ಧಾರವಾಡದ ಚಳಿಗೆ ಉಡುಪಿಯ ಸತೀಶ ಗಡಗಡ...

ಧಾರವಾಡದ ಚಳಿಗೆ ಉಡುಪಿ ಸತೀಶ ಗಡಗಡ...

 ಸರ್ಕಾರಿ ವೃತ್ತೀ ಜೀವನಕ್ಕೇ ಕಾಲಿರಿಸಿ ಆರೇಳು ತಿಂಗಳಿರುವಾಗ ಹೆಚ್ಚು ಕಮ್ಮಿ ನಮ್ಮ ವಾರಗೆಯವರಾದ ಸತೀಶ ನಾನು  ರೂಮ್ ಮೇಟ್ಸ್.  ಇಬ್ಬರಿಗೂ ಇಪ್ಪತ್ತೊಂದು ಇಪ್ಪತ್ತೆರಡರ ಹರೆಯ. ಹೀಗೆ ಮಾತನಾಡುತ್ತಾ ಧಾರವಾಡ ಓಪನ್ ಯೂನಿವರ್ಸಿಟಿ ಅವರು ಕರೆಸ್ಪಾಂಡೆನ್ಸ್ ಡಿಗ್ರಿ ಕಾಲ್ ಮಾಡಿದ್ದಾರೆ ಕಟ್ಟೋಣವಾ ಎಂದ ಸತೀಶ. ನಾನು ಡಿಗ್ರಿ ಕಟ್ಟಬೇಕು ಅಂದುಕೊಂಡಿದ್ದೆಯಾದರೂ ಸದ್ಯದ ಪ್ಲಾನಿಂಗ್ ಇರಲಿಲ್ಲ. ಸತೀಶ ಹೇಳಿದ್ದು ಕೇಳಿ ಐದತ್ತು ನಿಮಿಷ ಸಮಾಲೋಚನೆ ಮಾಡಿ ನೆಡಿರಿ ಸಾರ್ ಹೋಗೋಣ ಡಿಗ್ರಿ ಕಟ್ಟೋಣ  ಎಂದು ಸಮ್ಮತಿ ಸೂಚಿಸಿ ಧಾರವಾಡಕ್ಕೆ ಹೋಗಲು ಡಿಸೆಂಬರ್ ತಿಂಗಳಿನ ಕೊನೆಯವಾರದ ದಿನಗಳಲ್ಲಿ ಒಂದು  ಸಮಯ ಪಿಕ್ಸ್ ಮಾಡಿಕೊಂಡು ಮುಖ್ಯಗುರುಗಳಾಗಿದ್ದ ರಂಗಪ್ಪ ಚಲವಾದಿ ಇವರಿಗೆ ನಾಳೆ ನಾಡಿದ್ದು ಬರುವುದಿಲ್ಲವೆಂದು ಹೇಳಿ, ರೈಲಿಗಾಗಿ 'ತೋರಣಗಲ್ಲು'ಎಂಬಲ್ಲಿಗೆ ಬರಬೇಕಾಗಿದ್ದರಿಂದ ಸಂಜೆಯೇ ಸಂಡೂರಿನ ಸತೀಶನ ಮಾವನ ಮನೆಗೆ ಹೊರಟುಬಿಟ್ಟೆವು.

2008-09 ನೇ ಸಾಲಿನಲ್ಲಿ ಸಂಡೂರಿನ ರಸ್ತೆಗಳು ಕಲ್ಪನೆಗೂ ನಿಲುಕಷ್ಟು ದುಸ್ಥಿತಿಯಲ್ಲಿದ್ದವು.ಅದರಲ್ಲೂ ಸಂಡೂರು ತೋರಣಗಲ್ಲು ರಸ್ತೆಯು ಅತ್ಯಂತ ಹೆಚ್ಚು heavy goods vehicles ಗಳನ್ನು ಯಾವುದೇ ಟ್ರಾಪಿಕ್ ರೂಲ್ಸ್ ಗಳನ್ನು ಕಿಂಚಿತ್ತೂ ಪಾಲಿಸದ, ಎರ್ರಾಬಿರ್ರಿ ವಾಹನಗಳನ್ನು ಓಡಿಸುವ  ಅಪಾಯಕಾರೀ ರಸ್ತೆಯಲ್ಲಿ ಇದು ನಂಬರ್ ಒನ್..! ಒಂದು ಕಡೆ ರಸ್ತೆಯೆಂಬುದರಲ್ಲಿ ಬಾವಿಯಂತಹ ಗುಂಡಿಗಳು ಬಿದ್ದು light vehicles  ಆ ರಾಕ್ಷಸ  ಮೈನ್ಸ್ ಲಾರಿಗಳಿಗೆ ಲೆಕ್ಕವೇ ಇರಲಿಲ್ಲ.ಅದೆಷ್ಟೋ ಅಮಾಯಕ ಜೀವಿಗಳು ಪ್ರಾಣವನ್ನು  ಕಳೆದುಕೊಂಡಿದ್ದಾರೆ.ಇದೆಲ್ಲದರ ಅರಿವಿದ್ದ ನಮಗೆ ಸಂಜೆ ಏಳು-ಏಳುವರೆಗೆ ಸಂಡೂರು ಬಿಟ್ಟು ಬೈಕಿನಲ್ಲಿ ತೋರಣಗಲ್ಲಿಗೆ ಇಪ್ಪತ್ತೈದು ಕಿ ಮೀ ರಸ್ತೆಯನ್ನು  ನಿರಂತರ ಒಂದುಗಂಟೆ ನಲವತ್ತು ನಿಮಿಷಗಳ ಕಾಲ ರೈಡ್ ಮಾಡಿಕೊಂಡು ತೋರಣಗಲ್ಲು ರೈಲ್ವೇ ಸ್ಟೇಶನ್ಗೆ   ಬಂದು ತಲುಪಿದೆವು.

