ಇ- ಮಾಲಿನ್ಯ..(E-POLLUTION)

#ಇ-ಮಾಲಿನ್ಯ..
( E- Pollution )

90 ರ ದಶಕದಲ್ಲಿ ಪ್ರಪಂಚದಾದ್ಯಂತ ಬಳಕೆಗೆ ಬಂದ ಪ್ಲಾಸ್ಟಿಕ್ ಒಂದು  'ಅದ್ಭುತ ವಸ್ತು'  ಎಂದು ಕರೆಯಲ್ಪಡುತ್ತಿದ್ದರು. ಕಾರಣ ಬಕೆಟ್ ಪಾತ್ರೆ ಲೋಟದಲ್ಲಿ ಕೊಂಡಯ್ಯಬೇಕಾಗಿದ್ದ  liquid ,solid ಐಟಾಮ್ಸ್ಗಳನ್ನು ಪ್ಲಾಸ್ಟಿಕ್ ನಲ್ಲಿ ಸುಲಭವಾಗಿ ಕೊಂಡಯ್ಯಬಹುದಾದ್ದರಿಂದ ಸಹಜವಾಗಿಯೇ ಎಲ್ಲರ ಮನ-ಮನೆಗಳನ್ನು ರಾಕೆಟ್ ವೇಗದಲ್ಲಿ ತಲುಪಿದ್ದು ಇತಿಹಾಸ. ಆ 'ಪ್ಲಾಸ್ಟಿಕ್' ಎಂಬ ಸಂಶ್ಲೇಷಿತ ವಿಷಕಾರಕ ವಸ್ತುವೊಂದಕ್ಕೆ ನಾವು  ಯಾವ ಪ್ರಮಾಣದಲ್ಲಿ ಅಂಟಿಕೊಂಡಿದ್ದೇವೆಂದರೇ ಇಡೀ ಭೂಮಿಯನ್ನು  ನಾಲ್ಕೈದು ಅಡಿಯ ಗಾತ್ರದ ಪ್ರಮಾಣದಲ್ಲಿ ಪ್ಲಾಸ್ಟಿಕ್ ನಿಂದಲೇ ಮುಚ್ಚಿಡಬಹುದು.ಅಷ್ಟೊಂದು ಪ್ಲಾಸ್ಟಿಕ್ ಬಳಕೆ ಮತ್ತು ಸಂಗ್ರಹ ಈಗಾಗಲೇ ನಮ್ಮ ಬಳಿ ಇದೆ. ನೂರಾರು ವರ್ಷಗಳವರೆಗೆ  ಅಚ್ಚಳಿಯದೇ ಪ್ರಕೃತಿಯಲ್ಲಿ ಉಳಿಯಬಲ್ಲ ಇಡೀ ಜೀವಮಂಡಲಕ್ಕೆ ಕಂಟಕವಾಗಿರುವ ಈ ಪ್ಲಾಸ್ಟಿಕ್‌  ಮಾಡಿದ ,ಮಾಡುತ್ತಿರುವ ಅವಾಂತರ ಜೀವಾಂತವಾಗಿರುವಾಗಲೇ ಇಂತಹದ್ದೇ ಇನ್ನೊಂದು ಹೆಚ್ಚು ಅಪಾಯಕಾರಿ  pollution ಎದುರಾಗುತ್ತಿದೆ  ಅದೇ e-pollution.

 ಈಗಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಇಲ್ಲದವರು ಅಪರೂಪ. ಅದರಲ್ಲೂ ಈ ಪೇಸ್ಬುಕ್ ,ವಾಟ್ಸಾಪ್,tik tak ,sharechat ಅವು ಇವು ಬಂದು ಇವುಗಳ ಬಳಕೆದಾರರು  ಇಂದು ಇವುಗಳ ಬಳಕೆಯಿಂದ Busy ಆಗಿದ್ದಾರಾದರೂ, ಇವುಗಳು ಬಳಸಿಕೊಂಡು  ಪ್ರತ್ಯಕ್ಷ ಮತ್ತು ಪರೋಕ್ಷವಾಗಿ  ಎಂಥಾ ಪರಿ ಮಾಲಿನ್ಯ ಮಾಡುತ್ತಿದ್ದೇವೆಂದು ನಾವು ಕಲ್ಪನೆಯನ್ನು ಮಾಡಿಕೊಂಡಿಲ್ಲವಾದರೂ ಬಹು ಮುಖ್ಯವಾಗಿ ತಿಳಿದುಕೊಳ್ಳಲೇಬೇಕಿರುವ  ಅಂಶವೇ  ಈ  e-ಮಾಲಿನ್ಯ.*

