಮಕ್ಕಳ ತಲೆಯಲ್ಲಿ ಕಲಿತದ್ದೆಲ್ಲಾ ಅಳಿಸಿ ಹೋಗಿ ಹೊಸದೇನಾದರೂ ಕಲಿಸೋಣ ಎಂದರೆ ಅದೂ ಕೂಡ ಕೆಲವರ  ತಲೆಗೆ  ಹತ್ತುತ್ತಿಲ್ಲ.!ಆಶ್ಚರ್ಯವಾದರೂ ಇದು ಸತ್ಯ. ನಾನೊಬ್ಬ ಶಿಕ್ಷಕನಾಗಿ  ಈ ಮಾತನ್ನು ಹೇಳುತ್ತಿದ್ದೀನೆಂದರೇ ಅದು ಈ ಕೆಳಗಿನ ಘಟನೆಗಳಿಂದ..* *ಘಟನೆ -೧* *ನಮ್ಮ ಶಾಲೆಯ ಇಬ್ಬರು ಹುಡುಗರು  ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಟಾಪ್ ಮೆರಿಟ್ ಲ್ಲಿ ಆಯ್ಕೆ ಆಗಿದ್ದರು.ಆ ಹುಡುಗರು  ಬಹುತೇಕ ಸ್ವತಂತ್ರವಾಗಿ ಬದುಕಲು ಶಕ್ತವಾದವರು. ಇವರ ವಿದ್ಯಾಭ್ಯಾಸ ಒಂದು ಹಂತ ಮುಟ್ಟಿತು ಎಂದು ನಿಟ್ಟುಸಿರು ಬಿಡುವ ವೇಳೆಗೆ ಬಂದು ತಲುಪಿದ ಸುದ್ದಿ ಎಂದರೆ ಅವರು ಆ ಶಾಲೆ ಬೇಡ ಎಂದು ವಾಪಾಸು ಬಂದು  ಅವರಿಗಿಂತ ಹಿರಿಯ ಹಳೇ  ವಿದ್ಯಾರ್ಥಿಗಳೊಂದಿಗೆ ಮೊಬೈಲ್ ಹಿಡಿದು  ಊರು ತುಂಬಾ ಸುತ್ತುತ್ತಿದ್ದ ಸುದ್ದಿ. ಒಂದು ವಾರದ ನಂತರ ಸುಮ್ಮನೇ ನಮ್ಮ ಹುಡುಗರ  ಜೊತೆಗೆ ಶಾಲೆಗೆ ಬರುತ್ತಿದ್ದರು. ಹೊಸ ಶಾಲೆ. ಸ್ವಲ್ಪ ದಿನಗಳ ಮಟ್ಟಿಗೆ ಇದ್ದು ಹೋಗುತ್ತಾರೆಂದು ಅಂದು ಕೊಂಡಿದ್ದ ನಮಗೆ ಎರಡು ವಾರ ಕಳೆ...

ಅವರರವರ ಕರ್ಮ...

#ಅವರವರ ಕರ್ಮ.. ನವೆಂಬರ್ ಆರನೇ ತಾರೀಖು KA-34 ಪ್ರಾದೇಶಿಕ ಸಾರಿಗೆ ಕಛೇರಿ(RTO)ಗೆ  ಹೋಗಿದ್ದೆ. ನನ್ನ ಕಾರೋಂದು Re Registration and renewal ಮಾಡಬೇಕಾಗಿದೆ ಎಷ್ಟಾಗತ್ತೆ ಎಂದು ಎರಡ್ಮೂರು ದಳ್ಳಾಳಿ (Rto agent ) ಗಳ ಬಳಿ ವಿಚಾರಿಸಿದೆ.ಎಲ್ಲರದ್ದೂ 50-100 ಹೆಚ್ಚುಕಡಿಮೆ ಒಂದೇ ದರ.ಅವರೆಲ್ಲರೂ ಒಂದೇ. ನಾನೂ ಬ್ಯುಸಿ ಇದ್ದದ್ದರಿಂದ  ಅನಿವಾರ್ಯ ವಾಗಿ ಬ್ರೊಕರ್ ಕೈಗೆ ಕೊಡಬೇಕಾಯಿತು. ಹೇಳಿದ  ಬೆಲೆಗೆ ಒಪ್ಪಿಕೊಂಡೆ. ಗಾಡಿ ಯಾವಾಗ ತರೋದು??  ಬ್ರೋಕರ್: ಸರ್ ಪೇಪರ್ಸ ರೆಡಿ ಮಾಡಿಸಿ ನಾನು ಕಾಲ್ ಮಾಡುವೆ..ಆದರೆ ನನಗೆ ಒರಿಜಿನಲ್ RC CARD ಬೇಕೆಂದರು.  ಇಟ್ಸ್ ಓಕೆ..ತಗೊಳಿ ಎಂದು original RC ಕೊಟ್ಟು ದಯಮಾಡಿ ಬೇಗ ಮಾಡಿಕೊಡಿ ಎಂದೆ. ಬ್ರೋಕರ್:ಸರ್ ಈಗ ಜವಾಬ್ದಾರಿ ನನ್ನದು ಸರ್ ಯೋಚನೆ ಮಾಡಬೇಡಿ ಎಂದರು. ಸರಿ ಸರಿ ಮತ್ತೊಮ್ಮೆ ಹೇಳುವೆ ದಯಮಾಡಿ ಲೇಟ್ ಮಾಡಬೇಡಿ. ಎಂದೇಳಿ ಎಂದಿನಂತೆ ನನ್ನ ಕಾಯಕದಲ್ಲಿ ಬ್ಯುಸಿ ಆದೆ.. ಒಂದು ವಾರದ ನಂತರ ಆ ಬ್ರೋಕರ್ ಕರೆ ಮಾಡಿದರು.. ಸರ್ ನಿಮಗೆ ಸುಮಾರು ಒಂದು ವಾರದಿಂದ ಕಾಲ್ ಮಾಡುತ್ತಿದ್ದೇನೆ. ಯಾವುದೇ ರೆಸ್ಪಾನ್ಸ್ ಇಲ್ಲದೇ ಕಟ್ ಆಗುತ್ತಿದೆ ಅಂದ..! ಹೌದಾ?? ಏನೋ ನೆಟ್ ವರ್ಕ್ ಪ್ರಾಬಲ್ಮ್ ಇರಬಹುದು. ಹೇಳಿ ಯಾವಾಗ ಗಾಡಿ ತಗೊಂಡು ಬರಲಿ ಎಂದು ಕೇಳಿದೆ. ಬ್ರೋಕರ್: "ಸಾರ್ ಶುಕ್ರವಾರ ತಗೊಂಡು ಬನ್ನಿ  ಅಂತ ಹೇಳಿದ ಸರಿ ಆಯ್ತು ಬಿಡಿ ಎಂದೇಳಿದೆ..    ನಾ...