 ತೋರಣಗಲ್ಲು 'MINI INDIA.ಭಾರತದಲ್ಲಿರುವ ಎಲ್ಲಾ ರಾಜ್ಯಗಳ ಜನರು ಉದ್ಯೋಗ ಅರಸಿಬಂದು ನೆಲೆಸಿರುವ,ಬೆಂಗಳೂರಿಗಿಂತಲೂ ಅತೀ ಹೆಚ್ಚು ಜನಸಂದಣಿ ಮತ್ತು ಜನಸಾಂದ್ರತೆ ಇರುವ ಊರು. ಪರಿಚಯ ಇರುವ ಒಂದು ಅಂಗಡಿಯ ಮುಂದೆ ನಮ್ಮ ಗಾಡಿ ಬಿಟ್ಟು ಸ್ಟೇಶನ್ ಗೆ ಹೋಗಿ ಮುಖ, ಕೂದಲು ಮುಟ್ಟಿಕೊಂಡರೆ ರಾಕ್ಷಸ ಲಾರಿಗಳ  ದೂಳಿನ ಮದ್ಯೆ ಜರ್ನಿ ಮಾಡಿ ಬಂದಿದ್ದಕ್ಕೆ ಪೌಡರ್ನಂತ  ದೂಳು ಕೈಗೆ ಅಂಟಿಕೊಳ್ಳುತ್ತಿತ್ತು. ನೀರಲ್ಲಿ ಮುಖತೊಳೆದು ಹನ್ನೊಂದು ವರೆವರೆಗೂ ರೈಲು ಆಗಮನವನ್ನು ಕಾಯುವುದೇ ಕಾಯಕವಾಗಿ ರೈಲು ಬಂದ ತಕ್ಷಣ ರೈಲು ಹತ್ತಿ upper berth ನ ಯಾವುದೋ ಸೀಟ್ ಹಿಡಿದು ಮಲಗಿದೆವು. ಮಲಗಿದ್ದೆವಾದರೂ ನಿದ್ದೆ ಹತ್ತಲಿಲ್ಲ.ಹುಬ್ಬಳ್ಳಿ ಕಡೆ ಬರು ಬರುತ್ತಾ ಚಳಿಯ ತೀವ್ರತೆ ಹೆಚ್ಚಾಯಿತು. ರೈಲಿನ ಕಿಟಕಿಗಳಿಂದ ಸುಯ್ ಎಂದು  ತೂರಿಬರುವ ಚಳಿ ಗಾಳಿಯೂ ಅಸಹನೀಯವಾಗಿ ಕೈ ಕಾಲು ನಡುಗುವಷ್ಟು ಚಳಿ ಇತ್ತಾದರೂ ಹೇಗೋ ಸಹಿಸಿಕೊಂಡು ಬಿದ್ದುಕೊಂಡಿದ್ದೆವು. ಬೆಳಿಗ್ಗೆ 5-30 ಕ್ಕೆ ಟ್ರೈನ್ ಹುಬ್ಬಳ್ಳಿ ಬಂದು ತಲುಪಿತು. ಇಳಿಯಲು ಸಿದ್ದರಾಗಿ ಚಪ್ಪಲಿ ಹುಡುಕಿದರೆ ಸತೀಶನ ಚಪ್ಪಲಿ ಮಾಯ ಆಗಿದ್ದವು. ಎಷ್ಟು ಹುಡುಕಿದರೂ ಸಿಗಲಿಲ್ಲ ಕಾರಣ ಈ  ಸತೀಶ ಬ್ರಾಂಡೆಡ್ ಕಮ್ ಕಾಸ್ಟ್ ಲಿ ಚಪ್ಪಲಿ ಹಾಕಿದ್ದರಿಂದ ಊಗಿಬಂಡಿ ಹೋಕರ್ಯಾರೋ ಯಾವಾಗಲೋ ಎಗರಿಸಿಕೊಂಡು ಹೋಗಿದ್ದಾರೆ.ಬ್ಯಾಗ್ ಆದ್ರೂ ಬಿಟ್ಟಿದ್ದಾರಲ್ಲ ಅದರಲ್ಲಿ SSLC,PUC ಮಾರ್ಕ್ಸ್ ಕಾರ್ಡ್ ಇದ್ದವೆಂದು ನೆನೆದು ಟ್ರೈನ್ ಇಳಿದು ಪ್ಲಾಟ್ ಪಾರಂ ಗೆ ಬಂದರೆ ಗದಗದ ನಡುಗಿಸುವ ಚಳಿಯ ಮದ್ಯೆ ಬರಿಗಾಲಲ್ಲಿ ನಡೆದು ಹೆಜ್ಜೆ ಹಾಕಿ ಬರುವಾಗ "ಸಾರ್ ನನ್ ಚಪ್ಪಲಿ ಹಾಕಿಕೊಂಡು ಬನ್ನಿ ನನಗೆ ಅಬ್ಯಾಸ ಇದೆ ತಗೋಳಿ" ಎಂದೆ.