ಎಂಬತ್ನಾಲ್ಕು ದಿನಕ್ಕೆ  719 ₹ ರೀಚಾರ್ಜ್ ಮಾಡಿದ್ದೇನೆಂದು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ,ಆಡಿಯೋ,ಇಮೇಜ್, ಮೆಸೇಜ್ ಗಳನ್ನು ಎಗ್ಗಿಲ್ಲದೇ forward/share ಮಾಡುವ ನಾವು   ಅವೆಲ್ಲವೂ 'cloud storage' ಲ್ಲಿ ಇರುತ್ತಾವೆ.ಅವುಗಳ ನಿರ್ವಹಣೆ ಮಾಡುವದರಿಂದ ಆಗಬಹುದಾದ ಶಕ್ತಿ ಮತ್ತು ಸಂಪನ್ಮೂಲಗಳ ಬಳಕೆ,  ಗ್ಲೋಬಲ್ ವಾರ್ಮಿಂಗ್, ಪ್ರಮಾಣ ಬಹುಶಃ ನಾವ್ಯಾರು ಅದನ್ನು ಆಲೋಚಿಸಿಯೇ ಇಲ್ಲ.ಉದಾಹರಣೆಗೆ ನನಗೆ ಬೇರೆ ಯಾವುದೇ ವ್ಯವಹಾರ ಇಲ್ಲವಾದರೂ ನನ್ನ ಮೊಬೈಲಲ್ಲಿ ಕನಿಷ್ಟ 100 GB  ಮೇಮೋರಿ ಬಳಸುತ್ತಿದ್ದೇನೆ,  ಆದರೆ ನಾನು ಮೊಬೈಲ್ ಚಾರ್ಜ್ ಮಾಡುವಾಗ ಮತ್ತು ಬ್ರೌಸ್ ಮಾಡುವಾಗ ಮೊಬೈಲ್ ಬಿಸಿಯಾಗಿ ವಾತಾವರಣಕ್ಕೆ ತಾಪಮಾನವನ್ನು add ಮಾಡುತ್ತಿದ್ದೇನೆ.ಹೀಗೆಯೇ ಕೋಟ್ಯಾಂತರ  ಜನರ ಮೊಬೈಲ್ temperature ವಾತಾವರಣಕ್ಕೆ ಸೇರುವುದರಿಂದ ಜಾಗತಿಕ ತಾಪಮಾನದಿಂದಾಗಿ(Global warming) ನೈಸರ್ಗಿಕ ಪ್ರಕ್ರಿಯೆಗಳು ಏರುಪೇರಾಗಿ ಅತೀವೃಷ್ಟಿ ,ಅನಾವೃಷ್ಟಿ, ಋತುಮಾನಗಳಲ್ಲಿ ಬದಲಾವಣೆ, ಹೀಗೆ ಅನೇಕ ಪ್ರಕೃತಿಯಲ್ಲಿಯೇ ವೈರುದ್ಯ ಬದಲಾವಣೆಗಳನ್ನು ಕಣ್ಣಮುಂದೆ ನೋಡುತ್ತಿರುವುದು ಸತ್ಯ. ನಮ್ಮ ಡಾಟ cloud storage ಲಿ ಇರುತ್ತದೆ. ಅದರ ನಿರ್ವಹಣೆ ಮಾಡಬೇಕಾದವರಾದ ಗೂಗಲ್,ಆ್ಯಪಲ್, facebook,ಮೈಕ್ರೋಸಾಪ್ಟ್ ನಂತಹ ಕಂಪನಿಯವರು ಟವರ್,ಕೇಬಲ್,ಜನರೇಟರ್, backup ಗಾಗಿ ಅತೀ ಭಾರವಾದ ಲೋಹಗಳ ಬ್ಯಾಟರಿಗಳು, ಅವುಗಳಿಂದ  ಹೊರಬರುವ ತಾಪಮಾನ ಮತ್ತು ಎಂದಿಗೂ ಅಸ್ತಿತ್ವ ಕಳೆದುಕೊಳ್ಳದ ಅಪಾಯಕಾರಿ ಕ್ಯಾಡ್ಮಿಯಂನಂತಹ ಲೋಹಗಳು ಭೂಮಿಗೆ ಸೇರಿ ಮಲಿನಗೊಳಿಸುತ್ತವೆ. ಅತೀ ಹೆಚ್ಚಿನ ಪ್ರಮಾಣದ ನಿರ್ವಹಣೆಯ ಹೆಸರಿನಲ್ಲಿ,  ಒಂದಲ್ಲ ಒಂದು ಹಂತದಲ್ಲಿ ಮಾಲಿನ್ಯ ಮಾಡುತ್ತಿರುವುದಂತೂ ಸುಳ್ಳಲ್ಲ.