 ಸತೀಶನ ಮಾತಿನಲ್ಲಿ ನಡುಕ ಇದ್ದರೂ

"ಸರ್  ಬೇಡ ಮಾರ್ರೇ ಎಂತಕ್ಕೆ ಬಿಡಿ ,ಬೇಡ ನಡೀರಿ ಸರ್ರ..."ಎನ್ನುತ್ತಾ ಸ್ಟೇಶನ್ ನಿಂದ ಇನ್ನೂರು ಮುನ್ನೂರು ಮೀಟರ್ ಬಂದು ಧಾರವಾಡಕ್ಕೆ  'ವಿನಾಯಕ' ಬಸ್ ಹತ್ತಿ ಹದಿನೈದು ಇಪ್ಪತ್ತು ನಿಮಿಷಗಳಲ್ಲಿ ಧಾರವಾಡ ಸಿಟಿ ಬಸ್ಟಾಂಡ್ ತಲುಪಿದೆವು. ಮೊಬ್ಬುಗತ್ತಲು ಹಾಗೇ ಇದೆ. ಇನ್ನು ಹತ್ತು ಹದಿನೈದು ನಿಮಿಷಗಳಲ್ಲಿ ಬೆಳಕು ಹರಿಯುವ ಲಕ್ಷಣಗಳು ಇತ್ತಾದರೂ ಚಪ್ಪಲಿ ಬದಲಾಯಿಸಿಕೊಂಡು ಎಲ್ಲಾ ಕೆಲಸವನ್ನು ಮುಗಿಸಿಕೊಂಡೆವು.* *ಅಲ್ಲಿಯವರೆಗೂ ಹೆಂಗೋ  ಸುಧಾರಿಸಿಕೊಂಡಿದ್ದ ಸತೀಶ ಆ ksrtc toilet ಲ್ಲಿ ತಣ್ಣಗೆ ಕಚ್ಚುತ್ತಿದ್ದ ನೀರು  ಮುಟ್ಟಿ ಹೊರಗೆ ಬಂದನಂತರ ನೋಡಿ ರಿಯಲ್ ನಡುಕ ಶುರು ಆಗಿದ್ದು.ಸುಮಾರು 10° ಸೆಲ್ಸಿಯಸ್ ಇರಬಹುದೇನೋ  ತುಟಿಯಿಂದ  ಪಾದದವರೆಗೆ  ಪುಲ್ vibration ಆಗುತ್ತಿದೆ. ಬಿರುಮಳೆಗೆ ಸಿಕ್ಕ ಗುಬ್ಬಿಮರಿಯಂತೆ ನಡುಗುತ್ತಿದ್ದಾರೆ.  ಅಲ್ಲೇ ನಾಲ್ಕಾರು ಜನ ಬಸ್ ಟ್ರೈವರ್ ಕಂಡಕ್ಟರ್ ಗಳು ಬಸ್ಟಾಂಡ್ ಲ್ಲಿ ಬಿದ್ದಿದ್ದ ಕಸಕ್ಕೆ ಬೆಂಕಿ ಹಾಕಿ ಬೆಂಕಿ ಕಾಯಿಸಿಕೊಳ್ಳುವುದ ನೋಡಿ ಅಲ್ಲಿಗೂ ಧಾವಿಸಿದೆವು. ಆ ಬೆಂಕಿಯ ಶಾಖಕ್ಕೂ ನಡುಕ ಕಡಿಮೆಯಾಗಲಿಲ್ಲ. ಅಲ್ಲೇ ಇದ್ದ ಹೋಟೆಲ್ ಒಳಗೆ ಹೋಗಿ ಚಹಾ ಕುಡಿಯಲು ಚಹಾದ ಬಿಸಿಗೆ ಕೊಂಚವೇ ಬೆಚ್ಚಗಾದ ಸತೀಶ  ಕೆಲವು ನಿಮಿಷಗಳ ನಂತರ ಯಥಾ ಪ್ರಕಾರ ನಡುಗುತ್ತಿದ್ದದ್ದು ಹಾಗೇ ಮುಂದುವರೆಯಿತು. ಏನು ಮಾಡುವುದು??* 