ಈ ಪ್ಲಾಸ್ಟಿಕ್ ವಸ್ತುಗಳನ್ನು  RE-USE ಮಾಡುತ್ತೇವೆ. ಆದರೆ ನಾವು ಬಳಸುವ ಮೊಬೈಲ್, ಲ್ಯಾಪ್ಟಾಪ್, ಇವುಗಳನ್ನು ಬಹುತೇಕ ಪುನರ್ಬಳಕೆ ಮಾಡದೇ USE &THROUGH ಮಾಡುತ್ತಿರುವುದು ನಮಗೆ ನಿಮಗೆಲ್ಲ ಗೊತ್ತಿದ್ದೇ ಇದೆ.ಕಳೆದ ಹತ್ತು ವರ್ಷಗಳಲ್ಲಿ ಒಬ್ಬ ವಯಸ್ಕ ವ್ಯಕ್ತಿ ಸರಾಸರಿ ಆರು ಮೊಬೈಲ್ ಬಳಸಿದ್ದಾರೆ. New version & features  ಜನಪ್ರಿಯ ಆದಂತೆಲ್ಲಾ  ಹಳೇ ಮಾದರಿಯವು ಜೀವಾಂತ ಇದ್ದರೂ ಸ್ವಾಭಾವಿಕವಾಗಿ ನಿಷ್ಕ್ರಿಯೆಯಾಗಿದ್ದಾವೆ. ಸಾಮಾನ್ಯವಾಗಿ ಒಂದು ಮೊಬೈಲಲ್ಲಿ ಪ್ಲಾಸ್ಟಿಕ್,ಅಲ್ಯೂಮಿನಿಯಂ, ಸಿಲ್ವರ್,ಸಿಲಿಕಾನ್,bronze, copper ಹೀಗೆ ಬಹುಲೋಹಿಯ ವಸ್ತುಗಳು ಇರುವವು. ಇವಗಳಲ್ಲಿರುವಂತಹ ಯಾವುದೂ waste ಅಲ್ಲವಾದರೂ ಸರಿಯಾದ ನಿರ್ವಹಣೆ ಇಲ್ಲದೇ ಎಷ್ಟೇ ದುಬಾರಿಯ ವಸ್ತುವಾದರೂ ಅದು ಒಂದರ್ಥದಲ್ಲಿ waste ಎಂದೇ ಎಸೆಯುತ್ತಿದ್ದೇವೆ.ಇವೆಲ್ಲವೂ   ಸೇರಿ ಈ- ತ್ಯಾಜ್ಯ ಪ್ರಮಾಣವು ಮಿತಿ ಮೀರಿ ಮಾಡಿದ ತಪ್ಪಿಗೆ ಬಾರೀ ದಂಡ ತೆರಬೇಕಾದ ಸಮಯ ದೂರ ಇಲ್ಲ. ಈಗಾಗಲೇ ಇದರ ಆರಂಭ ಆಗಿದೆ  ಎಂದು ಹೇಳಬಹುದಾದರೂ ಇದರ ನಿಯಂತ್ರಣ ದ ಬಗ್ಗೆ ಯಾರಲ್ಲೂ ಕಿಂಚಿತ್ತೂ ಕಾಳಜಿಯಿಲ್ಲ.

ಇತ್ತೀಚಿನ ದಿನಗಳಲ್ಲಿ electric ವಾಹನಗಳ ಜಮಾನ ಶುರು ಆಗಿದೆ.ಪೆಟ್ರೋಲ್ ಡೀಸೆಲ್‌ ಪರ್ಯಾಯವಾಗಿ ಎಲೆಕ್ಟ್ರಿಕ್ ಪವರ್ ನಿಂದ ಈ ವಾಹನಗಳು ಚಲಿಸುವವಾದರೂ  ಒಂದು SUV ಕಾರ್ ನಲ್ಲಿ ಸುಮಾರು 454 kg ಭಾರವಾದ ಬ್ಯಾಟರಿಗಳನ್ನು ಐದಾರು ವರ್ಷಗಳಲ್ಲಿ Replace ಮಾಡಬೇಕು. ಇದರ ವ್ಯವಸ್ಥಿತ ನಿರ್ವಹಣೆಯ ರೂಪುರೇಷೆ ಎಲ್ಲೂ mention ಆಗಿಲ್ಲ. ಇದರಿಂದ ಅದೆಷ್ಟು ರಾಸಾಯನಿಕ ವಸ್ತುಗಳು ಭೂಮಿಯ ಒಡಲಿಗೆ ಸೇರುವವೋ...

⚠️ e- pollution ತಡೆಯಲು ನಾವೇನು ಮಾಡಬೇಕು??

✅ ಅನಾವಶ್ಯಕ e-mail,WhatsApp,Facebook ಮೆಸೇಜ್,ವೀಡಿಯೋ ಆಡಿಯೋ ಗಳಂತಹ attachment ಗಳನ್ನು ಕಡಿಮೆ ಮಾಡಬೇಕು.

✅ ಏಕಕಾಲದಲ್ಲಿ ಕಂಪ್ಯೂಟರ್ ಮತ್ತು ಮೊಬೈಲ್ಗಳಲ್ಲಿ ಮಲ್ಟಿ ಬ್ರೌಸರ್ಸ್ and ಮಲ್ಟಿ applications RUN ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು.ಇದರಿಂದ ಬ್ಯಾಟರಿ consume, high DATA consume ಆಗುವುದರ ಜೊತೆಗೆ ಸಿಸ್ಟಮ್ temperature ಹೆಚ್ಚಿ ಅದು ಸಹಜವಾಗಿ ವಾತಾವರಣಕ್ಕೆ ಬಿಡುಗಡೆಯಾಗುವುದರಿಂದ ಅಗುವ ಅಪಾಯಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು.

✅ ಅಗತ್ಯ ಮತ್ತು ಮಿತಿಗೊಳಪಟ್ಟು E-ವಸ್ತುಗಳನ್ನು ಬಳಸೋಣ.

✅  e -ವಸ್ತುಗಳ ತ್ಯಾಜ್ಯವನ್ನು authorized recycler ನಿರ್ವಾಹಕರ ಮೂಲಕ ಅವುಗಳನ್ನು ಪುನರ್ಬಳಕೆ ಮಾಡಲು  ಸಹಕರಿಸೋಣ.

     ಲೇಖನ ಮುಗಿಸುವ ಮುನ್ನಾ ಈ ಹಿಂದೆ ಈ ಕೀಟನಾಶಕ,ರಸಗೊಬ್ಬರ ಗಳನ್ನು ವಿವೇಚನೆ ಇಲ್ಲದೇ ಮಿತಿಮೀರಿ ಬಳಸಿದ್ದಕ್ಕೆ ಅದರ ಪ್ರತಿಫಲ ಇಂದು ನಾವು ನೀವೇಲ್ಲರೂ ಪಡೆಯುತ್ತಿದ್ದೇವೆ. ಅದೆಲ್ಲಾ ಒಂದು ರೀತಿಯದ್ದಾದರೆ ಈ É -pollution ಯಾವ ಮಟ್ಟದ ಪ್ರಭಾವ ಈ ಪರಸರ ಮತ್ತು ಜೀವ ರಾಶಿಗಳ ಮೇಲೆ ಬೀಳತ್ತೋ ಅದನ್ನು ನಿಖರವಾಗಿ ಹೇಳುವುದು ಕಷ್ಟವೇ ಆದರೂ ದೊಡ್ಡ ಮಟ್ಟದ ಅಪಾಯವಂತೂ ಖಚಿತ.ಆದ್ದರಿಂದ ಎಲ್ಲರೂ ಎಚ್ಚೆತ್ತುಕೊಂಡು ವಿವೇಚನೆಯ ಹೆಜ್ಜೆಯಿಡುವುದು ಅನಿವಾರ್ಯವಾಗಿದೆ.

ಆ pollution ಬೇಡ E- POLLUTION ಬೇಡವೇ ಬೇಡ ಏನಂತೀರಾ...???

✍️ನಾಗೇಂದ್ರ  ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..