*ಹೊದ್ದುಕೊಳ್ಳಲು ಏನಿಲ್ಲ. ಟವೆಲ್ ಅಷ್ಟೇ ಇರೋದು. ಬ್ಯಾಗಲ್ಲಿ ಒಂದು ಪಾಲಿಸ್ಟರ್ ಲುಂಗಿ ಮಾತ್ರ ಇತ್ತು. ಚಳಿ ಒಂದುಕಡೆಯಾದರೆ ಆ ಮೃದುವಾದ ಪಾದಕ್ಕೆ ಒತ್ತಿ ಚುಚ್ಚುತಿದ್ದ ಕಲ್ಲು ಮತ್ತು ಹರಳುಗಳು ಸತೀಶನಿಗೆ ಸಹಿಸಲಾಗಲಿಲ್ಲ. ಸಾರ್ ಚಪ್ಪಲಿ ಅಂಗಡಿ ತೆರೆಯುವವರೆಗೂ ಎಲ್ಲಿಗೂ ಹೋಗೋದು ಬೇಡ ಮಾರ್ರೆ ಎಂದು ಕಪ್ಪು ಬಂಡೆಯ ಮೇಲೆ ಇರುವ ಶಾಲು,ಲುಂಗಿಯನ್ನೇ ಮುಖವನ್ನು ಬಿಡದೇ  ಹೊದ್ದುಕೊಂಡು ಕೂತಿದ್ದೆವು.ರಾತ್ರಿ ಟ್ರೈನಲ್ಲಿ ನಿದ್ದೆ ಬೇರೆ ಆಗದೇ ಇರುವ ಕಾರಣ ಹಾಗೆ ನಿದ್ದೆ ಜೊಂಪು ಹತ್ತುತಿತ್ತು. ಅಷ್ಟೊತ್ತಿಗಾಗಲೇ ಏಳು ವರೆ -ಎಂಟು ಗಂಟೆಯ ಸುಮಾರಿಗೆ ಅಲ್ಲೇ ಸಿಟಿ ಬಸ್ಟಾಂಡ್ ಗೆ ಹೊಂದಿಕೊಂಡಿರುವ ಒಂದು ಪುಟ್ ವೇರ್ ತೆಗೆಯಿತು ನೋಡಿ. ಅಂಗಡಿಯವನು ಆ ಅಂಗಡಿಯೊಳಗೆ ಪಾದ ಇಡುವ ಮುನ್ನವೇ ನಮ್ಮ ಪಾದಗಳು ಪ್ರವೇಶ ಮಾಡಿ ಕಸವನ್ನು ಹೊಡೆಯಲು ಬಿಡದೆ ಯಾವುದೋ ಒಂದು ಜೊತೆ ಚಪ್ಪಲಿ ಕೊಂಡು ಬಸ್ ಹತ್ತಿ ಯೂನಿವರ್ಸಿಟಿ ಗೆ ತಲುಪಿದೆವು. ಅಂತೂ ಇಂತು ಹೋದ ಕೆಲಸವೇನೋ ತಡವಾದರೂ ಮುಗಿಯಿತು ಆದರೆ ಅಂದಿನ ಆ ಚಳಿಯನ್ನು ನೆನೆಸಿಕೊಂಡರೆ ಇಂದಿಗೂ ಮೈ ನಡುಗುವುದು.ಚಳಿಗೆ ಗತ ನೆನಪಾಗಿ  ಧಾರವಾಡದ ಪೇಡದಂತಿರುವ ಸತೀಶನನ್ನು ಧಾರವಾಡದ ಚಳಿಗೆ ಸತೀಶ ಗಡಗಡ ನಡುಗಿದ್ದ ಗತ ನೆನಪಾಗಿ ಬರೆಯಬೇಕೆನಿಸಿತು.ಬರೆದು ನಿಮ್ಮೊಂದಿಗೆ ಹಂಚಿಕೊಂಡೆ....

✍️ ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..